भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಉತ್ತರದಾಯಿತ್ವ

(ಸಾ) ಪ್ರಯೋಗ ಅಥವಾ ವೀಕ್ಷಣೆ ಮುಗಿದ ಬಳಿಕ ಫಲಿತಾಂಶ ಒಪ್ಪಿಸುವ ಪರಿ

ಉತ್ತರದೀಪ್ತಿ

(ಖ) ಸೂರ್ಯಾಸ್ತಮಾನದ ಬಳಿಕ ಪಶ್ಚಿಮಾಕಾಶದಲ್ಲಿ ಕಾಣುವ ಬೆಳಕು. ಸಂಜೆ ಬೆಳಕು. ಬೆಳಕಿನ ಆಕರ ಮರೆಯಾದ ಬಳಿಕವೂ ಕಾಣುವ ಬೆಳಕು (ಭೌ) ವಿದ್ಯುತ್ಪ್ರವಾಹವನ್ನು ಅನಿಲದ ಮೂಲಕ ಹರಿಸಿ ನಿಲ್ಲಿಸಿದ ನಂತರವೂ ಸೂಸುವ ಬೆಳಕು

ಉತ್ತರೋತ್ತರ

(ಗ) ಅನುಕ್ರಮವಾಗಿ ಬರುವ. ಆಕಾಶ ಅಥವಾ ಕಾಲದಲ್ಲಿ ಒಂದರ ತರುವಾಯ ಒಂದು ಬರುವ, ವಿಶೇಷ ವಾಗಿ ನೇರವಾಗಿ, ಮಧ್ಯೆ ಮಧ್ಯೆ ಸ್ಥಳ ಅಥವಾ ನಿಲುಗಡೆಗಳಿಲ್ಲದೆ, ಪುಂಖಾನುಪುಂಖವಾಗಿ

ಉತ್ತಲನ

(ಪ್ರಾ) ಅಂಗೈ, ಅಂಗಾಲು ಮೇಲ್ಮುಖ ಮಾಡುವುದು. ಹೋಲಿಸಿ : ಅವತಾನನ

ಉತ್ತಳ

(ಸಾ) ನೋಡಿ: ಗಾಧ

ಉತ್ಥಾನ

(ಭೂವಿ) ಭೂವೈಜ್ಞಾನಿಕ ಕಾರಣಗಳಿಂದಾಗಿ ನೆಲದ ಮಟ್ಟ ಎತ್ತರವಾಗುವುದು. ನೋಡಿ: ಪುನರುಜ್ಜೀವನ

ಉತ್ಥಾಪಕ ಬಲ

(ಎಂ) ಭೂಮಿಯ ಗುರುತ್ವಾಕರ್ಷಣ ಬಲವನ್ನು ಪ್ರತಿರೋಧಿಸಲು, ವಿಮಾನದ ಎಂಜಿನ್ನಿನ ಕಾರ್ಯಾಚರಣೆಯ ಫಲವಾಗಿ, ವಿಮಾನದ ಮೇಲೆ ಗಾಳಿಯು ಪ್ರಯೋಗಿಸುವ ಮೇಲ್ಮುಖ ಬಲ

ಉತ್ಪತನ

(ರ) ದ್ರವರೂಪಕ್ಕೆ ಬಾರದೆ ಘನ ವಸ್ತು ಅನಿಲ ಸ್ಥಿತಿಗೆ ಪರಿವರ್ತನೆಗೊಳ್ಳುವುದು. ಅನಿಲ ಸ್ಥಿತಿಯಿಂದ ಮತ್ತೆ ತಂಪು ಮಾಡಿ ಘನ ಸ್ಥಿತಿಗೆ ತರುವುದು. ಕರ್ಪೂರೀಕರಣ

ಉತ್ಪತ್ತಿ

(ಸಾ) ಯಾವುದೇ ವಿದ್ಯಮಾನ ಜರಗುವ ಅಥವಾ ಜೀವಿ ಅಸ್ತಿತ್ವಕ್ಕೆ ಬರುವ ಪ್ರಕ್ರಿಯೆಯ ಆರಂಭ ಬಿಂದು ಅಥವಾ ಆ ಪ್ರಕ್ರಿಯೆ

ಉತ್ಪನ್ನ

(ಸಾ) ನೈಸರ್ಗಿಕ ವಿಧಾನಗಳಿಂದ ಉತ್ಪಾದಿಸಿದ ಅಥವಾ ಯಂತ್ರಗಳನ್ನು ಬಳಸಿ ತಯಾರಿಸಿದ ಪದಾರ್ಥಗಳು. (ರ) ರಾಸಾಯನಿಕ ಕ್ರಿಯೆಯಲ್ಲಿ ಪರಿವರ್ತಕಗಳು ಕ್ರಿಯೆಯ ನಂತರ ಉಂಟುಮಾಡುವ ಸಂಯುಕ್ತ

ಉತ್ಪರಿವರ್ತಿ

(ಜೀ) ನೋಡಿ : ವಿಕೃತ

ಉತ್ಪಾಟಿಸು

(ಭೂವಿ) ಶಿಲಾರಸವನ್ನು (ಲಾವ) ಭೂಮಿ ಒಳಗಿಂದ ಹೊರದೂಡು. (ತಂ) ಲೋಹ, ಪ್ಲಾಸ್ಟಿಕ್ ಮುಂತಾದವನ್ನು ಅಚ್ಚಿಗೆ ತುಂಬಿಸಿ ಕಂಬಿ, ಕೊಳವೆ, ತಗಡು, ಹಾಳೆ ರೂಪದಲ್ಲಿ ಹೊರ ತೆಗೆಯುವುದು

ಉತ್ಪಾದಿಸು

(ಸಾ) ೧. ಬೆಳಕು, ವಿದ್ಯುತ್, ಶಕ್ತಿ, ಬಲ ಇತ್ಯಾದಿಗಳನ್ನು ಅಸ್ತಿತ್ವಕ್ಕೆ ತರು. ೨. ಮನಃಸ್ಥಿತಿಯನ್ನು ವಿಕಾಸ ಗೊಳಿಸು. ೩. ಜೀವಿಗಳಿಗೆ ಜನ್ಮ ನೀಡು. (ಗ) ಚಲಿಸುತ್ತಿರುವುದು ಎಂದು ಭಾವಿಸಿದ ಬಿಂದುವಿನಿಂದ ಗೆರೆಯನ್ನು, ಕ್ಷೇತ್ರವನ್ನು, ಘನಾಕೃತಿಯನ್ನು ರಚಿಸು

ಉತ್‌ಪ್ಲವನ

(ಭೂವಿ) ಭೂಗರ್ಭದಿಂದ ಮೇಲಕ್ಕೆ ಚಿಮ್ಮಿ ಬರುವ ದೈತ್ಯಶಕ್ತಿಯ ಕಾರಣವಾಗಿ ಉಂಟಾಗುವ ಸ್ತರಭಂಗಗಳು, ತಿರುಚುಗಳು, ಕಟ್ಟಡಗಳಿಗೆ ಹಾನಿ. ಪ್ರೋತ್ಥಾನ

ಉತ್ಪ್ಲವನ

(ಭೌ) ನೋಡಿ : ಆರ್ಕಿಮಿಡೀಸ್ ತತ್ತ್ವ

ಉತ್ಸರ್ಜನ ರೋಹಿತ

(ಭೌ) ಯಾವುದೇ ತಪ್ತ ಘನವಸ್ತು ಉತ್ಸರ್ಜಿಸುವ ಗೋಚರ ಬೆಳಕನ್ನು ಅಶ್ರಗದ ಮೂಲಕ ಹಾಯಿಸಿದಾಗ ಆ ಬೆಳಕಿನ ಘಟಕ-ಬಣ್ಣಗಳು ಸುಪರಿಚಿತ ಕಾಮನಬಿಲ್ಲಿನ ತೆರದಲ್ಲಿ ಪ್ರಕಟವಾಗುತ್ತವೆ. ಇದಕ್ಕೆ ಭಿನ್ನವಾಗಿ ಯಾವುದೇ ತಪ್ತ ಅನಿಲವಸ್ತು ಉತ್ಸರ್ಜಿಸುವ ಗೋಚರ ಬೆಳಕು – ಉದಾಹರಣೆಗೆ ಸೋಡಿಯಮ್ ಉರಿದಾಗ ಹೊಮ್ಮುವ ಬೆಳಕು – ಕಾಮನಬಿಲ್ಲಿನ ಬಣ್ಣಗಳ ತೋರಣವಾಗಿ ಒಡೆಯುವುದಿಲ್ಲ. ಬದಲು, ನಿರ್ದಿಷ್ಟ ರೇಖೆಗಳಾಗಿ ಅಥವಾ ಬಣ್ಣದ ಪಟ್ಟಿಗಳಾಗಿ ವಿಭಜಿತವಾಗುತ್ತದೆ. ಅಂದರೆ ಎಲ್ಲ ಬಣ್ಣಗಳನ್ನು ಉತ್ಸರ್ಜಿಸುವುದರ ಬದಲು ಆಯ್ದ ಕೆಲವನ್ನು ಮಾತ್ರ ಉತ್ಸರ್ಜಿಸುತ್ತದೆ. ಉತ್ಸರ್ಜನ ರೋಹಿತದಲ್ಲಿಯ ಪ್ರತಿಯೊಂದು ರೇಖೆಯೂ ನಿರ್ದಿಷ್ಟ ಧಾತುವಿನ ಇಲ್ಲವೇ ಅಣುವಿನ ಕಾರಣವಾಗಿ ಅಲ್ಲಿ ಬಿಂಬಿತವಾಗಿರುತ್ತದೆ. ಎಂದೇ ಬಿಡಿ ರೇಖೆಗಳ ಅಲೆಯುದ್ದಗಳು ಆಯಾ ಧಾತುವಿನ ಅಥವಾ ಅಣುವಿನ ಬೆರಳಚ್ಚುಗಳು. ನೋಡಿ: ಶೋಷಣ ರೋಹಿತ

ಉತ್ಸರ್ಜನೆ

(ಭೌ) ಪರಮಾಣುಗಳು ಸಾಧಾರಣ ಮಟ್ಟಕ್ಕಿಂತ ಅಧಿಕ ಶಕ್ತಿಯನ್ನು ಹೀರಿಕೊಂಡಾಗ ಅವುಗಳಿಂದ ಎಲೆಕ್ಟ್ರಾನ್‌ಗಳು ವಿಮೋಚನೆಯಾಗುವ ಪ್ರಕ್ರಿಯೆ. ಇದು ಸಂಭವಿಸಲು ಕಾರಣಗಳು : ೧. ಕವಾಟಗಳು, ಕೂಲಿಜ್ ಎಕ್ಸ್-ಕಿರಣ ನಳಿಗೆಗಳು, ಕ್ಯಾಥೋಡ್ ಕಿರಣ ನಳಿಗೆಗಳಲ್ಲಿ ಆಗುವ ಉಷ್ಣಾಯಾನು (ಥರ್ಮಯಾನಿಕ್) ಕ್ಷೋಭೆ. ೨. ಉಚ್ಚಶಕ್ತಿ ಪ್ರಾಥಮಿಕ ಎಲೆಕ್ಟ್ರಾನ್‌ಗಳ ಸಂಘಟ್ಟನೆಯ ಪರಿಣಾಮವಾಗಿ ಎಲೆಕ್ಟ್ರಾನ್‌ಗಳ ದ್ವಿತೀಯಕ ಉತ್ಸರ್ಜನೆ. ೩. ನಿರ್ದಿಷ್ಟ ಶಕ್ತಿಮಟ್ಟಕ್ಕಿಂತ ಮೇಲೆ ಫೋಟಾನುಗಳ ಅವಶೋಷಣೆ ಆದಾಗ ದ್ಯುತಿವಿದ್ಯುತ್ ವಿಮೋಚಿತವಾಗುವುದು. ೪. ಉಚ್ಚ ವಿದ್ಯುತ್ ಕ್ಷೇತ್ರವು ಮಾತೃ ಪರಮಾಣುಗಳಿಂದ ಎಲೆಕ್ಟ್ರಾನ್‌ಗಳನ್ನು ಸುಲಿಯುವುದು

ಉದರ

(ಪ್ರಾ) ಕಶೇರುಕಗಳಲ್ಲಿ ವಕ್ಷಕ್ಕೂ ವಸ್ತಿ ಕುಹರಕ್ಕೂ ನಡುವಿನ ಭಾಗ; ಜಠರ, ಕರುಳು ಇತ್ಯಾದಿಗಳ ನೆಲೆ. ಕೀಟ ಮತ್ತಿತರ ಸಂಧಿಪದಿಗಳಲ್ಲಿ ಒಡಲಿನ ಹಿಂಭಾಗ. ಹೊಟ್ಟೆ

ಉದರ ತಲ

(ಪ್ರಾ) ಹೊರಚಾಚು; ಮಧ್ಯಸ್ಥ ಊತ; ಉದರದ ತಳ ಮೈ

ಉದರದರ್ಶಕ

(ಪ್ರಾ) ಉದರದೊಳಗೆ ನೋಡಲು ಹಾಗೂ ಶಸ್ತ್ರಕ್ರಿಯೆ ನಡೆಸಲು ನೆರವಾಗುವ ಸಾಧನ. ಮೂರು ರೀತಿಯ ಕೊಳವೆಗಳಿರುತ್ತವೆ. ಒಂದು ಕೊಳವೆಯಲ್ಲಿ ಒಂದು ಪುಟ್ಟ ಕ್ಯಾಮರ ಹಾಗೂ ಬೆಳಕಿನ ಮೂಲ ಇರುತ್ತದೆ. ಉಳಿದೆರಡು ಕೊಳವೆಗಳಲ್ಲಿ ಇಕ್ಕಳ, ಚಾಕು, ಕತ್ತರಿ ಇತ್ಯಾದಿ ಗಳನ್ನು ತೂರಿಸಿ ಶಸ್ತ್ರಕ್ರಿಯೆಯನ್ನು ಮಾಡಲು ಅನು ಕೂಲವಿರುತ್ತದೆ. ಉದರದ ೩ ಕಡೆ ಮೂರು ಸಣ್ಣ ರಂಧ್ರ ಕೊರೆದು ಅದರ ಮೂಲಕ ಈ ಸಾಧನಗಳನ್ನು ತೂರಿಸಿ ಶಸ್ತ್ರಚಿಕಿತ್ಸೆಯನ್ನು ನಡೆಸಬಹುದು. ಈ ಸಾಧನ ಉಪಯುಕ್ತ ವಾದದ್ದು. ಉದರವನ್ನು ಸೀಳಿ ಶಸ್ತ್ರಚಿಕಿತ್ಸೆ ನಡೆಸುವ ಕಷ್ಟವನ್ನು ಸಾಕಷ್ಟು ತಪ್ಪಿಸಿದೆ. ನೋವನ್ನು ಕನಿಷ್ಠಗೊಳಿಸಬಹುದು. ಬೇಗ ಗುಣವಾಗುತ್ತದೆ. ಉದರದ ಮೇಲೆ ಕಲೆಯುಳಿಯುವುದಿಲ್ಲ. ಲ್ಯಾಪರೊಸ್ಕೋಪ್

Search Dictionaries

Loading Results

Follow Us :   
  Download Bharatavani App
  Bharatavani Windows App