भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಏಕಾಂಗ ಸಸ್ಯ

(ಸ) ಕಾಂಡ, ಎಲೆ ಮತ್ತು ಬೇರು ಭಾಗಗಳು ಪ್ರತ್ಯೇಕವಾಗಿರದ ಸರಳ ಸಸ್ಯ ರಚನೆ. ಏಕ/ಬಹುಕೋಶಿಗಳು. ಉದಾ: ಶೈವಲ, ಶಿಲೀಂಧ್ರ, ಶಿಲಾವಲ್ಕ ಮತ್ತು ಹಾವಸೆ

ಏಕಾಂಗುಲಿಕ

(ಪ್ರಾ) ಕೈಯಲ್ಲಿ ಅಥವಾ ಕಾಲಿನಲ್ಲಿ ಒಂದೇ ಬೆರಳು ಉಳ್ಳದ್ದು

ಏಕಾಣವಿಕ ಕ್ರಿಯೆ

(ರ) ರಾಸಾಯನಿಕ ಕ್ರಿಯೆ ಜರಗಿಸಲು ಒಂದೇ ಅಣು ಮಾತ್ರ ಅಗತ್ಯವಿರುವ ಸಂದರ್ಭ

ಏಕಾಭಿಮುಖ ವಿಕಾಸವಾದ

(ಜೀ) ಒಂದು ಬಗೆಯ ಸಸ್ಯ ಅಥವಾ ಪ್ರಾಣಿ ಯಾವುದೇ ಬಾಹ್ಯ ಬಲಗಳ ಅಥವಾ ಪರಿಸ್ಥಿತಿಗಳ ಪ್ರಭಾವಕ್ಕೊಳಗಾಗದೆಯೇ ಸ್ವತಂತ್ರವಾಗಿ ತನ್ನ ಆನುವಂಶಿಕ ಗುಣಗಳ ಪರಿಣಾಮವಾಗಿಯಷ್ಟೆ ಬಲು ಕಾಲ ನಿರ್ದಿಷ್ಟ ದಿಶೆಯಲ್ಲಿ ವಿಕಾಸಗೊಳ್ಳುತ್ತ ಹೋಗುತ್ತದೆ; ಒಂದೇ ಪೂರ್ವಜರಿರುವ ವಿಭಿನ್ನ ಸಸ್ಯ/ಪ್ರಾಣಿ ವೃಂದಗಳು ಸಮಾಂತರ ವಾಗಿ ಬೆಳೆಯುತ್ತ ಹೋಗುವುದರಲ್ಲಿ ಇದನ್ನು ಕಾಣಬಹುದು – ಎಂಬ ಒಂದು ಬಗೆಯ ವಿಕಾಸವಾದ. ಇದು ಅಷ್ಟು ತಥ್ಯವಲ್ಲ ಎಂದು ಪ್ರಯೋಗಗಳು ತೋರಿಸಿಕೊಟ್ಟಿವೆ. ಆರ್ತೋಜೆನಿಸಿಸ್

ಏಕಾಮ್ಲೀಯ

(ರ) ಪಲ್ಲಟಯೋಗ್ಯವಾದ ಒಂದೇ ಒಂದು ಹೈಡ್ರಾಕ್ಸಿಲ್ ರ‍್ಯಾಡಿಕಲ್ ಇರುವ (ಪ್ರತ್ಯಾಮ್ಲ) ಉದಾ: ಸೋಡಿಯಮ್ ಹೈಡ್ರಾಕ್ಸೈಡ್ NaOH, ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ KOH

ಏಕಾಹಾರಿ

(ಪ್ರಾ) ಒಂದೇ ಬಗೆಯ ಆಹಾರ ಸೇವಿಸುವ. ಉದಾ : ಒಂದೇ ಬಗೆಯ ಸಸ್ಯಕ್ಕೆ ತಮ್ಮನ್ನು ಸೀಮಿತ ಗೊಳಿಸಿಕೊಂಡಿರುವ ಕೀಟಗಳು; ಯಾವತ್ತೂ ಒಂದೇ ಕೋಶದಲ್ಲಿ ಜೀವಿಸುವ ಸ್ಪೋರೊಜೋವ

ಏಕಿಕ

(ಸಾ) ಏಕಮಾನಗಳ; ಏಕಮಾನಗಳಿಗೆ ಸಂಬಂಧಿಸಿದ. ವಿಭಜನೆಗೊಳ್ಳದೆ ಏಕಮಾನ ರೂಪಿಸುವ

ಏಕೀಕರಿಸು

(ಸಾ) ಒಂದುಗೂಡಿಸು; ಏಕರೂಪಕ್ಕೆ ತರು

ಏಕೀಕೃತ ಕ್ಷೇತ್ರ ಸಿದ್ಧಾಂತ

(ಭೌ) ಗುರುತ್ವಾಕರ್ಷಣೀಯ ಸಿದ್ಧಾಂತವನ್ನೂ ವಿದ್ಯುತ್ಕಾಂತೀಯ ಸಿದ್ಧಾಂತವನ್ನೂ ಒಂದೇ ಚೌಕಟ್ಟಿನಲ್ಲಿ ನಿರೂಪಿಸಲು ಪ್ರಯತ್ನಿಸುವ ಯಾವುದೇ ಸಿದ್ಧಾಂತ. ವಿಶ್ವದ ಮೂಲಭೂತ ಅಂತರಕ್ರಿಯೆಗಳಾದ ಗುರುತ್ವಾಕರ್ಷಣೆ, ವಿದ್ಯುತ್ಕಾಂತತ್ವ, ದುರ್ಬಲ ಮತ್ತು ಪ್ರಬಲ ಬೈಜಿಕ ಬಲಗಳು – ಈ ನಾಲ್ಕು ಆಂತರಿಕ ಕ್ರಿಯೆಗಳಲ್ಲಿ ಎರಡು ಅಥವಾ ಹೆಚ್ಚು ಅಂತರಕ್ರಿಯೆಗಳನ್ನು ವಿವರಿಸಬಲ್ಲ ಒಂದು ಸಿದ್ಧಾಂತ

ಏಕೀಕೃತ ಮಾನಕ

(ರ) ಕಾರ್ಬನ್ ಸಮಸ್ಥಾನಿ c೧೨ರ ರಾಶಿಯನ್ನು ೧೨ ಎಂದು ಅಂಗೀಕರಿಸಿ ವ್ಯಾಖ್ಯಾನಿಸಿರುವ ಪರಮಾಣವಿಕ, ಆಣವಿಕ ತೂಕ ಮಾನಕ. ಎಂದೇ ಕಾರ್ಬನ್‌ನ ಪರಮಾಣವಿಕ ರಾಶಿ ಏಕಮಾನ ೧.೬೬ ೧೦-೨೭ ಕಿಗ್ರಾಮ್

ಏಕೈಕ

(ಸಾ) ಎಣೆಯಿಲ್ಲದ, ಸಾಟಿಯಿಲ್ಲದ, ಅದ್ವಿತೀಯ

ಏಕೈಕತೆ

(ಖ) ದೇಶ ಕಾಲದಲ್ಲಿ ಅನಂತ ವಕ್ರತೆ ಇರುವ ಒಂದು ಬಿಂದು. ಅನಂತ ಸಾಂದ್ರತೆಯ ಹಾಗೂ ಶೂನ್ಯ ಆಯಾಮದ ಈ ಬಿಂದುವಿನಲ್ಲಿ ದೇಶ-ಕಾಲಗಳ ಎಲ್ಲ ಪರಿಕಲ್ಪನೆಗಳೂ ಮುರಿದುಬೀಳುತ್ತವೆ. ಕೆಲವು ಸಿದ್ಧಾಂತಗಳ ಪ್ರಕಾರ ಕಪ್ಪುಕುಳಿ (ಬ್ಲಾಕ್‌ಹೋಲ್)ಯನ್ನು ವಿಶ್ವದ ಆದಿ ಅಥವಾ ವಿಶ್ವದ ಅಂತ್ಯದಂಥ ಸನ್ನಿವೇಶಗಳಲ್ಲಿ ಕಾಣಬಹುದು

ಏಕೈಲಿಯಾ ಗ್ಯಾಸ್ಟ್ರಿಕ

(ವೈ) ೧. ಜಠರಾಮ್ಲ ಉತ್ಪಾದನೆಯಾಗದ ಪರಿಸ್ಥಿತಿ. ೨. ಮೇದರಸ ರಾಹಿತ್ಯ

ಏಕೋದ್ಭವೀ

(ಸ) ಒಂದೇ ಜೀನ್‌ನಿಂದ (ವಂಶ ವಾಹಿ) ಉದ್ಭವಿಸಿದ, ಒಂದೇ ಜೀನ್‌ಅನ್ನು ಅವಲಂಬಿಸಿದ. (ಪ್ರಾ) ಒಂದೇ ಲಿಂಗದ ಸಂತಾನಕ್ಕೆ ಜನ್ಮ ನೀಡುವ

ಏಜೆಂಟ್ ಆರೆಂಜ್

(ಪವಿ) ಇದೊಂದು ಸಾರಯುಕ್ತ ರಾಸಾಯನಿಕ ಕಳೆನಾಶಕ. ಇದರಲ್ಲಿ ಡೈಕ್ಲೋರೋಫಿನಾಕ್ಸಿ ಅಸಿಟಿಕ್ ಆಮ್ಲ ಮತ್ತು ಟ್ರೈಕ್ಲೋರೋಫಿನಾಕ್ಸಿ ಅಸಿಟಿಕ್ ಆಮ್ಲಗಳು ಸಮಪ್ರಮಾಣದಲ್ಲಿರುತ್ತವೆ. ೧೯೬೦ರ ದಶಕದಲ್ಲಿ ಅಮೆರಿಕ ಇದನ್ನು ವಿಯೆತ್ನಾಂನ ಯುದ್ಧದ ಸಮಯದಲ್ಲಿ ಬಳಸಿ ಕಾಡುಗಳನ್ನು ನಾಶಪಡಿಸಿತು. ಇದು ಕ್ಯಾನ್ಸರ್‌ಕಾರಕ. ಅಮೆರಿಕದಲ್ಲಿ ಇದನ್ನು ನಿಷೇಧಿಸಲಾಗಿದೆ. ಈ ರಾಸಾಯನಿಕದ ಪೊಟ್ಟಣದ ಮೇಲೆ ಇರುವ ಕಡುಕಿತ್ತಳೆ ಬಣ್ಣದ ಪಟ್ಟಿಯಿಂದಾಗಿ ಇದಕ್ಕೆ ಈ ಹೆಸರು

ಏಡಿ

(ಪ್ರಾ) ಅಕಶೇರುಕಗಳ ವಿಭಾಗ, ಆರ್ತ್ರಾಪೊಡ ವಂಶ. ಕ್ರಸ್ಟೇಸಿಯ ವರ್ಗ, ಡೆಕೊಪೊಡ ಗಣ ಹಾಗೂ ಬ್ರಾಕಿಯರ ಉಪ ಗಣಕ್ಕೆ ಸೇರಿದ ಜಲವಾಸಿ ಪ್ರಾಣಿ. ಕಠಿಣಚರ್ಮಿ. ಇದರ ಇಡೀ ದೇಹ ಕ್ಯಾರಪೇಸ್ ಎಂಬ ಗಡಸು ಚಿಪ್ಪಿ ನಿಂದ ಆವೃತವಾಗಿದೆ. ಎದೆ ಭಾಗ ದಲ್ಲಿ ಐದು ಜೊತೆ ಕಾಲುಗಳಿವೆ. ಮೊದಲ ಜೊತೆಯ ಕಾಲುಗಳು ಚಿಮುಟದಂತೆ ಆಹಾರವನ್ನೂ ವಸ್ತುಗಳನ್ನೂ ಹಿಡಿಯುತ್ತವೆ. ಏಡಿಯು ಕೊಳೆತ ಮಾಂಸ ತಿಂದು ಪರಿಸರವನ್ನು ಸ್ವಚ್ಛಗೊಳಿಸುತ್ತದೆ. ನಳ್ಳಿ

ಏಡಿಗಂತಿ

(ವೈ) ನೋಡಿ : ಕ್ಯಾನ್ಸರ್

ಏಣು

(ಭೂವಿ) ಪರ್ವತಗಳ ನೆರಿಗೆಗಳಲ್ಲಿರುವ ಗಟ್ಟಿ ಶಿಲೆಗಳ ಮೇಲಿನ ಮೃದು ಶಿಲೆಗಳು, ಹರಿಯುವ ನೀರಿನಿಂದ ಸವೆದು, ನಶಿಸಿ ಹೋದಾಗ ಉಳಿದು ತೋರುವ ಚೂಪಾದ ಶಿಖರವುಳ್ಳ ಬೆಟ್ಟದ ಬೆನ್ನೇರುಗಳು. ಇವುಗಳ ಒಂದು ಬದಿಯಲ್ಲಿ ವಾಲಿದ ಮುಖವೂ ಇನ್ನೊಂದು ಬದಿಯಲ್ಲಿ ಗಟ್ಟಿ ಶಿಲೆಯ ಇಳಿಜಾರು ಭಾಗವೂ ಕಾಣಿಸುತ್ತವೆ. ಭಾರತದಲ್ಲಿ ಸಿವಾಲಿಕ್ ಗುಡ್ಡ , ಕಿರಿ ಹಿಮಾಲಯ ಗುಡ್ಡ, ಕಾಶ್ಮೀರದ ಪೀರ್ ಪಂಜಲ್ ಶ್ರೇಣಿ ಇದಕ್ಕೆ ನಿದರ್ಶನ. ಈ ಏಣುಗಳು ಸಾಗರಾಂತರ್ಗತ ಪರ್ವತಗಳಲ್ಲೂ ಕಾಣಬರುತ್ತವೆ. ಇವು ಜ್ವಾಲಾ ಮುಖಿಯಿಂದ ಮೈದಳೆದವು. ಉದಾ: ಮಧ್ಯ ಅಟ್ಲಾಂಟಿಕ್ ಏಣುಗಳು

ಏಣು ಫಲಕ

(ಸಾ) ನಿರಿಗೆ/ಮಡಿಕೆ ಇರುವ ಹಲಗೆ (ಹಾಳೆ)

ಏಪೋಡುಗಳು

(ಪ್ರಾ) ಟೆಲಿಯೋಸ್ಟ್ ಮೀನುವರ್ಗದ ಗಣ; ಹಾವಿನಂಥ ದೇಹ; ಪ್ರತ್ಯೇಕ ಬಾಲ ಕಿವಿರಾಗಲೀ ವಸ್ತಿಕುಹರ ಕಿವಿರುಗಳಾಗಲೀ ಇಲ್ಲ

Search Dictionaries

Loading Results

Follow Us :   
  Download Bharatavani App
  Bharatavani Windows App