Navakarnataka Vijnana Tantrajnana Padasampada (2011)
Navakarnataka Publications Private Limited
ಉಷ್ಣವಾಹಕ ಸಾಮರ್ಥ್ಯ
(ಭೌ) ಯಾವುದೇ ಮೇಲ್ಮೈಯ ಅಡ್ಡಕ್ಕೆ ಏಕಮಾನ-ಸಲೆ ಏಕಮಾನ-ಕಾಲ ದಲ್ಲಿ ಪ್ರವಹಿಸುವ ಉಷ್ಣ ಪರಿಮಾಣವನ್ನು ಆ ಮೇಲ್ಮೈಗೆ ಲಂಬ ದಿಶೆಯಲ್ಲಿ ದೂರದೊಂದಿಗೆ ಉಷ್ಣತಾ ವ್ಯತ್ಯಯ ದರದ ಋಣ ಮೌಲ್ಯದಿಂದ ಭಾಗಿಸಿದಾಗ ದೊರೆಯುವ ಲಬ್ಧ
ಉಷ್ಣವಾಹಕತೆ
(ಭೌ) ಅಣುವಿನಿಂದ ಅಣುವಿಗೆ ಸಾಗುವುದರಿಂದಾಗಿ ಉಷ್ಣವು ಪದಾರ್ಥದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗುವುದು
ಉಷ್ಣವಿಚ್ಛೇದನೆ
(ರ) ಒಂದು ಬಗೆಯ ಪೆಟ್ರೋಲಿಯಮ್ ಸಂಸ್ಕರಣ ಪ್ರಕ್ರಿಯೆ. ಇದರಲ್ಲಿ ಕ್ರಿಯಾ ವರ್ಧಕಗಳ ನೆರವಿಲ್ಲದೆ ಉಷ್ಣಾನ್ವಯದಿಂದ ಮಾತ್ರ ಹೈಡ್ರೊ ಕಾರ್ಬನ್ ಅಣುಗಳ ವಿಘಟನೆ, ಪುನರಳವಡಿಕೆ ಅಥವಾ ಸಂಯೋಜನೆ ಮಾಡಲಾಗುವುದು
ಉಷ್ಣವಿದ್ಯುತ್ತು
(ಭೌ) ಉಷ್ಣಯುಗ್ಮ ಸಾಧನ ವನ್ನು ಬಳಸಿಕೊಂಡು ಉಷ್ಣಶಕ್ತಿಯಿಂದ ಉತ್ಪಾದಿಸಿದ ವಿದ್ಯುತ್ತು
ಉಷ್ಣಸ್ಥಿರ
(ರ) ಉಷ್ಣದಿಂದ ವಿಘಟನೆ ಹೊಂದದ ಪದಾರ್ಥ
ಉಷ್ಣಸ್ನೇಹಿ
(ಸ) ಉಷ್ಣದ ಆವಶ್ಯಕತೆಯುಳ್ಳ. ಉಷ್ಣದಲ್ಲಿ ಚೆನ್ನಾಗಿ ಬೆಳೆಯುವ, ಅತಿ ಉಷ್ಣತೆಗೂ ಜಗ್ಗದ ಸಸ್ಯ
ಉಷ್ಣಸ್ಫುರದೀಪ್ತಿ
(ಭೌ) ವಸ್ತುವಿನ ಮೇಲೆ ಬೆಳಕಿನ ಕಿರಣ ಇತ್ಯಾದಿ ಕ್ರಿಯೆ ಜರಗಿಸಿದ ಬಳಿಕ ಅದನ್ನು ಕಾಸಿದಾಗ ಅದರಿಂದ ಹೊರಸೂಸುವ ಮಂದ ಮಿನುಗು
ಉಷ್ಣಾನುಕುಂಚನ
(ಸ) ಉಷ್ಣತೆಗೆ ಅನುಗುಣವಾಗಿ ಸಸ್ಯಗಳು ತೋರುವ ಪ್ರತಿಕ್ರಿಯೆ. ಉದಾ: ಅಸಮ ಉಷ್ಣ ವಿಸ್ತರಣೆ ಯಿಂದಾಗಿ ಕಾಂಡ ಬಾಗುವಿಕೆ. ಕ್ರೊಕಸ್, ಟ್ಯೂಲಿಪ್ ಮುಂತಾದ ಸಸ್ಯಗಳಲ್ಲಿ ಹೂ ಅರಳುವಿಕೆಯ ವೇಗ ಉಷ್ಣತೆಯನ್ನು ಅವಲಂಬಿಸಿದೆ
ಉಷ್ಣಾಪಾರಕ
(ಭೌ) ಉಷ್ಣದ ಗಳಿಕೆ/ಸೋರಿಕೆ ಇರದ
ಉಷ್ಣೋತ್ಪತ್ತಿ
(ರ) ಸಹಜ ರಾಸಾಯನಿಕ ಬದಲಾವಣೆಯಿಂದ (ಪ್ರಾಣಿಗಳ ಶರೀರದಲ್ಲಿ) ಉಷ್ಣೋತ್ಪಾದನೆ
ಉಸಿರು
(ಪ್ರಾ) ಉಚ್ಛ್ವಾಸ ನಿಶ್ವಾಸ ಕ್ರಿಯೆಗಳಲ್ಲಿ ಪರಿಚಲಿಸುವ ವಾಯು
ಉಸಿರುದಾಣಗಳು
(ಸಾ) ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಗಾಳಿ ಚೆನ್ನಾಗಿ ಸಂಚರಿಸಲೆಂದು ನಡುನಡುವೆ ಅಥವಾ ಹತ್ತಿರದಲ್ಲಿ ಬಿಟ್ಟಿರುವ ಬಯಲು ಪ್ರದೇಶಗಳು
ಉಸಿರೂದಿಕೆ
(ವೈ) (ವೈದ್ಯಕೀಯ ಚಿಕಿತ್ಸೆಯಲ್ಲಿ) ಜೋರಾಗಿ ಉಸಿರು ಊದುವ ಕ್ರಿಯೆ
ಉಸುಕಿನ ನೊಣ
(ಪ್ರಾ) ಡಿಪ್ಟಿರ ಗಣ ಹಾಗೂ ಸೈಕೊಡಿಡೀ ಕುಟುಂಬ ಫ್ಲೆಬೊಟೊಮಸ್ ಜಾತಿಗೆ ಸೇರಿದ ಕೀಟ. ಉಸುಕಿನ ನೊಣ ಜ್ವರವನ್ನು ಉಂಟು ಮಾಡುವ ಕ್ರಿಮಿಯನ್ನು ಹರಡಿ ಸಾಂಕ್ರಾಮಿಕಕ್ಕೆ ಕಾರಣವಾಗು ತ್ತದೆ. ಕಾಲಾ ಆಜಾರ್ ಎಂಬ ರೋಗವನ್ನುಂಟುಮಾಡುತ್ತದೆ. ಎರಡು ರೆಕ್ಕೆಗಳ ಈ ಕೀಟಗಳು ಸರೀಸೃಪ ಹಾಗೂ ಸ್ತನಿ ರಕ್ತವನ್ನಲ್ಲದೆ ಮನುಷ್ಯ ರಕ್ತವನ್ನೂ ಹೀರುವುವು
ಉಳುಕು