भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567896061Next >

ಕಂಕಣ ಗ್ರಹಣ

(ಖ) ಚಂದ್ರನ ಕಪ್ಪು ಬಿಂಬವನ್ನು ಆವರಿಸಿದ ಸೂರ್ಯಬಿಂಬವು ಬಳೆಯಂತೆ ಪ್ರಜ್ವಲಿಸುತ್ತ ಹೋಗುವ ಗಗನ ವಿದ್ಯಮಾನ

ಕಕಾಓ

(ಸ) ಸ್ಟರ್‌ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ತಿಯೋಬ್ರೊಮಾ ಕಕಾಓ ಜಾತಿಯ ಮರ. ಬೀಜಗಳನ್ನು ಒಣಗಿಸಿ ಕೋಕೋ ಹಾಗೂ ಚಾಕೊಲೆಟ್ ತಯಾರಿಸುತ್ತಾರೆ. ಕೋಕೊ

ಕಂಕಾಲ

(ಪ್ರಾ) ಪ್ರಾಣಿಯ ಶರೀರವನ್ನು ಒಳಗೊಂಡ ಅಥವಾ ಅದಕ್ಕೆ ಆಧಾರವಾಗಿರುವ ಮೂಳೆಗಳು, ಮೆಲ್ಲೆಲುಬು, ಚಿಪ್ಪು ಮೊದಲಾದವುಗಳ ಗಡಸು ಚೌಕಟ್ಟು. ಅಸ್ಥಿಪಂಜರ. ಎಲುಬಿನ ಗೂಡು

ಕಕೆಕ್ಸಿಯ

(ವೈ) ನ್ಯೂನಪೋಷಣೆಯಿಂದ ತಲೆ ದೋರುವ ದೌರ್ಬಲ್ಯ ಮತ್ತು ಶೈಥಿಲ್ಯ. ಕ್ಯಾನ್ಸರ್ ರೋಗದಿಂದ ನರಳುತ್ತಿರುವ ಕೆಲವರಲ್ಲೂ ಕಂಡುಬರುತ್ತದೆ

ಕಕ್ಕು

(ವೈ) ಜೀರ್ಣವಾಗಿಲ್ಲದ ಆಹಾರ ಮತ್ತೆ ಬಾಯಿಗೆ ಬರುವುದು. ದೋಷಯುಕ್ತ ಕವಾಟಗಳಲ್ಲಿ ರಕ್ತ ಹಿಂದಕ್ಕೆ ಬರುವಿಕೆ. ನೋಡಿ : ವಾಂತಿ

ಕಕ್ಷ

(ಸ) ಕಾಂಡದಿಂದ ಎಲೆ ಅಥವಾ ಕೊಂಬೆ ಟಿಸಿಲೊಡೆಯುವ ನೆಲೆಯಲ್ಲಿ ಎಲೆ ಅಥವಾ ಕೊಂಬೆ ಹಾಗೂ ಕಾಂಡ ನಡುವಿನ ಕೋನ. ಪರ್ವಕೋನ, ಕಂಕುಳು

ಕಕ್ಷಕ

(ಭೌ) ಅಣು ಅಥವಾ ಪರಮಾಣುಗಳಲ್ಲಿ ಒಂದು ನಿರ್ದಿಷ್ಟ ಎಲೆಕ್ಟ್ರಾನಿನ ಚಲನೆಯ ಬಗ್ಗೆ ಷ್ರೋಡಿಂಗರ್ ತರಂಗ ಸಮೀಕರಣದಿಂದ ಹೊರಬೀಳುವ ಫಲಿತಾಂಶ ಅಥವಾ ಅದರ ಚಿತ್ರರೂಪಣ. ಯಾವುದೇ ಅಣು ಅಥವಾ ಪರಮಾಣುವಿನಲ್ಲಿ ಎಲೆಕ್ಟ್ರಾನ್‌ನ ನೆಲೆ. ಬೋರ್ ಪರಮಾಣು ಸಿದ್ಧಾಂತದ ಪ್ರಕಾರ ಎಲೆಕ್ಟ್ರಾನ್‌ಗಳು ನ್ಯೂಕ್ಲಿಯಸ್‌ನ ಸುತ್ತ ವಿವಿಧ ವರ್ತುಳೀಯ ಕಕ್ಷೆಗಳಲ್ಲಿ ಪರಿಭ್ರಮಿಸುತ್ತಿರುವುವೆಂದು ಭಾವಿಸಲಾಗಿತ್ತು. ಆದರೆ ಕ್ವಾಂಟಮ್ ಯಂತ್ರವಿಜ್ಞಾನದ (quantum mechanics) ಪ್ರಕಾರ ಪರಮಾಣುವಿನ ಸುತ್ತ ದತ್ತ ವ್ಯೋಮ ಘಟಕದಲ್ಲಿ (space element) ಎಲೆಕ್ಟ್ರಾನ್ ಇರುವ ಸಂಭಾವ್ಯತೆ ಇದೆ. ಇದು ಎಲೆಕ್ಟ್ರಾನ್‌ನ ತರಂಗಫಲನವನ್ನು (wave function) ಅವಲಂಬಿಸಿದೆ. ಯಾವುದೇ ಪರಮಾಣುವಿನೊಳಗೆ ಎಲೆಕ್ಟ್ರಾನ್‌ನ ತರಂಗಫಲನ ಗಣನೀಯ ಪ್ರಮಾಣದಲ್ಲಿರುವ ಬಿಂದುಗಳನ್ನು ಒಳಹಿಡಿದಿರುವ ಘನಗಾತ್ರವೇ ಪರಮಾಣು ಕಕ್ಷಕ

ಕಕ್ಷಾ ಧಾತುಗಳು

(ಖ) ಯಾವುದೇ ಗ್ರಹದ ಕಕ್ಷೆಯನ್ನೂ ಇದರಲ್ಲಿ ಗ್ರಹದ ನೆಲೆಯನ್ನೂ ನಿರ್ಧರಿಸಲು ಅವಶ್ಯ ವಾಗುವ ಆರು ಗಣಿತ ಅಂಶಗಳು: ೧. ಆರೋಹೀ ಸಂಪಾತ ಬಿಂದುವಿನ ರೇಖಾಂಶ, ೨. ಕಕ್ಷೆಯ ಬಾಗು, ೩. ಪುರರವಿಯ ರೇಖಾಂಶ, ೪. ಅರ್ಧ ದೀರ್ಘಾಕ್ಷ, ೫. ಉತ್ಕೇಂದ್ರತೆ, ೬. ಪುರರವಿ ಯನ್ನು ಗ್ರಹ ದಾಟಿದ ಕ್ಷಣ

ಕಕ್ಷಾವೇಗ

(ಖ) ಭೂಮಿಯ ಸುತ್ತ ಅಥವಾ ಮತ್ತಾವುದೇ ಖಗೋಳಕಾಯದ ಸುತ್ತ ಕಕ್ಷೆಯಲ್ಲಿ ಸುತ್ತುತ್ತಿರುವ (ಯಾನ ಮಾಡುತ್ತಿರುವ) ಉಪಗ್ರಹ ಅಂತರಿಕ್ಷ ನೌಕೆ ಅಥವಾ ಮತ್ತಾವುದೇ ಕಾಯದ ಚಲನವೇಗ

ಕಕ್ಷೀಯ ಮೊಗ್ಗು

(ಸ) ಸಸ್ಯದ ಕಂಕುಳಿನಿಂದ ಚಿಗುರಿದ ಮೊಗ್ಗು

ಕಕ್ಷೀಯ ಶಾಖೆ

(ಸ) ಸಸ್ಯದ ಕಂಕುಳಿನಿಂದ ಟಿಸಿಲೊಡೆದ ಕೊಂಬೆ

ಕಕ್ಷೆ

(ಖ) ಸ್ಥಿರಬಿಂದುವಿನ ಸುತ್ತ ಚರಬಿಂದು ರೇಖಿಸುವ ಸಂವೃತ ವಕ್ರರೇಖೆ. ಸೂರ್ಯನ ಸುತ್ತ, ಭೂಮಿಯನ್ನೂ ಒಳಗೊಂಡಂತೆ, ಯಾವುದೇ ಗ್ರಹ ರೇಖಿಸುವ ಸಂವೃತ ವಕ್ರರೇಖೆ (ದೀರ್ಘವೃತ್ತ). ಎರಡು ಆಕಾಶಕಾಯಗಳು ಗುರುತ್ವಾಕರ್ಷಣೀಯ ವಾಗಿ ಬಂಧಿತವಾಗಿರುವಾಗ (ಉದಾ : ಭೂಮಿ, ಚಂದ್ರ) ಒಂದು (ಚಂದ್ರ) ಇನ್ನೊಂದರ (ಭೂಮಿಯ) ಸುತ್ತ ನಿರಂತರ ಚಲನೆಯಲ್ಲಿ ಇರುತ್ತದೆ. ಚರಕಾಯ ರೇಖಿಸುವ ಪಥವೇ ಕಕ್ಷೆ. (ರ) ಪರಮಾಣುವಿನಲ್ಲಿ ಎಲೆಕ್ಟ್ರಾನ್ ಸಂಚರಿಸುವ ಪಥ

ಕಂಚು

(ತಂ) ಪ್ರಧಾನವಾಗಿ ತಾಮ್ರ ಮತ್ತು ತವರ ಲೋಹಗಳಿಂದಾದ ಮಿಶ್ರಲೋಹ. ತವರರಹಿತ ಮಿಶ್ರಲೋಹ ಗಳಿಗೂ ಇದು ಈಗ ಅನ್ವಯ. ಉದಾ: ಅಲ್ಯೂಮಿನಿಯಮ್ ಕಂಚು (AL+Cu), ಮ್ಯಾಂಗನೀಸ್ ಕಂಚು (Mn+Cu) ಇತ್ಯಾದಿ

ಕಂಚುಕ

(ಪ್ರಾ) ಕೆಲವು ಮೃದ್ವಂಗಿಗಳ ಚರ್ಮ ಕವಚ (ಸ) ಗೆಡ್ಡೆಯ ಪದರಗಳಲ್ಲೊಂದು; ಸಿಪ್ಪೆ. (ವೈ) ಒಂದು ಅಂಗದ ಆವರಣ ಕೋಶ. ಹೊದಿಕೆ ಪೊರೆ

ಕಂಚುಪ್ರಾಂತಿ

(ಸ) ಯೂಫೋರ್ಬಿಯೇಸೀ ಕುಟುಂಬಕ್ಕೆ ಸೇರಿದ ಮಧ್ಯಮ ಎತ್ತರದ ಮರ. ಮಕರಂಗ ಪೆಲ್ಟೇಟ ವೈಜ್ಞಾನಿಕ ನಾಮ. ಭಾರತದ ಬೆಟ್ಟ ಗುಡ್ಡಗಳಲ್ಲಿ ಬೆಳೆಯುತ್ತದೆ. ಕಾಫೀ ತೋಟಗಳಲ್ಲಿ ನೆರಳಿಗಾಗಿ ಬೆಳೆಸುವುದೂ ಉಂಟು. ಎಲೆಗಳಲ್ಲಿ ಪೊಟ್ಯಾಷ್ ಹಾಗೂ ಸಾರಜನಕ ಅಧಿಕ ಪ್ರಮಾಣ ದಲ್ಲಿದ್ದು ಬತ್ತದ ಗದ್ದೆಗಳಲ್ಲಿ ಗೊಬ್ಬರಕ್ಕಾಗಿ ಬಳಸುತ್ತಾರೆ. ಎಲೆ ಮತ್ತು ತೊಗಟೆಗಳಲ್ಲಿ ಔಷಧೀಯ ಗುಣಗಳಿವೆ. ಚೌಬೀನೆ, ಬೆಂಕಿಕಡ್ಡಿ ಹಾಗೂ ಕಾಗದದ ಪಲ್ಪ್‌ನ ತಯಾರಿಕೆಯಲ್ಲಿ ಬಳಕೆ. ಚಂದಕನ್ನೆ

ಕಚ್ಚಾ ಬಿಳಿಗಾರ

(ಭೂವಿ) ನೋಡಿ : ಟಿಂಕಲ್

ಕಚ್ಚಾ ತೈಲ

(ತಂ) ನೈಸರ್ಗಿಕವಾಗಿ ದೊರೆಯುವ ಹೈಡ್ರೊಕಾರ್ಬನ್ ತೈಲಗಳ ಸಮುಚ್ಚಯ. ಡೀಸಲ್, ಪೆಟ್ರೋಲ್ ಮುಂತಾದವುಗಳ ಮೂಲ

ಕಚ್ಚಾ ಸಾಮಗ್ರಿ

(ತಂ) ಯಾವುದೇ ಪದಾರ್ಥದ ಉತ್ಪಾದನೆಗೆ ಬೇಕಾದ ಮೂಲವಸ್ತು

ಕಚ್ಚು ಗುರುತು

(ತಂ) ವಸ್ತುವಿನಲ್ಲಿ ಕಚ್ಚು ಮಾಡುವುದು, ಕೊರೆಯುವುದು ಅಥವಾ ಕೆತ್ತುವುದು. (ವೈ) ಶಸ್ತ್ರಕ್ರಿಯೆಯಲ್ಲಿ ದೇಹದ ಊತಕದ ಮೇಲೆ ಮಾಡಿದ ಕೊಯ್ತ ಅಥವಾ ಛೇದನ

ಕಂಜಂಕ್ಟಿವೈಟಿಸ್

(ವೈ) ಕಣ್ಣಿನ ಆರ್ದ್ರಚರ್ಮದ (ಕಂಜಂಕ್ಟೈವ) ಉರಿಯೂತ. ಕೆಂಗಣ್ಣು
< previous1234567896061Next >

Search Dictionaries

Loading Results

Follow Us :   
  Download Bharatavani App
  Bharatavani Windows App