भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಎಪ್ಸೊಮೈಟ್

(ಭೂವಿ) ಮೆಗ್ನೀಸಿಯಮ್ ಸಲ್ಫೇಟ್ ಲವಣ. MgSO4.7H2O. ಭೇದಿ ಉಪ್ಪು. ಆರು ಸಮವಜ್ರಾಕೃತಿ ಮುಖಗಳ ಸ್ಫಟಿಕ. ವರ್ಣರಹಿತ; ಸೂಜಿರೂಪಿ; ಮೋಹ್ ಕಾಠಿಣ್ಯಾಂಕ ೨-೨.೫, ಸಾಸಾಂ ೧.೬೮; ಉಪ್ಪು-ಕಹಿ ರುಚಿ; ನೀರಿನಲ್ಲಿ ವಿಲೇಯ

ಎಫಿಮೆರಾಪ್ಟರ

(ಪ್ರಾ) ಆರ್ತ್ರಾಪೊಡ ವಿಭಾಗ, ಇನ್ಸೆಕ್ಟ ವರ್ಗ, ಟೆರಿಗೋಟ ಉಪವರ್ಗ ಮತ್ತು ಎಕ್ಸೊಟೆರಿಗೋಟ ಗುಂಪಿನ ಒಂದು ಕೀಟ ಗಣ. ಹುಟ್ಟಿ ಬೇಗ ಸಾಯುವ ಮೇಫ್ಲೈ ಈ ಗಣದ ಒಂದು ಕೀಟ

ಎಂಫಿಸೇಮ

(ವೈ) ೧. ದೇಹದ ಸಂಯೋಜಕ ಊತಕಗಳ ನಡುವೆ ಅಸಹಜವಾಗಿ ಸಂಗ್ರಹವಾಗಿರುವ ಗಾಳಿ ಅಥವಾ ಅನಿಲ. ೨. ಶ್ವಾಸಕೋಶದ ಬೇರೂರಿದ ರೋಗ. ಗಾಳಿ ಗೂಡುಗಳು ಅಸಹಜವಾಗಿ ಉಬ್ಬಿ ನಮ್ಯತೆಯನ್ನು ಕಳೆದುಕೊಳ್ಳು ವುದರಿಂದ ಆಕ್ಸಿಜನ್ ಹಾಗೂ ಕಾರ್ಬನ್ ಡೈ ಆಕ್ಸೈಡ್‌ಗಳ ವಿನಿಮಯ ಏರುಪೇರಾಗಿ ಉಸಿರಾಟ ಕಷ್ಟವಾಗುತ್ತದೆ. ವಾತಶೋಫ

ಎಬೊನೈಟ್

(ತಂ) ವಿದ್ಯುನ್ನಿರೋಧಕ ಕಠಿಣ ಪದಾರ್ಥ. ರಬ್ಬರಿನಿಂದ ತಯಾರಿತವಾದುದು

ಎಮರಿ

(ಭೂವಿ) ಕುರಂದ ಮತ್ತು ಮ್ಯಾಗ್ನೆಟೈಟ್ ಅಥವಾ ಹೀಮಟೈಟ್ ಖನಿಜಗಳ ನಿಕಟ ಚೂರ್ಣೀಕೃತ ಮಿಶ್ರಣ. ಮೋಹ್ ಕಾಠಿಣ್ಯಾಂಕ ೯. ಅಪಘರ್ಷಕವಾಗಿ ಉಪಯೋಗ. ರಾಸಾಯನಿಕ ಪ್ರತೀಕ Al2O3. ಮರಳು ಕಾಗದ ಮತ್ತು ಉಜ್ಜುಗೊರಡುಗಳ ತಯಾರಿಕೆಯಲ್ಲಿ ಬಳಕೆ

ಎಮಲ್ಶನ್

(ರ) ಒಂದು ದ್ರವದಲ್ಲಿ ಇನ್ನೊಂದರ ಕಲಿಲ ದ್ರಾವಣ. ವೈದ್ಯಕೀಯದಲ್ಲಿ ಬಳಕೆ. (ಭೌ) ದ್ಯುತಿ ಸಂವೇದೀ ಪದಾರ್ಥ. ಕೆಮರಾ ಫಲಕಗಳಿಗೂ ಫಿಲ್ಮ್‌ಗಳಿಗೂ ಇದನ್ನು ಲೇಪಿಸುತ್ತಾರೆ. ನೋಡಿ : ಕಲಿಲ ದ್ರಾವಣ

ಎಮಲ್ಸಿಫಿಕೇಶನ್

(ರ) ಎಮಲ್ಶನ್‌ಆಗಿ ಮಾಡುವುದು. ಎಮಲ್ಸೀಕರಣ

ಎಮ್ಮೆ

(ಪ್ರಾ) ಆರ್ಟಿಯೊಡ್ಯಾಕ್ಟಿಲ ವರ್ಗ ಹಾಗೂ ಬೋವಿಡೀ ಕುಟುಂಬಕ್ಕೆ ಸೇರಿದ ಸೀಳುಗೊರಸಿನ ಮೆಲಕು ಹಾಕುವ ಸ್ತನಿ. ಬ್ಯುಬೇಲಸ್ ಬ್ಯುಬಾಲಿಸ್ ವೈಜ್ಞಾನಿಕ ನಾಮ. ಭಾರತ, ಆಫ್ರಿಕಗಳ ಮೂಲವಾಸಿ. ಹಾಲು ಕೊಡುವ ಸಾಕುಪ್ರಾಣಿ

ಎಮ್ಮೆಟ್ರೋಪಿಯ

(ವೈ) ಕಣ್ಣಿನ ವಕ್ರೀಕರಣ ವ್ಯವಸ್ಥೆಯ ಸಹಜ ಸ್ಥಿತಿ. ನೇತ್ರ ಮಸೂರದ ಮೇಲೆ ಬೀಳುವ ಬೆಳಕಿನ ಸಮಾಂತರ ಕಿರಣಗಳನ್ನು ಇದು ಅಕ್ಷಿಪಟದ ಮೇಲೆ ನಾಭೀಕರಿಸುತ್ತದೆ – ಕಣ್ಣು ಶ್ರಾಂತಸ್ಥಿತಿಯಲ್ಲಿದ್ದಾಗ

ಎರಕ ಉಕ್ಕು

(ತಂ) ಯಂತ್ರ ಕ್ರಿಯೆಯಿಂದ ಆಕಾರ ರೂಪಿಸದೆ ಎರಕ ಹೊಯ್ದ ಉಕ್ಕು

ಎರಕ ಸಾಲೆ

(ತಂ) ಅಚ್ಚುಗಳಲ್ಲಿ ಎರಕ ಹೊಯ್ದು ಲೋಹ ಅಥವಾ ಗಾಜಿನ ಪದಾರ್ಥಗಳನ್ನು ತಯಾರಿಸುವ ಕರ್ಮಾಗಾರ

ಎರಕ ಹೊಯ್ಯುವುದು

(ತಂ) ದ್ರವ ಲೋಹಗಳನ್ನು ಮರಳಿನ ಅಥವಾ ಲೋಹದ ಅಚ್ಚಿಗೆ ಹೊಯ್ದು ಆ ಆಕಾರದಲ್ಲಿ ಘನೀಭವಿಸಲು ಬಿಡುವ ಪ್ರಕ್ರಿಯೆ

ಎರಿತ್ರೈಟ್

(ಭೂವಿ) ಜಲಾಂಶವುಳ್ಳ ಕೋಬಾಲ್ಟ್ ಆರ್ಸನೇಟ್. ಮಂದ ಕೆಂಪು ಹರಳುಗಳ ಅಥವಾ ಗಡಸು ಹೊರ ಮೈಯುಳ್ಳ ಖನಿಜಗಳ ರೂಪದಲ್ಲಿ ಕಂಡುಬರುತ್ತದೆ. ಇದಕ್ಕೆ ಕೋಬಾಲ್ಟ್ ಬ್ಲೂಮ್ ಎಂಬ ಹೆಸರೂ ಇದೆ. CO3(AsO4)2. 8H2O

ಎರಿತ್ರೊಮೆಲಾಲ್ಜಿಯ

(ವೈ) ಅವಯವಗಳು ಅದರಲ್ಲೂ ಮುಖ್ಯವಾಗಿ ಪಾದಗಳು ಕೆಂಪಾಗಿ, ಬಿಸಿಯಾಗಿ, ಉರಿಯುತ್ತಾ, ತೀವ್ರವಾಗಿ ನೋಯುವ ಸ್ಥಿತಿ. ಇದು ಬೆಳೆಯು ತ್ತಿರುವ ಬೇರೆ ಯಾವುದಾದರೂ ರೋಗದ ಲಕ್ಷಣವಾಗಿರ ಬಹುದು ಇಲ್ಲವೇ ಕೆಲವು ಔಷಧಗಳ ಪಾರ್ಶ್ವ-ಪರಿಣಾಮ ಆಗಿರಬಹುದು. ಇದನ್ನು ಮಿಶೆಲ್ ರೋಗ ಎನ್ನಲಾಗುತ್ತದೆ

ಎರಿಲ್

(ಸ) ಬೀಜದ ಮೇಲಿನ ಹೊರಬೆಳೆತ

ಎರೆ

(ಸಾ) ಪ್ರಾಣಿಯನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಒಡ್ಡುವ ಆಮಿಷ

ಎರೆಚೀಲ

(ಪ್ರಾ) ಹಕ್ಕಿಗಳು ತಾವು ತಿಂದುದನ್ನು ಜಠರಕ್ಕೆ ಸಾಗಿಸುವ ಮೊದಲು ಜೀರ್ಣಕಾರ್ಯಕ್ಕೆ ಅನುಕೂಲವಾಗುವಂತೆ ಅದನ್ನು ಮಾರ್ಪಡಿಸಲು ಇಟ್ಟುಕೊಳ್ಳುವ ಗಂಟಲ ಕೊಳವೆಯಲ್ಲಿಯ ಸಂಚಿಯಂಥ ಅಂಗ (ಕ್ರಾಪ್)

ಎರೆಹುಳು

(ಪ್ರಾ) ಅನೆಲಿಡ ವಿಭಾಗ, ಅಲಿಗೊ ಕೀಟ ವರ್ಗ, ಲುಂಬ್ರಿಸಿಡೀ ಕುಟುಂಬಕ್ಕೆ ಸೇರಿದ ಲುಂಬ್ರಿಕಸ್ ಜಾತಿಯ ನೆಲಹುಳು. ನೆಲದೊಳಕ್ಕೆ ಕೊರೆದು, ಮಣ್ಣಿನಲ್ಲಿ ಇರುವ ಸಾವಯವ ಪದಾರ್ಥವನ್ನು ತಿಂದು, ಅದನ್ನು ಫಲವಂತ ಗೊಬ್ಬರವನ್ನಾಗಿ ಮಾಡುತ್ತದೆ. ಜೊತೆಗೆ, ಮಣ್ಣಿನೊಳಕ್ಕೆ ಗಾಳಿ ಸಂಚಾರವನ್ನು ಸುಗಮ ಗೊಳಿಸುತ್ತದೆ. ಎಂದೇ ಇದಕ್ಕೆ ರೈತ ಮಿತ್ರ ಎಂಬ ಹೆಸರು ಬಂದಿದೆ

ಎರ್ಗಟ್

(ಸ) ರೈ ಮೊದಲಾದ ಧಾನ್ಯಗಳಿಗೆ ತಗಲುವ ಒಂದು ಶಿಲೀಂಧ್ರ ರೋಗ. ಔಷಧಕ್ಕಾಗಿ ಬಳಸುವ, ಎರ್ಗಟ್ ರೋಗ ಹತ್ತಿದ ರೈ ಕಾಳು

ಎರ್ಗೊಸ್ಟಿರಾಲ್

(ರ) C28H43OH. ಸ್ಫಟಿಕ ರೂಪದ, ನೀರಿನಲ್ಲಿ ವಿಲೀನವಾಗದ ಅಪರ್ಯಾಪ್ತ ಸ್ಟಿರಾಲ್. ರೋಗ ತಗಲಿದ ರೈ ಬೀಜ (ಆರ್ಗಾಟ್), ಹುದುಗು, ಬೂಷ್ಟುಗಳಲ್ಲಿ ಕಂಡುಬರುತ್ತದೆ. ಎಲೆಕ್ಟ್ರಾನ್‌ಗಳಿಂದ ಕ್ರಿಯಾಶೀಲವಾಗಿಸಿ ಅಥವಾ ಅತಿನೇರಿಳೆ ಕಿರಣಗಳಿಂದ ಬೆಳಗಿಸಿ ಇದನ್ನು D2 ವೈಟಮಿನ್‌ಆಗಿ ಪರಿವರ್ತಿಸಬಹುದು

Search Dictionaries

Loading Results

Follow Us :   
  Download Bharatavani App
  Bharatavani Windows App