भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಉಪಕುಲ

(ಸ) ಸಸ್ಯವರ್ಗೀಕರಣದಲ್ಲಿ ಅನೇಕ ಪರಸ್ಪರ ಸಂಬಂಧಿತ ಕುಲಗಳಿರುವ ಕುಟುಂಬದ ಒಂದು ವಿಭಾಗ

ಉಪಗಣ

(ಜೀ) ಜೀವವೈಜ್ಞಾನಿಕ ವರ್ಗೀಕರಣ ವಿಭಾಗದಲ್ಲಿ ಗಣ ಮತ್ತು ಕುಟುಂಬದ ನಡುವೆ ಇರುವ ದರ್ಜೆ

ಉಪಗಣ

(ಗ) ಗಣ (set) Bಯ ಎಲ್ಲ ಧಾತುಗಳೂ (elements) ಗಣ Aಯ ಧಾತುಗಳಾಗಿದ್ದರೆ ಆಗ ಗಣ B ಗಣ Aಯ ಉಪಗಣ. A={a,b,c,d,e} ಮತ್ತು B={a,b,c} ಆಗಿದ್ದರೆ ಆಗ ಗಣ B, ಗಣ Aಯ ಒಂದು ಉಪಗಣ. ಪ್ರತೀಕ ಗಳಲ್ಲಿ B   A. ಶೂನ್ಯಗಣ ಎಲ್ಲ ಗಣಗಳ ಉಪಗಣ

ಉಪಚಯ

(ವೈ) ದೇಹದೊಳಗೆ ಸರಳ ಅಣುಗಳು ಶಕ್ತಿ ಹೂಡಿಕೆಯೊಂದಿಗೆ ಸಂಕೀರ್ಣ ಅಣುಗಳಾಗಿ ಮಾರ್ಪಡುವ ಒಂದು ಉಪಾಪಚಯಕ ಪ್ರಕ್ರಿಯೆ. ನೋಡಿ: ಅಪಚಯ. ಉಪಾಪಚಯ

ಉಪಚಯಕ

(ವೈ) ಉಪಚಯದಲ್ಲಿ, ಸಂವರ್ಧನ ಕ್ರಿಯೆಯಲ್ಲಿ ಭಾಗವಹಿಸುವ ಪದಾರ್ಥ

ಉಪಚಿಪ್ಪು

(ಭೌ) ಪರಮಾಣು ರಚನೆಯ ಬೋರ್ ಸಿದ್ಧಾಂತದಲ್ಲಿ ಬಳಸುವ ಒಂದು ಪರಿಕಲ್ಪನೆ. ಒಂದೊಂದು ಎಲೆಕ್ಟ್ರಾನ್ ಚಿಪ್ಪನ್ನೂ ಉಪಚಿಪ್ಪುಗಳಾಗಿ ವಿಭಜಿಸಲಾಗುತ್ತದೆ. ಎಲ್ಲ ಎಲೆಕ್ಟ್ರಾನ್‌ಗಳಿಗೂ ಅದೇ ಕ್ಷಿತಿಜಾಂಶಿಕ ಕ್ವಾಂಟಮ್ ಸಂಖ್ಯೆ ಇರುತ್ತದೆ. ಪರಮಾಣುವಿನಲ್ಲಿ ಶಕ್ತಿಮಟ್ಟದ ಒಂದು ವಿಭಾಗ

ಉಪಜಾಗೃತ

(ವೈ) ಪೂರ್ಣ ಪ್ರಜ್ಞೆ ಇಲ್ಲದ ಸ್ಥಿತಿ. ವ್ಯಕ್ತಿಯ ಪ್ರಜ್ಞೆಗೆ ಬಾರದೆ ಜರಗುವ ಮಾನಸಿಕ ಕ್ರಿಯೆ. ಉಪಪ್ರಜ್ಞೆ. ಸುಪ್ತಪ್ರಜ್ಞೆ

ಉಪಜ್ಞೆ

(ತಂ) ನೈಸರ್ಗಿಕ ಗುಣಧರ್ಮಾನುಸಾರ ಹೊಸ ಸಾಧನ, ಸಲಕರಣೆ, ಉಪಕರಣ ಮುಂತಾದವನ್ನು ನಿರ್ಮಿಸುವುದು. ಉದಾ: ಥಾಮಸ್ ಆಲ್ವ ಎಡಿಸನ್ (೧೮೪೭-೧೯೩೧) ವಿದ್ಯುತ್ ಬಲ್ಬಿನಲ್ಲಿನ ಫಿಲಮೆಂಟನ್ನು ಉಪಜ್ಞಿಸಿದರು. ಆತ ಉಪಜ್ಞೆಕಾರ. ನೋಡಿ: ಅನ್ವೇಷಣೆ, ಆವಿಷ್ಕಾರ, ಸಂಶೋಧನೆ

ಉಪನದಿ

(ಭೂವಿ) ಮುಖ್ಯನದಿಗೆ ನೀರು ಹರಿಸುವ ಯಾವುದೇ ಹೊಳೆ

ಉಪನಿವೇಶಿಸು

(ತಂ) ಒಂದರಪಕ್ಕದಲ್ಲಿ ಒಂದು ಇರುವಂತೆ ವಸ್ತುಗಳನ್ನು ವ್ಯವಸ್ಥೆಗೊಳಿಸು

ಉಪಪರಮಾಣವಿಕ

(ಭೌ) ಪರಮಾಣುವಿಗಿಂತ ಚಿಕ್ಕದಾದ ಕಣ. ಅಂಥ ಕಣಗಳು ಎಲೆಕ್ಟ್ರಾನ್ ಮತ್ತು ಕ್ವಾರ್ಕ್ ಗಳಂತೆ ಅವಿಭಾಜ್ಯ ಪ್ರಾಥಮಿಕ ಕಣಗಳಾಗಿರಬಹುದು ಅಥವಾ ಪ್ರೋಟಾನ್, ನ್ಯೂಟ್ರಾನ್ ಮತ್ತು ಆಲ್ಫಾ ಕಣಗಳಂತೆ ಸಂಯುಕ್ತ ಗಳಾಗಿರಬಹುದು. (ರ) ಪರಮಾಣು ಮಟ್ಟಕ್ಕಿಂತ ಕೆಳಗಿರುವ ಕಣ ಅಥವಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ. ಉದಾ: ವಿಕಿರಣ ಪಟುತ್ವ, ಎಕ್ಸ್‌ಕಿರಣ, ಬೈಜಿಕ ಕವಚ ಇತ್ಯಾದಿಗಳ ಉತ್ಪಾದನೆಗೆ ಸಂಬಂಧಿಸಿದ

ಉಪಪರ್ಣ

(ಪ್ರಾ) ಕೆಲವು ಸ್ತನಿಗಳಲ್ಲಿ ಹೊರಗಿವಿಯ ಗೋಚರ ಭಾಗ, ಹಾಲೆ. ಮೃದ್ವಸ್ಥಿಗಳಿಂದ ರಚಿತವಾದುದು. ಶಬ್ದ ತರಂಗಗಳನ್ನು ಬಾಹ್ಯಶ್ರವಣ ನಾಳ ಮಾರ್ಗದೊಳಕ್ಕೆ ಹರಿಸುವುದು ಇದರ ಕಾರ್ಯ. ಕೆಲವು ಪ್ರಭೇದಗಳಲ್ಲಿ ಈ ಅಂಗಭಾಗವು ಚರವಾಗಿದ್ದು ಶಬ್ದ ಬರುವ ದಿಕ್ಕನ್ನು ಪತ್ತೆಹಚ್ಚಲು ನೆರವಾಗುತ್ತದೆ. ಮೀನು ಮೊದಲಾದವುಗಳ ಈಜುರೆಕ್ಕೆ/ಅದನ್ನು ಹೋಲು ವಂಥದು (ಸ) ಸಂಯುಕ್ತ ಪರ್ಣದ ಪ್ರಥಮ ವಿಭಾಗ

ಉಪಪ್ರಭೇದ

(ಪ್ರಾ) ವರ್ಗೀಕರಣ ವಿಭಾಗದಲ್ಲಿ ಪ್ರಭೇದದ ಕೆಳಗಿನ ದರ್ಜೆಯದು. ರೂಪಶಾಸ್ತ್ರೀಯ ರೀತ್ಯ ಗುರುತಿಸಬಹುದಾದ್ದು, ಭೌಗೋಲಿಕವಾಗಿ ಪ್ರತ್ಯೇಕವಾದದ್ದು

ಉಪಮಾರ್ಗ

(ಸಾ) ಊರೊಳಗಿನ ದಾರಿಗಳನ್ನು ಬಿಟ್ಟು ಊರನ್ನು ಬಳಸಿಕೊಂಡು ಹೋಗಬಹುದಾದ ಬದಲಿ ಹಾದಿ. ಹೊರಳು ದಾರಿ. (ತಂ) ಪ್ರಧಾನ ಕೊಳವಿಯಿಂದ ಅನಿಲ, ಆವಿ ಮೊದಲಾದವುಗಳ ಸರಬರಾಜು ನಿಂತುಹೋದಾಗ ಬಳಸಿಕೊಳ್ಳ ಬಹುದಾದ ಉಪ, ಅಡ್ಡಕೊಳವಿ

ಉಪರಿ ವಾಯುಮಂಡಲ

(ಖ) ಕ್ಷೋಭ ಗೋಳವನ್ನು ಆವರಿಸಿರುವ ವಾಯುಮಂಡಲ ಭಾಗದ ಸಾಮಾನ್ಯನಾಮ. ಇದರ ಅಧ್ಯಯನಕ್ಕೆ ಬಲೂನ್‌ಗಳ ಬದಲು ರಾಕೆಟ್‌ಗಳನ್ನೇ ನಿಯೋಜಿಸಬೇಕಾಗುತ್ತದೆ

ಉಪಲಕ್ಷಣ

(ವೈ) ಶರೀರದಲ್ಲಿ ಯಾವುದೇ ರೋಗವಿದ್ದಾಗ, ಆ ರೋಗಕ್ಕೆ ಕಾರಣವಲ್ಲದ, ಆ ರೋಗದ ಪರಿಣಾಮವಲ್ಲದ ಒಂದು ಲಕ್ಷಣ

ಉಪವರ್ಗ

(ಜೀ) ಜೀವವೈಜ್ಞಾನಿಕ ವರ್ಗೀಕರಣದಲ್ಲಿ ವರ್ಗಕ್ಕಿಂತ (class) ಕೆಳಗಿರುವ ಮತ್ತು ಗಣಕ್ಕಿಂತ (order) ಮೇಲಿರುವ ವಿಭಾಗ

ಉಪವಿಷಮಶೀತ ಜ್ವರ

(ವೈ) ವಿದೇಶಗಳಲ್ಲಿ ಸ್ವಲ್ಪ ವಿರಳವಾದ ಆದರೆ ಭಾರತದಲ್ಲಿ ಕಂಡುಬರುವ ಜಠರ ಹಾಗೂ ಕರುಳಿಗೆ ಸಂಬಂಧಿಸಿದ ಸೋಂಕಿನ ಫಲವಾಗಿ ತಲೆದೋರುವ ಜ್ವರ. ಜ್ವರ, ಹೊಟ್ಟೆನೋವು, ಭೇದಿ ಹಾಗೂ ತಲೆನೋವು ಇದರ ಮುಖ್ಯ ಲಕ್ಷಣಗಳು. ಕೆಲವು ಸಲ ಸೋಂಕಿನ ಫಲವಾಗಿ ಕರುಳು ತೂತಾಗಿ ಗಂಭೀರ ಸ್ಥಿತಿ ಏರ್ಪಡಬಹುದು. ಈ ಜ್ವರಕ್ಕೆ ಕಾರಣ ಸಾಲ್ಮೊನೆಲ್ಲ ಪ್ಯಾರಟೈಫಿ (ಎ ಮತ್ತು ಬಿ ನಮೂನೆಯವು). ಈ ಸೋಂಕು ನಿಯಂತ್ರಣಕ್ಕೆ ಈಗ ಉತ್ತಮ ಔಷಧಗಳಿವೆ. ನೋಡಿ : ವಿಷಮಶೀತ ಜ್ವರ

ಉಪಶಾಖೆ

(ಸ) ಪ್ರಧಾನಕಾಂಡದ ಪಕ್ಕದಲ್ಲಿ ಕವಲೊಡೆದ ಕೊಂಬೆ

ಉಪಶ್ವಸನಿಗಳು

(ಪ್ರಾ) ಶ್ವಸನಿಯ ಕವಲಗಳು

Search Dictionaries

Loading Results

Follow Us :   
  Download Bharatavani App
  Bharatavani Windows App