भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅಸ್ಥಿ ಸ್ತರ

(ಭೂವಿ) ಫಾಸಿಲ್ ಮೂಳೆಗಳ ಸಮೃದ್ಧ ಸಂಚಯನದ ಕಾರಣವಾಗಿ ರೂಪುಗೊಳ್ಳುವ ತಳಪದರ / ಮಡ್ಡಿ

ಅಸ್ಥಿಕ

(ಪ್ರಾ) ಕಿರು ಮೂಳೆ, ವಿಶೇಷವಾಗಿ ನಡುಗಿವಿಯಲ್ಲಿ ಇರುವಂಥದು. ಕೆಲವು ಹಕ್ಕಿಗಳಲ್ಲೂ ಸರೀಸೃಪಗಳಲ್ಲೂ ಕಣ್ಣುಗುಡ್ಡೆಯ ಹೊರಪೊರೆಯಲ್ಲಿರುವ ಸಣ್ಣೆಲುಬು ಫಲಕಗಳ ಉಂಗುರ; ಕಂಟಕಚರ್ಮಿ ಗಳ ಶರೀರ ಭಿತ್ತಿಯಲ್ಲಿ ಹುದುಗಿರುವ ಗಡಸು ಪದಾರ್ಥದ ತುಂಡು; ಕೆಲವು ವಲ್ಕವಂತ ಪ್ರಾಣಿಗಳ ಉದರದಲ್ಲಿರುವ ಗಡಸು ಫಲಕ

ಅಸ್ಥಿಗಂಡಭವನ

(ವೈ) ಮೂಳೆಯ ಹೊರಮೈಯಿಂದ ಹುಟ್ಟುವ ಮೂಳೆಯ ಗಂಟು. ಸಾಮಾನ್ಯ ವಾಗಿ ಮೂಳೆಗೆ ಎಲ್ಲಿ ಸ್ನಾಯುಗಳು ಅಂಟಿಕೊಂಡು ಇರುತ್ತವೆಯೋ, ಅಂತಹ ಸ್ಥಳದಲ್ಲಿ ಅಸ್ಥೀಕರಣದ ಕಾರಣ ಹೊಸ ಮೂಳೆ ಬೆಳೆಯುತ್ತದೆ. ಮೂಳೆಯ ಹೊರಬೆಳೆತ

ಅಸ್ಥಿಚಕ್ರ

(ಪ್ರಾ) ತೋಳುಗಳಿಗೆ ಮತ್ತು ಅದೇ ರೀತಿ ಕಾಲುಗಳಿಗೆ ಆಧಾರವಾಗಿರುವ, ಹೆಚ್ಚು ಕಡಿಮೆ ಸಂಪೂರ್ಣ ಚಕ್ರಾಕೃತಿಯ (ಮುಂಭಾಗದಲ್ಲಿ ತೆರಪಾದ) ಮೂಳೆ

ಅಸ್ಥಿಚೂರ್ಣ

(ರ) ಪ್ರಾಣಿಗಳ ಎಲುಬನ್ನು ಅರೆದು ತಯಾರಿಸಿದ ವಸ್ತು. ಒತ್ತಡದ ಉಗಿಯಲ್ಲಿ ತಯಾರಿಸಿದ ಈ ಚೂರ್ಣವನ್ನು ಗೊಬ್ಬರವಾಗಿ ಉಪಯೋಗಿಸಲಾಗುತ್ತದೆ. ಕಚ್ಚಾ ಅಸ್ಥಿಚೂರ್ಣ ಪ್ರಾಣಿಗಳಿಗೆ ಆಹಾರವೂ ಹೌದು. ಇದರಲ್ಲಿರುವ ಲವಣಗಳು ಸಸ್ಯಗಳಿಗೆ ಉತ್ತಮ ಪೋಷಕಗಳು

ಅಸ್ಥಿಛೇದನ

(ವೈ) ಮೂಳೆಯೊಳಗೆ ಉಳಿದಿರಬಹುದಾದ ಮೃತ ಮೂಳೆ ಚೂರನ್ನು ಹೊರತೆಗೆಯಲು ಉಳಿ ಅಥವಾ ಗರಗಸದಿಂದ ಮೂಳೆಯನ್ನು ಕತ್ತರಿಸುವುದು. ಡೊಗರುಗಾಲನ್ನು ಸರಿಪಡಿಸಲು ಡೊಂಕಾಗಿರುವ ಮೂಳೆಯ ನಿರ್ದಿಷ್ಟ ಭಾಗವನ್ನು ಕತ್ತರಿಸಿ ತೆಗೆಯುವುದು

ಅಸ್ಥಿತಂತ್ರಜ್ಞ

(ವೈ) ಮೂಳೆಗಳಿಗೆ ಮತ್ತು ಕೀಲುಗಳಿಗೆ ಜಖಂ ಆದಾಗ ಅವನ್ನು ಕರ ಕೌಶಲದಿಂದ ಸರಿಪಡಿಸಬಲ್ಲ ತಜ್ಞ

ಅಸ್ಥಿತಿಸ್ಥಾಪಕ

(ಭೌ) ಗಾತ್ರದಲ್ಲೂ ಆಕಾರದಲ್ಲೂ ಶಾಶ್ವತ ಬದಲಾವಣೆಯಾಗದೆ ವಿರೂಪಗೊಳ್ಳಲು ಅಸಮರ್ಥವಾದ. ಅಪುಟಿತ

ಅಸ್ಥಿದ್ರವ್ಯನಷ್ಟ

(ವೈ) ಮೂಳೆಯಲ್ಲಿರುವ ಖನಿಜ ನಷ್ಟವಾಗುತ್ತ ಹೋಗುವ ಸ್ಥಿತಿ. ಅಸ್ಥಿಖನಿಜಾಂಶ ನಷ್ಟ

ಅಸ್ಥಿಪಂಜರ

(ಪ್ರಾ) ನೋಡಿ: ಕಂಕಾಲ

ಅಸ್ಥಿಭಸ್ಮ

(ರ) ಮೂಳೆ ಸುಟ್ಟಾಗ ಉಳಿಯುವ ಬಿಳಿ ಬೂದಿ. ಮುಖ್ಯವಾಗಿ ತ್ರಿಪ್ರತ್ಯಾಮ್ಲೀಯ ಕ್ಯಾಲ್ಸಿಯಮ್ ಫಾಸ್ಫೇಟ್. ಆಭರಣ ಗಳನ್ನು ತೊಳೆಯಲು, ಕುಂಬಾರ ಕೆಲಸದಲ್ಲಿ ಬಳಕೆ. ಮೂಳೆಬೂದಿ

ಅಸ್ಥಿಮಾರ್ದವ

(ವೈ) ಮೂಳೆಯು ಕ್ರಮವಾಗಿ ಮೆತುವಾಗುತ್ತ ಹಾಗೂ ಬಾಗುತ್ತ ಹೋಗುವ ಒಂದು ರೋಗ. ನೋವು ಸಾಮಾನ್ಯ. ಪುರುಷರಿಗಿಂತ ಮಹಿಳೆಯರನ್ನು ಕಾಡುವುದು ಹೆಚ್ಚು. ಗರ್ಭವತಿಯಾಗಿರುವಾಗ ಆರಂಭವಾಗಬಹುದು. ಕಾರಣ ಪೂರ್ಣ ಖನಿಜೀಕರಣ ವೈಫಲ್ಯ. ಅಸ್ಥಿಮೃದುತ್ವ. ಮೂಳೆಮೆತುವೆ ನೋಡಿ : ಮೆದುಮೂಳೆ ರೋಗ

ಅಸ್ಥಿಮೀನು

(ಪ್ರಾ) ಆಸ್ಟಿಯಿಕ್‌ತೀಸ್ ವರ್ಗ ಹಾಗೂ ಆಲ್ಬುಲಿಡೀ ಕುಟುಂಬಕ್ಕೆ ಸೇರಿದ ಮೀನು. ಆಹಾರಪದಾರ್ಥವಾಗಿ ಉಪಯೋಗ. ಮೂಳೆಮೀನು

ಅಸ್ಥಿರ

(ಭೌ) ತಂತಾನೆ ಬದಲಾವಣೆಗೆ ಈಡಾಗಬಲ್ಲ. ಉದಾ: ವಿಕಿರಣಪಟು ನ್ಯೂಕ್ಲೈಡ್ ಅಥವಾ ಉದ್ದೀಪ್ತ ನ್ಯೂಕ್ಲಿಯರ್ ವ್ಯವಸ್ಥೆ (ರ) ಬಂಧ ನಷ್ಟವಾಗುವ ಗುಣವುಳ್ಳ ಗ್ರಾಫೈಟ್. ಬಲ ಪ್ರಯೋಗ ಮಾಡಿದರೆ ಸಾಕು ಪುಡಿಯಾಗಿ ಬಿಡುತ್ತದೆ. ಇದು ಯಾಂತ್ರಿಕ ಅಸ್ಥಿರತೆ; ಕೆಲವು ವಸ್ತುಗಳು ಬಿಸಿ ಮಾಡಿದರೆ ವಿಭಜನೆ ಹೊಂದುವುವು. ಇದು ಉಷ್ಣ ಅಸ್ಥಿರತೆ

ಅಸ್ಥಿರ ಸಮತೋಲ

(ಭೌ) ನೋಡಿ: ಸಮತೋಲ. ಸ್ಥಿರ ಸಮಸ್ಥಿತಿ

ಅಸ್ಥಿರಜ್ಜು

(ವೈ) ಮೂಳೆಗಳನ್ನು ಒಂದರೊಡನೊಂದು ಸೇರಿಸುವ ನಾರಿನಂಥ ಊತಕ. ಮೂಳೆಕಟ್ಟು, ಮೂಳೆನಾರು, ಅಸ್ಥಿಬಂಧನಿ

ಅಸ್ಥಿರಂಧ್ರತೆ

(ವೈ) ಖನಿಜ ಅಂಶಗಳ ಮುಖ್ಯವಾಗಿ ಕ್ಯಾಲ್ಸಿಯಮ್‌ನ ಕೊರತೆಯಿಂದಾಗಿ ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಅವು ಭಿದುರವಾಗುವ ಒಂದು ವ್ಯಾಧಿ. ಸಾಮಾನ್ಯವಾಗಿ ಇದು ಮಧ್ಯವಯಸ್ಸಿನ ಸ್ತ್ರೀಯರಲ್ಲಿ ಮುಟ್ಟು ನಿಲ್ಲುವ ಸಮಯದಲ್ಲಿ ಕಂಡುಬರುತ್ತದೆ

ಅಸ್ಥಿವಹನ

(ಭೌ) ಧ್ವನಿತರಂಗಗಳು ಹೊರಗಿವಿಯ ಅಸ್ಥಿಗಳ ಬದಲಾಗಿ ಕಪಾಲ ಮೂಳೆಗಳ ಮೂಲಕ ಒಳಗಿವಿಗೆ ತಲಪುವುದು

ಅಸ್ಥಿಸಹಿಷ್ಣುತಾ ಪ್ರಮಾಣ

(ಭೌ) ರೋಗ ಚಿಕಿತ್ಸೆಯಲ್ಲಿ ಮೂಳೆಗೆ ಗಾಸಿ ತಟ್ಟದಂತೆ ಸುರಕ್ಷಿತವಾಗಿ ಊಡಬಹುದಾದ ಅಯನೀಕಾರಕ ವಿಕಿರಣದ ಪ್ರಮಾಣ

ಅಸ್ಥೀಕರಣ

(ಪ್ರಾ) ಎಲುಬು ರೂಪುಗೊಳ್ಳುವ ಪ್ರಕ್ರಿಯೆ. ಆಸ್ಟಿಯೋಬ್ಲಾಸ್ಟ್‌ಗಳೆಂಬ ವಿಶೇಷ ಕೋಶಗಳ ಕ್ರಿಯೆಯಿಂದ ಇದು ಜರಗುತ್ತದೆ. ಇವು ಯೋಜಿತ ಊತಕಗಳಲ್ಲಿ ಎಲುಬಿನ ಪದರ ಗಳನ್ನು ನಿಕ್ಷೇಪಗೊಳಿಸುತ್ತವೆ. ಕೆಲವು ಮೂಳೆಗಳು ನೇರವಾಗಿ ಯೋಜಿತ ಊತಕದಲ್ಲೇ ರೂಪುಗೊಳ್ಳುತ್ತವೆ. ಇತರ ಮೂಳೆಗಳು ಮೃದ್ವಸ್ಥಿಗಳ ಸ್ಥಾನದಲ್ಲಿ ಅವನ್ನು ಪರಿವರ್ತಿಸಿ ರೂಪುಗೊಳ್ಳುತ್ತವೆ

Search Dictionaries

Loading Results

Follow Us :   
  Download Bharatavani App
  Bharatavani Windows App