भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಉಂಡೆಕಲ್ಲು

(ಭೂವಿ) ಸುಣ್ಣಕಲ್ಲಿನ ಸ್ತರೀಕೃತವಲ್ಲದ ಗುಪ್ಪೆಗಳಲ್ಲಿನ ಕಲ್ಲು. ಹವಳ ದಿಬ್ಬಗಳ ಬೆಳವಣಿಗೆಯ ಒಂದು ಹಂತ

ಉಣ್ಣಿ

(ಪ್ರಾ) ಇದು ಆರ್ತ್ರಾಪೊಡ ವಿಭಾಗ, ಆರ‍್ಯಾಕ್ನಿಡ ಉಪವಿಭಾಗ, ಆಕರೈನ ಗಣದ ಇಕ್ಸೋಡಿಡೀ ಮತ್ತು ಆರ್ಗ್ಯಾಸಿಡೀ ಕುಟುಂಬಗಳಿಗೆ ಸೇರಿದ ಅನೇಕ ಬಗೆಯ ರಕ್ತ ಹೀರುವ ಪರೋಪ ಜೀವಿಗಳ ಸಾಮಾನ್ಯ ನಾಮ. ದನಕರು, ಎಮ್ಮೆ, ಕುರಿ, ನಾಯಿ ಮುಂತಾದ ಸಾಕು ಪ್ರಾಣಿಗಳ ಹೊರಚರ್ಮ ವನ್ನು ಕಚ್ಚಿಕೊಂಡಿದ್ದು ಅವುಗಳ ರಕ್ತ ಹೀರಿ ಬದುಕುತ್ತದೆ. ರೋಗ ಹರಡಲು ಕಾರಣ. ಚಿಗಟ

ಉಣ್ಣೆ

(ಪ್ರಾ) ನಿರ್ದಿಷ್ಟವಾಗಿ, ಕುರಿಯ ಮೈಮೇಲೆ ಒಂದರ ಮೇಲೊಂದು ಒರಗಿದಂತೆ ಹರಡಿರುವ ಕೂದಲಿನ ಒಂದು ಬಗೆ. ಇದರ ಎಳೆಗಳು ಗಿಡ್ಡವಾಗಿದ್ದು ಸುರುಳಿಯ ಸುತ್ತಿಕೊಂಡಿರುವುವು. ಕೆರಾಟಿನ್‌ನಿಂದ ಸಂಯೋಜಿತವಾಗಿದೆ. ತುಪ್ಪಟ, ತುಪ್ಪುಳ

ಉತ್ಕರ್ಷಣ ನಿವಾರಣೆ

(ರ) ಕರಗಿದ ಲೋಹದಿಂದ ಆಕ್ಸಿಜನ್ನನ್ನು ತಗ್ಗಿಸುವುದು ಅಥವಾ ತೆಗೆದು ಹಾಕುವುದು. ಎರಕ ಹೊಯ್ಯುವ ಮುನ್ನ ಇದನ್ನು ಮಾಡಲಾಗುತ್ತದೆ. ಡೀಆಕ್ಸಿಡೀಕರಣ

ಉತ್ಕರ್ಷಣ ಸಂಖ್ಯೆ

(ರ) ಸಂಯುಕ್ತ ಸ್ಥಿತಿಯಲ್ಲಿರುವ ಒಂದು ಪರಮಾಣುವು ಕಳೆದುಕೊಂಡಿರುವ ಎಲೆಕ್ಟ್ರಾನ್‌ಗಳ ಸಂಖ್ಯೆ ಉದಾ: ಸೋಡಿಯಮ್ ಕ್ಲೋರೈಡ್‌ನಲ್ಲಿ Na+Cl– ಸೋಡಿಯಮ್ ಒಂದು ಎಲೆಕ್ಟ್ರಾನನ್ನು ಕಳೆದುಕೊಂಡಿದೆ. ಆದ್ದರಿಂದ ಅದರ ಉತ್ಕರ್ಷಣ ಸಂಖ್ಯೆ +೧. ಕ್ಲೋರೀನ್ ಒಂದು ಎಲೆಕ್ಟ್ರಾನನ್ನು ಪಡೆದಿದೆ. ಅರ್ಥಾತ್ -೧ ಎಲೆಕ್ಟ್ರಾನನ್ನು ಕಳೆದು ಕೊಂಡಿದೆ. ಆದ್ದರಿಂದ ಕ್ಲೋರೀನ್‌ನ ಉತ್ಕರ್ಷಣ ಸಂಖ್ಯೆ -೧. ಸಂಯುಕ್ತದಲ್ಲಿರುವ ಪರಮಾಣುಗಳ ಉತ್ಕರ್ಷಣ ಸಂಖ್ಯೆಗಳ ಬೈಜಿಕ ಮೊತ್ತ ಯಾವಾಗಲೂ ೦. ಪರಿಶುದ್ಧ ಧಾತುಗಳ ಉತ್ಕರ್ಷಣ ಸಂಖ್ಯೆ ೦. ಉತ್ಕರ್ಷಣ ಸಂಖ್ಯೆಗಳನ್ನು ಆಧರಿಸಿ ಇನಾರ್ಗ್ಯಾನಿಕ್ (ಅಕಾರ್ಬನಿಕ) ಸಂಯುಕ್ತಗಳನ್ನು ಹೆಸರಿಸುವುದು ಈಗ ವಾಡಿಕೆ. ಉದಾ: Fe2O3 ಕಬ್ಬಿಣ (III) ಆಕ್ಸೈಡ್

ಉತ್ಕರ್ಷಣವಿರೋಧಕ

(ರ) ಬಣ್ಣ, ಮೆರುಗೆಣ್ಣೆ, ಪ್ಲಾಸ್ಟಿಕ್, ರಬ್ಬರ್ ಮೊದಲಾದವುಗಳ ಉತ್ಕರ್ಷಣೆಯನ್ನು ನಿಧಾನ ಗೊಳಿಸುವ ಪದಾರ್ಥ. ಕಚ್ಚಾ ವನಸ್ಪತಿ ತೈಲಗಳನ್ನೂ ನೈಸರ್ಗಿಕ ಉತ್ಕರ್ಷಣ ವಿರೋಧಕಗಳನ್ನೂ ಒಳಗೊಂಡಿರುತ್ತದೆ. ಬಣ್ಣಗಳು ಒಣಗುವ ವೇಗವನ್ನು ಅವು ತಗ್ಗಿಸುತ್ತವೆ

ಉತ್ಕರ್ಷಣೆ

(ರ) ಯಾವುದೇ ವಸ್ತುವಿನೊಂದಿಗೆ ಆಕ್ಸಿಜನ್ನಿನ ಸಂಯೋಜನೆ ಅಥವಾ ಆ ವಸ್ತುವಿನಿಂದ ಹೈಡ್ರೊಜನ್ನಿನ ವಿಯೋಜನೆ. ಆಕ್ಸಿಡೀಕರಣ. ಸಾಮಾನ್ಯವಾಗಿ ರಾಸಾಯನಿಕ ಕ್ರಿಯೆಯಲ್ಲಿ ಪರಮಾಣುವೊಂದು ಎಲೆಕ್ಟ್ರಾನ್‌ಗಳನ್ನು ಕಳೆದುಕೊಳ್ಳು ವುದನ್ನು ಉತ್ಕರ್ಷಣೆ ಎನ್ನಲಾಗುತ್ತದೆ. ಉದಾ: ಫೆರಸ್ ಅಯಾನ್ Fe++ ಫೆರಿಕ್ ಅಯಾನ್ Fe+++ ಆಗಿ ಬದಲಾಗುವುದು. ಉತ್ಕರ್ಷಣೆ ಯಾವತ್ತೂ ಅಪಕರ್ಷಣೆಯೊಂದಿಗೇ ಜರಗುತ್ತದೆ. ಉದಾ : 4Na(s)+O2(g) ® 2Na2O(s). ಇಲ್ಲಿ ಸೋಡಿಯಮ್ ಪರಮಾಣುಗಳು ಎಲೆಕ್ಟ್ರಾನ್‌ಗಳನ್ನು ಕಳೆದುಕೊಂಡು Na+ ಅಯಾನ್ ಗಳಾಗಿ ಉತ್ಕರ್ಷಣೆಗೊಂಡಿವೆ. ಅದೇ ಹೊತ್ತಿನಲ್ಲಿ ಆಕ್ಸಿಜನ್ ಪರಮಾಣುಗಳು ಎಲೆಕ್ಟ್ರಾನ್‌ಗಳನ್ನು ಗಳಿಸಿಕೊಂಡು ಅಪಕರ್ಷಣೆ ಗೊಂಡಿವೆ. ಆಕ್ಸಿಜನ್ ಪಾತ್ರವಿಲ್ಲದೆಯೂ ಉತ್ಕರ್ಷಣೆ ಅಪಕರ್ಷಣೆ ಗಳು ಜರಗಬಹುದು. ಉದಾ : 2Na(s)+Cl2(g) 22NaCl(s) ಇಲ್ಲಿ ಸೋಡಿಯಮ್ ಉತ್ಕರ್ಷಣೆಗೊಂಡಿದೆ, ಕ್ಲೋರಿನ್ ಅಪಕರ್ಷಣೆಗೊಂಡಿದೆ

ಉತ್ಕೇಂದ್ರತೆ

(ಗ) ಜ್ಯಾಮಿತೀಯ ಕೇಂದ್ರದಿಂದ ಬಲ ವರ್ತಿಸುವ ಕೇಂದ್ರದ ವಿಚಲನೆಯ ಅಳತೆ. ದೀರ್ಘ ವೃತ್ತದಲ್ಲಿ ಬಲ ಕೇಂದ್ರ ನಾಭಿ (S) ಮತ್ತು ಜ್ಯಾಮಿತೀಯ ಕೇಂದ್ರ C ಆಗಿದ್ದರೆ CS ದೀರ್ಘವೃತ್ತದ ಉತ್ಕೇಂದ್ರತೆಗೆ ಅನುಪಾತೀಯವಾಗಿರುತ್ತದೆ

ಉತ್ಕೇಂದ್ರೀಯ

(ಗ) ಜ್ಯಾಮಿತೀಯ ಕೇಂದ್ರದಿಂದ ಭಿನ್ನವಾದ

ಉತ್ಕೇಂದ್ರೀಯ ಕೋಣಿಕಾಂತರ

(ಖ) ಗ್ರಹಕಕ್ಷೆಯಲ್ಲಿ ಗ್ರಹವನ್ನು ಕೇಂದ್ರಕ್ಕೆ ಸೇರಿಸುವ ರೇಖೆ ಮತ್ತು ಅಪಪುರ ರೇಖೆ ನಡುವೆ ಗ್ರಹದ ಚಲನ ದಿಶೆಯಲ್ಲಿ ಅಳೆದ ಕೋನ. ನೋಡಿ: ಕೋಣಿಕಾಂತರ

ಉತ್‌ಕ್ಷೇಪ ವಿಜ್ಞಾನ

(ತಂ) ಗುರುತ್ವಾಕರ್ಷಣ ಕ್ಷೇತ್ರದಲ್ಲಿ ಮುಕ್ತವಾಗಿ ಚಲಿಸುತ್ತಿರುವ ವಸ್ತುವೊಂದರ ಗತಿ, ಪಥ ಮತ್ತು ಪರಿಣಾಮ ಕುರಿತ ಬಲ ವೈಜ್ಞಾನಿಕ ಅಧ್ಯಯನ

ಉತ್‌ಕ್ಷೇಪಿತ ಕ್ಷಿಪಣಿ

(ಭೌ) ಮಿಲಿಟರಿ ಕ್ಷಿಪಣಿ. ಇದರ ಯಾನವು ಉತ್‌ಕ್ಷೇಪಿತ ಆವೇಗವನ್ನೂ ಯಾನ ಕಾಲದಲ್ಲಿ ಅದರ ಮೇಲೆ ವರ್ತಿಸುತ್ತಿರುವ ಗುರುತ್ವ ಬಲವನ್ನೂ ಭಾಗಶಃ ಇಲ್ಲವೇ ಪೂರ್ಣವಾಗಿ ಅವಲಂಬಿಸಿ ಇರುತ್ತದೆ. ಪ್ರಾರಂಭದಲ್ಲಿ ಇಂಧನ ತುಂಬಿ ಗುರಿ ತಲಪಲು ಮಾರ್ಗದರ್ಶನ ನೀಡಿ ಹಾರಿಸಿದ ಕ್ಷಿಪಣಿ. ಹಾರಿಸಿದ ನಂತರ ಗುರುತ್ವಾಕರ್ಷಣ ಬಲದಿಂದಲೇ ಚಲಿಸುತ್ತದಾದ್ದರಿಂದ ಇದರ ಮಾರ್ಗವನ್ನು ಅದನ್ನು ಹಾರಿ ಬಿಟ್ಟ ನೆಲೆಯಿಂದ ಬದಲಿಸ ಲಾಗದು. ಈ ದೃಷ್ಟಿಯಿಂದ ಇದು ನಿರ್ದೇಶಿತ ಕ್ಷಿಪಣಿ ಯಿಂದ ಭಿನ್ನ. ನಿರ್ದೇಶಿತ ಕ್ಷಿಪಣಿ ಹಾರಾಟ ಮಾರ್ಗವನ್ನು ಹಾರಾಟ ನೆಲೆಯಿಂದ ಯಾವಾಗ ಬೇಕಾದರೂ ಬದಲಿಸಬಹುದು. ನೋಡಿ: ಕ್ಷಿಪಣಿ

ಉತ್‌ಕ್ಷೇಪಿತ ಗ್ಯಾಲ್ವನೊಮೀಟರ್

(ಭೌ) ಇದೊಂದು ಚಲಿಸುವ ಸುರಳಿ ಗ್ಯಾಲ್ವನೋಮೀಟರ್. ವಿದ್ಯುತ್ ಪ್ರವಾಹದ ಹಠಾತ್ ಏರಿಕೆಯನ್ನು ಪತ್ತೆಹಚ್ಚುವ ಮೂಲಕ ವಿದ್ಯುತ್ ಆವೇಶವನ್ನು ಅಳೆಯುವುದು ಇದರ ಗುರಿ. ಇದರಲ್ಲಿ ಕನಿಷ್ಠತಮ ಮಂದನ ಕಾರಕತೆಯ ಭಾರವಾದ ಸುರುಳಿ ಇರುತ್ತದೆ. ಇದರ ಮೂಲಕ ವಿದ್ಯುತ್ ಪ್ರವಾಹವನ್ನು ಹಠಾತ್ತನೆ ಹರಿಸಿದಾಗ ಕಾಣಬರುವ ಆರಂಭಿಕ ಪರಮಾವಧಿ ವಿಚಲನೆಯು ಹರಿದುಹೋದ ಒಟ್ಟು ಆವೇಶಕ್ಕೆ ಅನುಪಾತೀಯ. ಇದರಿಂದ ವಿದ್ಯುತ್ ಆವೇಶವನ್ನು ತಿಳಿದು ಅಳೆಯಬಹುದು. ನೋಡಿ: ಗ್ಯಾಲ್ವನೋಮೀಟರ್

ಉತ್‌ಕ್ಷೇಪಿತ ಬೀಜಕಗಳು

(ಸ) ಸಸ್ಯದಿಂದ ಅತಿ ರಭಸವಾಗಿ ಬೀರಲ್ಪಡುವ ಬೀಜಗಳು. ನೈಸರ್ಗಿಕ ಬೀಜ ಪ್ರಸರಣದ ಒಂದು ಬಗೆ

ಉತ್‌ಕ್ಷೇಪಿತ ಲೋಲಕ

(ತಂ) ಫಿರಂಗಿ ಗುಂಡಿನ ವೇಗ ಅಳೆಯುವ ಸಲಕರಣೆ. ಇದರಲ್ಲಿ ಭಾರವಾದ ಒಂದು ವಸ್ತುವು ಲೋಲಕವಾಗಿ ಇರುತ್ತದೆ. ಈ ಲೋಲಕದ ತೊನೆತಗಳು ಸಮತಲಕ್ಕೆ ಮಾತ್ರ ಸೀಮಿತವಾಗಿರುವಂತೆ ಲೋಲಕ ವನ್ನು ತಂತಿಗಳಿಂದ ತೂಗು ಹಾಕ ಲಾಗಿರುತ್ತದೆ. ಫಿರಂಗಿ ಗುಂಡು ಲೋಲಕವನ್ನು ಬಡಿದೊಡನೆ ಇದು ಸರಿಯುವ ಕೋನವನ್ನು ಓದಿ ಗುಂಡಿನ ವೇಗವನ್ನು ಲೆಕ್ಕ ಹಾಕಲಾಗುವುದು

ಉತ್ತರ ಧ್ರುವಪ್ರಭೆ

(ಗ) ನೋಡಿ: ಧ್ರುವಪ್ರಭೆ

ಉತ್ತರ ಪ್ರಭೆ

(ಖ) ನೋಡಿ : ಧ್ರುವಪ್ರಭೆ

ಉತ್ತರ ಬೆಳಕು

(ಖ) ಉತ್ತರ ದಿಕ್ಕಿನಿಂದ ಬರುವ ಸೂರ್ಯನ ಬೆಳಕು. ಕಾರ್ಖಾನೆಗಳ ವಿಶಾಲ ಹಜಾರಗಳಿಗೆ ನೆರಳುಂಟುಮಾಡದ ಬೆಳಕನ್ನು ಉತ್ತರ ದಿಕ್ಕಿನಿಂದ ಪಡೆಯುತ್ತಾರೆ. ಇದಕ್ಕೆ ವಿಶೇಷ ಚಾವಣಿಗಳನ್ನು ಬಳಸುತ್ತಾರೆ. ದಕ್ಷಿಣಾರ್ಧ ಗೋಲದಲ್ಲಿ ದಕ್ಷಿಣ ಬೆಳಕು ಈ ಅನುಕೂಲವನ್ನು ಒದಗಿಸುತ್ತದೆ

ಉತ್ತರ ಶೀತವಲಯ

(ಭೂ) ಉತ್ತರ ಅಕ್ಷಾಂಶ ೬೬0೩೩’ನಿಂದ ೯೦0ವರೆಗಿನ ಭೂಪ್ರದೇಶ. ನೋಡಿ: ವಲಯಗಳು

ಉತ್ತರಗಾಮಿಗಳು

(ಭೂ) ಸಮತಲ ಭೂಪಟದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಸರಿಯುವ ಅಕ್ಷಾಂಶ ರೇಖೆಗಳು

Search Dictionaries

Loading Results

Follow Us :   
  Download Bharatavani App
  Bharatavani Windows App