भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567894344Next >

ಅಂಕ

(ಗ) ಸಂಖ್ಯೆಯನ್ನು ವ್ಯಕ್ತಪಡಿಸಲು ಬಳಸುವ ಪ್ರತೀಕ. ಉದಾ: ೪೭೯ ಸಂಖ್ಯೆಯಲ್ಲಿ ಮೂರು ಅಂಕಗಳಿವೆ. ೦ಯಿಂದ ೯ರ ಒಳಗಿನ ಅಂಕಗಳಲ್ಲಿ ಒಂದು. ಅಂಕೆ. ಅಂಕಿ

ಅಂಕಗಣಿತ

(ಗ) ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಹಾರ. ಮೂಲಗಳ ಶೋಧನೆ ಮುಂತಾದ ಪರಿಕರ್ಮಗಳನ್ನು ಸಂಖ್ಯೆಗಳೊಂದಿಗೆ ನಡೆಸುವ ಗಣಿತ ವಿಭಾಗ

ಅಂಕಗಣಿತದ ಮೂಲಭೂತ ಪ್ರಮೇಯ

(ಗ) ೧ಕ್ಕಿಂತ ಅಧಿಕವಾಗಿರುವ ಯಾವುದೇ ಧನ ಪೂರ್ಣಾಂಕವನ್ನು ಅವಿಭಾಜ್ಯಗಳ ಗುಣ ಲಬ್ಧವಾಗಿ ನಿರೂಪಿಸಬಹುದು. ಅಪವರ್ತನಗಳ ಅನುಕ್ರಮದ ಹೊರತಾಗಿ ಈ ನಿರೂಪಣೆ ಏಕೈಕ. ಇದು ಯೂಕ್ಲಿಡ್ಡನ ಕೊಡುಗೆ. ಉದಾ: 21=3×7, 165 = 3x5x11

ಅಕಂಡ್ರೈಟ್

(ಭೂವಿ) ಒಂದು ಬಗೆಯ ಶಿಲಾಸದೃಶ ಕಾಂಡ್ರ್ಯೂಲ್‌ರಹಿತ ಉಲ್ಕಾಪಿಂಡ

ಅಂಕನ

(ಗ) ಪರಿಮಾಣ, ಪರಿಕರ್ಮ ಮುಂತಾದವನ್ನು ಸೂಚಿಸಲು ಬಳಸುವ ಪ್ರತೀಕಗಳ ಸಮುಚ್ಚಯ. ಉದಾ: 1+x+x2+…+xn+… ಇಲ್ಲಿಯ ಚುಕ್ಕಿಗಳು ಮುಂದುವರಿಕೆಯ ಅಂಕನ. 1.2.3…n = n! ಇಲ್ಲಿ ! ಅಂಕನ ೧ರಿಂದ nವರೆಗಿನ ಕ್ರಮ ಗುಣಲಬ್ಧವನ್ನು ಸೂಚಿಸುವುದು. n!ನ್ನು ಕ್ರಮ ಗುಣಲಬ್ಧ n ಎಂದು ಓದಬೇಕು

ಅಂಕನಮಾನ

(ಗ) ಈಗಿನ ದಶಮಾಂಶ ಪದ್ಧತಿ ಬರುವುದಕ್ಕೆ ಮುನ್ನ ಜಗತ್ತಿನ ನಾನಾ ದೇಶಗಳಲ್ಲಿ ಬಳಕೆಯಲ್ಲಿದ್ದ ಎಣಿಕೆ ಕ್ರಮಗಳು. ಜೋಡಿ-ಜೋಡಿಗಳಲ್ಲಿ ಮತ್ತು ಹತ್ತು ಹತ್ತುಗಳಲ್ಲಿ ಎಣಿಸುವ ಕ್ರಮಗಳು ಅತಿ ಪ್ರಾಚೀನ. ಉದಾ: ಎರಡನ್ನು ಒಂದು ಜೋಡಿ ಎಂದು ಪರಿಗಣಿಸಿ ಐದನ್ನು ಎರಡು ಜೋಡಿ ಮತ್ತು ಒಂದು ಎಂದು ಕರೆಯುವುದು ಒಂದು ಕ್ರಮ. ಅದೇ ರೀತಿ ಹತ್ತನ್ನು ಒಂದು ಮಾನವಾಗಿಟ್ಟುಕೊಳ್ಳುವುದು ಮತ್ತೊಂದು ಕ್ರಮ. ಮೊಹೆಂಜೊದಾರೋ ಶಾಸನಗಳಲ್ಲಿ (ಕ್ರಿ.ಪೂ. ೩೪೦೦) ವಿಭಿನ್ನ ಅಂಕನಮಾನಗಳು ಕಾಣಬರುತ್ತವೆ. ಯುಕೆಟಾನ್‌ನ (ದ. ಅಮೆರಿಕ) ಮಾಯಾ ಜನರು, ರೋಮನ್ನರು ಬೇರೆ ಬೇರೆ ಅಂಕನಮಾನಗಳನ್ನು ಬಳಸಿದ್ದಾರೆ

ಅಕಶೇರುಕ

(ಪ್ರಾ) ಬೆನ್ನು ಮೂಳೆ ಇಲ್ಲದ ಪ್ರಾಣಿ

ಅಂಕಾತ್ಮಕ ಗಡಿಯಾರ

(ತಂ) ನೋಡಿ : ಡಿಜಿಟಲ್ ಗಡಿಯಾರ

ಅಂಕಾತ್ಮಕ ಗಣಕ

(ತಂ) ನೋಡಿ: ಡಿಜಿಟಲ್ ಕಂಪ್ಯೂಟರ್

ಅಕಾಲ ಪ್ರಸವ

(ವೈ) ಗರ್ಭಾಶಯದಲ್ಲಿ ಶಿಶು ಪೂರ್ಣವಾಗಿ ಅಭಿವರ್ಧನೆಗೊಳ್ಳುವ ಅವಧಿಗೆ ಮುನ್ನವೇ (ಗರ್ಭಧಾರಣೆಯಾಗಿ ೩೫ ವಾರಗಳಿಗೂ ಮುನ್ನವೇ) ಸಂಭವಿಸುವ ಪ್ರಸವ. ಪ್ರಾಪ್ತಕಾಲಪೂರ್ವ ಜನನ

ಅಂಕಿತ ಪರಮಾಣು

(ತಂ) ಅಣುಗಳನ್ನು ಗುರುತಿಸಲಿಕ್ಕಾಗಿ ಇರುವ ಅದರಲ್ಲಿಯ ವಿಕಿರಣಪಟುಗೊಳಿಸಿದ ಪರಮಾಣು/ಪರಮಾಣುಗಳು. ವಿಕಿರಣಪಟು ಪರಮಾಣು

ಅಂಕಿತ ಸಂಯುಕ್ತ

(ರ) ವಿಕಿರಣಪಟು ಅಥವಾ ಸ್ಥಿರ ಸಮಸ್ಥಾನಿಯುಳ್ಳ ಸಂಯುಕ್ತ

ಅಂಕುರ ಪದರ

(ಜೀ) ನೋಡಿ: ಜರ್ಮ್ ಲೇಯರ್

ಅಂಕುರಣ

(ಸ) ಬೀಜಕ, ಬೀಜ, ಯುಗ್ಮಜ ಇತ್ಯಾದಿಗಳಲ್ಲಿ ಬೆಳವಣಿಗೆಯ ಆರಂಭ. ಅದರಲ್ಲೂ ವಿಶೇಷವಾಗಿ ಸ್ವಲ್ಪಕಾಲ ಸುಪ್ತಾವಸ್ಥೆಯಲ್ಲಿದ್ದ ನಂತರ. ಮೊಳೆತ

ಅಂಕುರಣ

(ಜೀ) ವಿಶೇಷವಾಗಿ ಕೆಲವು ಯೀಸ್ಟ್‌ಗಳಲ್ಲಿ ಅಲೈಂಗಿಕ ಸಂತಾನೋತ್ಪಾದನೆ. ಕೆಲವು ಹಣ್ಣು ಮರಗಳಲ್ಲಿ ಹಾಗೂ ಅಲಂಕಾರ ಸಸ್ಯಗಳಲ್ಲಿ ಮಾಡಲಾಗುವ ಅಂಕುರ ಕಸಿ. ಅಲೈಂಗಿಕ ಸಂತಾನೋತ್ಪಾದನೆಯ ಒಂದು ಆದಿಮ ವಿಧಾನ

ಅಂಕುರಣ

(ಸ) ಸಸ್ಯದ ಬೀಜದಿಂದ/ಬೇರಿನಿಂದ ಮೊಳಕೆ ಒಡೆಯುವುದು. ಚಿಗುರುವುದು, ಕೊನರುವುದು, ಕುಡಿಯೊಡೆಯುವುದು

ಅಂಕುರತ್ವೀಕರಣ

(ಸ) ಮೊಳಕೆಯೊಡೆದ ಬೀಜಗಳು ಇಲ್ಲವೇ ಬೀಜಕಗಳು ಶೀಘ್ರವಾಗಿ ಬೆಳೆದು ಹೂ ಬಿಡುವಂತೆ ಮಾಡಲು ಶೈತ್ಯ ಸಂಸ್ಕಾರದ (ಸುಮಾರು ೪0 ಸೆ) ಅನ್ವಯ. ಚಳಿಗಾಲದ ಧಾನ್ಯಗಳನ್ನೂ ಒಳಗೊಂಡಂತೆ ಅನೇಕ ಸಸ್ಯಗಳನ್ನು ಅವುಗಳ ಪ್ರಾರಂಭ ಅಭಿವರ್ಧನೆಯ ವೇಳೆ ಇಂಥ ಸಂಸ್ಕಾರಕ್ಕೆ ಒಳಪಡಿಸಿದಲ್ಲಿ ಅವು ಶೀಘ್ರವಾಗಿ ಹೂ ಬಿಡುತ್ತವೆ

ಅಂಕುರಫಲೀಯ

(ಸ) ಬೀಜಾವರಣದ ಒಳಗಿರುವಾಗಲೇ ಬೆಳೆಯುವುದಕ್ಕೆ ಆರಂಭವಾಗುವ

ಅಂಕುರಬೀಜಕ

(ಸ) ಅಂಕುರಣದ ವೇಳೆ ಮೈದಳೆಯುವ ಬೀಜಕ

ಅಂಕುಶಕಪಾಲಿ

(ಪ್ರಾ) ಮುಳ್ಳು ತಲೆ ಮತ್ತು ಸೊಂಡಿಲಿದ್ದು ಬಾಯಿ ಮತ್ತು ಆಹಾರನಾಳ ಇರದ ಪರಪುಷ್ಟ ಪ್ರಾಣಿ
< previous1234567894344Next >

Search Dictionaries

Loading Results

Follow Us :   
  Download Bharatavani App
  Bharatavani Windows App