भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆರ್ಕ್ ತ್ರಿಕೋಣಮಿತೀಯ ಫಲನಗಳು

(ಗ) ನೋಡಿ : ಪ್ರತಿಲೋಮ ತ್ರಿಕೋಣಮಿತೀಯ ಫಲನಗಳು

ಆರ್ಕ್ ಹೈಪರ್ಬಾಲಿಕ್ ಫಲನಗಳು

(ಗ) ನೋಡಿ : ಪ್ರತಿಲೋಮ ಹೈಪರ್ಬಾಲಿಕ್ ಫಲನಗಳು

ಆರ್ಗನೈಜರ್

(ಪ್ರಾ) ಭ್ರೂಣದಲ್ಲಿ ಇತರ ಭಾಗಗಳು ನಿರ್ದಿಷ್ಟ ರೀತಿಯಲ್ಲಿ ಅಭಿವರ್ಧಿಸಲು ಅವಶ್ಯವಾದ ವಸ್ತು ಗಳನ್ನು ತಲಪಿಸಿ ಅವುಗಳ ಬೆಳವಣಿಗೆಯನ್ನು ನಿಯಂತ್ರಿಸುವ ಯಾವುದೇ ಭಾಗ. ಉದಾ: ಪ್ರೈಮರಿ ಆರ್ಗನೈಜರ್ (ಬ್ಲಾಸ್ಟ್ರೊ ಪೋರ್‌ಲಿಪ್ ಅಥವಾ ಆರ್ಕೆಂಟರಾನ್ ರೂಫ್) ಗ್ಯಾಸ್ಟ್ರುಲಕ್ಕೆ ಪೂರ್ಣ ಜೀವಿಯಾಗಿ ಅಭಿವರ್ಧಿಸಲು ಕಾರಣವಾಗುತ್ತದೆ

ಆರ್ಗನೊಟ್ರೊಫಿಕ್

(ಜೀ) ಜೀವಿಯ ಅಂಗಗಳಿಗೆ ಅವಶ್ಯವಾದ ಆಹಾರವನ್ನು ರೂಪಿಸುವ ಹಾಗೂ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದ

ಆರ್ಗನ್

(ತಂ) ತಿದಿಯೊತ್ತಿ ಕೀಲಿಕೈಗಳ ಮೂಲಕ ಪಿಳ್ಳಂಗೋವಿಗಳಲ್ಲಿ ಗಾಳಿ ಹರಿಸಿ ಸಂಗೀತ ನುಡಿಸುವ ಒಂದು ವಾದ್ಯ. (ವೈ) ದೇಹದ ಯಾವುದೇ ಭಾಗ. ಅಂಗ, ಅವಯವ

ಆರ್ಗಾನ್

(ರ) ವಿರಳಾನಿಲಗಳ ಪೈಕಿ ಒಂದು; ಗೊತ್ತಿರುವ ಯಾವುದೇ ಸಂಯುಕ್ತವನ್ನು ರೂಪಿಸದ ಧಾತು; ಜಡಾನಿಲ; ar. ಪಸಂ ೧೮; ದ್ರಬಿಂ-೧೮೨.೨0 ಸೆ; ಕುಬಿಂ -೧೮೫.೭0 ಸೆ; ಸಾಂದ್ರತೆ ಶಿಷ್ಟ ಉಷ್ಣತೆ ಒತ್ತಡಗಳಲ್ಲಿ ೧.೭೮೩೭ g/dm3. ಗಾತ್ರ ರೀತ್ಯ ಆರ್ಗಾನ್ ವಾಯುಮಂಡಲದ ಸುಮಾರು ಶೇ. ೧ರಷ್ಟಿದೆ. ದ್ರವ ವಾಯುವಿನ ಆಂಶೀಕರಣದ ಮೂಲಕ ಪಡೆಯಲಾಗುತ್ತದೆ. ಅನಿಲ ತುಂಬಿದ ವಿದ್ಯುದ್ದೀಪಗಳಲ್ಲೂ ರೇಡಿಯೇಷನ್ ಕೌಂಟರ್‌ಗಳಲ್ಲೂ ಫ್ಲೂರಸೆಂಟ್ (ಪ್ರತಿದೀಪ್ತ) ನಳಿಗೆಗಳಲ್ಲೂ ಬಳಕೆ

ಆರ್ಗ್ಯಾನಿಕ್

(ರ) ಕಾರ್ಬನ್ ಉಂಗುರ ಅಥವಾ ಸರಪಳಿಗಳ ಆಧಾರದ ಮೇಲೆ ರೂಪುಗೊಂಡ ಹಾಗೂ ಹೈಡ್ರೊಜನ್ನನ್ನು ಒಳಗೊಂಡ ರಾಸಾಯನಿಕ ಸಂಯುಕ್ತಗಳಿಗೆ ಸಂಬಂಧಿಸಿದ. ಇವುಗಳಲ್ಲಿ ಆಕ್ಸಿಜನ್, ನೈಟ್ರೊಜನ್ ಮತ್ತಿತರ ಧಾತುಗಳು ಇರಬಹುದು, ಇಲ್ಲದಿರಬಹುದು. ಕಾರ್ಬನ್ ಯುಕ್ತ. ಕಾರ್ಬನಿಕ, ಸಾವಯವ. ನೋಡಿ: ಇನಾರ್ಗ್ಯಾನಿಕ್

ಆರ್ಗ್ಯಾನಿಕ್ ರಸಾಯನ ವಿಜ್ಞಾನ

(ರ) ಕಾರ್ಬನ್ ಉಂಗುರ ಅಥವಾ ಕಾರ್ಬನ್ ಸರಪಳಿಗಳ ಆಧಾರದ ಮೇಲೆ ರೂಪುಗೊಂಡ ಸಂಯುಕ್ತಗಳ ಅಥವಾ ಅವುಗಳ ಮಿಶ್ರಣಗಳ ರಾಸಾಯನಿಕ ರಚನೆ, ಕ್ರಿಯೆ ಹಾಗೂ ಗುಣಗಳನ್ನು ಅಧ್ಯಯನ ಮಾಡುವ ವಿಜ್ಞಾನ ವಿಭಾಗ. ಕಾರ್ಬನಿಕ ರಸಾಯನ ವಿಜ್ಞಾನ. ಕಾರ್ಬನಿಕ ಸಂಯುಕ್ತಗಳು ಇತರ ಧಾತುಗಳ ಸಂಯುಕ್ತ ಗಳಿಗಿಂತ ತುಂಬ ಹೆಚ್ಚಿನ ಸಂಖ್ಯೆಯಲ್ಲಿದ್ದು ಜೈವಿಕ ಪದಾರ್ಥಗಳಿಗೆ ಆಧಾರವಾದ್ದರಿಂದ ಈ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ

ಆರ್ಗ್ಯಾನಿಕ್ ಸಂಯುಕ್ತಗಳು

(ರ) ಕಾರ್ಬನ್ ಹೈಡ್ರೊಜನ್ನಿನೊಂದಿಗೆ ಮತ್ತು ಬಹುವೇಳೆ ಆಕ್ಸಿಜನ್, ನೈಟ್ರೊಜನ್ ಮತ್ತಿತರ ಧಾತುಗಳೊಂದಿಗೂ ಸಂಯೋಜನೆಗೊಂಡು ರೂಪಿತವಾದ ರಾಸಾಯನಿಕ ಸಂಯುಕ್ತಗಳು. ಇವುಗಳ ಅಣುಗಳು ಬಹುವೇಳೆ ತುಂಬ ಸಂಕೀರ್ಣವಾಗಿರುತ್ತವೆ, ಅಧಿಕ ಸಂಖ್ಯೆಯ ಪರಮಾಣುಗಳಿಂದ ಕೂಡಿರುತ್ತವೆ. ಇವು ದ್ರಾವಣದಲ್ಲಿ ಸಾಮಾನ್ಯವಾಗಿ ಅಯಾನೀಕರಣಗೊಳ್ಳುವುದಿಲ್ಲ ಮತ್ತು ಬಹುವೇಳೆ ಸಮಾಂಗತಾ ವಿದ್ಯಮಾನ ಪ್ರದರ್ಶಿಸುತ್ತವೆ. ಜೀವಂತ ವಸ್ತುಗಳ ಮೂಲಾಧಾರಗಳಿವು

ಆರ್ಗ್ಯುಮೆಂಟ್

(ಕಂ) ಕ್ರಮವಿಧಿಯೊಂದಕ್ಕೆ ಸಲ್ಲಿಸಿದ ಪ್ರದಾನ (ಇನ್‌ಪುಟ್) ಪ್ರಾಚಲ (ಪ್ಯಾರಾಮೀಟರ್)

ಆರ್ಜಿತ ಕವಾಟ ಬೇನೆಗಳು

(ವೈ) ವಯಸ್ಸಾಗುತ್ತಿರುವ ಹಾಗೆ ಹೃದಯ ಕವಾಟಗಳಲ್ಲಿ ತಲೆದೋರುವ ಕವಾಟ ರೋಗಗಳು. ಉದಾಹರಣೆಗೆ, ರೋಗಕ್ರಿಮಿಗಳ ದಾಳಿಗೆ ತುತ್ತಾಗಿ ಕವಾಟಗಳು ಹಾಳಾಗಬಹುದು ಇಲ್ಲವೇ ಕ್ಯಾಲ್ಸಿಯಂ ಅಂಶ ಹೆಚ್ಚು ಸಂಗ್ರಹವಾಗಿ ಕವಾಟ ಪೆಡಸಾಗಬಹುದು

ಆರ್ಜಿತ ರಕ್ಷೆ

(ವೈ) ದೇಹವನ್ನು ಪರ ಪದಾರ್ಥಗಳಿಗೆ/ಸೂಕ್ಷ್ಮಜೀವಿಗಳಿಗೆ ಒಡ್ಡುವುದರಿಂದ ಒದಗುವ ರಕ್ಷೆ; ಹುಟ್ಟಿನಿಂದ ಬರುವ ನೈಸರ್ಗಿಕ ರಕ್ಷೆಯಿಂದ ಭಿನ್ನವಾದದ್ದು. ಆರ್ಜಿತ ಪ್ರತಿರಕ್ಷೆ

ಆರ್ಜಿತ ಲಕ್ಷಣ

(ಪ್ರಾ) ಪ್ರಾಣಿಯ ಜೀವಿತಾವಧಿಯಲ್ಲಿ ಅಂಗವೊಂದರ ಉಪಯೋಗ/ಅನುಪಯೋಗ ದಿಂದ ಆ ಅಂಗದಲ್ಲಿ ಕಂಡುಬರುವ ಬದಲಾವಣೆ. ಆನುವಂಶಿಕವಲ್ಲ

ಆರ್ಜಿತ ವರ್ತನೆ

(ತ) ಪರಿಸರ ವ್ಯತ್ಯಾಸ ಗಳಿಗೆ ಹೊಂದಿಕೊಳ್ಳಲು ಜೀವಿಯ ಚರ್ಯೆ/ವರ್ತನೆ

ಆರ್ಜಿನೀನ್

(ರ) ಒಂದು ಅಗತ್ಯ ಅಮೀನೋ ಆಮ್ಲ; arg ೨-ಅಮೀನೊ-೫ಗ್ವಾನಿಡೋ ಪೆಂಟಾನೋಯಿಕ್ ಆಮ್ಲದ

ಆರ್ಜಿರೊಡೈಟ್

(ಭೂವಿ) ಜರ್ಮೇನಿಯಮ್ ಮತ್ತು ಬೆಳ್ಳಿಯ ದ್ವಿ-ಸಲ್ಫೈಡ್; ಜರ್ಮೇನಿಯಮ್ ಧಾತುವನ್ನು ಮೊತ್ತ ಮೊದಲು ಈ ಖನಿಜದಲ್ಲಿ ಆವಿಷ್ಕರಿಸಲಾಯಿತು. Ag8 GeS6

ಆರ್ಜೆಂಟೈಟ್

(ಭೂವಿ) ಬೆಳ್ಳಿಯ ಪ್ರಮುಖ ಅದಿರು. Ag2S. ಘನ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುತ್ತದೆ

ಆರ್ಟ್ ಕಾಗದ

(ತಂ) ಕಾಗದದ ಒಂದು/ಎರಡು ಪಾರ್ಶ್ವಗಳಿಗೆ ಚೈನಾ ಮಣ್ಣಿನಂಥ ಖನಿಜ ಪದಾರ್ಥದ ಅಂಟು ದ್ರಾವಣವನ್ನು ಹಲವಾರು ಸಲ ಸವರಿ ತಯಾರಿಸಿದ, ಉನ್ನತ ದರ್ಜೆಯ ಅತ್ಯುತ್ತಮವಾದ ನುಣುಪು, ಹೊಳಪಿನ ಕಾಗದ. ಇದನ್ನು ಸಾಮಾನ್ಯವಾಗಿ ಅತ್ಯಾಕರ್ಷಕವಾದ ವರ್ಣಚಿತ್ರ ಮುದ್ರಣದಲ್ಲಿ ಬಳಸಲಾಗುತ್ತದೆ

ಆರ್ಡೊಮೀಟರ್

(ಭೌ) ಅತ್ಯುಚ್ಚ ಉಷ್ಣತೆಗೆ ಕಾಸಿದ ವಸ್ತುವೊಂದು ಹೊರಹೊಮ್ಮಿಸುವ ಬೆಳಕಿನ ನೆರವಿನಿಂದ ಆ ವಸ್ತುವಿನ ಉಷ್ಣತೆಯನ್ನು ಅಳೆಯುವ ಸಲಕರಣೆ

ಆರ್ತವಜನಕ

(ವೈ) ರಜಸ್ಸ್ರಾವವನ್ನು ಪ್ರೇರಿಸುವ ಇಲ್ಲವೇ ವರ್ಧಿಸುವ ಔಷಧಿ

Search Dictionaries

Loading Results

Follow Us :   
  Download Bharatavani App
  Bharatavani Windows App