Navakarnataka Vijnana Tantrajnana Padasampada (2011)
Navakarnataka Publications Private Limited
ಅಸ್ಪಷ್ಟ
(ಸಾ) ಮಸಕು. ಮಬ್ಬು
ಅಸ್ಪಾರ್ಟಿಕ್ ಆಮ್ಲ
(ರ) ಸಸ್ಯಗಳಲ್ಲೂ ಪ್ರಾಣಿ ಗಳಲ್ಲೂ ವಿಶೇಷವಾಗಿ ಎಳೆಯ ಕಬ್ಬು ಹಾಗೂ ಬೀಟ್ರೂಟ್ ಗಳಲ್ಲಿ ಇರುವ ಅಬಾಷ್ಪಶೀಲ (ಅಚಂಚಲ), ಸ್ಫಟಿಕೀಯ ಡೈ ಕಾರ್ಬಾಕ್ಸಿಲಿಕ್ ಅಮಿನೋ ಆಮ್ಲ C4H7NO4
ಅಸ್ಫಟಿಕ
(ಜೀ) ಸ್ಪಷ್ಟವಾಗಿ ಗುರುತಿಸಬಲ್ಲ ಆಕಾರವಿರದ (ಭೂವಿ) ಪದರ ವಿಭಜನೆ ಇರದ (ರ) ಸ್ಫಟಿಕ ರಚನೆ ಇರದ
ಅಸ್ಫಟಿಕ ಗಂಧಕ
(ರ) ಗಂಧಕದ ಆವಿಯನ್ನು ಕ್ಷಿಪ್ರವಾಗಿ ತಣಿಸಿದಾಗ ದೊರೆಯುವ ಪದಾರ್ಥ. ಗಂಧಕದ ಪರಮಾಣುಗಳ ದೀರ್ಘ ಸರಪಳಿಗಳನ್ನುಳ್ಳದ್ದು. ಕೋಣೆ ಖರತ್ವದಲ್ಲಿ ರಾಂಬಿಕ್ ಗಂಧಕ ರೂಪಕ್ಕೆ ಹಿಂದಿರುಗುತ್ತದೆ
ಅಸ್ಫಟಿಕ ಲೋಹ
(ಭೌ) ವಿದ್ಯುತ್ ಹಾಗೂ ಉಷ್ಣವಾಹಕತೆ ಮುಂತಾದ ಲೋಹ ಗುಣಗಳು ಚೆನ್ನಾಗಿ ಇರುವ ಆದರೆ ಪರಮಾಣವಿಕ ಅಳವಡಿಕೆಗಳು ಸ್ಫಟಿಕಾತ್ಮಕ ಲೋಹ ಘನಗಳಲ್ಲಿಯಂತೆ ಅವಧಿಯುತ ಕ್ರಮದಲ್ಲಿ ಇರದ ಪದಾರ್ಥ. ಉದಾ: ಲೋಹೀಯ ಗಾಜು
ಅಸ್ಬೆಸ್ಟಾಸಿಸ್
(ವೈ) ಕಲ್ನಾರು ದೂಳನ್ನು ಒಳಕ್ಕೆ ಸೇದಿಕೊಳ್ಳು ವುದರಿಂದ ಬರುವ ಶ್ವಾಸಕೋಶ ರೋಗ. ಕಲ್ನಾರು ಫುಪ್ಪುಸ ಬೇನೆ
ಅಸ್ವಾಸ್ಥ್ಯ
(ವೈ) ಅಹಿತ ಹಾಗೂ ಅಸ್ವಸ್ಥ ಭಾವನೆ. ಕಾತರತೆ, ಉಲ್ಬಣತೆ, ಕಳವಳ ಇತ್ಯಾದಿಗಳ ಬಾಧೆ
ಅಳಿಲು
(ಪ್ರಾ) ರಾಡೆನ್ಷಿಯ ಉಪವರ್ಗ, ಸ್ಕ್ವಿರಿಡೀ ಕುಟುಂಬಕ್ಕೆ ಸೇರಿದ ವೃಕ್ಷವಾಸಿ ಸ್ತನಿ. ಶಕ್ತಿಯುತ ಸ್ನಾಯು ಶರೀರ, ಬಾಗಿದ ಚೂಪು ನಖ, ದೊಡ್ಡ ಕಣ್ಣು, ದಪ್ಪ ಕಿವಿ, ಗಡುತರ ಚಪ್ಪಟೆ ಬಾಲ, ಬೆನ್ನಿನ ಮೇಲೆ ಮೂರು ಪಟ್ಟೆ ಭಾರತದ ಅಳಲಿನ ಮುಖ್ಯ ಲಕ್ಷಣಗಳು. ಹಾರುವ ಅಳಿಲುಗಳೂ ಉಂಟು. ವಿವಿಧ ಬಣ್ಣಗಳ ಇದು ಗಾತ್ರದಲ್ಲಿ ಇಲಿಯಷ್ಟು ಚಿಕ್ಕದೂ ಬೆಕ್ಕಿನಷ್ಟು ದೊಡ್ಡದೂ ಆಗಿರಬಹುದು
ಅಳಿವಿನಂಚಿನ ಜೀವಿಗಳು
(ಪವಿ) ಸಂಖ್ಯಾ ದೃಷ್ಟಿಯಿಂದ ತುಂಬ ವಿರಳವಾಗಿರುವ ಪ್ರಾಣಿ/ ಸಸ್ಯ. ಸಂಪೂರ್ಣ ನಶಿಸಿಹೋಗುವ ಸಂಭವ ಇರುವುದುಂಟು. ಬೇಟೆಗಾರಿಕೆ, ಪರಿಸರ ಮಾಲಿನ್ಯ, ಅರಣ್ಯ ನಾಶ ಇವುಗಳಲ್ಲಿ ಕೆಲವು ಇದಕ್ಕೆ ಕಾರಣಗಳು. ಪ್ರಪಂಚ ಆದ್ಯಂತ ಅಭಯಾರಣ್ಯಗಳನ್ನು ನಿರ್ಮಿಸಿ ಅಲ್ಲಿ ಇವುಗಳನ್ನು ರಕ್ಷಿಸಲು ಯತ್ನಿಸಲಾಗುತ್ತಿದೆ. ಗುಜರಾತಿನ ಗಿರ್ ಅರಣ್ಯದಲ್ಲಿ ಸಂರಕ್ಷಿಸಲಾಗುತ್ತಿರುವ ಏಷ್ಯ ಸಿಂಹ, ಕಪ್ಪು ಕತ್ತಿನ ಕೊಕ್ಕರೆ, ಬಿಳಿ ಹುಲಿ, ನೀಲ ತಿಮಿಂಗಲ, ಬಸ್ಟರ್ಡ್ ಹಕ್ಕಿ ಇತ್ಯಾದಿಗಳು ಇವುಗಳಲ್ಲಿ ಕೆಲವು ವಿಪತ್ತಿನಲ್ಲಿರುವ ಜೀವಿಗಳು
ಅಳಿವೆ