भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಉದರಸಂಚಿ

(ಪ್ರಾ) ನೋಡಿ: ಕೋಷ್ಠಸ್ತನಿ

ಉದ್ದ

(ಗ) ಮೂರು ಆಯಾಮಗಳ ಪೈಕಿ ಒಂದು. ಉಳಿದ ಎರಡು: ಎತ್ತರ (ಆಳ), ಅಗಲ (ದಪ್ಪ). ನೀಳ. ದೀರ್ಘತೆ (ಕಂ) ಪದದಲ್ಲಿರುವ ಬೈಟ್‌ಗಳ ಸಂಖ್ಯೆ ಅಥವಾ ಕ್ಷೇತ್ರ (ದಾಖಲೆಯೊಂದರ ಪೂರ್ವ ನಿರ್ಧರಿತ ವಿಭಾಗ)ದಲ್ಲಿಯ ಕಾಲಮ್‌ಗಳ/ಸ್ಪೇಸ್‌ಗಳ ಸಂಖ್ಯೆ. (ಸಾ) ಘನವಸ್ತುವಿನ ಮೂರು ಆಯಾಮಗಳಲ್ಲಿ ಒಂದು. ಉಳಿದ ಎರಡು ಆಯಾಮಗಳು (ನೋಡಿ) ಅಗಲ ಮತ್ತು ದಪ್ಪ (ಆಳ)

ಉದ್ದಸಾಲು

(ಗ) ಒಂದು ಮಾತೃಕೆ (ಮ್ಯಾಟ್ರಿಕ್ಸ್) ಅಥವಾ ನಿರ್ಧಾರಕ (ಡಿಟರ್ಮಿನೆಂಟ್) ಇವುಗಳಲ್ಲಿ ಮೇಲಿಂದ ಕೆಳಗೆ ಒಂದು ಸಾಲಿನಲ್ಲಿ ಜೋಡಿಸಲಾದ ಸಂಖ್ಯಾಗಣ. ಉದಾ : ಎಂಬ ಎರಡನೇ ದರ್ಜೆಯ ಮಾತೃಕೆಯಲ್ಲಿ ೩, ೨, ಮತ್ತು -೧, ೫ ಎಂಬುವು ಕ್ರಮವಾಗಿ ಒಂದನೆಯ ಮತ್ತು ಎರಡನೆಯ ಉದ್ದಸಾಲುಗಳು

ಉದ್ದೀಪಕ

(ವೈ) ದೇಹದಲ್ಲಿ/ಅಂಗದಲ್ಲಿ ಕ್ರಿಯೆಯನ್ನು ತಾತ್ಕಾಲಿಕವಾಗಿ ಉದ್ರೇಕಗೊಳಿಸುವ ಪದಾರ್ಥ. ಉತ್ತೇಜಕ

ಉದ್ದೀಪನೆ

(ಜೀ) ಶಬ್ದ, ಬೆಳಕು, ಉಷ್ಣ ಅಥವಾ ಒತ್ತಡವನ್ನು ಗುರುತಿಸಬಲ್ಲ ಜೀವಿಯ ಗ್ರಾಹಕಾಂಗದ ಸಾಮರ್ಥ್ಯ

ಉದ್ದು

(ಸ) ಲೆಗ್ಯೂಮಿನೋಸೀ ಕುಟುಂಬ, ಪ್ಯಾಪಿಲಿಯೊನೇಸೀ ಉಪಕುಟುಂಬಕ್ಕೆ ಸೇರಿದ ದ್ವಿದಳ ಧಾನ್ಯ. ಫ್ಯಾಸಿಯೊಲಸ್ ಮುಂಗೊ ವೈಜ್ಞಾನಿಕ ನಾಮ. ತೊಗರಿ, ಅವರೆ, ಹೆಸರು ಬೇಳೆಗಳಂತೆಯೇ ಇದೂ ಆಹಾರದಲ್ಲಿ ಪ್ರೋಟೀನ್ ಆವಶ್ಯಕತೆಯನ್ನು ಪೂರೈಸುತ್ತದೆ

ಉದ್ಧರಣ

(ತಂ) ಅದಿರಿನಿಂದ ಲೋಹವನ್ನು ಪ್ರತ್ಯೇಕಿಸುವ ಕ್ರಿಯೆ

ಉದ್ಭೇದಕ

(ಸ) ಮೊದಲು ಅಧಃಸ್ತರದಲ್ಲಿ ವಿಕಾಸ ಗೊಂಡು ಅನಂತರ ಹೊರಹೊಮ್ಮಿ ಹರಡುವ ಗುಣವುಳ್ಳದ್ದು

ಉದ್ಯಾನ

(ಸ) ಅಲಂಕಾರಕ್ಕಾಗಿ ಗಿಡ ಮೊದಲಾದವನ್ನು ಬೆಳೆಸಿ ಆವರಣ ಹಾಕಿದ ಸಾರ್ವಜನಿಕ ವಿಹಾರ ಪ್ರದೇಶ

ಉದ್ರೇಚನೆ

(ಭೌ) ಕಾಸುವುದು, ವಿಕಿರಣಕ್ಕೊಳ ಪಡಿಸುವುದು ಅಥವಾ ಎಲೆಕ್ಟ್ರಾನ್‌ಗಳ ತಾಡನೆ, ಇವುಗಳ ಪರಿಣಾಮವಾಗಿ ಪರಮಾಣುವಿನ ಎಲೆಕ್ಟ್ರಾನ್‌ಗಳಲ್ಲೊಂದನ್ನು ಅಥವಾ ಅನೇಕವನ್ನು ನ್ಯೂಕ್ಲಿಯಸ್‌ನಿಂದ ಹೆಚ್ಚು ದೂರವಿರುವ ಕಕ್ಷೆಗಳಿಗೆ ಚಲಿಸುವಂತೆ ಮಾಡಿ ಪರಮಾಣುವನ್ನು ಅದರ ಸಹಜ ಶಕ್ತಿಮಟ್ಟದಿಂದ ಹೆಚ್ಚು ಉನ್ನತ ಮಟ್ಟಕ್ಕೆ ಏರಿಸುವುದು. (ಜೀ) ಯಾವುದೇ ಪ್ರತಿಕ್ರಿಯೆ ಉಂಟುಮಾಡುವುದು; ಯಾವುದೇ ಪ್ರತಿಕ್ರಿಯೆಯನ್ನು ಚಾಲನೆಗೆ ತರುವುದು / ಉತ್ತೇಜನ ನೀಡುವುದು

ಉದ್ವೇಗ

(ವೈ) ಕೆಲಸದ ಒತ್ತಡ, ಅವ್ಯಕ್ತ ಭಯ, ಅನಾರೋಗ್ಯ ಸ್ಥಿತಿ ಮುಂತಾದವುಗಳಿಂದಾಗಿ ಮನಸ್ಸಿನಲ್ಲಿ ಮೂಡುವ ತಳಮಳ

ಉನ್ನತಕೋನ

(ಗ) ವೀಕ್ಷಕ-ಕ್ಷಿತಿಜೀಯ (OA) ಮತ್ತು ವೀಕ್ಷಕ-ವಸ್ತು (OP) ರೇಖೆಗಳ ನಡುವಿನ ಕೋನ AOP. ನೋಡಿ: ಅವನತಕೋನ

ಉನ್ನತರಾಶಿ

(ಪ) ೩೦೦೦-೭೦೦೦ ಮೀ ಎತ್ತರದಲ್ಲಿ ತೇಲು ತ್ತಿರುವ ಬೂದು/ನೀಲಿ ಬಣ್ಣದ ಪದರ ಮೋಡಗಳ ವ್ಯಾಪಕ ಸೇರಿಕೆ

ಉನ್ನತಿ

(ಖ) ಕ್ಷಿತಿಜ/ಹಾರಿಜ/ದಿಗಂತದಿಂದ ಆಕಾಶ ಕಾಯದ ಕೋನದೂರ (ಗ) ಜ್ಯಾಮಿತೀಯ ಆಕೃತಿಯ ಶೃಂಗದಿಂದ ಪಾದಕ್ಕೆ/ಆಧಾರಕ್ಕೆ/ತಳಕ್ಕೆ ಎಳೆದ ಲಂಬ. (ಭೂ) ಸಮುದ್ರ ಮಟ್ಟದಿಂದ ಸ್ಥಳದ ಎತ್ತರ. ಲಂಬದೂರ. ಎತ್ತರ. ಔನ್ನತ್ಯ

ಉನ್ನತಿಭಯ

(ಮ) ಎತ್ತರ ಸ್ಥಳದಲ್ಲಿರಲು ಅಂಜಿಕೆ. ಒಂದು ಬಗೆಯ ಭಯ ವಿಕಾರ. ಔನ್ನತ್ಯ ಭೀತಿ

ಉನ್ನತಿಮಾಪಕ

(ಭೌ) ಭೂಮಟ್ಟದಿಂದ ಅಥವಾ ಸಮುದ್ರ ಮಟ್ಟದಿಂದ ಸ್ಥಳದ ಉನ್ನತಿ ಯನ್ನು ಅಳೆಯುವ ಉಪಕರಣ. ಎತ್ತರ ದೊಂದಿಗೆ ವಾಯುಮಂಡಲ ಒತ್ತಡ ದಲ್ಲಿ ಕಂಡುಬರುವ ಕುಸಿತವನ್ನು ಗಮನಿಸಿ ಸ್ಥಳದ ಉನ್ನತಿಯನ್ನು ಲೆಕ್ಕ ಮಾಡುವ ನಿರ್ದ್ರವ ವಾಯುಭಾರಮಾಪಕ. ಮುಖ್ಯವಾಗಿ ವಿಮಾನ ಗಳಲ್ಲಿ ಬಳಕೆ. ಹಾರುವ ಮುನ್ನ ವಿಮಾನದಲ್ಲಿನ ಈ ಮಾಪಕವನ್ನು ಸಮುದ್ರ ಮಟ್ಟದ ವಾತಾವರಣ ಒತ್ತಡಕ್ಕೆ ಅನುಗೊಳಿಸ ಲಾಗಿರುತ್ತದೆ. ವಿಮಾನ ಮೇಲೇರಿದಂತೆ ವಾತಾವರಣದ ಒತ್ತಡದಲ್ಲ್ಲಿ ಆಗುವ ಕುಸಿತವನ್ನು ಈ ಮಾಪಕ ದಾಖಲಿಸುತ್ತದೆ. ಅದರ ಆಧಾರದ ಮೇಲೆ ವಿಮಾನದ ಎತ್ತರವನ್ನು ಲೆಕ್ಕಹಾಕಬಹುದು

ಉನ್ಮಂಡಲಗಳು

(ಖ) ಧ್ರುವ ಬಿಂದುಗಳನ್ನೂ (ಉತ್ತರ ಮತ್ತು ದಕ್ಷಿಣ ಧ್ರುವಗಳು) ಅಯನ ಬಿಂದುಗಳನ್ನೂ (ಉತ್ತರ ಮತ್ತು ದಕ್ಷಿಣ ಅಯನ ಬಿಂದುಗಳು) ಒಳಗೊಂಡಿರುವ ಮಹಾವೃತ್ತ. ಇದು ಅಯೋನ್ಮಂಡಲ (solstitial colure). ಧ್ರುವ ಬಿಂದು ಗಳನ್ನೂ, ವಿಷುವದ್ಬಿಂದುಗಳನ್ನೂ (ವಸಂತ ಮತ್ತು ಶರದ್ ವಿಷುವಗಳು) ಒಳಗೊಂಡಿರುವ ಮಹಾವೃತ್ತ. ಇದು ವಿಷುವೋನ್ಮಂಡಲ (equinoctial colure)

ಉನ್ಮಾದ

(ವೈ) ಯಾವುದೇ ಕೆಲಸ ಮಾಡುವುದರಲ್ಲಿ ಅಥವಾ ಯಾವುದೇ ವಿಚಾರಕ್ಕೆ ಸಂಬಂಧಿಸಿ ಮಿತಿಮೀರಿದ ಉತ್ಸಾಹ ಅಥವಾ ಗೀಳು ತೋರುವ ಒಂದು ಬಗೆಯ ಅಪಸಾಮಾನ್ಯ ಮನೋಸ್ಥಿತಿ. ಈ ಸ್ಥಿತಿಯಲ್ಲಿ ರೋಗಿಯ ಮನಸ್ಸಿನಲ್ಲಿ ವಿಚಾರಗಳು ಅತಿ ಶೀಘ್ರವಾಗಿ ಹರಿಯುತ್ತಿರುತ್ತವೆ. ಫಲವಾಗಿ ಒಳನೋಟ ಇಲ್ಲವೇ ವಿವೇಚನೆ ನಷ್ಟವಾಗಿರುತ್ತದೆ. ಬುದ್ಧಿವಿಕಲ್ಪ. ಮನೋವಿಕಾರ

ಉಪಕರಣ

(ತಂ) ವೀಕ್ಷಿತ ವಸ್ತುವಿನ ಯಾವುದೇ ಪ್ರಮಾಣದ ಮೌಲ್ಯ ಅಳೆಯುವ, ಕೆಲವು ವೇಳೆ ದಾಖಲಿಸುವ ಹಾಗೂ ನಿಯಂತ್ರಿಸುವ ಸಾಧನ

ಉಪಕಾಂಡ

(ಸ) ಪ್ರಧಾನ ಕಾಂಡದಿಂದ ಹೊರಟು ನೆಲವೂರಿ ಬೇರು ಬಿಡುವ ಹಂಬು. ಬೇರು ಬಿಟ್ಟ ಒಂದೊಂದು ಗಂಟುಗಳಿಂದಲೂ ಹೊಸ ಗಿಡಗಳು ಹುಟ್ಟಿಕೊಳ್ಳುತ್ತವೆ. ಅವರೆ ಜಾತಿಯ ಹಲವು ಗಿಡಗಳಲ್ಲಿ ಈ ಪ್ರವೃತ್ತಿ ಕಂಡುಬರುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App