Navakarnataka Vijnana Tantrajnana Padasampada (2011)
Navakarnataka Publications Private Limited
ಎನ್ಯಾಮೆಲ್
(ತಂ) ರಾಳವನ್ನು ಎಣ್ಣೆಯೊಂದಿಗೆ ಅರೆದು ತಯಾರಿಸಿದ ಬಣ್ಣ. ಲಿನ್ಸೀಡ್ ಎಣ್ಣೆಯನ್ನು ಚೈನಾವುಡ್ ಎಣ್ಣೆಯ ಜೊತೆಗೆ ಕೆಲವು ಗಂಟೆ ಕಾಲ ೩೦೦0 ಸೆ. ಉಷ್ಣತೆಯಲ್ಲಿ ಕಾಸಿದಾಗ ಎಣ್ಣೆ ಮಂದವಾಗುತ್ತದೆ ಮತ್ತು ಲೇಪನಯೋಗ್ಯವಾಗುತ್ತದೆ. (ವೈ) ಹಲ್ಲಿನ ಮೇಲಿನ ಗಡುಸಾದ, ನಯವಾದ ಮತ್ತು ಹೊಳೆಯುವ ಕ್ಯಾಲ್ಸಿಯಮ್ಯುಕ್ತ ಪದರ
ಎನ್ಸೆಫಲೈಟಿಸ್
(ವೈ) ಮಿದುಳ ಪದಾರ್ಥದ ಊತ. ಸಾಮಾನ್ಯವಾಗಿ ವೈರಸ್ನಿಂದ ಉಂಟಾಗುತ್ತದೆ
ಎನ್ಸೆಫಾಲೊಗ್ರಫಿ
(ವೈ) ಮಿದುಳಿನ ಎಕ್ಸ್- ಕಿರಣ ಚಿತ್ರೀಕರಣ. ಮಿದುಳು ಮತ್ತು ಮಿದುಳು ಬಳ್ಳಿಯಲ್ಲಿಯ ದ್ರವವನ್ನು ತೆಗೆದು ಆದರ ಸ್ಥಳದಲ್ಲಿ ವಾಯು ಅಥವಾ ಆಕ್ಸಿಜನ್ ತುಂಬಿ ಚಿತ್ರ ತೆಗೆಯುವುದು. ಮಸ್ತಿಷ್ಕಚಿತ್ರಣ. ಈ ತಪಾಸಣೆಯನ್ನು ಈಗ ಅನುಸರಿಸುತ್ತಿಲ್ಲ
ಎನ್ಸ್ಟಟೈಟ್
(ಭೂವಿ) ಆರ್ಥೊರಾಂಬಿಕ್ ವ್ಯವಸ್ಥೆಯ ಪೈರಾಕ್ಸಿನ್ ಖನಿಜಗಳಲ್ಲೊಂದು. ರಾಸಾಯನಿಕ ಸಂಯೋಜನೆ MgSiO3. ಇದೊಂದು ಶಿಲಾರೂಪಕ ಖನಿಜ
ಎನ್ಹೈಡ್ರೈಟ್
(ಭೂವಿ) ನೀರು ತುಂಬಿರುವ ಚಿಕ್ಕ ಗುಳ್ಳೆಗಳಿಂದ ಕೂಡಿರುವ ಯಾವುದೇ ಖನಿಜ. ಜಲಯುಕ್ತ. ನೋಡಿ: ಅನ್ಹೈಡ್ರೈಟ್
ಎಪಾಕ್ಸಿಯಲ್
(ಜೀ) ಜೀವಿಯ ಅಕ್ಷ ಪ್ರದೇಶದ ಮೇಲೆ ಅಥವಾ ಹಿಂದೆ ಇರುವಂಥ
ಎಪಿಕಾರ್ಡಿಯಮ್
(ವೈ) ಹೃದಯದ ಹೊರ ಪೊರೆ. ಕಶೇರುಕಗಳ ಹೃದಯವನ್ನು ಆವರಿಸಿರುವ ರಕ್ತಸಾರ ಪೊರೆ
ಎಪಿಕಾರ್ಪ್
(ಸ) ಫಲದ ಸಿಪ್ಪೆಯ ಅತ್ಯಂತ ಹೊರಪದರ
ಎಪಿಗ್ಯಾಮಿಕ್
(ಸಾ) ಭಿನ್ನಲಿಂಗಿ ಸಂಗಾತಿಯನ್ನು ಆಕರ್ಷಿಸುವ (ಗುಣ) ಉದಾ: ಆಕರ್ಷಕ ಬಣ್ಣ
ಎಪಿಜೂನ್
(ಪ್ರಾ) ಬೇರೊಂದು ಪ್ರಾಣಿಯ ಚರ್ಮದ ಮೇಲೆ ವಾಸಿಸುವ ಯಾವುದೇ ಪ್ರಾಣಿ. ಅಧಿಜಂತುಕ
ಎಪಿಟ್ರೋಕಾಯ್ಡ್
(ಗ) ಸ್ಥಾಯೀ ವಕ್ರರೇಖೆಯ ಪರಿಧಿಯ ಮೇಲೆ ಉರುಳುವ ವಕ್ರದ ಪರಿಧಿ ಮೇಲಿನ ಸ್ಥಿರ ಬಿಂದು ರೇಖಿಸುವ ಪಥ. ರೌಲೆಟ್
ಎಪಿಡಯಾಸ್ಕೋಪ್
(ತಂ) ಪಾರಕ ವಸ್ತುವೊಂದರ (ಸ್ಲೈಡ್ ಅಥವಾ ಟ್ರಾನ್ಸ್ಪೆರೆನ್ಸಿಯಂತಹುದು) ಅಥವಾ ಅಪಾರಕ ವಸ್ತುವಿನ (ಡಯಾಗ್ರಮ್ ಅಥವಾ ಮುದ್ರಿತ ಪುಟದಂತಹುದು) ಹಿಗ್ಗಿಸಿದ ಬಿಂಬವನ್ನು ತೆರೆಯ ಮೇಲೆ ಪ್ರಕ್ಷೇಪಿಸಲು ಅಧ್ಯಾಪಕರು, ಉಪನ್ಯಾಸಕರು ಮುಂತಾದವರು ಬಳಸುವ ದೃಕ್ ಉಪಕರಣ
ಎಪಿಥೀಲಿಯಮ್
(ಪ್ರಾ) ಪ್ರಾಣಿಯ ಒಂದು ಪ್ರಾಥಮಿಕ ಊತಕ. ಕೋಶಗಳು ಒತ್ತಾಗಿರುವುದು ಇದರ ವಿಶಿಷ್ಟ ಲಕ್ಷಣ. ಮಧ್ಯೆ ಯಾವ ವಸ್ತುವೂ ಇರುವುದಿಲ್ಲ; ಶರೀರದ ಕುಳಿಗಳ ಹಾಗೂ ನಾಳಗಳ ಒಳಮೈ ಹಾಗೂ ಹೊರಮೈಗಳನ್ನು ಆವರಿಸಿರುವಂಥದು
ಎಪಿಥೀಲಿಯೊಮ
(ವೈ) ಲಾಲಾ ಚರ್ಮದ ಹೊರ ಪೊರೆಯಿಂದ (ಎಪಿಥೀಲಿಯಮ್) ಉತ್ಪತ್ತಿಯಾದ ಒಂದು ಅರ್ಬುದ. ಸಾಮಾನ್ಯವಾಗಿ ಚರ್ಮದ ಕ್ಯಾನ್ಸರ್, ಕೆಲವೊಮ್ಮೆ ಲೋಳೆಪೊರೆಯ ಕ್ಯಾನ್ಸರ್
ಎಪಿಮೆರೀಕರಣ
(ತಂ) ಎಪಿಮೆರ್ ರೂಪುಗೊಳ್ಳುವ ಪ್ರಕ್ರಿಯೆ
ಎಪಿಮೆರ್
(ರ) ಪರಮಾಣು ಸರಪಣಿಯ ಕೊನೆಗೆ C ಪರಮಾಣುವಿನ ಮೇಲೆ, Hನ (ಹೈಡ್ರೊಜನ್) ಮತ್ತು OHನ (ಹೈಡ್ರಾಕ್ಸಿಲ್) ಸ್ಥಾನಗಳನ್ನು ಅವಲಂಬಿಸಿ, ರೂಪುಗೊಳ್ಳುವ ಪರಸ್ಪರ ಭಿನ್ನವಾದ ಎರಡು ಪದಾರ್ಥಗಳಲ್ಲಿ ಯಾವುದೇ ಒಂದು
ಎಂಪಿಯೇಮ
(ವೈ) ದೇಹದ ಯಾವುದೇ ಭಾಗದಲ್ಲಿ ಸಂಗ್ರಹವಾಗಿರುವ ಕೀವು. ಮುಖ್ಯವಾಗಿ ಫುಪ್ಪುಸ ಪೊರೆಗಳ (ಪ್ಲೂರ) ನಡುವೆ ಸಂಗ್ರಹವಾಗಿರುವ ಕೀವಿಗೆ ಈ ಶಬ್ದ ಹೆಚ್ಚು ಅನ್ವಯವಾಗುತ್ತದೆ. ಒಳಕೀವು
ಎಪಿಸ್ಟ್ಯಾಕ್ಸಿಸ್
(ವೈ) ಮೂಗಿನಿಂದ ರಕ್ತಸ್ರಾವ
ಎಪಿಸ್ಟ್ಯಾಸಿಸ್
(ವೈ) ಒಂದು ಜೀನ್ನ ಪರಿಣಾಮ ಇನ್ನೊಂದರಿಂದ ಕುಂಠಿತವಾಗುವುದು. ರಕ್ತಸ್ರಾವವನ್ನು ನಿಲ್ಲಿಸುವುದು ಅಥವಾ ನಿಯಂತ್ರಿಸುವುದು
ಎಪ್ಸಮ್-ಉಪ್ಪು