भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆಕ್ಸಿಡಂಟ್

(ರ) ಉತ್ಕರ್ಷಣ ಕ್ರಿಯೆಯಲ್ಲಿ ಆಕ್ಸಿಜನ್‌ಪೂರಕ ವಸ್ತು. ಸಾಮಾನ್ಯವಾಗಿ ದಹನ ಪ್ರಕ್ರಿಯೆಯಲ್ಲಿ ವಿಶೇಷವಾಗಿ ರಾಕೆಟ್ಟಿನಲ್ಲಿ, ಆಕ್ಸಿಜನ್ ಒದಗಿಸುವ ವಸ್ತು ಕುರಿತಂತೆ ಈ ಪದ ಬಳಕೆಯಲ್ಲಿದೆ. ರಾಕೆಟ್‌ಗಳಲ್ಲಿ ಬಳಸುವ ಆಕ್ಸಿಡಂಟ್ ಸಾಮಾನ್ಯವಾಗಿ ದ್ರವ ಆಕ್ಸಿಜನ್, ಹೈಡ್ರೊಜನ್ ಪರಾಕ್ಸೈಡ್ ಅಥವಾ ನೈಟ್ರಿಕ್ ಆಮ್ಲಗಳ ಮಿಶ್ರಣ. ಇದಕ್ಕೆ ಆಕ್ಸಿಡೀಕಾರಕ ಎಂಬ ಹೆಸರೂ ಉಂಟು

ಆಕ್ಸಿಡೇಸ್

(ಜೀ) ಸಸ್ಯಗಳ ಹಾಗೂ ಪ್ರಾಣಿಗಳ ಜೀವಕೋಶ ಗಳಲ್ಲಿ ಕಾಣಬರುವ, ಉತ್ಕರ್ಷಣೆಗೆ ಉತ್ತೇಜನ ನೀಡುವ ಕಿಣ್ವಗಳ ಪೈಕಿ ಒಂದು

ಆಕ್ಸಿನ್

(ಸ) ಸಸ್ಯ ಬೆಳವಣಿಗೆಯನ್ನು ಪ್ರೇರಿಸಬಲ್ಲ ಆರ್ಗ್ಯಾನಿಕ್ ಪದಾರ್ಥಗಳು. ಇವುಗಳಲ್ಲಿ ಕೆಲವು ಸಸ್ಯಗಳಲ್ಲೇ ನೈಸರ್ಗಿಕವಾಗಿ ಉತ್ಪಾದಿತವಾಗುತ್ತವೆ. ಇತರ ಕೆಲವನ್ನು ಮಾನವ ರಾಸಾಯನಿಕ ವಾಗಿ ತಯಾರಿಸುತ್ತಾನೆ. ಸಸ್ಯ ಹಾರ್ಮೋನ್

ಆಕ್ಸಿಪಿಟಾಲಿಯ

(ವೈ) ಕಶೇರುಕಗಳ ತಲೆಬುರುಡೆ ಯಲ್ಲಿ ಮಿದುಳ ಕವಚದ ಹಿಂಭಾಗವನ್ನು ರೂಪಿಸುವ ಎಲುಬುಗಳು

ಆಕ್ಸೈಡ್

(ರ) ಉನ್ನತ ಉಷ್ಣತೆಗಳಲ್ಲಿ ಆಕ್ಸಿಜನ್ ಮತ್ತೊಂದು ಧಾತುವಿನೊಂದಿಗೆ ಸಂಯೋಗಿಸಿದಾಗ ರೂಪುಗೊಳ್ಳುವ ದ್ವಿಧಾತು ಸಂಯುಕ್ತ. ಸಂಯೋಗವಾಗುವ ಧಾತು ಲೋಹವಾಗಿದ್ದರೆ ಲಭಿಸುವ ಆಕ್ಸೈಡ್ ಪ್ರತ್ಯಾಮ್ಲೀಯ (ಉದಾ: Na2O) ಅದು ಅಲೋಹ ಆಗಿದ್ದರೆ ಲಭಿಸುವ ಆಕ್ಸೈಡ್ ಆಮ್ಲೀಯ (ಉದಾ : NO2)

ಆಕ್ಸೋ-ಆಮ್ಲ

(ರ) ಆಮ್ಲೀಯ ಹೈಡ್ರೊಜನ್ ಪರಮಾಣು ಗಳು ಆಕ್ಸಿಜನ್ ಪರಮಣುಗಳೊಂದಿಗೆ ಬಂಧಿತವಾಗಿರುವ ಆಮ್ಲ. ಸಲ್ಫ್ಯೂರಿಕ್ ಆಮ್ಲ (H2SO4) ಇದಕ್ಕೆ ಒಂದು ಉದಾಹರಣೆ. ಹೋಲಿಸಿ : ಹೈಡ್ರಾಸಿಡ್

ಆಖಾತ

(ಭೂವಿ) ನೆಲದೊಳಕ್ಕೆ ನುಗ್ಗಿರುವ ಕಡಲಿನ ವಿಶಾಲ ಚಾಚು ಅಥವಾ ನಾಲಗೆ. ಉದಾ: ಬಂಗಾಳ ಆಖಾತ. ಸಾಮಾನ್ಯ ವಾಗಿ ಕೊಲ್ಲಿ ಅಥವಾ ಖಾರಿಗಿಂತ ಚಿಕ್ಕದು

ಆಗಂತುಕ ಮೊಗ್ಗು

(ಸ) ಸಹಜ ಅಥವಾ ಪ್ರಧಾನ ಉಗಮ ಸ್ಥಾನವಾದ ತುದಿಭಾಗ ಅಥವಾ ಕಕ್ಷಗಳಿಂದಲ್ಲದೆ ಇತರ ಸ್ಥಾನಗಳಿಂದ ಕುಡಿಯೊಡಿಯುವಂಥವು. ಇವು ಕಕ್ಷೇತರ ಸ್ಥಾನ ಗಳಿಂದ (ಸ್ತಂಭ, ಪತ್ರ, ಮೊಗ್ಗು) ಬೇರುಗಳಿಂದ (ಮೂಲಾಂಕುರ ಮೊಗ್ಗು) ಎಲೆಗಳಿಂದ (ಎಲೆ ಮೊಗ್ಗು) ಕುಡಿಯೊಡೆಯುವುದು ಉಂಟು. ಅಸ್ಥಾನಿಕ ಮೊಗ್ಗು

ಆಗಿದ್ದರೆ ಮತ್ತು ಆಗಿದ್ದರೆ ಮಾತ್ರ

(iff) (ಗ) ಒಂದು ಪ್ರಮೇಯ ಹಾಗೂ ಅದರ ವಿಲೋಮ ಪ್ರಮೇಯ ಇವೆರಡೂ ನಿಜವಾಗಿದ್ದಲ್ಲಿ ‘ಆಗಿದ್ದರೆ ಮತ್ತು ಆಗಿದ್ದರೆ ಮಾತ್ರ’ ಎಂಬ ದ್ವಿಮುಖ ಕರಾರನ್ನು ಬಳಸಲಾಗುತ್ತದೆ. ಉದಾ: ಒಂದು ತ್ರಿಕೋನದಲ್ಲಿ ಎರಡು ಕೋನಗಳು ಸಮನಾಗಿದ್ದರೆ ಮತ್ತು ಸಮನಾಗಿದ್ದರೆ ಮಾತ್ರ ಸಂಬಂಧಿತ (ಅನುರೂಪ, ಸಂವಾದೀ) ಎರಡು ಭುಜಗಳು ಸಮನಾಗಿರುತ್ತವೆ

ಆಂಗ್ಯುಲೇಟ್

(ಸ) ಕೋನಗಳಿರುವ ಅಥವಾ ಚೂಪು ಮೂಲೆಗಳಿರುವ ಎಲೆಗಳನ್ನು ಕುರಿತ ಪದ

ಆಘಾತ

(ವೈ) ೧. ಹಠಾತ್ತನೆ ಸಂಭವಿಸುವ ದೈಹಿಕ ಅಥವಾ ಮಾನಸಿಕ ಕ್ಷೋಭೆ. ೨. ದೇಹಕ್ಕೆ ತೀವ್ರ ಸ್ವರೂಪದ ಪೆಟ್ಟಾದಾಗ ಅಥವಾ ಮನಸ್ಸಿಗೆ ತೀವ್ರ ಸ್ವರೂಪದ ಭಾವೋದ್ರೇಕವಾದಾಗ, ದೇಹ ಮತ್ತು ಮನಸ್ಸುಗಳ ಕಾರ್ಯ ಮಾಂದ್ಯವಾಗುವಿಕೆ. ೩. ಅಸಹಜ ಸ್ವರೂಪದ ಹೃದಯ ಮಿಡಿತ. ಎದೆಯ ಮೇಲೆ ಕೈ ಇಟ್ಟರೆ ಗುಂಡಿಗೆ ಹೊಡೆದುಕೊಳ್ಳುವುದು ತಿಳಿಯುತ್ತದೆ

ಆಘಾತ ಚಿಕಿತ್ಸೆ

(ವೈ) ಇದೊಂದು ರೀತಿಯ ಮನೋವೈದ್ಯಕೀಯ ಚಿಕಿತ್ಸೆ. ಕೆಲವು ಮಾದರಿಯ ಇಚ್ಚಿತ್ತ ವಿಕಲತೆ ಹಾಗೂ ಮನೋರೋಗಗಳ ಚಿಕಿತ್ಸೆಯಲ್ಲಿ ಬಳಕೆಯಿದೆ. ಕೆಲವು ರಾಸಾಯನಿಕ ವಸ್ತು ಅಥವಾ ವಿದ್ಯುತ್ ಆಘಾತ ನೀಡಿ ಸೆಳವು ಬರುವ ಹಾಗೆ ಮಾಡಿದಾಗ ವ್ಯಕ್ತಿ ಸಾಮಾನ್ಯವಾಗಿ ಪ್ರe ಕಳೆದುಕೊಳ್ಳುತ್ತಾನೆ. ಆಗ ರೋಗ ಲಕ್ಷಣ ಕಡಿಮೆಯಾಗುತ್ತದೆ. ಈ ಚಿಕಿತ್ಸಾ ವಿಧಾನ ಎಷ್ಟು ಪರಿಣಾಮಕಾರಿ ಎಂಬುದು ಇನ್ನೂ ಪೂರ್ಣವಾಗಿ ದೃಢಪಟ್ಟಿಲ್ಲ

ಆಘಾತತರಂಗ

(ಭೌ) ಉನ್ನತಪಾರದ ಪೂರ್ಣ ಅಭಿವರ್ಧಿತ ಸಂಪೀಡನ ತರಂಗ; ಇದರ ಉದ್ದಕ್ಕೂ ಸಾಂದ್ರತೆ, ಒತ್ತಡ ಮತ್ತು ಕಣ ವೇಗಗಳು ತೀಕ್ಷ್ಣವಾಗಿ ಬದಲಾಗುತ್ತಿರುತ್ತವೆ. ಧಕ್ಕೆ ತರಂಗ

ಆಜನ್ಮ

(ವೈ) ಜನ್ಮತಃ. ಹುಟ್ಟಿನಿಂದ ಬಂದ. ಸಹಜಾತ

ಆಜನ್ಮ ವಕ್ರಪಾದ

(ವೈ) ಹುಟ್ಟಿನಿಂದಲೇ ಸೊಟ್ಟಗಾಗಿ ಇರುವ ಕಾಲು

ಆಜನ್ಮ ವಿಕಲತೆ

(ವೈ) ಹುಟ್ಟಿದಾಗ ಕಂಡುಬಂದ ನ್ಯೂನತೆ/ವಿರೂಪತೆ. ಇದು ಆನುವಂಶಿಕವಾಗಿ ಬಂದುದಾಗಿರಬೇಕಾಗಿಲ್ಲ. ಗರ್ಭದಲ್ಲಿಯ ಪರಿಸರ ಇದಕ್ಕೆ ಕಾರಣ ವಾಗಿರಬಹುದು. ಉದಾ: ತಾಲಿಡೊಮೈಡ್ ಶಿಶುಗಳು (ನೋಡಿ)

ಆಂಟಿಕ್ಯಾಥೋಡ್

(ಭೌ) ಎಕ್ಸ್-ಕಿರಣ ನಾಳದಲ್ಲಿ ಕ್ಯಾಥೋಡ್‌ನಿಂದ ಹರಿಯುವ ಎಲೆಕ್ಟ್ರಾನುಗಳ ಲೋಹಗುರಿ. ಇದರ ಮೇಲೆ ಕ್ಯಾಥೋಡ್ ಕಿರಣಗಳನ್ನು ನಾಭೀಕರಿಸಿದಾಗ ಎಕ್ಸ್-ಕಿರಣಗಳು ಹೊಮ್ಮುತ್ತವೆ

ಆಂಟಿಟಾಕ್ಸಿನ್

(ವೈ) ಸೂಕ್ಷ್ಮಜೀವಿಗಳು ಸಾಮಾನ್ಯವಾಗಿ ಉತ್ಪಾದಿಸುವ ಜೈವ ವಿಷಗಳನ್ನು ತಟಸ್ಥೀಕರಿಸಬಲ್ಲ ಪ್ರತಿಕಾಯ. ಉದಾ: ಟಿಟನಸ್ ವಿಷಹಾರಿಗಳು, ಡಿಫ್ತೀರಿಯ ವಿಷಹಾರಿಗಳು. ಪ್ರತಿವಿಷ. ವಿಷನಿವಾರಕ

ಆಂಟಿನ್ಯೂಟ್ರಾನ್

(ಭೌ) ನ್ಯೂಟ್ರಾನ್‌ನ ಗಿರಕಿ (ಸ್ಪಿನ್) ಹಾಗೂ ಕಾಂತೀಯ ಮಹತ್ತ್ವಗಳಿಗೆ ವಿರುದ್ಧವಾದುವನ್ನು ಪ್ರದರ್ಶಿಸುವ ಪ್ರತಿಕಣ

ಆಂಟಿನ್ಯೂಟ್ರಿನೊ

(ಭೌ) ನ್ಯೂಟ್ರಿನೋದ ಪ್ರತಿಕಣ

Search Dictionaries

Loading Results

Follow Us :   
  Download Bharatavani App
  Bharatavani Windows App