भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಉಭಯಧರ್ಮಿ

(ರ) ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಗಳಿರುವ. ಉದಾ: ಆಮ್ಲಗಳ ಮತ್ತು ಕ್ಷಾರಗಳ ಜೊತೆ ಲವಣಗಳನ್ನು ರೂಪಿಸುವ ಅಲ್ಯೂಮಿನಿಯಮ್ ಆಕ್ಸೈಡ್ ಮತ್ತು ಝಿಂಕ್ ಆಕ್ಸೈಡ್

ಉಭಯಪಾದಿ

(ಪ್ರಾ) ನಡೆಯಲು ಮತ್ತು ಈಜಲು ಪ್ರತ್ಯೇಕ ಪ್ರತ್ಯೇಕ ಕಾಲುಗಳಿರುವ ವಲ್ಕವಂತ ಪ್ರಾಣಿ

ಉಭಯಪೀನ

(ಸ) ಅವರೆ ಕಾಳಿನಂತೆ ಎರಡು ಕಡೆಯೂ ಉಬ್ಬಿರುವ. (ಪ್ರಾ) ನೇತ್ರ ಮಸೂರದ. (ಭೂವಿ) ಭಿನ್ನ ರೀತಿಯ ಮಾತೃಕೆಯಲ್ಲಿ ಹುದುಗಿರುವ ಉಭಯ ಪೀನಾಕೃತಿಯ ಖನಿಜ ಅಥವಾ ಶಿಲೆ

ಉಭಯಪ್ರೋಟಿಕ

(ರ) ಆಮ್ಲೀಯ ಮತ್ತು ಪ್ರತ್ಯಾಮ್ಲೀಯ ಗುಣಗಳೆರಡೂ ಇರುವ

ಉಭಯಮಿಶ್ರಣ

(ಸ) ಎರಡು ಯುಗ್ಮಕಗಳು ಸಂಲಯನಗೊಂಡು ಒಂದು ಯುಗ್ಮಜ ಮೈದಳೆಯುವ ಸಹಜ ಲೈಂಗಿಕ ಸಂತಾನೋತ್ಪಾದನೆ. ಉಭಯಬೀಜ ಸಂಯೋಗ

ಉಭಯಲಿಂಗರೂಪಿ

(ಜೀ) ಗಂಡು ಮತ್ತು ಹೆಣ್ಣು ಎರಡರ ಲಕ್ಷಣಗಳನ್ನೂ ತೋರುವ ಅಂಗಗಳುಳ್ಳ ಪ್ರಾಣಿ, ವ್ಯಕ್ತಿ. ಮುಖ್ಯವಾಗಿ ಕೀಟಗಳು. ದ್ವಿಲಿಂಗಿ

ಉಭಯಲಿಂಗಿ

(ಸ) ಒಂದೇ ಕಾಂಡದಲ್ಲಿ ಗಂಡು ಮತ್ತು ಹೆಣ್ಣು ಹೂಗಳನ್ನು ಪ್ರತ್ಯೇಕವಾಗಿ ಬಿಡುವ ಸಸ್ಯ. ದ್ವಿಲಿಂಗಿ

ಉಭಯಲಿಂಗಿ

(ಪ್ರಾ) ಸಹಜವಾಗಿಯೇ ಸ್ತ್ರೀ ಮತ್ತು ಪುರುಷ ಜನನಾಂಗಗಳೆರಡೂ ಇರುವ ಪ್ರಾಣಿ. ಉದಾ : ಮಣ್ಣು ಹುಳು (ಸ) ಒಂದೇ ಹೂವಿನಲ್ಲಿ ಪುಂಕೇಸರ ಮತ್ತು ಶಲಾಕೆ ಗಳೆರಡೂ ಇರುವ ಸಸ್ಯ. (ವೈ) ಅಂಡಾಶಯದ ಊತಕ, ವೃಷಣದ ಊತಕ ಎರಡೂ ಉಳ್ಳ ಲೈಂಗಿಕ ಅಂಗವಿರುವ ವ್ಯಕ್ತಿ

ಉಭಯವರ್ತಿ

(ಮ) ಅಂತರ್ವರ್ತಿಯ ಹಾಗೂ ಬಹಿರ್ವರ್ತಿಯ ವೈಲಕ್ಷಣ್ಯಗಳನ್ನು ಉಳ್ಳವನು

ಉಭಯಹಸ್ತ ಕೌಶಲ

(ವೈ) ನೋಡಿ: ಸವ್ಯಸಾಚಿತ್ವ

ಉಭಯಾಗ್ರ

(ಗ) ಇದೊಂದು ದ್ವಿಮಡಿ (ಇಮ್ಮಡಿ) ಬಿಂದು. ಇದರಲ್ಲಿ ವಕ್ರರೇಖೆಗೆ ಎಳೆದ ಎರಡು ಸ್ಪರ್ಶಕಗಳು ಐಕ್ಯವಾಗುತ್ತವೆ. ನೋಡಿ: ಬಹುಮಡಿ ಬಿಂದು

ಉರಗಪಕ್ಷಿ

(ಪ್ರಾ) ಉರಗವರ್ಗ, ಡೈ ಆಪ್ಸಿಡ ಉಪವರ್ಗ, ಟಿರೊಸಾರಿಯ ಗಣದ ಗತವಂಶಿ ಪ್ರಾಣಿಗಳು. ಕೆಳ ಜುರಾಸಿಕ್ ಯುಗದಲ್ಲಿ ಅಸ್ತಿತ್ವಕ್ಕೆ ಬಂದ ಈ ಪ್ರಾಣಿಗಳು ಮಧ್ಯ ಜೀವಿಕಲ್ಪದ ಕೊನೆಯ ವರೆಗೂ ಬಾಳಿದ್ದುದಕ್ಕೆ ಆಧಾರಗಳು ಲಭ್ಯವಿವೆ. (ಸುಮಾರು ೧೭೦ರಿಂದ ೬೫ ಮಿಲಿಯನ್ ವರ್ಷ ಪ್ರಾಚೀನ ಕಾಲ). ದೇಹದ ಪಕ್ಕವನ್ನೂ ತೋಳನ್ನೂ ಸೇರಿಸುವ ಪೊರೆಯ ನೆರವಿನಿಂದ ಹಾರುತ್ತಿದ್ದ ಹಕ್ಕಿಯಂಥ ಸರೀಸೃಪ

ಉರಿಮೂತ್ರ

(ವೈ) ನೋವಿನಿಂದ ಕೂಡಿದ ಕಷ್ಟಕರ ಮೂತ್ರ ವಿಸರ್ಜನೆ. ಅನೇಕ ಮೂತ್ರರೋಗಗಳಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣ. ಮೂತ್ರನಾಳದಲ್ಲಿರುವ ಸೋಂಕು, ಮೂತ್ರನಾಳಗಳ ಮಾರ್ಗದೋಷಗಳು, ಶುಕ್ಲ ಗ್ರಂಥಿಯ ಅತಿವೃದ್ಧಿ, ಅರ್ಬುದ, ಹುಣ್ಣು ಇವೆಲ್ಲ ಪುರುಷರಲ್ಲಿ ಮೂತ್ರಬಂಧಕ್ಕೆ ಕಾರಣವಾಗಬಹುದು. ಸ್ತ್ರೀಯರಲ್ಲಿ ಗರ್ಭಕೋಶದ ತೊಂದರೆಗಳು, ಕೀವು, ಗರ್ಭಕೊರಳ ಅರ್ಬುದ ಇತ್ಯಾದಿಗಳಲ್ಲಿ ಕಂಡುಬರುತ್ತದೆ. ಕೆಲವು ಔಷಧಗಳು ಹಾಗೂ ನೀರಿನ ಕೊರತೆ ಮೂತ್ರ ಕಟ್ಟಿಗೆ ಕಾರಣವಾಗಬಹುದು

ಉರಿಯೂತ

(ವೈ) ದೇಹಭಾಗದಲ್ಲಿ ಪೆಟ್ಟು ಅಥವಾ ಸೋಂಕಿನಿಂದ ರಕ್ತ ಕಟ್ಟಿ ನೋವು ಉರಿಗಳಿಂದ ಕೂಡಿದ ಊತ. ಜೀವಂತ ಊತಕವು ಗಾಯಕ್ಕೆ ಅಥವಾ ಸೋಂಕಿಗೆ ತೋರುವ ಪ್ರತಿಕ್ರಿಯೆ. ಬಾಧೆಗೆ ಒಳಗಾದ ಭಾಗ ಕೆಂಪಾಗಿ, ಬಿಸಿಯಾಗಿ, ನೋವಿನಿಂದ ಕೂಡಿ ಊದಿರುತ್ತದೆ. ರಕ್ತನಾಳಗಳು ಮಿತಿಮೀರಿ ರಕ್ತದಿಂದ ತುಂಬಿಕೊಳ್ಳುವುದು, ದುಗ್ಧರಸ ಹೊರಹರಿದು ರಕ್ತಕೋಶಗಳ ಒಳಕ್ಕೆ ಸೇರಿಕೊಳ್ಳುವುದು ಈ ಕೆಂಪಿಗೆ ಮತ್ತು ಉರಿಯೂತಕ್ಕೆ ಕಾರಣ

ಉರಿವೇದನೆ

(ವೈ) ಶರೀರದ ಯಾವುದೇ ಭಾಗದಲ್ಲಿ ನರಕ್ಕೆ ಧಕ್ಕೆ ಉಂಟಾದಾಗ ಆ ಭಾಗದ ಚರ್ಮದಲ್ಲಿ ತಲೆದೋರುವ ಉಗ್ರ ಉರಿನೋವು. ವಿಶೇಷವಾಗಿ ಪಾದತಲದಲ್ಲಿ ಅಥವಾ ಅಂಗೈಯಲ್ಲಿ ಮಾನಸಿಕ ಇಲ್ಲವೇ ಜೈವಿಕ ಮೂಲದ ಉರಿ ನೋವು

ಉರಿಶೀತ

(ವೈ) ಮೂಗು ಹಾಗೂ ಗಂಟಲಿನ ಲೋಳೆ ಪೊರೆಯ ಸೋಂಕಿನ ಕಾರಣವಾಗಿ ಸೀನು, ಸಿಂಬಳ ಸುರಿತ, ಗಂಟಲು ಕೆರೆತ ಮುಂತಾದ ಅಹಿತಕರ ಅನುಭವಗಳು

ಉರುಗೊರಲು

(ವೈ) ನೋಡಿ : ಟಾರ್ಟಿಕೋಲಿಸ್

ಉರುವಲು

(ಭೌ) ನೋಡಿ: ಇಂಧನ

ಉರುಳು

(ತಂ) ವಿಮಾನ ಅಥವಾ ಅಂಥದೇ ಕಾಯ ತನ್ನ ದೀರ್ಘ ಅಕ್ಷದ ಸುತ್ತ ನಡೆಸುವ ಆವರ್ತಕ ಅಥವಾ ಆಂದೋಲಕ ಚಲನೆ. ಹೊರಳು

ಉರುಳುಹಕ್ಕಿ

(ಪ್ರಾ) ಕಾರಸೈಯಿಡೀ ಕುಟುಂಬಕ್ಕೆ ಸೇರಿದ ಹಕ್ಕಿ. ೧೬ ಪ್ರಭೇದಗಳಿವೆ. ಕೀಟಾಹಾರಿಗಳು. ಹಾರುವಾಗ ಗಾಳಿಯಲ್ಲಿ ದೇಹವನ್ನು ಉರುಳಿಸುವುದರಿಂದ ಇವಕ್ಕೆ ಈ ಹೆಸರು. ಕೊರೇಸಿಯಸ್ ಇಂಡಿಕ ವನ್ನು ಭಾರತದ ಬ್ಲೂ ಜೇ ಎಂದು ಕರೆಯುತ್ತಾರೆ

Search Dictionaries

Loading Results

Follow Us :   
  Download Bharatavani App
  Bharatavani Windows App