भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆದಿಮದಾರು

(ಸ) ಸಸ್ಯದಲ್ಲಿ ಮೊತ್ತಮೊದಲಿಗೆ ರೂಪುಗೊಳ್ಳುವ ದಾರು. ಅತ್ಯಂತ ಕಿರಿದಾದ ಮತ್ತು ತೆಳು ಭಿತ್ತಿಗಳಿರುವ ನಾರುಗಳಿಂದ ಆದುದು

ಆದಿಶಿಲಾ ಆಯುಧ

(ಸಾ) ಆದಿಮಾನವ ಉಪಯೋಗಿಸುತ್ತಿದ್ದ ಅತ್ಯಂತ ಪುರಾತನ ಶಿಲಾ ಆಯುಧಗಳು, ತುಂಬ ಒರಟು ಆಗಿರುವುದರಿಂದ ಇವು ಮಾನವ ನಿರ್ಮಿತವಲ್ಲ ಪ್ರಕೃತಿ ಸಹಜವಾಗಿ ರೂಪುಗೊಂಡವು ಎಂದು ಕೆಲವು ಪರಿಣಿತರು ಅಭಿಪ್ರಾಯಪಡುತ್ತಾರೆ

ಆದೇಶ

(ಗ) ಒಂದು ಚರದ ಬದಲಾಗಿ ಇನ್ನೊಂದು ಚರದ ಸ್ಥಾಪನೆ. (ರ) ಅಣುವೊಂದರಲ್ಲಿ ಯಾವುದೇ ಪರಮಾಣು ಮುಖ್ಯವಾಗಿ ಹೈಡ್ರೊಜನ್ ಪರಮಾಣು ಅಥವಾ ಪರಮಾಣು ಗುಚ್ಛವನ್ನು ತೆಗೆದು ಅದರ ಸ್ಥಾನದಲ್ಲಿ ಬೇರೊಂದು ಪರಮಾಣು ಅಥವಾ ಪರಮಾಣು ಗುಚ್ಛವನ್ನು ಆದೇಶಿಸುವುದು

ಆದೇಶ ಭಾಷೆ

(ಕಂ) ಕಂಪ್ಯೂಟರ್‌ಗಳಲ್ಲಿ ಪರಿಕರ್ಮ ವ್ಯವಸ್ಥೆಯ ಜೊತೆ ವ್ಯವಹರಿಸಲು ಬಳಸುವ ಭಾಷೆ

ಆದೇಶ ಸಂಪುಟ

(ತಂ) ವ್ಯೋಮ ಯಾತ್ರಿ ಗಳನ್ನೂ ಪ್ರಧಾನ ನಿಯಂತ್ರಣ ಸಾಧನಗಳನ್ನೂ ಒಳಗೊಂಡ ಗಗನ ನೌಕೆಯ ಸಂಪುಟ, ಕೋಶ ಅಥವಾ ವಿಭಾಗ

ಆಂದೋಲನ ಕೇಂದ್ರ

(ಭೌ) ಸಂಯುಕ್ತ ಲೋಲಕ ನಿಶ್ಚಲವಾಗಿರುವಾಗ ನಿಲಂಬನ ಬಿಂದುವಿನ ನೇರ ಕೆಳಕ್ಕೆ, ಸಮಾನ ಸರಳ ಲೋಲಕದ (ಅಂದರೆ, ಇದೇ ಅವಧಿ ಇರುವ ಸರಳ ಲೋಲಕದ) ಉದ್ದದಷ್ಟು ದೂರದಲ್ಲಿರುವ ಬಿಂದು. ಈ ಲೋಲಕವನ್ನು ಆಂದೋಲನ ಕೇಂದ್ರದಲ್ಲಿ ತೂಗಿದಾಗ ಇದರ ಅವಧಿ ಹಿಂದಿನದೇ ಆಗಿರುವುದು

ಆಂದೋಲನ ಲೇಖ

(ತಂ) ಪರ್ಯಾಯ ವಿದ್ಯುತ್ತಿನ ಅಥವಾ ಇತರ ದೋಲಕ ವಿದ್ಯುತ್ ಬಲದ ತರಂಗ ರೂಪಗಳನ್ನು ವಕ್ರರೇಖೆಯ ರೂಪದಲ್ಲಿ ದಾಖಲಿಸುವ ಮತ್ತು ಸಾಮಾನ್ಯವಾಗಿ ಒಂದು ಕ್ಯಾಥೋಡ್ ಕಿರಣ ನಳಿಗೆಯಿಂದ ಕೂಡಿದ ಉಪಕರಣ

ಆಂದೋಲನಗಳು

(ಭೌ) ೧. ಕಾಲದ ಸಮಾವಧಿಗಳಲ್ಲಿ ಪುನರಾವರ್ತಿಸುವ ಯಾವುದೇ ಚಲನೆ. ಆವರ್ತಕ ಚಲನೆ. ಇದರಲ್ಲಿ ಒಂದು ಕಾಯ ಅದೇ ಪಥದಲ್ಲಿ ಹಿಂದಕ್ಕೂ ಮುಂದಕ್ಕೂ ಚಲಿಸು ತ್ತಿರುತ್ತದೆ. ಆಂದೋಲಿಸುತ್ತಿರುವ ಕಾಯ ಚಲನೆಯ ಒಂದು ಮಿತಿ/ಮೌಲ್ಯದಿಂದ ಇನ್ನೊಂದು ಮಿತಿ/ಮೌಲ್ಯಕ್ಕೆ ಚಲಿಸಿ ಮೊದಲಿನದಕ್ಕೆ ಹಿಂತಿರುಗಿದಾಗ ಪೂರ್ಣ ಆಂದೋಲನ ಮಾಡಿರುತ್ತದೆ. ೨. swing ಮುಕ್ತವಾಗಿ ತೂಗುಹಾಕಲಾದ ವಸ್ತು ಎರಡು ಸ್ಥಿರ ಬಿಂದುಗಳ ನಡುವೆ ಉಯ್ಯಾಲಾಡುವುದು. ತೊನೆತ, ಉದಾ: ಲೋಲಕ

ಆದ್ಯುಕ್ತಿ

(ಸಾ) ನೋಡಿ: ಅಭಿಗೃಹೀತ

ಆದ್ಯುಕ್ತಿ

(ಗ) ವಾದವನ್ನು ಆರಂಭಿಸುವ ಮೊದಲು ಅಥವಾ ತರ್ಕಕ್ಕೆ ಪೀಠಿಕೆ ಹಾಕುವ ಮೊದಲು ನಿಜವೆಂದು ಅಂಗೀಕರಿಸುವ ಹೇಳಿಕೆ. ನೋಡಿ : ಅಭಿಗೃಹೀತ

ಆಧಾರ

(ಗ) ಜ್ಯಾಮಿತೀಯ ಆಕೃತಿಗೆ (ತ್ರಿಭುಜ, ಚತುಷ್ಫಲಕ, ವೃತ್ತ, ಗೋಳ ಇತ್ಯಾದಿ) ‘ಆಧಾರ’ವಿದ್ದರೆ ಅದಕ್ಕೆ ಲಂಬ ಎಳೆಯುವುದು ಸಾಧ್ಯ. ಸಂಖ್ಯೆಗಳ ದಶಮಾನ ವ್ಯವಸ್ಥೆಯಲ್ಲಿ ಆಧಾರ ಸಂಖ್ಯೆ ೧೦; ಕಂಪ್ಯೂಟರ್‌ನ ಪರಿಭಾಷೆಯಾದ ದ್ವಿಮಾನ ವ್ಯವಸ್ಥೆಯಲ್ಲಿ ೨; ದ್ವಾದಶಮಾನ ವ್ಯವಸ್ಥೆಯಲ್ಲಿ ೧೨. ಈ ಆಧಾರ ಸಂಖ್ಯಾನುಸಾರವಾಗಿ ಅಂಕಗಳಿಗೆ (ಪ್ರತೀಕಗಳಿಗೆ) ಸ್ಥಾನ ಮೌಲ್ಯ ನಿಗದಿ ಆಗುವುದು. ದಶಮಾನ ವ್ಯವಸ್ಥೆಯಲ್ಲಿ 5439 = 9×100+3×101+4×102+5×103. ಇದೇ ಸಂಖ್ಯೆ ದ್ವಾದಶಮಾನ ವ್ಯವಸ್ಥೆಯಲ್ಲಿ 9×120+3×121+4×122 +5×123. logb aಯಲ್ಲಿ bಯನ್ನು ಆಧಾರವೆನ್ನುತ್ತೇವೆ

ಆಧಾರ

(ತಂ) ಕಡೆತದ ಯಂತ್ರದಲ್ಲಿ ಉಪಕರಣ ಗ್ರಾಹಿ. ಯಂತ್ರಮುಟ್ಟನ್ನು ಜೋಡಿಸಿರುವ ಸಾಧನ ಅಥವಾ ಮುಟ್ಟು ಹಿಡಿಕೆ

ಆಧಾರ

(ತಂ) ಭಾರದ ಭಾಗವನ್ನು ಹೊತ್ತಿರುವ ಆಸರೆ, ಆನಿಕೆ, ಊರೆ

ಆಧಾರ ಅವಧಿ

(ಸಂ) ಸನ್ನಿವೇಶಗಳನ್ನು ಹೋಲಿಸಲು ಸೂಚ್ಯಂಕವನ್ನು ರಚಿಸುವಾಗ ಹೋಲಿಕೆಗೆ ಆಧಾರವಾಗಿ ಬಳಸುವ ಅವಧಿ. ಉದಾ: ವರ್ಷ ೨೦೦೪ರ ಜೀವನವೆಚ್ಚದ ಅಧ್ಯಯನಕ್ಕೆ ವರ್ಷ ೨೦೦೦ವನ್ನು ಆಧಾರವಾಗಿ ಆಯುವುದು. ಆಗ ಸೂಚ್ಯಂಕ ಆಧಾರ ವರ್ಷಕ್ಕೆ ಸಾಪೇಕ್ಷವಾಗಿ ಪರಿಸ್ಥಿತಿಯನ್ನು ತಿಳಿಸುತ್ತದೆ

ಆಧಾರ ಉಪಾಪಚಯ ದರ

(ವೈ) ಒಬ್ಬ ವ್ಯಕ್ತಿ ಎಚ್ಚರವಾಗಿರುವಾಗ, ಅವನ ದೇಹದ ಜೀವಕೋಶಗಳೆಲ್ಲ ಅತ್ಯಂತ ಕಡಿಮೆ ಉಷ್ಣತೆಯಲ್ಲಿ ಕೆಲಸ ಮಾಡುವಾಗ ಉತ್ಪಾದನೆ ಯಾಗುವ ಶಕ್ತಿಯ ಪ್ರಮಾಣ. ಒಬ್ಬ ವ್ಯಕ್ತಿಯ ದೇಹದಲ್ಲಿ ಉಸಿರಾಟ, ರಕ್ತ ಪರಿಚಲನೆ, ಸ್ರಾವ ಇತ್ಯಾದಿಗಳು ನಡೆಯಲು ಜೀವಕೋಶ ಗಳಿಗೆ ಬೇಕಾಗುವ ಕನಿಷ್ಠ ಶಕ್ತಿ. ಇದನ್ನು ಕಂಡುಹಿಡಿಯುವ ವಿಧಾನ ಹೀಗಿದೆ: ಒಬ್ಬ ವ್ಯಕ್ತಿ ಬೆಳಗಿನ ಜಾವ ಬರಿ ಹೊಟ್ಟೆಯಲ್ಲಿ ಮಲಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಪೂರ್ಣ ವಿಶ್ರಾಂತಿಯನ್ನು ಪಡೆಯುತ್ತಿರಬೇಕು. ಕೋಣೆಯ ಉಷ್ಣತೆಯು ೨೦0 ಸೆಲ್ಸಿಯಸ್ ಇರಬೇಕು. ಈ ಉಷ್ಣತೆಯಲ್ಲಿ ಜೀವಧಾರಣೆಗೆ ಎಷ್ಟು ಶಕ್ತಿ ಬೇಕಾಗುವುದೋ ಆ ಶಕ್ತಿಯೇ ಆಧಾರ ಉಪಾಪಚಯ ಪ್ರಮಾಣ. ಇದನ್ನು ದೇಹದ ಮೇಲ್ಮೈ ವಿಸ್ತೀರ್ಣದ ಚದರ ಮೀಟರ್‌ಗಳಿಗೆ ಇಂತಿಷ್ಟು ಮಿಲಿವಾಟ್‌ಗಳೆಂದು ಅಳೆಯಲಾಗುವುದು

ಆಧಾರ ಏಕಮಾನ

(ಸಾ) ಮಾನಗಳ ಅಂತರರಾಷ್ಟ್ರೀಯ ವ್ಯವಸ್ಥೆಯ (si) ಏಕಮಾನ. ಇದು ೭ ಆಧಾರ ಏಕಮಾನಗಳ ತಳಹದಿ ಮೇಲೆ ಸಂಗತವಾಗಿ ರಚಿತವಾಗಿದೆ: ಮೀಟರ್ (ಉದ್ದ) ಕಿಲೋಗ್ರಾಮ್ (ರಾಶಿ), ಸೆಕೆಂಡ್ (ಕಾಲ) ಆಂಪೇರ್ (ವಿದ್ಯುನ್ಮಾನ), ಕೆಲ್ವಿನ್ (ಉಷ್ಣತೆ), ಕ್ಯಾಂಡೆಲ (ದೀಪ್ತಿತೀವ್ರತೆ) ಮತ್ತು ಮೋಲ್ (ಪದಾರ್ಥ ಪ್ರಮಾಣ)

ಆಧಾರ ಕಲ್ಪನೆ

(ಗ) ವೈಜ್ಞಾನಿಕ ವಿಧಾನದಲ್ಲಿ ಪ್ರಮುಖ ಹಂತ. ವಿಶ್ಲೇಷಿತ ಮಾಹಿತಿಗಳನ್ನು ಬೆಸೆದು ದತ್ತ ಸಮಸ್ಯೆ ಕುರಿತ ಪರಿಹಾರ ಇದಾಗಿರಬಹುದೇ ಎಂದು ಮಂಡಿಸುವ ವಾದ. ಇದರ ರೂಪಣೆಯಲ್ಲಿ ಅಂತರ್ಬೋಧೆ ಅಥವಾ ಅಂತಃಪ್ರಜ್ಞೆಯ (intuition) ಪಾತ್ರ ಪ್ರಮುಖ. ಆಧಾರಭಾವನೆ. ಊಹೆ

ಆಧಾರ ಕಾಯ

(ಜೀ) ರೋಮಕಗಳ (ಕಣ್ಣೆವೆ) ತಳದಲ್ಲಿರುವ ಸಿಲಿಂಡರಿನಂಥ ರಚನೆ. ಇದು ತ್ರಿವಳಿ ಮೈಕ್ರೊ ಟ್ಯೂಬ್ಯೂಲುಗಳ ಒಂಬತ್ತು ಗುಂಪುಗಳಿಂದಾಗಿದೆ. ಕೃಷಿಕೆಯಲ್ಲಿ ಮೈಕ್ರೊ ಟ್ಯೂಬ್ಯೂಲುಗಳ ಬೆಳವಣಿಗೆಯ ಕೇಂದ್ರವಾಗಿ ಉಪಯೋಗಕ್ಕೆ ಬರುತ್ತದೆ

ಆಧಾರ ದತ್ತಾಂಶ

(ಕಂ) ಆಟೊಮೇಟೆಡ್ ಫೈಲ್‌ಗಳು, ಲೈಬ್ರರಿ/ಕಂಪ್ಯೂಟರ್ ಡಿಸ್ಕ್‌ಗಳ ಯಾವುದೇ ಸಮೂಹದಲ್ಲಿ ಸಂಗ್ರಹಿಸಿದ ಮಾಹಿತಿಗಳ ಸಂಪೂರ್ಣ ಸಮುಚ್ಚಯ. ದತ್ತಾಧಾರ

ಆಧಾರ ನರಗ್ರಂಥಿಗಳು

(ವೈ) ಪ್ರಧಾನ ಮಿದುಳ ತೊಗಟೆಯ ಕೆಳಭಾಗದಲ್ಲಿ ಕಂಡುಬರುವ, ವ್ಯಕ್ತಿಯ ಚಲನ ವಲನಗಳನ್ನು ನಿಯಂತ್ರಿಸುವ ನರಕೇಂದ್ರಗಳ ಸಮೂಹದ ಹೆಸರು. ಕಾರ್ಡೇಟ್, ಲೆಂಟಿಫಾರ್ಮ್, ಸಬ್‌ಸ್ಟಾನ್ಶಿಯ ನೈಗ್ರ ಇತ್ಯಾದಿ ನರಕೇಂದ್ರಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಇವುಗಳಿಗೆ ತಾಗುವ ರೋಗದ ಫಲವೇ ಪಾರ್ಕಿನ್ಸೋನಿಸಂ ಮತ್ತು ಕಂಪವಾತ. (ಪ್ರಾ) ಕಶೇರುಕಗಳಲ್ಲಿ ಪ್ರಮಸ್ತಿಷ್ಕವನ್ನು ಇತರ ನರಕೇಂದ್ರ ಗಳೊಂದಿಗೆ ಸಂಬಂಧಿಸುವ ನರಗ್ರಂಥಿಗಳು

Search Dictionaries

Loading Results

Follow Us :   
  Download Bharatavani App
  Bharatavani Windows App