भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆರ್ತಾಲಜಿ

(ಸಾ) ಪದಗಳ ವಿವಿಧ ಮಿತಿಗಳನ್ನೂ ಅವುಗಳ ಸರಿಯಾದ ಬಳಕೆಯ ವಿಧಾನವನ್ನೂ ಸ್ಪಷ್ಟಗೊಳಿಸುವ ಉದ್ದೇಶ ದಿಂದ ಭಾಷಾ ಬಳಕೆಯನ್ನು ಕ್ರಮಬದ್ಧವಾಗಿ ಪರಿಶೀಲಿಸುವ ಶಾಸ್ತ್ರ

ಆರ್ತೊಕ್ಲಾಸ್ಟಿಕ್

(ಭೂವಿ) ಪರಸ್ಪರ ಲಂಬವಾಗಿರುವ ಸೀಳುಗಳಾಗಿ ಎರಡು ದಿಶೆಗಳಲ್ಲಿ ಸುಲಭವಾಗಿ ಒಡೆಯುವಂಥ ಲಕ್ಷಣವುಳ್ಳ (ಸ್ಫಟಿಕ)

ಆರ್ತೊಕ್ಲೇಸ್

(ಭೂವಿ) ಏಕನತ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುವ ಪೊಟ್ಯಾಸಿಯಮ್ ಹಾಗೂ ಅಲ್ಯೂಮಿನಿಯಮ್‌ಗಳ ಸಿಲಿಕೇಟ್. ಗ್ರಾನೈಟ್ ಹಾಗೂ ಸಯನೈಟ್ ಶಿಲೆಗಳಲ್ಲಿ ಸಾರಭೂತ ಘಟಕವಾಗಿಯೂ ಇತರ ಅನೇಕ ಶಿಲಾ ಮಾದರಿಗಳಲ್ಲಿ ಉಪಘಟಕ ವಾಗಿಯೂ ಕಾಣಬರುತ್ತದೆ. ಪ್ರತೀಕ KAlSi3O8

ಆರ್ತೊಗ್ನಾತಸ್

(ಪ್ರಾ) ೧. ನಿಗುರು ದವಡೆ ಗಳುಳ್ಳ. ೨. ತಲೆಯ ನೀಳಾಕ್ಷ ಶರೀರದ ಅಕ್ಷಕ್ಕೆ ಲಂಬವಾಗಿ ಇರುವುದು ಮತ್ತು ಬಾಯಿ ಅಧೋಮುಖವಾಗಿರುವುದು. ಮುಖದ ತಳಭಾಗಗಳು ಮುಂಚಾಚಿಕೊಂಡಿಲ್ಲದಿರುವುದು

ಆರ್ತೊನೈಸ್

(ಭೂವಿ) ಅಗ್ನಿಶಿಲೆಯ ಮೂಲದಿಂದ ಬಂದ ಮತ್ತು ಕ್ವಾರ್ಟ್ಸ್, ಫೆಲ್ಡ್‌ಸ್ಪಾರ್ ಮತ್ತು ಅಭ್ರಕಗಳಿಂದ ಕೂಡಿದ ಒಂದು ಬಗೆಯ ಪದರ ಪದರಾದ ರೂಪಾಂತರಿತ ಶಿಲೆ (ನೈಸ್ ಶಿಲೆ)

ಆರ್ತೊಪಿಡಿಕ್ಸ್

(ವೈ) ನಮ್ಮ ದೇಹದ ಅವಯವ, ಬೆನ್ನುಮೂಳೆ ಹಾಗೂ ಸಂಬಂಧಿತ ರಚನೆಗಳ ರೂಪ ಹಾಗೂ ಕಾರ್ಯಗಳನ್ನು ಭೌತಿಕ, ವೈದ್ಯಕೀಯ ಹಾಗೂ ಶಸ್ತ್ರವೈದ್ಯ ವಿಧಾನಗಳ ಮೂಲಕ ವರ್ಧಿಸಿ ಕಾಪಾಡಿ ಹಾಗೂ ಪುನಶ್ಚೇತನ ಗೊಳಿಸುವ ವಿಜ್ಞಾನ ವಿಭಾಗ. ಮೂಳೆ ಮತ್ತು ಕೀಲುಗಳ ವೈದ್ಯ ವಿಭಾಗ. ಅಸ್ಥಿಸುರೂಪಿಕಾಶಾಸ್ತ್ರ

ಆರ್ತೊಸಿಂಪತೆಟಿಕ್ ನರ್ವಸ್ ಸಿಸ್ಟಮ್

(ಪ್ರಾ) ಉಪಾನುವೇದಕ (ಪ್ಯಾರಾ ಸಿಂಪತೆಟಿಕ್) ನರಮಂಡಲಕ್ಕೆ ವಿರುದ್ಧವಾಗಿ ಅನುವೇದಕ ನರಮಂಡಲವನ್ನು ಸೂಚಿಸಲು ಕೆಲವು ವೇಳೆ ಬಳಸುವ ಪದಪುಂಜ

ಆರ್ತೊಸ್ಕೋಪ್

(ವೈ) ೧. ನೀರಿನ ಸ್ತರವೊಂದನ್ನು ಒಳಗೊಂಡಿದ್ದು ಅದರ ಮೂಲಕ ಕಣ್ಣನ್ನು ಪರೀಕ್ಷಿಸಲು ಬಳಸುವ ಸಾಧನ. ನೀರಿನ ಸ್ತರ ಕಣ್ಣು ಗುಡ್ಡೆಯ ವಕ್ರತೆಯನ್ನು, ಅದರಿಂದಾಗಿ ವಕ್ರೀಕರಣವನ್ನು ತಟಸ್ಥೀಕರಿಸುತ್ತದೆ. ೨. ಕಪಾಲಗಳ ಪ್ರಕ್ಷೇಪಣ ಗಳನ್ನು ರೇಖಿಸಲು ಬಳಸುವ ಸಾಧನ. (ತಂ) ಸೂಕ್ಷ್ಮದರ್ಶಕದ ಅಕ್ಷಕ್ಕೆ ಸಮಾಂತರವಾಗಿರುವ ಸ್ಫಟಿಕದ ಮೂಲಕ ಬೆಳಕನ್ನು ಸಾಗಿಸುವ ಧ್ರುವೀಕಾರಕ ಸೂಕ್ಷ್ಮದರ್ಶಕ

ಆರ್ಥಿಕ ಬೆಳೆ

(ಸ) ಕೇವಲ ಅಥವಾ ಮುಖ್ಯವಾಗಿ ಮಾರಾಟದ, ಲಾಭ ಗಳಿಸುವ ಅಥವಾ ಯಶಸ್ವಿಯಾಗುವ ದೃಷ್ಟಿಯಿಂದ ಬೃಹತ್ ಪ್ರಮಾಣದಲ್ಲಿ ಬೆಳೆಸಿದ ಬೆಳೆ. ಉದಾ: ಕಬ್ಬು, ನೆಲಗಡಲೆ, ಹತ್ತಿ ಇತ್ಯಾದಿ. ವಾಣಿಜ್ಯ ಬೆಳೆ

ಆರ್ಥೊಟ್ರೋಪಿಸಮ್

(ಸ) ಸಸ್ಯಗಳ ಕಾಂಡ ಅಥವಾ ಬೇರುಗಳಲ್ಲಿ ಕಂಡುಬರುವಂತೆ, ನೇರವಾಗಿ ಮೇಲಕ್ಕೆ ಅಥವಾ ಕೆಳಕ್ಕೆ ಬೆಳೆಯುವ ಪ್ರವೃತ್ತಿ

ಆರ್ಥೊಫಾಸ್ಫಾರಿಕ್ ಆಮ್ಲ

(ರ) H3PO4. ರಂಜಕದ (ಫಾಸ್ಫರಸ್) ತ್ರಿಪ್ರತ್ಯಾಮ್ಲೀಯ ಆಮ್ಲ. ಬಣ್ಣವಿಲ್ಲದ ಜಲಾಕರ್ಷಕ ಪದಾರ್ಥ. ದ್ರಬಿಂ ೪೨.೫0 ಸೆ. ರಂಜಕಯುಕ್ತ ಗೊಬ್ಬರವಾಗಿ, ಪಾನೀಯಗಳಲ್ಲಿ ರುಚಿಕಾರಕವಾಗಿ ಬಳಕೆ

ಆರ್ದ್ರ

(ಭೌ) ವಾಯುವಿನಲ್ಲಿ ನೀರಿನ ಅಂಶ ಪರ್ಯಾಪ್ತ ಸ್ಥಿತಿ ತಲಪಿದಾಗಿನ ವಾಯುಗುಣ. ಸಿಕ್ತ. ತೇವಮಯ. ಒದ್ದೆ

ಆರ್ದ್ರ ಹವೆ

(ಭೂವಿ) ಮಳೆಯ ಹವೆ

ಆರ್ದ್ರತಾಕಾರಕ

(ರ) ಯಾವುದೇ ದ್ರವದ ಮೇಲ್ಮೈಕರ್ಷಣವನ್ನು ಇಳಿಸುವ ಪದಾರ್ಥ. ಮೇಲ್ಮೈಯು ತೇವಕಾರಕ ವಸ್ತುವನ್ನು ವಿಕರ್ಷಿಸದಂತೆ ಮಾಡುವ ಪದಾರ್ಥ

ಆರ್ದ್ರತಾದರ್ಶಕ

(ಭೌ) ವಾಯುವಿನ ತೇವಾಂಶವನ್ನು ಅಳೆಯದೆ ಅದರಲ್ಲಿ ಆಗುವ ವ್ಯತ್ಯಯ ತೋರಿಸುವ ಉಪಕರಣ

ಆರ್ದ್ರತಾಮಾಪಕ

(ಭೌ) ವಾಯುಮಂಡಲದ ಅಥವಾ ಯಾವುದೇ ಅನಿಲದ ಸಾಪೇಕ್ಷ ಆರ್ದ್ರತೆ ಅಳೆಯುವ ಉಪಕರಣ

ಆರ್ದ್ರತಾವಿಜ್ಞಾನ

(ಪವಿ) ವಾತಾವರಣದಲ್ಲಿ ಇರುವ ತೇವಾಂಶವನ್ನು ಅಧ್ಯಯನ ಮಾಡುವ ಶಾಸ್ತ್ರ

ಆರ್ದ್ರತೆ

(ಭೌ) ವಾಯುಮಂಡಲದಲ್ಲಿ ಇರುವ ತೇವಾಂಶ. ಸಾಪೇಕ್ಷ, ನಿರಪೇಕ್ಷ, ವಿಶಿಷ್ಟ ಇತ್ಯಾದಿ ಗುಣವಾಚಕ ಗಳೊಂದಿಗೆ ವ್ಯಕ್ತಗೊಳಿಸಲಾಗುತ್ತದೆ

ಆರ್ದ್ರೀಕರಣ

(ರ) ವಾಯುವಿನಲ್ಲಿಯ ತೇವವನ್ನು ಆಕರ್ಷಿಸಿ ಹೀರಿಕೊಳ್ಳುವ ಮೂಲಕ ಘನಪದಾರ್ಥ ಕ್ರಮೇಣ ಕರಗಿ ದ್ರವವಾಗುವ ಪ್ರಕ್ರಿಯೆ. ಉದಾ: NaOH, KOH, MgCl2. ಮಳೆಗಾಲದಲ್ಲಿ ಅಡುಗೆ ಉಪ್ಪು (NaCl) ಕರಗಿ ನೀರಾಗುವುದಕ್ಕೆ ಅದರಲ್ಲಿರುವ ಜಲಾಕರ್ಷಣ ಗುಣವೇ ಕಾರಣ

ಆರ್ನಿಕ

(ಸ) ಬೆಟ್ಟದ ಹೊಗೆಸೊಪ್ಪು ವರ್ಗಕ್ಕೆ ಸೇರಿದ ಔಷಧೀಯ ಸಸ್ಯ. ಕಾಡು ತಂಬಾಕು

Search Dictionaries

Loading Results

Follow Us :   
  Download Bharatavani App
  Bharatavani Windows App