भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆಂಟಿಪ್ರೋಟಾನ್

(ಭೌ) ಋಣಾವೇಶದ ಹೊರತಾಗಿ ಪ್ರೋಟಾನಿನ ತತ್ಪ್ರತಿಯಾಗಿರುವ ಮತ್ತು ಅರ್ಧಾಯು ೦.೦೫ sec ಇರುವ ಅಲ್ಪಾಯುಷಿ ಕಣ; ಸಹಜ ಪ್ರೋಟಾನ್ ಜೊತೆ ಅಂತರ ಕ್ರಿಯೆ ಜರಗಿಸಿ ಮಿಸಾನುಗಳನ್ನು ಹೊಮ್ಮಿಸುತ್ತದೆ

ಆಂಟಿಬಯೊಟಿಕ್

(ವೈ) ನೋಡಿ : ಪ್ರತಿಜೈವಿಕ

ಆಂಟಿಮೊನಿ

(ರ) ಲೋಹೀಯ ಧಾತು; Sb; ಪಸಂ ೫೧; ಸಾಪರಾ ೧೨೧.೭೫; ಸಾಸಾಂ ೬.೬; ದ್ರಬಿಂ ೬೩೦0 ಸೆ; ಹಲವಾರು ವಿಕಿರಣಪಟು ಸಮಸ್ಥಾನಿಗಳಿವೆ; ಇವು ತೀವ್ರ ಭೇದಕ ಗ್ಯಾಮ ಕಿರಣಗಳನ್ನು ಬೀರುತ್ತವೆ

ಆಂಟಿಮ್ಯೂಆನ್

(ಭೌ) ಮ್ಯೂಆನಿನ ಪ್ರತಿಕಣ

ಆಂಟಿಲಾಗರಿತಮ್

(ಗ) ದತ್ತ ಸಂಖ್ಯೆ ೫ ಆಗಿರಲಿ; ಇದರ ಲಾಗರಿತಮ್ (ಅಂದರೆ log10 ೫)=೦.೬೯೯; ಈಗ ೦.೬೯೯ರ ಆಂಟಿಲಾಗರಿತಮ್ (ಅಂದರೆ antilog10 ೦.೬೯೯)=೫

ಆಂಟಿಲೆಪ್ಟಾನ್

(ಭೌ) ಲೆಪ್ಟಾನಿನ ಪ್ರತಿಕಣ: ಪಾಸಿಟ್ರಾನ್, ಧನ ಮ್ಯೂಆನ್, ಆಂಟಿನ್ಯೂಟ್ರಿನೊ ಮತ್ತು ಟೌ-ಪ್ಲಸ್ ಕಣ, ಇವೆಲ್ಲ ಆಂಟಿಲೆಪ್ಟಾನ್‌ಗಳು

ಆಂಟಿವಿನೀನ್

(ವೈ) ಹಾವಿನ ವಿಷಕ್ಕೆ ಪ್ರತಿಯಾಗಿ ದೇಹದಲ್ಲಿ ಹುಟ್ಟುವ ಪ್ರತಿ ವಿಷ. ವಿಷಹಾರಿ

ಆಂಟೆನ

(ಪ್ರಾ) ಕೀಟಗಳ ತಲೆಯ ಮೇಲೆ ಜೋಡಣೆಯಾಗಿರುವ ಸ್ಪರ್ಶಾಂಗ. ಸ್ಪರ್ಶತಂತು. (ಸ) ಕೆಲವು ಬಗೆಯ ಆರ್ಕಿಡ್ ಸಸ್ಯಗಳ ಗಂಡು ಹೂಗಳಲ್ಲಿ ಮುಂದಕ್ಕೆ ಚಾಚಿಕೊಂಡು, ಮುಟ್ಟಿದರೆ ಪರಾಗ ಸಿಡಿಸುವ ಎರಡು ತಂತುಗಳಲ್ಲೊಂದು. (ತಂ) ರೇಡಿಯೋ ತರಂಗ ಪ್ರಸರಿಸುವ ಅಥವಾ ಪರಿಗ್ರಹಿಸುವ ತಂತಿ / ಸರಳುಗಳ ವ್ಯವಸ್ಥೆ. ಗ್ರಾಹಕತಂತು.

ಆಟೊಕ್ಲೇವ್

(ತಂ) ರಾಸಾಯನಿಕ ಕ್ರಿಯೆಗಳನ್ನು ಉಚ್ಚ ಒತ್ತಡ ಮತ್ತು ತೀವ್ರ ಉಷ್ಣತೆಗಳಲ್ಲಿ ನಡೆಸಲು ನೆರವಾಗುವ ದಪ್ಪ ಭಿತ್ತಿಯ ಉಕ್ಕಿನ ಪಾತ್ರೆ ಅಥವಾ ಉಪಕರಣ. (ವೈ) ವೈದ್ಯಕೀಯ ಉಪಕರಣ ಗಳನ್ನು ಕ್ರಿಮಿಮುಕ್ತಗೊಳಿಸಲು ಬಳಸುವ ಸಾಧನ. ಇದೊಂದು ಕುದಿ ಪಾತ್ರೆ. ಪಾತ್ರೆಯಲ್ಲಿ ಸ್ವಲ್ಪ ನೀರಿರುತ್ತದೆ. ಕ್ರಿಮಿಮುಕ್ತಗೊಳಿಸ ಬೇಕಾದ ಉಪಕರಣಗಳನ್ನು ಸೂಕ್ತ ಆವರಣದೊಂದಿಗೆ ಪಾತ್ರೆಯಲ್ಲಿಟ್ಟು ಅವನ್ನು ಉಗಿಯ ನೆರವಿನಿಂದ ಉನ್ನತ ಒತ್ತಡದಲ್ಲಿ ಶುದ್ಧೀಕರಿಸಲಾಗುತ್ತದೆ

ಆಂಟೊಜೆನಿ

(ಜೀ) ವ್ಯಕ್ತಿಯ ಹುಟ್ಟು ಮತ್ತು ಬೆಳವಣಿಗೆ, ಜನನ ಮತ್ತು ವಿಕಾಸ. ನೋಡಿ: ಫೈಲೊಜೆನಿ

ಆಡರ್

(ಪ್ರಾ) ವೈಪರಿಡೀ ಕುಟುಂಬಕ್ಕೆ ಸೇರಿದ, ಸಾಮಾನ್ಯ ವಾಗಿ ಯೂರೋಪ್ ಖಂಡದಲ್ಲಿ ಕಂಡುಬರುವ ವಿಷವುಳ್ಳ ಹಾವು; ತಲೆಯ ಮೇಲೆ ಹಳದಿ-ಕಂದು ಬಣ್ಣದ ನಾಮವಿದೆ. ವಿಷಸರ್ಪ, ಮಂಡಲದ ಹಾವು, ಸಾಮಾನ್ಯ ವೈಪರ್

ಆಡಿಯೊಮೀಟರ್

(ಭೌ) ನೋಡಿ: ಶ್ರವಣ ಸಾಮರ್ಥ್ಯ ಮಾಪಕ

ಆಡು

(ಪ್ರಾ) ಬೋವಿಡೀ ಕುಟುಂಬಕ್ಕೆ ಸೇರಿದ ಸ್ತನಿ. ಕ್ಯಾಪ್ರಹಿರ್ಕಸ್ ವೈಜ್ಞಾನಿಕ ನಾಮ. ದನಕರುಗಳಲ್ಲಿ ಇರುವಂತೆ ಟೊಳ್ಳು ಕೊಂಬು, ಸೀಳುಗೊರಸು ಇವೆ. ಮೆಲುಕು ಹಾಕುತ್ತದೆ. ಕುರಿಯ ಹತ್ತಿರ ಸಂಬಂಧಿ. ಹೆಣ್ಣು ಆಡು, ಗಂಡು ಹೋತ. ಗದ್ದದ ಕೆಳಗೆ ಉದ್ದನೆಯ ದಾಡಿ. ನೈಋತ್ಯ ಏಷ್ಯ ತವರು. ಹಾಲು, ಮಾಂಸ, ಕೂದಲು, ತೊಗಲು ಹಾಗೂ ಗೊಬ್ಬರಗಳಿಗಾಗಿ ಸಾಕುತ್ತಾರೆ. ಆಡಿನ ಹಾಲು ಹಸುವಿನ ಹಾಲಿಗಿಂತ ಪುಷ್ಟಿಕರ. ಮೇಕೆ

ಆಂಡ್ರೊಜೆನೆಸಿಸ್

(ಜೀ) ೧) ಗಂಡು ಕೋಶದಿಂದ ಅಭಿವರ್ಧನೆ. ಪುಮುತ್ಪತ್ತಿ. ೨) ಫಲೋತ್ಪಾದನೆಯಲ್ಲಿ ಅಂಡಾಣು ಬೀಜ ಭಾಗವಹಿಸದೆ ಭ್ರೂಣವು ರೇತ್ರಾಣುವಿನ ಕ್ರೋಮೋ ಸೋಮುಗಳಿಂದಷ್ಟೇ ಬೆಳೆಯುವುದು

ಆಂಡ್ರೊಜೆನ್

(ಜೀ) ಗಂಡಿನಲ್ಲಿ ದ್ವಿತೀಯಕ ಲಿಂಗ ವೈಲಕ್ಷಣ್ಯಗಳನ್ನು ಉದ್ದೀಪಿಸುವ ಲೈಂಗಿಕ ಹಾರ್ಮೋನ್‌ಗಳ ಸಾರ್ವತ್ರಿಕ ನಾಮ. ಪುಮುತ್ಪತ್ತಿಕಾರಿ. ದೇಹದಲ್ಲಿ ಗಂಡು ಲಕ್ಷಣ ಗಳಿಗೆ ಕಾರಣವಾದ ಹಾರ್ಮೋನ್

ಆಣಿ

(ಪ್ರಾ) ಅಂಗಾಲಿನಲ್ಲಿ ಬೆಳೆಯುವ ಕೊಂಬಿನ ಪದಾರ್ಥದಂಥ ಗಡಸುಗಂಟು. ಕಲ್ಲೊತ್ತು. ಒತ್ತುಗಂಟು. ಕಿಡು

ಆಣ್ವಿಕ ದೂಲ ಅಧಿಪದರಣ

(ತಂ) ತೆಳುಫಿಲ್ಮುಗಳ ಅಧಿಪದರಣ. ಪದರದ ಮೇಲೆ ಪದರವನ್ನು ಕ್ರಮವಾಗಿ ತಯಾರಿಸುವ ಅತ್ಯಾಧುನಿಕ ಹಾಗೂ ಕ್ಲಿಷ್ಟ ವಿಧಾನ. ಇಲ್ಲಿ ಒಂದಕ್ಕಿಂತ ಹೆಚ್ಚು ಆಣ್ವಿಕ ಅಥವಾ ಪರಮಾಣವಿಕ ದೂಲಗಳ ನಡುವಿನ ಅಂತರಕ್ರಿಯೆಯು ಅತಿಗರಿಷ್ಠ ನಿರ್ವಾತದಲ್ಲಿ ಬಿಸಿಯಾದ ಸ್ಫಟಿಕೀಯ ತಲಾಧಾರದ ಮೇಲೆ ಘಟಿಸುವಂತೆ ಮಾಡಿ ತೆಳುಫಿಲ್ಮು ಗಳನ್ನು ತಯಾರಿಸಲಾಗುತ್ತದೆ. ಈ ವಿಧಾನದಲ್ಲಿ ಅತ್ಯಂತ ನಿಕಟವಾಗಿ ಅಧಿಪದರಣ ಕ್ರಮವಾಗಿ ಬೆಳೆಯುವ ತೆಳುಫಿಲ್ಮುಗಳ ತಯಾರಿಕೆಯನ್ನು ನಿಯಂತ್ರಿಸಬಹುದು. ಉದಾ: ಗ್ಯಾಲಿಯಂ ನೈಟ್ರೈಡ್ ಫಿಲ್ಮುಗಳು

ಆತಂಕ

(ಮ) ತೀವ್ರ ಭಯಮಿಶ್ರಿತ ಅಹಿತಕರ ಮನಃಸ್ಥಿತಿ, ಕಾರಣ ಸಾಮಾನ್ಯವಾಗಿ ಅಸ್ಪಷ್ಟ

ಆಂತರಿಕ

(ಸಾ) ಔಷಧಗಳ ವಿಷಯದಲ್ಲಿ , ದೇಹದ ಒಳಕ್ಕೆ ಅಥವಾ ಒಳಭಾಗಕ್ಕೆ ಕೊಡುವ, ಹಚ್ಚುವ. ಬಾಹ್ಯ ಬಲಗಳ ಪರಿಣಾಮವಾಗಿಯಲ್ಲದೆ ಒಳಗಿನಿಂದಲೇ ಉಂಟಾದ. ಅಂತಃಸ್ಥಿತ

ಆಂತರಿಕ ವೈಲಕ್ಷಣ್ಯ

(ಭೌ) ವಿದ್ಯುಜ್ಜನಕ ಯಂತ್ರದ ಮೇಲಿನ ಹೊರೆಗೂ (ಲೋಡ್) ಆಂತರಿಕ ವಿದ್ಯುತ್ ಚಾಲಕ ಬಲಕ್ಕೂ (emf) ನಡುವಿನ ಸಂಬಂಧವನ್ನು ತೋರುವ ವಕ್ರರೇಖೆ (ಆಲೇಖ)

Search Dictionaries

Loading Results

Follow Us :   
  Download Bharatavani App
  Bharatavani Windows App