भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಒತ್ತಡಮಾಪಕ

(ಭೌ) ಆವಿಯ ಅಥವಾ ಅನಿಲದ ಒತ್ತಡ ಅಳೆಯಲು ಬಳಸುವ ಸಾಧನ. ಸ್ಫಟಿಕಗಳ ಸಂಕ್ರಮಣ ಬಿಂದುಗಳನ್ನು ಗುರುತಿಸುವಲ್ಲೂ ಬಳಕೆ

ಒತ್ತು ಕಾಗದ

(ತಂ) ಅಳ್ಳಕವಾಗಿ ಒತ್ತಿದ ಸಡಿಲ ಬಂಧದ ಕಾಗದ. ಶಾಯಿ ಮುಂತಾದ ದ್ರವ ಪದಾರ್ಥಗಳನ್ನು ಹೀರಬಲ್ಲದು. ಬ್ಲಾಟಿಂಗ್ ಪೇಪರ್

ಒತ್ತುಗ

(ತಂ) ವಸ್ತುವನ್ನು ಕತ್ತರಿಸಲು, ಬಾಗಿಸಲು, ತಂತಿ ಎಳೆಯಲು, ರೂಪಕೊಡಲು ಅಗತ್ಯ ಒತ್ತಡ ನೀಡುವ ಸಾಧನ

ಒತ್ತುಫಲಕ

(ತಂ) ಯಂತ್ರೋಪಕರಣದ ಕಾರ್ಯ ಮೇಜು. ಮುದ್ರಣಯಂತ್ರದಲ್ಲಿ ಅಚ್ಚಿನ ಮೊಳೆಗಳ ಮೇಲೆ ಕಾಗದ ಒತ್ತುವ ಫಲಕ

ಒಂದೇ ಮೇರೆಯ

(ಸಾ) ಕವಲು ಹಾದಿಗಳು ಒಂದೆಡೆ ಸೇರುವ, ದಾರಿಗಳು ಬೇರೆ ಬೇರೆ ಆಗಿದ್ದರೂ ಕೊನೆ ಒಂದೇ ಆಗಿರುವ. ಸಹಾಂತಕ

ಒಪರ್ಕ್ಯುಲಮ್

(ಸ) ಬೀಜಕಣಕೋಶದ ಅಂಗ ಭಾಗವನ್ನು ಮುಚ್ಚುವ ಅಥವಾ ತೆರೆಯುವ ಕವಚ. ಉದಾ: ಕೆಲವು ಬೀಜ ನಾಳಗಳು ಅಥವಾ ಬೀಜಕ ನಾಳಗಳು. (ಪ್ರಾ) ಚಿಪ್ಪುಜೀವಿ ತನ್ನ ಚಿಪ್ಪಿನೊಳಗೆ ಸೇರಿಕೊಂಡಾಗ ಚಿಪ್ಪಿನ ತೆರಪನ್ನು ಮುಚ್ಚುವ ಪದರ. ಮೀನಿನ ಕಿವಿರು ಮೇಲಿನ ಹೊದಿಕೆ. ಹಕ್ಕಿ ಮೂಗಿನ ಹೊಳ್ಳೆಗಳ ಮೇಲಿನ ಚರ್ಮ ಪದರ

ಒಪಾಸಮ್

(ಪ್ರಾ) ಮಾರ್ಸುಪಿಯೇಲಿಯ ಗಣ ಹಾಗೂ ಡೈಡೆಲ್ಫಿಡೀ ಕುಟುಂಬಕ್ಕೆ ಸೇರಿದ ಹಿಂಗಾಲಿನಲ್ಲಿ ಹೆಬ್ಬೆಟ್ಟು, ಹೊಟ್ಟೆಯ ಮೇಲೆ ಚೀಲ ಇರುವ, ನಿಶಾಚರಿ. ವೃಕ್ಷವಾಸಿ ಸರ್ವಭಕ್ಷಕ ಸ್ತನಿ. ಅನೇಕ ಮೊನಚಾದ ಹರಿತವಾದ ಬಾಚಿ ಹಲ್ಲುಗಳಿವೆ. ಅಮೆರಿಕ ಮೂಲವಾಸಿ

ಒಪೆರಾನ್

(ಜೀ) ಬಿಡಿ ಕಿಣ್ವಗಳು ಒಂದುಗೂಡಿ ಒಂದು ವ್ಯವಸ್ಥೆಯಾಗಿ ಕ್ರಿಯೆ ಜರಗಿಸುವಂತೆ ಅವನ್ನು ಸಂಶ್ಲೇಷಿಸುವ ಕಾರ್ಯ ನಿರ್ವಾಹಕ ಜೀನ್‌ಗಳ ಒಂದು ವೃಂದ. ಈ ವೃಂದದಲ್ಲಿ ಒಂದು ಜೀನ್ ಮತ್ತು ಒಂದು ಆಪರೇಟರ್ (ನಿರ್ವಾಹಕ) ಜೀನ್ ಇದ್ದು ಆಪರೇಟರ್ ಜೀನ್ ಇಡೀ ವೃಂದದ ಕಾರ್ಯವನ್ನು ಪ್ರಾರಂಭಿಸಬಲ್ಲದು ಮತ್ತು ನಿಲ್ಲಿಸಬಲ್ಲದು

ಒಪ್ಪವಿಡು

(ತಂ) ಮೆರುಗು ಅಥವಾ ಹೊಳಪು ಕೊಡು. ಉಕ್ಕಿನ ಗುಂಡುಗಳೊಂದಿಗೆ ಹೊರಳಾಡುವಂತೆ ಮಾಡುವ ಮೂಲಕ ಇಲ್ಲವೇ ಗಡುಸಾದ ಲೋಹ ಪಟ್ಟಿಯಿಂದ ಉಜ್ಜುವ ಮೂಲಕ ನಯವಾದ ಹೊಳಪಿನ ಮೇಲ್ಮೈ ಒಪ್ಪ ನೀಡುವುದು

ಒಮೇಸಮ್

(ಪ್ರಾ) ಮೆಲುಕು ಹಾಕುವ ಪ್ರಾಣಿಗಳಲ್ಲಿ ಉದರದ ತೃತೀಯ ವಿಭಾಗ. ಇಲ್ಲಿ ಆಹಾರಾಂಶಗಳು ಸಮರೂಪ ಸ್ಥಿತಿಗೆ ಮಿಶ್ರಗೊಳ್ಳುತ್ತವೆ. ತೃತೀಯ ಅಮಾಶಯ

ಒರಟು

(ಸಾ) ನಯವಲ್ಲದ. ಕಚ್ಚಾ , ನಾಜೂಕಲ್ಲದ

ಒರಟು ಅರ

(ತಂ) ಉಬ್ಬಿದ ಮೊನೆಗಳ ರೂಪದ ಬಿಡಿ ಬಿಡಿಯಾದ ಹಲ್ಲುಗಳುಳ್ಳ ಅರ

ಒರಳು

(ರ) ಪಿಂಗಾಣಿ, ಗಾಜು ಅಥವಾ ಶಿಲೆಯಿಂದ ಮಾಡಿದ ಬೋಗುಣಿ. ಒನಕೆ ಅಥವಾ ಮೋಟು ಹಾರೆಯ ಸಹಾಯದಿಂದ ಇದರಲ್ಲಿ ಘನ ಪದಾರ್ಥಗಳನ್ನು ಇಟ್ಟು ಪುಡಿ ಮಾಡಲಾಗುತ್ತದೆ. ಕಲಬತ್ತು. ನೋಡಿ : ಕುಟ್ಟಣಿ

ಒರಾಂಗೂಟಾನ್

(ಪ್ರಾ) ವಾನರ ಜಾತಿಗೆ ಸೇರಿದ ದೊಡ್ಡ ಪ್ರಾಣಿ. ಪಾಂಗೊ ಪಿಗ್ಮಿಯಿಸ್ ವೈಜ್ಞಾನಿಕ ನಾಮ. ಬೋರ್ನಿಯೊ, ಸುಮಾತ್ರ ದ್ವೀಪಗಳ ಜೌಗು ಕಾಡುಗಳಲ್ಲಿ ಮರಗಳ ಮೇಲೆ ವಾಸ. ಇವುಗಳ ಸಂಖ್ಯೆ ೫,೦೦೦ ಕ್ಕಿಂತ ಕಡಿಮೆ. ಬಲಯುತವಾದ ದೇಹ (೮೮೦ ಕಿಗ್ರಾಮ್‌ಗೂ ಹೆಚ್ಚು ತೂಕ), ಸಣ್ಣ ಕಿವಿಗಳು, ಗಿಡ್ಡ ಕಾಲುಗಳು, ಎದ್ದು ನಿಂತಾಗ ನೆಲ ಮುಟ್ಟುವಷ್ಟು ಉದ್ದವಾದ ಕೈಗಳು. ಧ್ವನಿ ಪೆಟ್ಟಿಗೆಯಿಂದ ಹೊರಬಂದ ಗಾಳಿಚೀಲ ಕುತ್ತಿಗೆ ಬಳಿ ನೇತುಬಿದ್ದಿರುತ್ತದೆ ಎರಡು ಕೆನ್ನೆಗಳ ಬಳಿಯೂ ಒಂದೊಂದು ಚೀಲ. ಸಸ್ಯಾಹಾರಿ

ಒರೆ

(ಭೂವಿ) ಖನಿಜದ ಸೂಕ್ಷ್ಮಕಣಗಳ ಬಣ್ಣ. ಇದು ಒಡಲಿನ ಬಣ್ಣಕ್ಕಿಂತ ಭಿನ್ನವಾಗಿರಬಹುದು. ಉದಾ: ಪೈರೈಟ್ ಹಳದಿ, ಅದರ ಒರೆ ಕಪ್ಪು. ಖನಿಜವನ್ನು ಒರಟು ಪಿಂಗಾಣಿ ಫಲಕದ ಮೇಲೆ ಉಜ್ಜುವು ದರಿಂದ, ಚಾಕುವಿನಲ್ಲಿ ಹೆರೆಯುವುದರಿಂದ, ಒರೆ ಲಭಿಸುತ್ತದೆ

ಒರೆಗಲ್ಲು

(ಭೂವಿ) ಬೆಣಚಿನಂಥ ಈ ಕಪ್ಪು ಅಥವಾ ಬೂದು ಕಲ್ಲಿಗೆ ಚಿನ್ನ ಅಥವಾ ಬೆಳ್ಳಿಯನ್ನು ಉಜ್ಜಿದಾಗ ಮೂಡುವ ಗುರುತನ್ನು (ಒರೆ) ಆಧರಿಸಿ ಆಯಾ ಲೋಹಗಳ ಪರಿಶುದ್ಧತೆಯನ್ನು ನಿರ್ಣಯಿಸಲಾಗುವುದು. ನಿಕಷ

ಒಲಿಕ್ರೆನಾನ್

(ವೈ) ನೆಲವಾಸಿ ಕಶೇರುಕಗಳಲ್ಲಿ ಮುಂದೋಳಿನ ಒಳಪಾರ್ಶ್ವದ ಎಲುಬಿನ ಮೇಲ್ತುದಿಯಲ್ಲಿಯ ಬೆಳೆತ. ಇದು ಮೊಳಕೈಯ ತುದಿ ಬಿಂದುವನ್ನು ರೂಪಿಸುತ್ತದೆ

ಒವಾಲ್ಬೂಮಿನ್

(ರ) ಹಕ್ಕಿ ಮೊಟ್ಟೆಯ ಬಿಳಿ ಭಾಗದಲ್ಲಿ ಇರುವ ಪ್ರಧಾನ ವಸ್ತುವನ್ನು ರೂಪಿಸುವಂಥ ಅಲ್ಬುಮಿನ್ (ಪ್ರೋಟೀನ್ ಅಂಶ)

ಒಳ ಕುಸಿತ

(ಭೂವಿ) ನೆಲದೊಳಗಿನ ಪೊಳ್ಳು ಸುತ್ತಲಿನ ಭಾರ ತಡೆಯಲಾಗದೆ ಸುತ್ತಲೂ ಒಳಸರಿಯುವುದು. ನಿಪತನ

ಒಳ ಗ್ರಹಗಳು

(ಖ) ಕ್ಷುದ್ರಗ್ರಹಗಳ ಹೊನಲಿನ ಒಳಗಿನವು: ಕುಜ, ಭೂಮಿ, ಶುಕ್ರ ಮತ್ತು ಬುಧ. ಸೌರವ್ಯೂಹ ದಲ್ಲಿ ಸೂರ್ಯನಿಗೆ ಅತಿ ಸಮೀಪದ ಕಕ್ಷೆ ಉಳ್ಳವು. ಉಳಿದವು ಹೊರ ಗ್ರಹಗಳು

Search Dictionaries

Loading Results

Follow Us :   
  Download Bharatavani App
  Bharatavani Windows App