Navakarnataka Vijnana Tantrajnana Padasampada (2011)
Navakarnataka Publications Private Limited
ಆಂಬ್ರೋಸಿಯ
(ಸ) ಕೆಲವು ಬಗೆಯ ಜೀರುಂಡೆಗಳು ತಮ್ಮ ಆಹಾರವಾಗಿ ಕೃಷಿ ಮಾಡುವ ಮಿಶ್ರ ಜಾತಿಯ ಶಿಲೀಂಧ್ರಗಳು. ಸಾಮಾಜಿಕ ಜೇನ್ನೊಣಗಳು ಮರಿ ಹುಳುಗಳಿಗೆ ಉಣಿಸಲೋಸುಗ ಸಂಗ್ರಹಿಸುವ ಪುಷ್ಪ ಪರಾಗ
ಆಮಶಂಕೆ
(ವೈ) ಕರುಳಿನ ಒಳಚರ್ಮವೂ ಅದರಲ್ಲಿಯ ಗ್ರಂಥಿಗಳೂ ಊತವೇರಿ ನುಲಿತು, ಆಮ ಮತ್ತು ರಕ್ತ ವಿಸರ್ಜನೆ ಯಾಗುವ ವ್ಯಾಧಿ. ಆಮಾತಿಸಾರ
ಆಮೆ
(ಪ್ರಾ) ಕಿಲೋನಿಯ ಗಣ ಟೆಸ್ಟುಡಿನಿಡೀ ಕುಟುಂಬ, ಸರೀಸೃಪ ವಂಶಕ್ಕೆ ಸೇರಿದ ಉಭಯಚರಿ ಪ್ರಾಣಿ. ಟಾರ್ಟಿಸ್, ಟರ್ಟಲ್, ಟೆರ್ರಾಪಿನ್ ಪರ್ಯಾಯ ನಾಮಗಳು. ಟಾರ್ಟಿಸ್ ಭೂಚರ ಆಮೆ ಗಳಿಗೂ ಟರ್ಟಲ್ ಜಲಚರ ಆಮೆಗಳಿಗೂ ಅನ್ವಯ. ಆಮೆಗೆ ಹಲ್ಲಿಲ್ಲ. ಚೆನ್ನಾಗಿ ಬೆಳೆದ ಕಾಲುಗಳೂ ಮೂಳೆಯ ಹಲಗೆಗಳಿಂದ ನಿರ್ಮಿತವಾದ ಬೆನ್ನಿನ ಮತ್ತು ಹೊಟ್ಟೆಯ ಕಡೆ ಚಿಪ್ಪುಗಳೂ ದೊಡ್ಡದಾಗಿ ಅಲುಗಾಡದಂತೆ ಕುಳಿತ ಕ್ವಾಡ್ರೇಟ್ ಮೂಳೆಗಳೂ ಇವೆ. ಕೂರ್ಮ
ಆಮ್ನಿಯೋಟ
(ಪ್ರಾ) ಗರ್ಭವೇಷ್ಟನದೊಳಗೆ ಭ್ರೂಣಾ ಭಿವರ್ಧನೆ ಆಗುವ ವ್ಯವಸ್ಥೆಯುಳ್ಳ ಉಚ್ಚ ಕಶೇರುಕಗಳು. ಉದಾ: ಸರೀಸೃಪಗಳು, ಪಕ್ಷಿಗಳು ಹಾಗೂ ಸ್ತನಿಗಳು
ಆಮ್ಮೀಟರ್
(ಭೌ) ವಿದ್ಯುನ್ಮಂಡಲದಲ್ಲಿಯ ಪ್ರವಾಹವನ್ನು ಅಳೆಯುವ ಸಾಧನ. ವಿದ್ಯುತ್ಪ್ರವಾಹ ಮಾಪಕ
ಆಮ್ಲ
(ರ) ಸಾಮಾನ್ಯವಾಗಿ ಇದು ೧. ನೀರಿನಲ್ಲಿ ವಿಲೀನವಾಗಿ ಹೈಡ್ರೊಜನ್ ಅಯಾನುಗಳನ್ನು ಉತ್ಪಾದಿಸುತ್ತದೆ. ೨. ಲೋಹ ಗಳನ್ನು ವಿಲೀನಿಸಿ ಹೈಡ್ರೊಜನ್ ಅನಿಲವನ್ನು ಬಿಡುಗಡೆ ಮಾಡುತ್ತದೆ ಅಥವಾ ೩. ಪ್ರತ್ಯಾಮ್ಲದ ಜೊತೆ ವರ್ತಿಸಿ ಲವಣವನ್ನು ಕೊಡುತ್ತದೆ; ಸರ್ವಸಾಮಾನ್ಯವಾಗಿ, ಪ್ರೋಟಾನನ್ನು ಕಳೆದು ಕೊಳ್ಳುವ ಅಥವಾ ಎಲೆಕ್ಟ್ರಾನ್ ಜೋಡಿಯನ್ನು ಸ್ವೀಕರಿಸುವ ಪ್ರವೃತ್ತಿ ಪ್ರದರ್ಶಿಸುತ್ತದೆ
ಆಮ್ಲ ಅನ್ಹೈಡ್ರೈಡ್
(ರ) ಆಮ್ಲದ ಅಣುವಿನಿಂದ/ಅಣುಗಳಿಂದ ನೀರಿನ ಅಣುವನ್ನು ರಾಸಾಯನಿಕವಾಗಿ ಪ್ರತ್ಯೇಕಿಸಿದಾಗ ದೊರೆಯುವ ಸಂಯುಕ್ತ. ಇದು ನೀರಿನೊಂದಿಗೆ ವರ್ತಿಸಿ ಆಮ್ಲ ಉಂಟುಮಾಡುತ್ತದೆ. ಉದಾ: ಕಾರ್ಬನ್ ಡೈಆಕ್ಸೈಡ್ ನೀರಿನೊಂದಿಗೆ ವರ್ತಿಸಿ ಕಾರ್ಬಾನಿಕ್ ಆಮ್ಲ ಉಂಟುಮಾಡುತ್ತದೆ. CO2+H2OO H2CO3
ಆಮ್ಲ ನಿಕ್ಷೇಪನ
(ಪವಿ) ಆಮ್ಲ ಮಳೆಯಿಂದ ಭೂಮಿಯ ಮೇಲೆ ಶೇಖರವಾಗುವ ಆಮ್ಲ. ಹಿಮಪಾತ ದಿಂದಲೂ ನಿಕ್ಷೇಪಗೊಳ್ಳುತ್ತದೆ. ಗಂಧಕ, ಕಲ್ಲಿದ್ದಲು, ತೈಲಗಳ ದಹನದಿಂದ ಗಂಧಕದ ಡೈಆಕ್ಸೈಡ್ ಮತ್ತು ನೈಟ್ರೊಜನ್ ಡೈ ಆಕ್ಸೈಡ್ಗಳು ಅಧಿಕ ಪ್ರಮಾಣದಲ್ಲಿ ವಾತಾವರಣ ಸೇರುವು ದರಿಂದ ಆಮ್ಲ ಶೇಖರವಾಗುತ್ತದೆ. ನೀರಾವಿ ವರ್ತಿಸಿ ಗಂಧಕ ಮತ್ತು ನೈಟ್ರಿಕ್ ಆಮ್ಲಗಳು ಉತ್ಪಾದನೆಯಾಗಿ ಭೂಮಿಯ ಮೇಲೆ ಮತ್ತು ಮರಗಳ ಮೇಲೂ ಮಳೆಯಾಗಿ ಬೀಳುತ್ತದೆ. ಇದು ಸರೋವರದ ಜಲಚರಗಳಿಗೆ ಅತ್ಯಂತ ಮಾರಕ
ಆಮ್ಲ ಮಾಪನ
(ರ) ದತ್ತ ದ್ರಾವಣದಲ್ಲಿರುವ ಆಮ್ಲಾಂಶವನ್ನು ನಿರ್ಧರಿಸಲು ಅದನ್ನು ಶಿಷ್ಟ ಕ್ಷಾರ ದ್ರಾವಣದ ಜೊತೆ ಅನುಮಾಪನ (ಟೈಟ್ರೀಕರಣ) ಮಾಡುವುದು
ಆಮ್ಲ ಲವಣ
(ರ) ಆಮ್ಲದಲ್ಲಿ ಪ್ರತಿಸ್ಥಾಪಿಸಬಹುದಾದ ಹೈಡ್ರೊಜನ್ಅನ್ನು ಭಾಗಶಃ ಪ್ರತಿಸ್ಥಾಪಿಸಿದಾಗ ದೊರೆಯುವ ಲವಣ. ಉದಾ: ಕಾರ್ಬಾನಿಕ್ ಆಮ್ಲ H2CO3ರಲ್ಲಿ ಒಂದು ಹೈಡ್ರೊಜನ್ ಪರಮಾಣುವನ್ನು ತೆಗೆದುಹಾಕಿ ಅದರ ಸ್ಥಳದಲ್ಲಿ ಒಂದು ಸೋಡಿಯಮ್ ಪರಮಾಣುವನ್ನು ಸೇರಿಸಿದಾಗ ದೊರೆ ಯುವ ಸೋಡಿಯಮ್ ಹೈಡ್ರೊಜನ್ ಕಾರ್ಬನೇಟ್ NaHCO3
ಆಮ್ಲಮೌಲ್ಯ
(ರ) ಸಸ್ಯಮೂಲ (ವನಸ್ಪತಿ) ತೈಲ, ರಾಳ ಮುಂತಾದವುಗಳಲ್ಲಿ ಆಮ್ಲ ಎಷ್ಟಿದೆ ಎಂಬುದರ ಅಳತೆ. ಇಂಥ ಒಂದು ಆಮ್ಲದ ೧ ಗ್ರಾಮ್ಅನ್ನು ತಟಸ್ಥೀಕರಿಸಲು ಎಷ್ಟು ಮಿಲಿಗ್ರಾಮ್ ಪೊಟ್ಯಾಸಿಯಮ್ ಹೈಡ್ರಾಕ್ಸೈಡ್ (koh) ಅವಶ್ಯ ಎಂಬುದರಿಂದ ಸೂಚಿತ
ಆಮ್ಲರಸ
(ವೈ) ನಾವು ಸೇವಿಸುವ ಆಹಾರವನ್ನು ಜಠರದ ಸ್ನಾಯುಗಳು, ಜಠರಾಮ್ಲದ ನೆರವಿನಿಂದ ಚೆನ್ನಾಗಿ ಕಿವಿಚಿ ಆಮ್ಲ ರಸವನ್ನು ರೂಪಿಸುತ್ತವೆ. ಈ ರಸ ಜಠರದಿಂದ ಸಣ್ಣ ಕರುಳಿನ ಮೊದಲನೆಯ ಭಾಗವಾದ ದ್ವಾದಶಾಂತ್ರ (ಡುಯೋಡಿನಂ)ವನ್ನು ಪ್ರವೇಶಿಸುತ್ತದೆ. ಅನ್ನರಸ, ಆಮ್ಲಪಿಷ್ಟ
ಆಮ್ಲರೋಧಕಗಳು
(ರ) ಅಗ್ನಿಮಾಂದ್ಯ ಚಿಕಿತ್ಸೆಯಲ್ಲಿ ಬಳಸುವ ಸಂಯುಕ್ತಗಳು. ಮೆಗ್ನೀಸಿಯಮ್ ಟ್ರೈಸಿಲಿಕೇಟ್ ಹಾಗೂ ಅಲ್ಯೂಮಿನಿಯಮ್ ಹೈಡ್ರಾಕ್ಸೈಡ್ ಹೆಚ್ಚು ಬಳಕೆಯಲ್ಲಿವೆ.
ಆಮ್ಲವೃಷ್ಟಿ
(ಪ) ಅಸಹಜವಾದ ಆಮ್ಲತೆಯಿಂದ (pH ೩ರಿಂದ ೫.೫) ಕೂಡಿರುವ ಮಳೆ. ಕಲ್ಲಿದ್ದಲನ್ನೂ ತೈಲವನ್ನೂ ಅತಿಯಾಗಿ ಉರಿಸುವುದರಿಂದ ವಾಯುಮಂಡಲಕ್ಕೆ ಅಧಿಕ ಪ್ರಮಾಣದಲ್ಲಿ ಸೇರುವ ನೈಟ್ರೊಜನ್ನಿನ ಹಾಗೂ ಸಲ್ಫರ್ನ ಆಕ್ಸೈಡ್ಗಳು ಮಳೆ ನೀರಿನೊಡನೆ ವರ್ತಿಸುವುದರ ಪರಿಣಾಮ
ಆಮ್ಲಶಿಲೆ
(ಭೂವಿ) ಶೇಕಡಾ ೧೦ಕ್ಕಿಂತ ಅಧಿಕ ಕ್ವಾರ್ಟ್ಸ್ ಇರುವ ಅಗ್ನಿಶಿಲೆ
ಆಮ್ಲೀಯತೆ
(ರ) ದ್ರಾವಣದಲ್ಲಿ ಹೈಡ್ರೊಜನ್ ಅಯಾನ್ ಮಟ್ಟ. (ವೈ) ಜಠರದಲ್ಲಿ ಆಮ್ಲದ ಆಧಿಕ್ಯ
ಆಯತ
(ಗ) ಪ್ರತಿಯೊಂದು ಕೋನವೂ ಲಂಬಕೋನ ವಾಗಿದ್ದು ಆಸನ್ನ ಭುಜಗಳು ಅಸಮವಾಗಿರುವ ಸಮತಲ ಚತುರ್ಭುಜ. ಈ ಚತುರ್ಭುಜ ದಲ್ಲಿ ಪ್ರತಿಯೊಂದು ಭುಜವೂ ಅದರ ಎದುರು ಭುಜಕ್ಕೆ ಸಮಾಂತರ ಮತ್ತು ಸಮವಾಗಿದ್ದು ಪ್ರತಿಯೊಂದು ಕೋನವೂ ೯೦0 ಆಗಿರುತ್ತದೆ. ಆಯ. ನೋಡಿ : ಚೌಕ. ಚತುರ್ಭುಜ
ಆಯತ ಚಿತ್ರ
(ಸಂಕ) ಆಯತಗಳ ಮೂಲಕ ವಿತರಣ ಕ್ರಿಯೆಯನ್ನು ವ್ಯಕ್ತಪಡಿಸುವ ನಕ್ಷಾಚಿತ್ರ. ಸಾಲುಗೂಡಿದ ಆಯತ ಗಳಲ್ಲಿ ಒಂದೊಂದರ ಅಗಲ ಚಲ ಪರಿಮಾಣದ ವರ್ಗಾಂತರವನ್ನೂ ಒಂದೊಂದರ ವಿಸ್ತೀರ್ಣ ಆವೃತ್ತಿಯನ್ನೂ ವ್ಯಕ್ತಪಡಿಸುವಂತೆ ರಚಿಸಿದ ಆವೃತ್ತಿ ಹಂಚಿಕೆ ಚಿತ್ರ
ಆಯತವೃತ್ತ
(ಗ) ನೋಡಿ: ದೀರ್ಘವೃತ್ತ
ಆಯತಾಗ್ರ