भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅಡುಗೆ ಸೋಡ

(ರ) ಕೇಕ್, ಬ್ರೆಡ್ ಮುಂತಾದವನ್ನು ತಯಾರಿಸುವಾಗ ಅವುಗಳ ಜೊತೆ ಈ ಚೂರ್ಣವನ್ನು ಬೆರೆಸಿದಾಗ, ಇದು ಬಿಡುಗಡೆ ಮಾಡುವ ಕಾರ್ಬನ್ ಡೈಆಕ್ಸೈಡ್ ಅವನ್ನು ಉಬ್ಬುವಂತೆ ಮಾಡುತ್ತದೆ. ಮುಖ್ಯವಾಗಿ ಕಾರ್ಬನೇಟ್ (ಸಾಮಾನ್ಯವಾಗಿ NaHCO3) ಮತ್ತು ಒಂದು ಆಮ್ಲೀಯ ಪದಾರ್ಥ ಈ ಚೂರ್ಣದ ಘಟಕಗಳು. ಹುದುಗು ಪುಡಿ. ಉಬ್ಬು ಪುಡಿ

ಅಡೆನೈನ್

(ರ) ನ್ಯೂಕ್ಲಿಯಿಕ್ ಆಮ್ಲದ ಐದು ಪ್ರತ್ಯಾಮ್ಲಗಳ ಪೈಕಿ ಒಂದು. ಡಿಎನ್‌ಎಯಲ್ಲಿ ಥೈಮೀನ್‌ನೊಂದಿಗೂ ಆರ್‌ಎನ್‌ಎಯಲ್ಲಿ ಯೂರಸಿಲ್‌ನೊಂದಿಗೂ ಜೊತೆಗೂಡಿರುತ್ತದೆ. ೬-ಅಮೀನೊ ಪ್ಯೂರೀನ್. C5H5N5. ದ್ರಬಿಂ ೩೬೦೦-೩೬೫೦ ಸೆ

ಅಡೆನೊಸೀನ್ ಟ್ರೈಫಾಸ್ಫೇಟ್

(ಜೀ) ವಿಭಿನ್ನ ಕಿಣ್ವ ಕ್ರಿಯೆಗಳ ನಡುವೆ ಕೊಂಡಿ ಏರ್ಪಡಿಸುವ ಸಹಕಿಣ್ವ; ಜೀವಿಗಳ ಉಪಾಪಚಯದಲ್ಲಿಯೂ ಅತಿಮುಖ್ಯ ಸಂಯುಕ್ತಗಳ ಪೈಕಿ ಒಂದು. ಸಂಕ್ಷಿಪ್ತ ಎಟಿಪಿ. C10H16N5O12P3

ಅಂಡೋತ್ಪಾದಕ

(ಪ್ರಾ) ಮೊಟ್ಟೆ ಇಟ್ಟು ಮರಿ ಮಾಡುವ (ಪ್ರಾಣಿ). ಮರಿಯಾಗಿ ಅಭಿವರ್ಧನೆಗೊಳ್ಳುವ ಪ್ರಕ್ರಿಯೆಗಳೆಲ್ಲ ತಾಯಿಯ ಒಡಲಿನ ಹೊರಗೆ ಜರುಗುತ್ತವೆ – ಹಕ್ಕಿಗಳಲ್ಲಿ ಇರುವಂತೆ. ನೋಡಿ : ಜರಾಯುಜ

ಅಂಡೋತ್ಸರ್ಗ

(ಜೀ) ಅಂಡಗಳು ರಚಿತವಾಗುವುದು; ಸ್ತನಿಗಳಲ್ಲಿ ಅಂಡಾಶಯದಿಂದ ಅಂಡಗಳು ವಿಮೋಚನೆಗೊಳ್ಳುವ ಪ್ರಕ್ರಿಯೆ

ಅಂಡ್‌ಗೇಟ್ AND

(ಕಂ) ಎಲ್ಲ ಇನ್‌ಪುಟ್(ನಿವೇಶ)ಗಳೂ ಏಕಕಾಲಿಕವಾಗಿ ಶಕ್ತೀಕರಿಸಲ್ಪಟ್ಟಾಗ ಮಾತ್ರ ಔಟ್‌ಪುಟ್ (ನಿರ್ಗಮ) ಸಂಜ್ಞೆಯನ್ನು ಉತ್ಪಾದಿಸುವ ದ್ವಾರ; ಅಂದರೆ ಇನ್‌ಪುಟ್ ಸಂಜ್ಞೆಗಳೆಲ್ಲವೂ ೧ ಆದಾಗ ಮಾತ್ರ ಔಟ್‌ಪುಟ್ ಸಂಜ್ಞೆ ೧ ಆಗುವುದು

ಅಡ್ಡ ಅಕ್ಷ

(ಗ) ಎರಡು ಆಯಾಮಗಳ ಕಾರ್ಟೀಸಿಯನ್ ನಿರ್ದೇಶಕ ವ್ಯವಸ್ಥೆಯಲ್ಲಿ x-ಅಕ್ಷ. y-ಅಕ್ಷಕ್ಕೆ ಅನುವರ್ತಿ ಅಕ್ಷವೆಂದು ಹೆಸರು

ಅಡ್ಡ ತರಂಗ

(ಭೌ) ಈ ತರಂಗ ಚಲನೆಯಲ್ಲಿ ಮಾಧ್ಯಮದ ಕ್ಷೋಭೆಯು ತರಂಗ ಸಂಚರಣೆಯ ದಿಶೆಗೆ ಲಂಬ ದಿಶೆಯಲ್ಲಿ ಸಂಭವಿಸುತ್ತದೆ. ಉದಾ: ವಿದ್ಯುತ್ಕಾಂತ ತರಂಗಗಳು

ಅಡ್ಡ ತೊಲೆ

(ತಂ) ಮರದ ಪಟ್ಟಿಗಳನ್ನೂ ಗಾರೆಯನ್ನೂ ಉಪಯೋಗಿಸಿ ತಡಕೆ ಗೋಡೆ ಕಟ್ಟುವಲ್ಲಿ ಮರದ ಪಟ್ಟಿಗಳನ್ನು ಹೊಡೆಯುವ ಚೌಕಟ್ಟಿನ ನಿಲುಮರ

ಅಡ್ಡಕಂಬಿ

(ತಂ) ೧. ಜಮೀನು ಅಳೆಯಲು ಬಳಸುವ ಉದ್ದದ ಏಕಮಾನ. ೫.೦೨೯೨ ಮೀಟರಿಗೆ ಸಮ. ಸಲೆ ಅಥವಾ ವಿಸ್ತೀರ್ಣದ ಏಕಮಾನ. ೨೫.೨೯ ಚಮೀಗೆ ಸಮ. ೨. ಹಕ್ಕಿ ಕುಳಿತುಕೊಳ್ಳಲು ಹಾಕಿರುವ ಕಂಬಿ. ತಂಗು ಕಂಬಿ

ಅಡ್ಡಗಾಲುವೆ

(ಎಂ) ರಸ್ತೆ, ರೈಲು ಮಾರ್ಗಗಳ ಕೆಳಗೆ, ನೀರು ಹರಿದುಹೋಗಲು ಪೈಪು, ಪ್ರಬಲಿತ ಕಾಂಕ್ರೀಟ್ ಇತ್ಯಾದಿಗಳಿಂದ ಅಡ್ಡಲಾಗಿ ನಿರ್ಮಿಸುವ ರಚನೆ

ಅಡ್ಡತಡೆ

(ತಂ) ತರಲ ಪ್ರವಾಹವನ್ನು ನಿರೋಧಿಸುವ, ಅದರ ದಿಶೆ ಬದಲಿಸುವ ಅಥವಾ ವಿಭಾಗಿಸುವ ಯಾವುದೇ ಸಲಕರಣೆ

ಅಡ್ಡದಿಮ್ಮಿ

(ತಂ) ರೈಲ್ವೇ ಕಂಬಿಗಳ ನಡುವಿನ ಅಂತರ ಸರಿಯಾಗಿ ಒಂದೇ ಇರುವಂತೆ ಹಿಡಿದಿರಿಸಲೋಸುಗ ಮತ್ತು ಕಂಪನವನ್ನು ಸರಾಗಗೊಳಿಸಲು ಕಂಬಿಗಳ ಕೆಳಗೆ ಅಳವಡಿಸುವ ಮರದ, ಉಕ್ಕಿನ ಅಥವಾ ಕಾಂಕ್ರಿಟ್ ಫಲಕ

ಅಡ್ಡಸಾಲು

(ಗ) ಒಂದು ಮಾತೃಕೆ (ಮ್ಯಾಟ್ರಿಕ್ಸ್) ಅಥವಾ ನಿರ್ಧಾರಕ (ಡಿಟರ್ಮಿನೆಂಟ್) ಇವುಗಳಲ್ಲಿ ಎಡದಿಂದ ಬಲಕ್ಕೆ ಜೋಡಿಸಲಾದ ಸಂಖ್ಯಾಗಣ. ಉದಾ: ಎಂಬ ಎರಡನೇ ದರ್ಜೆಯ ಮಾತೃಕೆಯಲ್ಲಿ ೧,೨ ಹಾಗೂ ೩, ೪ ಎಂಬುವು ಕ್ರಮವಾಗಿ ಮೊದಲನೇ ಮತ್ತು ಎರಡನೇ ಅಡ್ಡಸಾಲುಗಳು

ಅಡ್ಡಹಾಯಿಸು

(ಜೀ) ಮಿಶ್ರತಳಿಯೆಬ್ಬಿಸು, ಸಂಕರ ತಳಿ ಮಾಡು, ಭಿನ್ನ ತಳಿಗಳನ್ನು ಸೇರಿಸಿ ಬೇರೊಂದು ಜೀವಿಯನ್ನು ಸೃಷ್ಟಿಸು

ಅಡ್ಡೆಲುಬು

(ಪ್ರಾ) ಕಶೇರುಕಗಳಲ್ಲಿ ಕಣ್ಣೆವೆಗೆ ಆಧಾರವಾಗಿ ಇರುವ ಸಾಂದ್ರ ಸಂಬಂಧಕ ಊತಕದ ನೀಳ ಫಲಕ

ಅಡ್ರೀನಲಿನ್

(ಜೀ) ಅಡ್ರೀನಲ್ (ಅಧಿಮೂತ್ರ ಪಿಂಡಕ) ಗ್ರಂಥಿಗಳ ಒಳಭಾಗದಲ್ಲಿ ಉತ್ಪಾದನೆಯಾಗುವ ಹಾರ್ಮೋನು. C9H13NO3. ಇದು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಇರುವಾಗ ಗುಂಡಿಗೆ ಬಡಿತವನ್ನು ತ್ವರೆಗೊಳಿಸುತ್ತದೆ. ರಕ್ತದೊತ್ತಡವನ್ನು ವರ್ಧಿಸುತ್ತದೆ. ಉದ್ರೇಕ ಭಾವವನ್ನು ಹೆಚ್ಚಿಸುತ್ತದೆ. ಎಪಿನೆಫ್ರೀನ್

ಅಡ್ರೀನಲ್

(ಪ್ರಾ) ಮೂತ್ರಪಿಂಡ ಸಮೀಪದ ಅಡ್ರೀನಲ್ ಗ್ರಂಥಿಗೆ ಸಂಬಂಧಿಸಿದ

ಅಡ್ರೀನಲ್ ಗ್ರಂಥಿಗಳು

(ಪ್ರಾ) ಹೊಟ್ಟೆಯಲ್ಲಿ ಬೆನ್ನಿಗಂಟಿಕೊಂಡಿರುವ ಎರಡೂ ಮೂತ್ರಪಿಂಡಗಳ ಮೇಲೆ ಕುಲಾವಿ ಗಳಂತಿರುವ ಎರಡು ಸಣ್ಣ ಗ್ರಂಥಿಗಳು. ಜೀವಿಗೆ ಅತ್ಯವಶ್ಯವಾದ ಪ್ರೊಜೆಸ್ಟಿರೋನ್ ಸ್ಟಿರಾಯ್ಡ್‌ಗಳನ್ನೂ ಹಾರ್ಮೋನ್‌ಗಳನ್ನೂ ಉತ್ಪಾದಿಸುತ್ತವೆ. ಕಲಿಜೊತ್ತು ಗ್ರಂಥಿ

ಅಣಬೆ

(ಸ) ಬೆಸಿಡಿಯೊಮೈಸಿಟೀಸ್ ವಿಭಾಗದ ಅಗ್ಯಾರಿಕೇಲೀಸ್ ಎಂಬ ಗಣಕ್ಕೆ ಸೇರಿದ ಇದು ಒಂದು ಬಗೆಯ ಶಿಲೀಂಧ್ರ. ಇದರ ಫಲದಾಯಕ ಕಾಯ (ಬೆಸಿಡಿಯೊಕಾರ್ಪ್) ಪೌಷ್ಟಿಕ ಆಹಾರ. ಔಷಧಿ ತಯಾರಿಕೆಯಲ್ಲಿ ಬಳಕೆ. ಶೀಘ್ರ ವಾದ ಬೆಳವಣಿಗೆ. ಅಲ್ಪಾಯು. ನಾಯಿಕೊಡೆ

Search Dictionaries

Loading Results

Follow Us :   
  Download Bharatavani App
  Bharatavani Windows App