Navakarnataka Vijnana Tantrajnana Padasampada (2011)
Navakarnataka Publications Private Limited
ಐಕಾನಸ್ಕೋಪ್
(ತಂ) ಟೆಲಿವಿಷನ್ಗೆ ಜೋಡಿಸಿರುವ ಒಂದು ನಳಿಗೆ. ಇದರಲ್ಲಿಯ ಎಲೆಕ್ಟ್ರಾನ್ ದಂಡವು ಚಿತ್ರವನ್ನು ಕ್ರಮ ವೀಕ್ಷಿಸಿ ಆ ದ್ಯುತಿಚಿತ್ರವನ್ನು ವಿದ್ಯುತ್ ಸಂeಗಳಾಗಿ ಪರಿವರ್ತಿಸುತ್ತದೆ. ಇವು ಮುಂದೆ ರೇಡಿಯೋ ಅಲೆಗಳಾಗಿ ಪರಿವರ್ತಿತವಾಗಿ ದೂರದರ್ಶನದಲ್ಲಿ ಬಿತ್ತರವಾಗುತ್ತವೆ. ಬಿಂಬದರ್ಶಕ
ಐಕ್ಯ ಧಾತು
(ಗ) ನೋಡಿ : ತತ್ಸಮಕಾರಿ ಧಾತು
ಐಗನ್ ಫಲನ
(ಭೌ) ಗಡಿ ನಿರ್ಬಂಧಗಳ ಒಂದು ಗಣವನ್ನು ತೃಪ್ತಿಪಡಿಸುವ ತರಂಗ ಸಮೀಕರಣ ಪರಿಹಾರ. ಕ್ಯಾರಕ್ಟರಿಸ್ಟಿಕ್ (ಲಾಕ್ಷಣಿಕ) ಫಲನ. ಪ್ರಾಪರ್ (ನೈಜ) ಫಲನ
ಐಚ್ಛಿಕ ಕ್ರಿಯೆ
(ಭೌ) ಮನಸ್ಸಿನಲ್ಲಿ ರೂಪುಗೊಂಡ, ಯಾವುದೋ ಉದ್ದೇಶದಿಂದ ಪ್ರೇರಿತವಾದ, ಪ್ರeಪೂರಿತವಾದ, ತನ್ನಷ್ಟಕ್ಕೆ ತಾನೇ ಆಗದ ಕ್ರಿಯೆ
ಐಚ್ಛಿಕ ಸ್ನಾಯು
(ವೈ) ಸ್ವ-ಇಚ್ಛೆಯಿಂದ ಚಲಿಸುವ ಎಲ್ಲಾ ಸ್ನಾಯುಗಳು. ಇವು ಸಾಮಾನ್ಯವಾಗಿ ಮಿದುಳಿನ ನಿಯಂತ್ರಣಕ್ಕೆ ಒಳಪಟ್ಟಿದ್ದು ದೇಹದ ಮೂಳೆಗಳಿಗೆ ಅಂಟಿಕೊಂಡು ಇರುತ್ತವೆ. ಮಿದುಳು ಹಾಗೂ ಮಿದುಳು ಬಳ್ಳಿಯಿಂದ ಬರುವ ನರಗಳು, ಮಯಲಿಯನ್ಯುಕ್ತ ನರಗಳು, ಈ ಸ್ನಾಯುಗಳಿಂದ ಪೂರೈಕೆಯಾಗಿರುತ್ತವೆ. ಹಾಗಾಗಿ ಇವು ಮಿದುಳಿನ ಆಣತಿಯಂತೆ ಕೆಲಸ ಮಾಡುತ್ತವೆ. ಈ ಸ್ನಾಯುವನ್ನು ಸೂಕ್ಷ್ಮದರ್ಶಕದ ಮೂಲಕ ಅಧ್ಯಯನ ಮಾಡಿದಾಗ ಪ್ರತಿಯೊಂದು ಸ್ನಾಯುಕೋಶವೂ ಉರುಳೆಯಾಕಾರದಲ್ಲಿ ಇರುವುದು ಕಾಣುತ್ತದೆ. ಇದರ ಮೇಲೆ ಅಡ್ಡಡ್ಡವಾಗಿ ಪಟ್ಟಿಗಳು ಇರುತ್ತವೆ. ಒಂದೊಂದು ತಂತುವಿನಲ್ಲೂ ಹಲವಾರು ನ್ಯೂಕ್ಲಿಯಸ್ಗಳಿದ್ದು, ಎಲ್ಲ ಸ್ನಾಯುತಂತುಗಳೂ ಪೊರೆಯಿಂದ ಆವೃತ. ರೇಖಿತ ಸ್ನಾಯು. ಪಟ್ಟೆ ಸ್ನಾಯು. ಅಸ್ಥಿ ಸ್ನಾಯು
ಐಝಡ್ ಪರೀಕ್ಷೆ
(ತಂ) ಲೋಹ ದಂಡದ ಆಘಾತ ಧಾರಣ ತ್ರಾಣ ಅಳೆಯಲು ಬಳಸುವ ಪ್ರಯೋಗ
ಐಝಡ್ ಮೌಲ್ಯ
(ತಂ) ಐಝಡ್ ಲೋಲಕ ಸಂಘಟ್ಟನೆ-ಪರೀಕ್ಷಣಾ ಯಂತ್ರದಲ್ಲಿ ಮಾದರಿಯನ್ನು ತುಂಡರಿಸುವಾಗ ಹೀರಿಕೊಳ್ಳಲಾದ ಶಕ್ತಿ
ಐಡೆಮ್ಪೊಟೆಂಟ್
(ಗ) ಸ್ವತಃ ತನ್ನಿಂದಲೇ ಗುಣಿಸಲ್ಪಟ್ಟಾಗ ಬದಲಾಗದ ರಾಶಿ. ಉದಾ: ೧ ಮತ್ತು ಮಾತೃಕೆ . x2 = x ಎಂಬ ಸಮೀಕರಣವನ್ನು ತೃಪ್ತಿಗೊಳಿಸುವಂಥ ಬೀಜಗಣಿತೀಯ ಉಕ್ತಿಯೊಂದರ ಮೂಲ
ಐಬಿಸ್
(ಪ್ರಾ) ಸಿಕೋನೈನಿಫಾರ್ಮೀಸ್ ಗಣದ, ತ್ರೆಸ್ ಕಿಯೊರ್ನಿತಿಡೀ ಕುಟುಂಬದ ಹಲವು ಪ್ರಭೇದಗಳ ನೀರು ಹಕ್ಕಿ. ಇದರ ಅನೇಕ ಪ್ರಭೇದಗಳು ಪ್ರಪಂಚದ ನಾನಾ ಭಾಗಗಳಲ್ಲಿ, ಮುಖ್ಯವಾಗಿ ಉಷ್ಣವಲಯ ಪ್ರದೇಶಗಳಲ್ಲಿ ಹರಡಿವೆ. ದೊಡ್ಡ ಗಾತ್ರದ ಹಕ್ಕಿ. ಕೊಕ್ಕು ಉದ್ದ ವಾಗಿದ್ದು ಪಿಕಾಸಿಯ ಅಲಗಿನಂತೆ ಮುಂದಕ್ಕೆ ಬಾಗಿರುತ್ತದೆ. ಕೆಂಪು ರೆಕ್ಕೆ ಪುಕ್ಕಗಳಿಗಾಗಿ ಬೇಟೆ ಆಡಿದುದರ ಫಲವಾಗಿ ಈ ಕೆಂಪು ಹಕ್ಕಿ ಪ್ರಭೇದ ತೀರ ನಶಿಸಿಹೋಗಿದೆ. ಬೆಳ್ಳಕ್ಕಿ
ಐಬೆಕ್ಸ್
(ಪ್ರಾ) ಕ್ಯಾಪ್ರ ಜಾತಿಗೆ ಸೇರಿದ, ದಕ್ಷಿಣ ಯೂರೋಪ್. ಮಧ್ಯ ಏಷ್ಯ ಹಾಗೂ ಏಷ್ಯ ಮೈನರ್ಗಳಲ್ಲಿ ಕಂಡುಬರುವ ಕಾಡುಮೇಕೆಗಳ ಪೈಕಿ ಒಂದು. ಸ್ಥೂಲ ದೃಢ ಮೈಕಟ್ಟು, ಹಿಂದಕ್ಕೆ ಬಾಗಿದ ದೊಡ್ಡ ಕೊಂಬುಗಳು, ಮೈ ತುಂಬ ಒರಟಾದ ಬಿರುಸು ಕೂದಲುಗಳು, ಮೈಯ ಕೆಳ ಭಾಗದಲ್ಲಿ ಸಮೃದ್ಧ ದಟ್ಟ ಮೃದು ತುಪ್ಪಳ ಇರುವುದು ಇದರ ವೈಶಿಷ್ಟ್ಯ
ಐಯುಪಿಎಸಿ ಪದ್ಧತಿ IUPAC
(ರ) ಇಂಟರ್ನ್ಯಾಷನಲ್ ಯೂನಿಯನ್ ಆಫ್ ಪ್ಯೂರ್ ಅಂಡ್ ಅಪ್ಲೈಡ್ ಕೆಮಿಸ್ಟ್ರಿ ಸಂಸ್ಥೆಯು ಆಗಾಗ ಬದಲಿಸುವಂಥ ರಾಸಾಯನಿಕ ನಾಮ ನಿರ್ದೇಶನವನ್ನು ಪ್ರಮಾಣವಾಗಿಸುವ ವ್ಯವಸ್ಥೆ
ಐರಿಸ್
(ಸ) ಇರಿಡೇಸೀ ಕುಟುಂಬಕ್ಕೆ ಸೇರಿದ ಪದ್ಮ ಪುಷ್ಕರ ಎಂಬ ಸಸ್ಯವನ್ನೊಳಗೊಂಡ, ಗಡ್ಡೆ ಬೇರು, ಕತ್ತಿಯಾಕಾರದ ಎಲೆಗಳು ಮತ್ತು ಬಣ್ಣ ಬಣ್ಣದ ಬೆಡಗಿನ ಹೂಗಳುಳ್ಳ ಹಲವು ಗಿಡಗಳ ಜಾತಿ. (ಭೂವಿ) ಒಳಗೆ ಇರುವ ಸೀಳಿಕೆಗಳ ಪರಿಣಾಮವಾಗಿ ವಿವಿಧ ಬಣ್ಣಗಳನ್ನು ಪ್ರತಿಫಲಿಸುವ ಒಂದು ಬಗೆಯ ಶಿಲಾ ಸ್ಫಟಿಕ. (ತಂ) ಕ್ಯಾಮರಾಗಳಲ್ಲಿ ಒಳ ಹೊಗುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸಲು ಹೆಚ್ಚುಕಡಿಮೆ ಮಾಡ ಬಹುದಾದ ರಂಧ್ರವುಳ್ಳ ಒಂದು ಬಗೆಯ ತೆಳು ಲೋಹೀಯ ಪಟಲ. (ವೈ) ಕಣ್ಣಿನ ಪಾರಪಟಲ (ಕಾರ್ನಿಯ) ಹಾಗೂ ಮಸೂರದ ನಡುವೆ ಇರುವ ಹಿಗ್ಗಿ ಕುಗ್ಗ ಬಲ್ಲ ಪೊರೆ. ಇದು ಕಣ್ಣಿನ ಜಲದ್ರವದೊಳಗೆ ಇಳಿ ಬಿದ್ದಿರುತ್ತದೆ. ಇದರ ಮುಂಭಾಗವನ್ನು ಮುಂಗೋಣೆ (ಆಂಟೀರಿಯರ್ ಚೇಂಬರ್) ಹಾಗೂ ಹಿಂಭಾಗ ವನ್ನು ಹಿಂಗೋಣೆ (ಪ್ರೊಸ್ಟೀರಿಯರ್ ಚೇಂಬರ್) ಎಂದು ಕರೆಯ ಲಾಗುತ್ತದೆ. ಈ ಪೊರೆಯ ನಡುವೆ ಪಾಪೆ (ಪ್ಯೂಪಿಲ್) ಇರುತ್ತದೆ. ಪಾಪೆ ಪೊರೆ ತನ್ನ ನಮ್ಯತಾ ಗುಣದಿಂದ ಹಿಗ್ಗಿ ಕುಗ್ಗಿದಾಗ ಪಾಪೆಯ ವ್ಯಾಸ ಹೆಚ್ಚು ಕಡಿಮೆಯಾಗುತ್ತದೆ. ಆಗ ಮಸೂರದ ಮೂಲಕ ಒಳಬರುವ ಬೆಳಕಿನ ಪ್ರಮಾಣ ನಿಯಂತ್ರಿತವಾಗುತ್ತದೆ. ಕಣ್ಣು ಗುಡ್ಡೆಯ ಬಣ್ಣಕ್ಕೆ ಪಾಪೆಪೊರೆಯ ಬಣ್ಣವೇ ಕಾರಣ. ಕನೀನಿಕೆ. ಕನೀನಿಕಾ ಪಟ. ಕರಿಯಾಲಿ. ಕಣ್ಪೊರೆ
ಐಲಾಂತಸ್ ಪತಂಗ
(ಪ್ರಾ) ನಾಕ್ಟೂಯಿಡೀ ಕುಟುಂಬಕ್ಕೆ ಸೇರಿದ ಚಿಟ್ಟೆ. ಎಲಿಗ್ಮ ನಾರ್ಸಿಸಸ್ ವೈಜ್ಞಾನಿಕ ನಾಮ. ಬಹುಮಟ್ಟಿಗೆ ನಿಶಾಚರಿ ಮಾಸಿಮರದ (ಐಲಾಂತಸ್ ಎಕ್ಸೆಲ್ಸ) ಎಲೆಗಳನ್ನು ತಿಂದು ಹಾಳು ಮಾಡುವ ಇದಕ್ಕೆ ಆ ಮರದ ಹೆಸರನ್ನೇ ಕೊಡಲಾಗಿದೆ
ಐಸಿ
(ಭೌ,ಕಂ) ನೋಡಿ: ಸಮಾಕಲಿತ ಮಂಡಲ
ಐಸಿಂಗ್ಲಾಸ್
(ರ) ಕೆಲವು ಬಗೆಯ ಸಿಹಿನೀರು ಮೀನುಗಳಿಂದ ತಯಾರಿಸಿದ, ಜೆಲ್ಲಿ. ಅಂಟು ಮೊದಲಾದವನ್ನು ತಯಾರಿಸಲು ಬಳಸುವ ಒಂದು ಬಗೆಯ ಜೆಲೆಟಿನ್. ಮೀನಂಟು. ಮೀನು ವಜ್ರ
ಐಸೆಂಟ್ರಾಪಿಕ್
(ಭೌ) ಒಂದೇ ಎಂಟ್ರಪಿಯುಳ್ಳ (ಮುಖ್ಯವಾಗಿ ಕ್ರಿಯೆಗಳ ವಿಷಯದಲ್ಲಿ) ಎಂಟ್ರಪಿ ಬದಲಾಯಿಸದ. ಸಮಎಂಟ್ರಪಿಯ
ಐಸೊಅಗ್ಲುಟಿನಿನ್
(ಪ್ರಾ) ಪ್ರಾಣಿಗಳ ಕೆಂಪು ರಕ್ತಕಣಗಳಲ್ಲಿ ಅಂಟಿಕೆ ಉಂಟುಮಾಡುವ ಪ್ರತಿಕಾಯ. ಯಾವ ಪ್ರಾಣಿ ಪ್ರಭೇದದಿಂದ ಉತ್ಪತ್ತಿಯಾಯಿತೋ ಆ ಪ್ರಾಣಿ ಪ್ರಭೇದದ ಕೋಶಗಳ ಮೇಲಷ್ಟೆ ಕ್ರಿಯೆ ನಡೆಸುತ್ತದೆ
ಐಸೊಎಲೆಕ್ಟ್ರಾನಿಕ್
(ಭೌ,ರ) (ಪರಮಾಣುಗಳ ವಿಷಯದಲ್ಲಿ) ನ್ಯೂಕ್ಲಿಯಸ್ ಸುತ್ತ ಒಂದೇ ಸಂಖ್ಯೆಯ ಎಲೆಕ್ಟ್ರಾನ್ ಗಳಿರುವ. ಉದಾ: ನೈಟ್ರೊಜನ್ (N2) ಹಾಗೂ ಕಾರ್ಬನ್ ಮಾನಾಕ್ಸೈಡ್ (CO) ಐಸೊ ಎಲೆಕ್ಟ್ರಾನಿಕ್ ಅಣುಗಳು; Na+ ಮತ್ತು Mg2+ ಅಯಾನ್ಗಳಲ್ಲಿರುವ ಎಲೆಕ್ಟ್ರಾನ್ಗಳ ಸಂಖ್ಯೆ ೧೦
ಐಸೊಕಾರ್ಪಸ್
(ರ) ಶಲಾಕಾಶಯಗಳು, ಪುಷ್ಪ ಪಾತ್ರೆ ಮತ್ತು ದಳವಲಯಗಳು ಸಮಸಂಖ್ಯೆಯಲ್ಲಿರುವುದು
ಐಸೊಕೋರ್