भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಉಚ್ಚಬಿಂದು

(ಖ) ನೋಡಿ: ಅಪಕೇಂದ್ರ

ಉಚ್ಚಬಿಂದು

(ಗ) ಚಲಪರಿಣಾಮವುಳ್ಳದ್ದರ ಏಳು ಬೀಳುಗಳ ವಿವರವನ್ನು ಚಿತ್ರಿಸುವ ವಕ್ರರೇಖೆಯ ಅಥವಾ ದಾಖಲೆ ಇಟ್ಟಿರುವ ಮೊತ್ತಗಳ ಉಚ್ಚ ಬಿಂದು. ಶೃಂಗ

ಉಚ್ಚಾತೀತ ಆವೃತ್ತಿ

(ಭೌ) ೩೦೦ರಿಂದ ೩೦೦೦ ಮೆಗಾಹರ್ಟ್ಸ್ ವ್ಯಾಪ್ತಿಯಲ್ಲಿರುವ ರೇಡಿಯೊ ಆವೃತ್ತಿಗಳು. ಇವುಗಳ ಅಲೆಯುದ್ದಗಳು ೧೦ ಸೆಂಮೀನಿಂದ ೧ ಮೀ. ವ್ಯಾಪ್ತಿಯಲ್ಲಿರುತ್ತವೆ

ಉಚ್ಚಾರಣಾ ವಿಜ್ಞಾನ

(ಸಾ) ನೋಡಿ : ಫೊನೆಟಿಕ್ಸ್

ಉಚ್ಚಾರಣೆ

(ಮವಿ) ಗಟ್ಟಿಯಾಗಿಯೂ ಸ್ಫುಟ ವಾಗಿಯೂ ಓದುವುದು. ಮಾತುಗಳನ್ನು ಅಥವಾ ಪದಗಳನ್ನು ಸ್ಪಷ್ಟವಾಗಿ ಉಚ್ಚರಿಸುವುದು. ವಾಕ್‌ಸ್ಫುಟತೆ. ಸ್ಪಷ್ಟೋಚ್ಚಾರ

ಉಚ್ಛ್ರಾಯ

(ಖ) ಖಗೋಳ ಕಾಯವು ತನ್ನ ದೈನಂದಿನ ಚಲನೆಯಲ್ಲಿ ಯಾವುದೋ ಸ್ಥಳದ ಮಧ್ಯಾಹ್ನ ರೇಖೆಯನ್ನು ದಾಟುವ ಬಿಂದು. ನೆತ್ತಿಗೆರೆ ಅಡ್ಡಹಾಯುವುದು

ಉಚ್ಛ್ವಸನ

(ವೈ) ಶ್ವಾಸಕಾಂಗಗಳೊಳಕ್ಕೆ ಗಾಳಿಯನ್ನು ಸೆಳೆದುಕೊಳ್ಳುವ ಕ್ರಿಯೆ. ವಿರುದ್ಧ ಕ್ರಿಯೆ ನಿಶ್ವಸನ

ಉಚ್ಛ್ವಸಿಸು

(ವೈ) ಗಾಳಿ, ಅನಿಲ ಮೊದಲಾದವನ್ನು ಶ್ವಾಸಕೋಶಗಳ ಒಳಕ್ಕೆ ಸೇದಿಕೊ

ಉಚ್ಛ್ವಾಸಕ

(ಪ್ರಾ) ಅನಿಲ ಅಥವಾ ದ್ರವವನ್ನು ಒಳಕ್ಕೆ ಹೀರಿಕೊಳ್ಳುವ ಕ್ರಿಯೆಗೆ ಸರಿಹೋಗುವಂತೆ ರಚಿತವಾದ ಅಂಗ. ಉದಾ: ಕೆಲವು ಮೃದ್ವಂಗಿಗಳಲ್ಲಿನ ಹೀರುನಳಿಕೆ

ಉಜ್ಜುಗಾಯ

(ವೈ) ೧. ಆಘಾತದ ಪರಿಣಾಮವಾಗಿ ಚರ್ಮ ಅಥವಾ ಲೋಳೆ ಪೊರೆಯಲ್ಲಿ ತರಚು ಆಗುವ ಗಾಯ; ೨. ಸುರೂಪಿಕಾ ಶಸ್ತ್ರಕ್ರಿಯೆಯಲ್ಲಿ ಉದ್ದೇಶಪೂರ್ವಕವಾಗಿಯೇ ಮಾಡುವ ತರಚು ಗಾಯ

ಉಜ್ಜ್ವಲ ವಿದ್ಯುಲ್ಲೇಪನ

(ಭೌ) ವಿದ್ಯುಲ್ಲೇಪನ ಪ್ರಕ್ರಿಯೆಯಲ್ಲಿ ಲೇಪಿತ ತಲ ಉಜ್ಜ್ವಲವಾಗಿ ಹೊಳೆಯುವಂತೆ ಮಾಡುವ ಸಂಸ್ಕರಣ. ಇಂಥ ಮೇಲ್ಮೈಗಳಿಗೆ ಒಪ್ಪ ನೀಡುವ ಆವಶ್ಯಕತೆ ಇರುವುದಿಲ್ಲ

ಉಜ್ಜ್ವಲ ಹಸಿರು

(ರ) ಟೆಟ್ರ-ಈಥೈಲ್-ಡೈ- ಅಮಿನೊ-ಟ್ರೈ ಫೀನೈಲ್-ಮೀಥನಾಲ್ ಅನ್‌ಹೈಡ್ರೈಡ್‌ನ ಸಲ್ಫೇಟ್. ಸೋಂಕು ನಿವಾರಕ ಹಸಿರು ವರ್ಣದ್ರವ್ಯ

ಉಜ್ಜ್ವಲತಾಂಕ

(ಖ) ಆಕಾಶಕಾಯಗಳ ಉಜ್ಜ್ವಲತೆ ಯನ್ನು – ಅಂದರೆ ಕಣ್ಣಿಗೆ ಕಾಣುವ ಪ್ರಕಾಶವನ್ನು – ಪ್ರಮಾಣೀಕರಿಸಲು ಬಳಸುವ ಮಾನಕ. ಕ್ರಿ.ಪೂ. ೨ನೇ ಶತಮಾನದಲ್ಲಿ ಬಾಳಿದ್ದ ಗ್ರೀಕ್ ಖಗೋಳ ವಿಜ್ಞಾನಿ ಹಿಪ್ಪಾರ್ಕಸ್ ಗೋಚರ ನಕ್ಷತ್ರಗಳನ್ನು ಅವುಗಳ ಉಜ್ವಲತಾನುಸಾರ ಆರು ವರ್ಗಗಳಲ್ಲಿ ಅಳವಡಿಸಿದ; ಗೋಚರತೆ- ಅಗೋಚರತೆ ಅಂಚಿನಲ್ಲಿ ಇರುವ ನಕ್ಷತ್ರಗಳಿಗೆ ಉಜ್ಜ್ವಲತಾಂಕ ೬ನ್ನೂ ಉಜ್ಜ್ವಲತಮ ನಕ್ಷತ್ರ ಲುಬ್ಧಕಕ್ಕೆ ಉಜ್ಜ್ವಲತಾಂಕ ೧ನ್ನೂ ನಿಗದಿ ಮಾಡಿದ. ಉಳಿದವುಗಳಿಗೆ ೧ ಮತ್ತು ೬ರ ನಡುವಿನ ಅಂಕಗಳನ್ನು ನಿಗದಿಸಿದ. ಈ ಅನುಭವಜನ್ಯ ಮಾನಕವನ್ನು ಆಧರಿಸಿ ಇಂದಿನ ಸುಧಾರಿತ ಮಾನಕವಿದೆ: ಉಜ್ಜ್ವಲತಾಂಕ ೬ ಇರುವ ತಾರೆಯ ಉಜ್ಜ್ವಲತೆ ೧, ೫ರದು ೨.೫೧೨, ೪ರದು ೨.೫೧೨೨=೬.೩೦೧, ೩ರದು ೨.೫೧೨೩=೧೫.೮೫೧, ೨ರದು ೨.೫೧೨೪= ೩೯.೮೧೮, ೧ರದು ೨.೫೧೨೫=೧೦೦.೦೨೦, ಸೊನ್ನೆಯದರದು ೨.೫೧೨೬=೨೫೧.೨೫೭, ಉಜ್ಜ್ವಲತಾಂಕ -೧ರ ತಾರೆಯ ಉಜ್ಜ್ವಲತೆ ೨.೫೧೨೭= ೬೩೧.೧೫೭, ಇತ್ಯಾದಿ. ಲುಬ್ಧಕದ ಉಜ್ಜ್ವಲತಾಂಕ -೧.೫೮, ಸೂರ್ಯನದು -೨೬.೯. ನೋಡಿ: ಕಾಂತಿ, ಕಾಂತಿಮಾನ

ಉಜ್ಜ್ವಲತಾಕಾರಕ

(ತಂ) ವಸ್ತ್ರ, ಕಾಗದ ಮುಂತಾದವುಗಳ ಬಿಳಿ ಅಥವಾ ಬಣ್ಣದ ಮೈ ಎದ್ದುಕಾಣುವಂತೆ ಮಾಡಲು ಬಳಸುವ ರಾಸಾಯನಿಕ. ಇದು ಅತಿನೇರಿಳೆ ವಿಕಿರಣದ ಸ್ವಲ್ಪ ಭಾಗವನ್ನು ಗೋಚರ ಬೆಳಕಾಗಿ ಪರಿವರ್ತಿಸುವ ಮೂಲಕ ವಸ್ತುವಿನ ಮೈಗೆ ಈ ಉಜ್ಜ್ವಲತೆಯನ್ನು ಒದಗಿಸುತ್ತದೆ

ಉಜ್ಜ್ವಲತೆ

(ಭೌ) ಬರಿಗಣ್ಣಿಗೆ ಕಾಣುವಂತೆ ದೀಪ್ತ ವಸ್ತುವಿನ ಹೊಳಪು

ಉಡ

(ಪ್ರಾ) ಲ್ಯಾಸರ್ ಟೀಲಿಯ ಉಪಗಣ ಹಾಗೂ ವೆರಾನಿಡೀ ಕುಟುಂಬದ, ಹಲ್ಲಿಯನ್ನು ಹೋಲುವ ಶಲ್ಕವಂತ ಸರೀಸೃಪ. ವರಾನಸ್ ಜಾತಿಗೆ ಸೇರಿದೆ. ಸೀಳು ನಾಲಿಗೆ, ಉದ್ದ ಹಾಗೂ ಬಾಗಬಲ್ಲ ಕತ್ತು ಇವೆ. ಉಗುರಿನಿಂದ ಗೋಡೆಯನ್ನು ಬಲ ವಾಗಿ ಕಚ್ಚಿಕೊಳ್ಳಬಲ್ಲದು. ಈ ವಿಶೇಷ ಲಕ್ಷಣದಿಂದಾಗಿ ಹಿಂದಿನ ಕಾಲದಲ್ಲಿ ಕೋಟೆಗಳಿಗೆ ಲಗ್ಗೆ ಹಾಕಿ ಮೇಲಕ್ಕೆ ಹತ್ತಲು ಉಡಗಳನ್ನು ಹೇರಳವಾಗಿ ಉಪಯೋಗಿಸುತ್ತಿದ್ದರು. ಹಿಂದೆ ಇದರ ಕೊಬ್ಬಿನಿಂದ ಉಡದ ತುಪ್ಪ ಎಂಬ ಔಷಧಿಯನ್ನು ತಯಾರಿಸಿ ವಾತರೋಗಗಳಿಗೆ ಉಪ ಯೋಗಿಸುತ್ತಿದ್ದರು. ಈಗ ನಿಷಿದ್ಧ. ಗೌಳಿ

ಉಡಾವಣಾ ವಾಹನ

(ಆವಿ) ಕೃತಕ ಭೂ-ಉಪಗ್ರಹಗಳನ್ನೂ ಹಾಗೂ ಸ್ವಯಂಚಾಲಿತ ಇಲ್ಲವೇ ಗಗನಯಾತ್ರಿಗಳಿರುವ ನೌಕೆಗಳನ್ನೂ ಭೂ ಕಕ್ಷೆಗೆ ಕೊಂಡೊಯ್ಯುವ ರಾಕೆಟ್ ವಾಹನ. ಉದಾ: ಎಎಸ್‌ಎಲ್‌ವಿ, ಜಿಎಸ್‌ಎಲ್‌ವಿ

ಉಂಡಿಗೆ

(ಭೌ) ಸಮಗ್ರ ಪದಾರ್ಥದ ಗುಣ ನಿಷ್ಕರ್ಷಿಸಲು ಅದರಿಂದ ಯಾದೃಚ್ಛಿಕವಾಗಿ ಆಯ್ದ ಅಲ್ಪಾಂಶ. ವಿಕಿರಣಪಟು ಪದಾರ್ಥಗಳಿಗೆ ಸಾಮಾನ್ಯವಾಗಿ ಅನ್ವಯ

ಉಂಡೆ ಮಣ್ಣು

(ಭೂವಿ) ನಯರಚನೆ ಇರುವ ಪ್ಲಾಸ್ಟಿಕ್ ಸದೃಶ ಕುಂಬಾರಮಣ್ಣು. ಉಂಡೆಗಳಲ್ಲಿ ಪೂರೈಕೆ ಆಗುವುದರಿಂದ ಈ ಹೆಸರು. ನೋಡಿ: ಕುಂಬಾರ ಜೇಡಿ

ಉಂಡೆ ಮೀನು

(ಪ್ರಾ) ದೊಡ್ಡ ಮೂಳೆ ಮೀನು. ಕಶೇರುಕ. ದೇಹವನ್ನು ಬಲೂನಿನಂತೆ ಉಬ್ಬಿಸಿಕೊಳ್ಳಬಲ್ಲದು. ಉಷ್ಣವಲಯ ಪ್ರದೇಶ ಗಳಲ್ಲಿ ಕೆರೆ ನೀರಿನಲ್ಲಿ ವಾಸ. ಉರುಳೆ ಆಕಾರದ ಮೈ. ಉದ್ದ ಮೊನಚು ಮುಳ್ಳು ಗಳಿವೆ. ದಪ್ಪ ತಲೆ. ಉಬ್ಬು ಹಲ್ಲು. ಈ ಗುಂಪಿನ ನಾಲ್ಕು ಹಲ್ಲುಗಳ ಟೆಟ್ರೊಡಾನ್ ಹಾಗೂ ಎರಡು ಹಲ್ಲುಗಳ ಡಿಯೊಡಾನ್ ಭಾರತದಲ್ಲೂ ಕಂಡುಬರುತ್ತವೆ. ವಿಷಪೂರಿತವಾದ್ದರಿಂದ ಆಹಾರಯೋಗ್ಯವಲ್ಲ. ಉಬ್ಬುಮೀನು, ಡಿಯೊಡಾನ್ ಹಿಸ್ಟ್ರಿಕ್ಸ್. ಬುದ್ದಲಿ ಮೀನು. ಬುರುಡೆ ಮೀನು. ನೋಡಿ : ಪಫರ್ ಮೀನು

Search Dictionaries

Loading Results

Follow Us :   
  Download Bharatavani App
  Bharatavani Windows App