Navakarnataka Vijnana Tantrajnana Padasampada (2011)
Navakarnataka Publications Private Limited
ಒಳ ತೊಗಟೆ
(ಸ) ಬಹುಪಾಲು ಬೇರುಗಳ ಮತ್ತು ಕೆಲವು ಕಾಂಡಗಳ ತೊಗಟೆಯ ಒಳಗಿರುವ ಏಕಕೋಶ ಪದರ
ಒಳಕೀವು
(ವೈ) ಮೈಯಲ್ಲಿ ಯಾವುದಾದರೂ ಒಂದು ಪೊಳ್ಳಿನೊಳಗೆ ಸೇರಿರುವ ಕೀವಿನಂಥ ದ್ರವ. ಮುಖ್ಯವಾಗಿ ಎದೆಗೂಡಿನೊಳಗಿರುವ ಕೀವಿಗೆ ಈ ಹೆಸರುಂಟು
ಒಳಗಿವಿ
(ಪ್ರಾ) ನೋಡಿ : ಲ್ಯಾಬಿರಿಂತ್
ಒಳಚರ್ಮ
(ಪ್ರಾ) ಗ್ಯಾಸ್ಟ್ರೊಲಾದ ಭಿತ್ತಿಯನ್ನು ರೂಪಿಸುವ ಕೋಶಗಳ ಒಳಪದರ. ಅಂತಸ್ತ್ವಚೆ
ಒಳಚಾಚು
(ಭೂ) ಸಮುದ್ರತೀರ ಮೊದಲಾದವು ಗಳಲ್ಲಿ ಒಳಕ್ಕೆ ದೂರ ಪ್ರವೇಶಿಸಿರುವ ಕೊಲ್ಲಿ ಒಳಕೋಚು. ಕ್ರಕಚರೇಖೆ (ತಂ) ಮುದ್ರಣದಲ್ಲಿ ಪಂಕ್ತಿಯ ಒಳಸರಿಕೆ
ಒಳತಿರುಚು ಪಾದ
(ವೈ) ಪಾದಗಳು/ಅಂಗೈ ಒಳಮೊಗವಾಗಿ ತಿರುಚಿಕೊಂಡಿರುವ ವೈಕಲ್ಯ. ತಾಗು ಮಂಡಿಗಳ ಮನುಷ್ಯ
ಒಳವ್ಯಾಸ
(ತಂ) (ಮುಖ್ಯವಾಗಿ ಕೊಳವೆಯ ಬಂದೂಕದ) ನಾಳದ ವ್ಯಾಸ. ನಾಳಾಂತರ ವ್ಯಾಸ.
ಒಳಸೇರಿಕೆ
(ತಂ) ೧. ಅಚ್ಚಿನಲ್ಲಿ ಇಡುವ, ಅಂತಿಮ ಎರಕದ ಅವಿಭಾಜ್ಯ ಅಂಗವೆಂದು ಕಂಡುಬರುವ, ಸಾಮಾನ್ಯವಾಗಿ ಲೋಹ ದಿಂದ ತಯಾರಿಸಿರುವ ಒಂದು ಭಾಗ. ೨. ಮುದ್ರಣಾಲಯದಲ್ಲಿ ಪದಗಳ ಅಥವಾ ಸಾಲುಗಳ ನಡುವೆ ಅಕ್ಷರಗಳನ್ನೋ ಪದಪಂಕ್ತಿ ಗಳನ್ನೋ ಕೂಡಿಸುವುದು. ಅಂತಃಕ್ಷಿಪ್ತ
ಒಳಹರಿಕೆ
(ವೈ) ೧. ಊತಕಗಳಲ್ಲಿ ರಕ್ತಸಂಚಾರ. ೨. ಒಂದು ಅವಕಾಶದಲ್ಲಿ ದ್ರವದ ಚಲನೆ. ೩. ಸೇಚನೆ : ಒಂದು ಅಂಗ ಅಥವಾ ಊತಕಕ್ಕೆ ಅದರ ರಕ್ತನಾಳದ ಮೂಲಕ ರಕ್ತವನ್ನು ಹರಿಸಿ ಅದರ ಮೂಲಕ ಪೋಷಕಾಂಶಗಳನ್ನು ಹಾಗೂ ಆಕ್ಸಿಜನ್ ಅನ್ನು ಪೂರೈಸುವಿಕೆ
ಒಳಹೀರಿಕೆ
(ವೈ) ಜೀರ್ಣಗೊಂಡ ಆಹಾರದ ಪೋಷಕಗಳು ಕರುಳಿನ ಲೋಳೆ ಪೊರೆ ರೋಮಗಳ ಮೂಲಕ ರಕ್ತ ಮತ್ತು ದುಗ್ಧರಸಕ್ಕೆ ಸೇರಿಕೊಳ್ಳುವುದು
ಒಳಹೊರಗಾಗಿರುವುದು
(ವೈ) ಇದೊಂದು ಜನ್ಮದತ್ತ ವೈಕಲ್ಯ. ಹುಟ್ಟುವಾಗಲೇ ಪೊಳ್ಳಾಗಿರುವ ಅಂಗವೊಂದು ಮಗುಚಿ ಕೊಂಡಿರುವಿಕೆ. ಉದಾ: ಮೂತ್ರಕೋಶ ಒಳಹೊರಗಾಗಿರುವುದು
ಒಳಹೊರಗು ಮಾಡು