भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆಂತರಿಕ ಶಕ್ತಿ

(ಭೌ) ಕೆಲಸ ಮಾಡುವ ಸಾಮರ್ಥ್ಯವೇ ಶಕ್ತಿ. ವಸ್ತು ತಾನಿರುವ ಸ್ಥಾನದ ದೆಸೆಯಿಂದ ವಿಭವ ಶಕ್ತಿಯನ್ನೂ ಮತ್ತು ತನ್ನ ಚಲನೆಯ ಫಲವಾಗಿ ಚಲನ ಶಕ್ತಿಯನ್ನೂ ಪಡೆದಿರುತ್ತದೆ. ಇವೆರಡರ ಮೊತ್ತವೇ ಅದರ ಆಂತರಿಕ ಶಕ್ತಿ. ಇದನ್ನು e ಎಂಬ ಸಂಕೇತದಿಂದ ಸೂಚಿಸುವುದು ವಾಡಿಕೆ. ಇದರ ಮೌಲ್ಯವು ವ್ಯವಸ್ಥೆಯ ತಾಪ, ಗಾತ್ರ, ಒತ್ತಡ ಮತ್ತು ರಾಸಾಯನಿಕ ಸಂಯೋಜನೆ ಗಳನ್ನು ಅವಲಂಬಿಸಿರುತ್ತದೆ. ಅದರ ನಿರಪೇಕ್ಷ ಬೆಲೆಯನ್ನು ಕಟ್ಟುವುದು ಅಸಾಧ್ಯ. ಆದರೆ ವ್ಯವಸ್ಥೆಯ ತಾಪ, ಗಾತ್ರ, ಒತ್ತಡ ಮತ್ತು ಸಂಯೋಜನೆಗಳಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ಗಮನಿಸಿ ಅದರ ಆಂತರಿಕ ಶಕ್ತಿಯಲ್ಲಿ ಉಂಟಾಗುವ ವ್ಯತ್ಯಾಸವನ್ನು ಮಾತ್ರ ಲೆಕ್ಕ ಹಾಕಬಹುದು. ಆದರೆ ಆಂತರಿಕ ಶಕ್ತಿ ಒಂದು ಸ್ಥಿತಿಧರ್ಮ

ಆಂತರಿಕ ಸ್ರಾವ

(ಪ್ರಾ) ರಕ್ತದೊಳಕ್ಕೆ ನೇರವಾಗಿ ಸೇರುವ, ಗ್ರಂಥಿ ಉತ್ಪಾದಿಸುವ ವಸ್ತು. ವಿಶೇಷ ಪರಿಣಾಮ ಉಂಟು ಮಾಡಲು ಶರೀರದ ಇತರ ಭಾಗಗಳಿಗೆ ಸಾಗಿಸಲಾಗುವ ಮಿದುಳು ಮತ್ತು ಮಿದುಳು ಬಳ್ಳಿಯ ತರಲ. ರಸದೂತ (ಹಾರ್ಮೋನ್)

ಆತಿಥೇಯ

(ಜೀ) ಪರೋಪಜೀವಿಗೆ ತನ್ನ ರಕ್ತ ಅಥವಾ ಸಾರವನ್ನು ಆಹಾರವಾಗಿ ಒದಗಿಸಿ ಆಶ್ರಯ ನೀಡುವ ಪ್ರಾಣಿ ಅಥವಾ ಸಸ್ಯ

ಆತಿಥೇಯ ಶಿಲೆ

(ಭೂವಿ) ಇತರ ಶಿಲೆಗಳಿಗೆ ಅಥವಾ ಖನಿಜ ನಿಕ್ಷೇಪಗಳಿಗೆ ಆಶ್ರಯವಾಗಿ ನೆರವಾಗುವ ಶಿಲಾ ಸಮೂಹ. ಉದಾ: ಕ್ಸೆನೊಲಿತ್‌ಗಳನ್ನೊಳಗೊಂಡ ಪ್ಲುಟೋನ್

ಆತಿಥೇಯ ಸ್ಫಟಿಕ

(ಭೂವಿ) ಭಿನ್ನ ಖನಿಜ ಪ್ರಭೇದಗಳ ಸಣ್ಣ ಸ್ಫಟಿಕಗಳನ್ನು ಒಳಗೊಂಡಿರುವ ದೊಡ್ಡ ಸ್ಫಟಿಕ

ಆಂತೆಲ್ಮಿಂತಿಕ್

(ವೈ) ಕರುಳಿನಲ್ಲಿ ವಾಸಿಸುವ ಪರೋಪಜೀವಿ ಹುಳುಗಳನ್ನು ಕೊಲ್ಲುವ/ಹೊರಬರುವಂತೆ ಮಾಡುವ ಔಷಧಿಗಳು. ಜಂತುನಾಶಕ. ಕರುಳು ಹುಳು ರೋಧಕ

ಆಂತ್ರೇತರ

(ವೈ) ಅನ್ನನಾಳದ ಮೂಲಕವಲ್ಲದೆ ರಕ್ತನಾಳ ಅಥವಾ ಅಡಿ ಚರ್ಮದ ಮೂಲಕ ಆಹಾರಾಂಶಗಳನ್ನು ಅಥವಾ ಚಿಕಿತ್ಸಕ ಕಾರಕಗಳನ್ನು ಕರುಳಿಗೆ ನೀಡುವುದು

ಆಂಥೊಜೋವ

(ಪ್ರಾ) ಕುಟುಕು ಕಣವಂತಗಳ (ಸೀಲೆಂಟಿರೇಟಾ) ಒಂದು ಮುಖ್ಯ ವರ್ಗ. ಇದರಲ್ಲಿ ಪ್ರಾಣಿಗಳು ಪಾಲಿಪ್ ಅವಸ್ಥೆಯಲ್ಲಿಯೇ ಇರುತ್ತವೆ. ಸಮುದ್ರದ ಆನಿಮನಿ, ಪೆನ್, ಬೀಸಣಿಗೆ ಹಾಗೂ ಹವಳದ ಹುಳುಗಳು ಈ ವರ್ಗಕ್ಕೆ ಸೇರಿವೆ. ಆಂಥೊಜೋವವನ್ನು ಅಲ್ ಸಿಯೊನೇರಿಯ ಹಾಗೂ ಜುಆಂಥೇರಿಯ ಎಂದು ಎರಡು ವಿಶಾಲ ವಿಭಾಗಗಳಾಗಿ ವಿಂಗಡಿಸಲಾಗಿದೆ

ಆಂಥ್ರಕ್ವಿನೋನ್

(ರ) ಡೈಫೆನಿಲಿನ್ ಡೈಕ್‌ಟೋನ್. C6H4 (CO)2 C6H4. ಸುಲಭವಾಗಿ ಉತ್ಪತನಿಸುವ ಹಳದಿ ಸೂಜಿಗಳು ಅಥವಾ ಅಶ್ರಗಗಳು. ಡೈಕಿಟೋನ್ ರಂಗುಗಳ ತಯಾರಿಕೆಯಲ್ಲಿ ಮಧ್ಯವರ್ತಿಯಾಗಿ ಬಳಕೆ

ಆಂಥ್ರಸೀನ್

(ರ) C14H10 ನಿರ್ವರ್ಣ ನೀಲ ಪ್ರತಿದೀಪ್ತಶೀಲ ಸ್ಫಟಿಕಗಳು; ದ್ರಬಿಂ ೨೧೮0 ಸೆ, ಕುಬಿಂ ೩೪೦0 ಸೆ, ಸಾಸಾಂ ೧.೨೫; ವರ್ಣದ್ರವ್ಯಗಳ ತಯಾರಿಕೆಯಲ್ಲಿ ಮುಖ್ಯ ಕಚ್ಚಾ ಸಾಮಗ್ರಿ; ಕಲ್ಲಿದ್ದಲ ಡಾಂಬರನ್ನು ೨೭೦0 ಸೆ.ಗಿಂತ ಮೇಲಿನ ಉಷ್ಣತೆ ಯಲ್ಲಿ ಕುದಿಸುವಾಗ ದೊರೆಯುವ ಅಂಶ

ಆಂಥ್ರಸೈಟ್

(ಭೂವಿ) ಬಲು ಗಡಸಾದ ಉತ್ಕೃಷ್ಟ ಕಲ್ಲಿದ್ದಲು. ಹೆಚ್ಚು ಕಡಿಮೆ ಪೂರ್ತಿ ಕಾರ್ಬನ್ ಪದಾರ್ಥವೇ. ಲೋಹದಂತೆ ಹೊಳಪಾಗಿದ್ದು ಹೊಗೆ ಇಲ್ಲದೆ ಉರಿದು ಅಧಿಕ ಶಾಖ ಕೊಡುತ್ತದೆ

ಆದಾನ

(ಕಂ) ಸಂಸ್ಕರಿಸಬೇಕಾಗಿರುವ ದತ್ತಾಂಶವನ್ನು

ಆದಾಯ ವಿತರಣೆ

(ಸಂ) ಒಂದು ಪ್ರದೇಶದ ಒಟ್ಟು ವಾರ್ಷಿಕ ವರಮಾನ ಅಲ್ಲಿನ ಒಟ್ಟು ಜನರಲ್ಲಿ ಹೇಗೆ ವಿತರಣೆ ಗೊಂಡಿದೆಯೆಂಬ ಮಾಹಿತಿ. ಇದನ್ನು ತಿಳಿಯಲು ವರಮಾನದ ಸಂಚಿತ ಮಟ್ಟವನ್ನು ಜನಸಂಖ್ಯೆಯ ಸಂಚಿತ ಮಟ್ಟಕ್ಕೆ ವಿರುದ್ಧವಾಗಿ ತೋರಿಸುವ ಲಾರೆನ್ಸ್ ವಕ್ರರೇಖೆಯ ಬಳಕೆ ಸಾಮಾನ್ಯ

ಆದಿಜೀವಿ

(ಪ್ರಾ) ಅತ್ಯಂತ ಸರಳ ರಚನೆಯ, ಸಾಮಾನ್ಯವಾಗಿ ಸೂಕ್ಷ್ಮದರ್ಶಕದಲ್ಲಿ ಮಾತ್ರ ಗೋಚರವಾಗುವ ಏಕಕೋಶ ಜೀವಿ ವರ್ಗ. ಪ್ರೋಟೊಜೋವ

ಆದಿಪ್ರತೀಕ

(ಜೀ) ಪ್ರಾಣಿಗಳ ಅಥವಾ ಸಸ್ಯಗಳ ಒಂದು ಗುಂಪಿನ ಅತಿ ಪ್ರಾಚೀನ ಪೂರ್ವಜ. ಪ್ರಾಗ್ರೂಪ. (ಸಾ) ಯಾವುದಾದರೂ ಒಂದರ ಉತ್ಪತ್ತಿ ಅಥವಾ ವಿಕಸನಕ್ಕೆ ಆಧಾರವಾದ ಮೂಲಮಾದರಿ. ಅಸಲು ಪ್ರತಿ

ಆದಿಬೆನ್ನುಹುರಿ

(ವೈ) ೧. ಕೆಲವು ಆದಿ ಕಶೇರುಕಗಳಲ್ಲಿ ಈ ರಚನೆಯು ಇಡೀ ದೇಹಕ್ಕೆ ಆಧಾರ ನೀಡುವ ಮೂಲ ರಚನೆ ಆಗಿರುತ್ತದೆ. ನರಮಂಡಲ ಹಾಗೂ ಸಂಬಂಧಿತ ರಚನೆಗಳು ಪರಿಪೂರ್ಣವಾಗಿ ಬೆಳೆಯಲು ಇದುವೇ ಮೂಲಾಧಾರ. ೨. ಭ್ರೂಣ ಗಳಲ್ಲಿ ಒಂದು ಕೇಂದ್ರಕ ನಾರುಕೋಶರಚಿತ ಹುರಿಯು ಮೂಡು ತ್ತದೆ. ಇದರ ಮೇಲೆ ಬೆನ್ನುಮೂಳೆಯ ಆದಿರೂಪ ಬೆಳೆಯುತ್ತದೆ

ಆದಿಮ

(ಪ್ರಾ) ಬೆಳವಣಿಗೆಯ ಅತ್ಯಂತ ಶೈಶವಾವಸ್ಥೆ ಯಲ್ಲಿ, ಕೇವಲ ಪ್ರಥಮಾವಸ್ಥೆಯಲ್ಲಿ ಕಾಣಿಸಿಕೊಳ್ಳುವ. ಆದ್ಯ

ಆದಿಮ ರೂಪ

(ತಂ) ಯಾವುದೇ ಹೊಸ ವಿನ್ಯಾಸದ ಯಂತ್ರಗಳಲ್ಲಿ ಮೊದಲನೆಯದು. ಕಾರ್ಯದಕ್ಷತೆ, ವಿಶ್ವಾಸಾರ್ಹತೆ, ಮಿತವ್ಯಯ ಹಾಗೂ ಸುರಕ್ಷಿತತೆ ಬಗ್ಗೆ ಮೊದಲ ಯಂತ್ರವನ್ನು ಪರೀಕ್ಷಿಸಿ, ಆನಂತರ ಅಗತ್ಯ ಬದಲಾವಣೆಗಳನ್ನು ಮಾಡಿ ದೊಡ್ಡ ಪ್ರಮಾಣದಲ್ಲಿ ಯಂತ್ರಗಳ ಉತ್ಪಾದನೆ ಪ್ರಾರಂಭಿಸಲಾಗುತ್ತದೆ. ಮಾತೃಕೆ. ಆದಿಮ ಪ್ರರೂಪ

ಆದಿಮ ವಕ್ರ

(ಗ) ಇತರ ವಕ್ರರೇಖೆಗಳನ್ನು ಉಂಟುಮಾಡುವ ಮೂಲ ವಕ್ರರೇಖೆ

ಆದಿಮತಾರೆ

(ಖ) ನಕ್ಷತ್ರವನ್ನು ರೂಪಿಸುವುದೆಂದು ಊಹಿಸಲಾದ ಅನಿಲ ರಾಶಿ

Search Dictionaries

Loading Results

Follow Us :   
  Download Bharatavani App
  Bharatavani Windows App