भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಎಲೆಕ್ಟ್ರಾನ್ ವಿಸರ್ಜನ ನಳಿಕೆ

(ಭೌ) ಬಲುಮಟ್ಟಿಗೆ ನಿರ್ದ್ರವ್ಯಗೊಳಿಸಿದ ನಳಿಕೆ. ಇದರೊಳಗೆ ಎರಡು ಅಥವಾ ಹೆಚ್ಚು ಎಲೆಕ್ಟ್ರೋಡ್‌ಗಳಿದ್ದು ಅವುಗಳ ನಡುವೆ ಎಲೆಕ್ಟ್ರಾನ್‌ಗಳು ಹಾಯುತ್ತವೆ

ಎಲೆಕ್ಟ್ರಾನ್ ವೋಲ್ಟ್

(ಭೌ) ಚರಕಣಗಳಲ್ಲಿ ನಿಹಿತವಾಗಿರುವ ಶಕ್ತಿಯ ಸಾರ್ವತ್ರಿಕ ಏಕಮಾನ. ಪ್ರತೀಕ eV. ೧.೬೦೨ ೧೦-೧೯ ಜೂಲ್‌ಗಳಿಗೆ ಸಮ. ನಿರ್ದ್ರವ್ಯತೆಯಲ್ಲಿ ೧ ವೋಲ್ಟ್ ವಿಭವ ವ್ಯತ್ಯಾಸದ ಮೂಲಕ ಹಾದುಹೋಗುವಾಗ ಪಡೆದು ಕೊಳ್ಳುವ ಶಕ್ತಿಯ ಏಕಮಾನ. ಫೋಟಾನ್‌ನ ಶಕ್ತಿಯ ಏಕಮಾನ. ರೇಡಿಯಾಲಜಿಯಲ್ಲಿ ಬಳಕೆ. ಸಾವಿರ ಅಥವಾ ಮಿಲಿಯನ್ ಎಲೆಕ್ಟ್ರಾನ್ ವೋಲ್ಟ್‌ಗಳಲ್ಲಿ ವ್ಯಕ್ತಪಡಿಸಲಾಗುತ್ತದೆ

ಎಲೆಕ್ಟ್ರಾನ್ ಸೂಕ್ಷ್ಮದರ್ಶಕ

(ಭೌ) ದ್ಯುತಿ ಸೂಕ್ಷ್ಮದರ್ಶಕದಲ್ಲಿ ಬೆಳಕಿನ ಕಿರಣದಂಡ ಹೇಗೋ ಹಾಗೆ ಈ ಸೂಕ್ಷ್ಮದರ್ಶಕದಲ್ಲಿ ಎಲೆಕ್ಟ್ರಾನ್ ಕಿರಣದಂಡವನ್ನು ಬಳಸಲಾಗುತ್ತದೆ. ಎಲೆಕ್ಟ್ರಾನ್ ದಂಡವನ್ನು ಎಲೆಕ್ಟ್ರಾನ್ ಮಸೂರದ ಮೂಲಕ ಪ್ರತಿದೀಪ್ತ ತೆರೆಯ ಮೇಲೆ ನಾಭೀಕರಿಸಿದಾಗ ಸೂಕ್ಷ್ಮ ವಸ್ತುವಿನ ಬೃಹತ್ ಬಿಂಬ ಅದರ ಮೇಲೆ ಪಡಿಮೂಡುತ್ತದೆ. ಎಲೆಕ್ಟ್ರಾನ್ ತರಂಗಗಳ ಅಲೆಯುದ್ದ ಬೆಳಕಿನ ಅಲೆಯುದ್ದಕ್ಕಿಂತ ಸಾಕಷ್ಟು ಕಿರಿದಾಗಿರುವುದರಿಂದ ಈ ಉಪಕರಣವು ದ್ಯುತಿ ಸೂಕ್ಷ್ಮದರ್ಶಕಕ್ಕೆ ಹೋಲಿಸಿದಂತೆ ಅತ್ಯಂತ ಹೆಚ್ಚಿನ ಪೃಥಕ್ಕರಣ ಸಾಮರ್ಥ್ಯ ಪಡೆದಿರುತ್ತದೆ

ಎಲೆಕ್ಟ್ರೊಎನ್ಸೆಫೆಲೊಗ್ರಾಮ್

(ವೈ) ವಿದ್ಯುನ್ಮಸ್ತಿಷ್ಕಲೇಖ. ನೋಡಿ : ಇಇಜಿ

ಎಲೆಕ್ಟ್ರೊಕಾರ್ಡಿಯೊಗ್ರಾಮ್

(ವೈ) ವಿದ್ಯುತ್ ಹೃಲ್ಲೇಖ. ನೋಡಿ : ಇಸಿಜಿ

ಎಲೆಕ್ಟ್ರೊವೇಲೆನ್ಸ್

(ರ) ಈ ರಾಸಾಯನಿಕ ಬಂಧ ದಲ್ಲಿ ಒಂದು ಪರಮಾಣುವಿನಿಂದ ಇನ್ನೊಂದಕ್ಕೆ ಒಂಟಿ ಎಲೆಕ್ಟ್ರಾನ್ ವರ್ಗಾಯಿಸಲ್ಪಡುತ್ತದೆ. ಫಲಿತ ಅಯಾನ್‌ಗಳು ಸ್ಥಾಯೀ ವಿದ್ಯುತ್ ಆಕರ್ಷಣೆಯಿಂದ ಒಗ್ಗೂಡಿರುತ್ತವೆ. ವಿದ್ಯುತ್ ಸಂಯೋಗ ಸಾಮರ್ಥ್ಯ

ಎಲೆಕ್ಟ್ರೊಸೋಲ್

(ಭೌ) ನೀರಿನೊಳಗಿರುವ ಲೋಹ ತುಣುಕುಗಳ ನಡುವೆ ವಿದ್ಯುತ್ ಕಿಡಿಗಳನ್ನು ಹಾಯಿಸಿದಾಗ ದೊರೆಯುವ ಕಲಿಲ ದ್ರಾವಣ

ಎಲೆಕ್ಟ್ರೋಡ್

(ಭೌ) ೧. ಅರೆವಾಹಕದಲ್ಲಿ ಎಲೆಕ್ಟ್ರಾನ್‌ಗಳ ಅಥವಾ ರಂಧ್ರಗಳ ಉತ್ಸರ್ಜಕ ಇಲ್ಲವೇ ಸಂಗ್ರಾಹಕ. ೨. ವಿದ್ಯುತ್ತನ್ನು ದ್ರವದೊಳಗೆ ಒಯ್ಯುವ ಅಥವಾ ಅದರಿಂದ ಹೊರ ಸಾಗಹಾಕುವ (ಎಲೆಕ್ಟ್ರೊಲೈಟ್ ಕೋಶದಲ್ಲಿಯಂತೆ) ವಾಹಕ. ೩. ಕೋಶ, ಉಷ್ಣಾಯಾನು ಕವಾಟ, ಅರೆವಾಹಕ ಸಾಧನ ಇತ್ಯಾದಿಗಳಲ್ಲಿ ಎಲೆಕ್ಟ್ರಾನ್‌ಗಳನ್ನು ಉತ್ಸರ್ಜಿಸುವ ಅಥವಾ ಸಂಗ್ರಹಿಸುವ ವಾಹಕ. ಆನೋಡ್ ಧನಾತ್ಮಕ ಎಲೆಕ್ಟ್ರೋಡ್ ಹಾಗೂ ಕ್ಯಾಥೋಡ್ ಋಣಾತ್ಮಕ ಎಲೆಕ್ಟ್ರೋಡ್

ಎಲೆಕ್ಟ್ರೋಡ್ ವಿಭವ

(ಭೌ) ಎಲೆಕ್ಟ್ರೋಡ್ ತನ್ನ ಅಯಾನುಗಳಿರುವ ದ್ರಾವಣದ ಸಂಪರ್ಕದಲ್ಲಿ ಸಮತೋಲ ತಲುಪಿದಾಗ ಉಂಟಾಗುವ ವಿದ್ಯುದ್ವಿಭವ. ಇದರ ನಿರಪೇಕ್ಷ ಮೌಲ್ಯವನ್ನು ಅಳೆಯುವುದು ಅಸಾಧ್ಯ. ಈ ನಿರ್ಧಾರಕ್ಕೆ ಬೇರೊಂದು ಪ್ರಮಾಣಕ ಎಲೆಕ್ಟ್ರೋಡ್ ಅಗತ್ಯ. ನೋಡಿ: ಹೈಡ್ರೊಜನ್ ಎಲೆಕ್ಟ್ರೋಡ್

ಎಲೆಕ್ಟ್ರೋಫೋರೆಸಿಸ್

(ಭೌ) ವಿದ್ಯುತ್ಸರಣ. ವಿದ್ಯುಚ್ಚಾಲಕ ಬಲದ ಪರಿಣಾಮವಾಗಿ ಕಲಿಲ ದ್ರಾವಣದಲ್ಲಿ ಇರುವ ಕಣಗಳು ಎರಡರಲ್ಲೊಂದು ವಿದ್ಯುದ್ವಾರದ ದಿಕ್ಕಿನಲ್ಲಿ ಚಲಿಸುವುದು. ಧನಾವಿಷ್ಟ ಕಣಗಳು ಕ್ಯಾಥೋಡ್‌ಗೂ, ಋಣಾವಿಷ್ಟ ಕಣಗಳು ಆನೋಡ್‌ಗೂ ಹರಿಯುವುವು. ಇವನ್ನು ಕ್ರಮವಾಗಿ ಕೆಟಫಾರೆಸಿಸ್ ಮತ್ತು ಅನಫಾರೆಸಿಸ್ ಎಂದು ಕರೆಯುವುದುಂಟು. ಎಲೆಕ್ಟ್ರೋ ಫೊರೆಸಿಸ್ ಕ್ರಿಯೆಯನ್ನು ಪ್ರೋಟೀನ್, ನ್ಯೂಕ್ಲಿಯಿಕ್ ಆಮ್ಲ, ಎನ್‌ಜೈಮ್ ಇತ್ಯಾದಿಗಳ ಮಿಶ್ರಣಗಳ ಅಧ್ಯಯನದಲ್ಲಿ ವಿಸ್ತೃತವಾಗಿ ಬಳಸಲಾಗುತ್ತದೆ. ವೈದ್ಯಕೀಯದಲ್ಲಿ ಇದನ್ನು ಶರೀರದ ತರಲಗಳಲ್ಲಿ ಇರುವ ಪ್ರೋಟೀನ್ ಅಂಶವನ್ನು ನಿರ್ಧರಿಸಲು ಬಳಸಲಾಗುತ್ತದೆ

ಎಲ್ಕ್

(ಪ್ರಾ) ಸರ್ವಿಡೀ ಕುಟುಂಬಕ್ಕೆ ಸೇರಿದ ಜಿಂಕೆ. ಜಿಂಕೆಗಳಲ್ಲೆಲ್ಲ ಬಲು ದೊಡ್ಡ ಗಾತ್ರದ್ದು. ಉತ್ತರವಲಯಗಳಲ್ಲಿ ಕಂಡುಬರುತ್ತದೆ. ಆಲ್ಸಸ್ ಆಲ್ಸಸ್ ಹಾಗೂ ಸರ್ವಸ್ ಕೆನಡೆನ್ಸಿಸ್ ಎಂಬ ಎರಡು ಪ್ರಭೇದಗಳ ಜಿಂಕೆಗಳಿಗೆ ಈ ಹೆಸರು ಅನ್ವಯ. ಉತ್ತರ ಅಮೆರಿಕದಲ್ಲಿ ಇದನ್ನು ಮೂಸ್ ಎಂದೂ ವಾಪಿಟ್ಟಿ ಎಂದೂ ಕರೆಯುವುದುಂಟು. ಉದ್ದ ಕಾಲು, ಮೋಟು ಕೊರಳು. ಚೆನ್ನಾಗಿ ಬೆಳೆದ ಎಲ್ಕ್ ೨ ಮೀ ಎತ್ತರವಿರುತ್ತದೆ. ೫೦೦ ಕಿಗ್ರಾಂ ತೂಗುತ್ತದೆ. ಕೊಂಬುಗಳು ೧.೫ ಮೀವರೆಗೆ ಪಸರಿಸುತ್ತವೆ

ಎಲ್ಬೊ

(ತಂ) ಎರಡು ಕೊಳವೆಗಳನ್ನು ಜೋಡಿಸಲು ಬಳಸುವ ಲಂಬಕೋನಾಕೃತಿಯ ಕೊಳವೆ (ವೈ) ಮೊಣಕೈ

ಎಲ್ಮ್

(ಸ) ಅಲ್ಮೇಸೀ ಕುಟುಂಬ, ಅಲ್ಮಸ್ ಜಾತಿಗೆ ಸೇರಿದ ಗಿಡ. ಉತ್ತರ ಯೂರೋಪಿನಲ್ಲೂ ಸಮಶೀತೋಷ್ಣ ಪ್ರದೇಶಗಳ ಬೆಟ್ಟಗುಡ್ಡಗಳಲ್ಲಿ ಬೆಳೆಯುತ್ತದೆ. ೧೪೦ ವರ್ಷ ಬಾಳುವುದು. ೧೮-೩೦ ಮೀ. ಎತ್ತರಕ್ಕೆ ಬೆಳೆಯು ತ್ತದೆ. ನೀರಿನಡಿಯೂ ದೀರ್ಘ ಬಾಳಿಕೆಗೆ ಹೆಸರುವಾಸಿ. ಹೇರು ಬಂಡಿ, ಶವದಾನಿ, ಕೃಷಿ ಉಪಕರಣ, ನೌಕೆಗಳ ನಿರ್ಮಾಣದಲ್ಲಿ ಬಳಕೆ

ಎಲ್ಯುಟ್ರೀಕರಣ

(ರ) ದ್ರವದ ಮೂಲಕ ಕಣಗಳು ಭಿನ್ನ ದರಗಳಲ್ಲಿ ಬೀಳುತ್ತಿರುವುದನ್ನು ಆಧರಿಸಿ ಗಾತ್ರರೀತ್ಯ, ಹಗುರ ಹಾಗೂ ಭಾರ ಕಣಗಳನ್ನು ಬೇರ್ಪಡಿಸುವ ಪ್ರಕ್ರಿಯೆ. ಧಾವ ಪೃಥಕ್ಕರಣ

ಎಲ್ಲೆ

(ಸಾ) ಗಡಿ. ಸರಹದ್ದು. ಸೀಮಾರೇಖೆ

ಎವೆ

(ಪ್ರಾ) ಕಣ್ಣಿಗೆ ರಕ್ಷಣೆಯಾಗಿ ಕಣ್ಣು ರೆಪ್ಪೆಗಳ ಅಂಚಿನಲ್ಲಿರುವ ಕೂದಲ ಸಾಲು

ಎವೆಯೂತ

(ವೈ) ಎವೆಯಂಚು ಗಡಸಾಗುವ ಕಣ್ಣೆವೆಯ ಉರಿಯೂತ. ಉಜ್ಜುವುದು ಇತ್ಯಾದಿ ಕ್ರಿಯೆಗಳ ಪರಿಣಾಮವಾಗಿ ಚರ್ಮದ ಮೇಲೆ ಉಂಟಾಗುವ ದಪ್ಪ, ಗಡಸು ಊತ

ಎವೊಸೆಟ್

(ಪ್ರಾ) ಕಾರಡ್ರೈಯಿಫಾರ್ಮೀಸ್ ಗಣ ರೀಕರ್ವಿರಾಸ್ಟ್ರಿಡೀ ಕುಟುಂಬಕ್ಕೆ ಸೇರಿದ, ರೀಕರ್ವಿರಾಸ್ಟ್ರ ಜಾತಿಯ ಉದ್ದಕಾಲಿನ ನೀರು ಹಕ್ಕಿ. ಕೊಕ್ಕು ಮೇಲ್ಮೊಗವಾಗಿ ಡೊಂಕಿರುವುದು ಇದರ ವಿಶಿಷ್ಟ ಲಕ್ಷಣ. ನೀರಿನಲ್ಲಿ ನಡೆಯಲು ಅನುವಾಗುವ ಜಾಲಪಾದವಿದೆ

ಎಷೆರಿಯ ಕೋಲಿ

(ವೈ) ಇದು ಒಂದು ಬ್ಯಾಕ್ಟೀರಿಯ. ಇದನ್ನು ಸಂಕ್ಷಿಪ್ತವಾಗಿ ಇ. ಕೋಲಿ ಎಂದು ಕರೆಯುವುದುಂಟು. ಇದು ಮಾನವನ ಕರುಳಿನಲ್ಲಿ ಕೂಡುಜೀವಿಯಾಗಿ ವಾಸಿಸುತ್ತದೆ. ಅಕಸ್ಮಾತ್ ಮಾನವನ ಮೂತ್ರನಾಳವನ್ನು ಪ್ರವೇಶಿಸಿದರೆ, ಅಲ್ಲಿ

ಎಸಳು

(ಸ) ಅಗಲವಾಗಿ ವಿಸ್ತರಿಸಿಕೊಂಡಿರುವ ಎಲೆಯ ಅಥವಾ ದಳದ ತೆಳ್ಳನೆಯ ಭಾಗ. ಅಲಗು

Search Dictionaries

Loading Results

Follow Us :   
  Download Bharatavani App
  Bharatavani Windows App