भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅಸಿಟೊನೇಮಿಯ

(ವೈ) ರಕ್ತದಲ್ಲಿ ಅಸಿಟೋನ್ ಆಧಿಕ್ಯದಿಂದ ತಲೆದೋರುವ ರೋಗ ಸ್ಥಿತಿ

ಅಸಿಟೋನ್

(ರ) ಪ್ರೋಪನೋನ್, ಡೈಮೀಥೈಲ್ ಕೀಟೋನ್. ಕುಬಿಂ ೫೬.೫0 ಸೆ. ಸೆಲ್ಯುಲೋಸ್ ಅಸಿಟೇಟ್ ರೇಯಾನ್ ತಯಾರಿಕೆಯಲ್ಲಿ ವಿಲೇಯಕವಾಗಿ ಬಳಕೆ

ಅಸಿಟ್ಯಾಬುಲಮ್

(ಪ್ರಾ) ಮನುಷ್ಯನಲ್ಲಿ ತೊಡೆ ಮೂಳೆ ಕುಳಿ. ಕೀಟದಲ್ಲಿ ಕೀಲುಗಳ ಕುದುರು. ಶೀರ್ಷಪದಿ ವರ್ಗಕ್ಕೆ ಸೇರಿದ ಕೆಲವು ಪ್ರಾಣಿಗಳಲ್ಲಿ ದುಂಡಗಿನ ಸ್ನಾಯುಯುತ ಹೀರುನಳಿಗೆ

ಅಸೀಮಾಕ್ಷ ಪುಷ್ಪಮಂಜರಿ

(ಸ) ಪ್ರಧಾನ ಅಕ್ಷ ಪಾರ್ಶ್ವಗಳಲ್ಲಷ್ಟೇ ಒಂದಾದ ಬಳಿಕ ಒಂದು ಬದಿಯಲ್ಲಿ ಹೂ ಬಿಡುತ್ತ ತಾನೇ ಹೂವಿನಲ್ಲಿ ಕೊನೆಗೊಳ್ಳದೆ ಬೆಳೆಯುತ್ತ ಹೋಗುವ ಪುಷ್ಪ ವಿನ್ಯಾಸ. ಅನಿರ್ದಿಷ್ಟ ಪುಷ್ಪವಿನ್ಯಾಸ

ಅಸೆಟಾಲಿಸಿಸ್

(ರ) ಗ್ಲೇಶಿಯಲ್ ಅಸೆಟಿಕ್ ಆಮ್ಲ ಪ್ರಯೋಗಿಸಿ ಆರ್ಗ್ಯಾನಿಕ್ ಸಂಯುಕ್ತದಲ್ಲಿ ಕೆಲವು ಪರಮಾಣುಗಳ ಬದಲು ಅಸಿಟೈಲ್ ಗುಂಪನ್ನು ತೊಡಗಿಸುವ ಪ್ರಕ್ರಿಯೆ

ಅಸೆಟಾಲ್

(ರ) CH3.CH(OC2H5)2 ದ್ರವ; ಕುಬಿಂ ೧೦೪0ಸೆ. ದ್ರಾವಕವಾಗಿ, ಪರಿಮಳ ದ್ರವ್ಯಗಳಲ್ಲಿ ಮತ್ತು ಆರ್ಗ್ಯಾನಿಕ್ ಸಂಯುಕ್ತಗಳ ಸಂಶ್ಲೇಷಣೆಯಲ್ಲಿ ಬಳಕೆ

ಅಸೆಟಿಕ್ ಆನ್‌ಹೈಡ್ರೆಡ್

(ರ) (CH3. CO)2.O ಘಾಟು ವಾಸನೆಯ ಬಿಳಿದ್ರವ. ಕುಬಿಂ ೧೪೦0 ಸೆ ಅಸೆಟಿಕ್ ಆಮ್ಲದ ವ್ಯುತ್ಪನ್ನ. ಪ್ಲಾಸ್ಟಿಕ್‌ಗಳ ತಯಾರಿಕೆಯಲ್ಲಿ ಬಳಕೆ

ಅಸೆಂಬ್ಲರ್

(ಕಂ) ಅಸೆಂಬ್ಲಿ ಭಾಷೆಯಲ್ಲಿ ಬರೆದಿರುವ ಕ್ರಮವಿಧಿಯನ್ನು ಮಷೀನ್‌ಕೋಡ್‌ಗೆ (ಯಂತ್ರ ಸಂಕೇತ) ಅನುವಾದಿಸಲು ನೆರವಾಗುವ ಮತ್ತು ಸಾಮಾನ್ಯವಾಗಿ ಕಂಪ್ಯೂಟರ್ ತಯಾರಕ ಒದಗಿಸಿರುವ ಕ್ರಮವಿಧಿ

ಅಸೆಂಬ್ಲಿ ಭಾಷೆ

(ಕಂ) ಸಾಮಾನ್ಯವಾಗಿ ಸಿಂಬಾಲಿಕ್ ಅಡ್ರೆಸ್‌ಗಳನ್ನು (ಪ್ರತೀಕಾತ್ಮಕ ವಿಳಾಸ) ಉಪಯೋಗಿಸುವ ಲೋ-ಲೆವೆಲ್ ಕ್ರಮ-ವಿಧಾಯಕ ಭಾಷೆ. ಸಿಂಬಾಲಿಕ್ ಅಡ್ರೆಸ್‌ಗಳನ್ನು ಅಸೆಂಬ್ಲರ್ ಕ್ರಮವಿಧಿಯು ಮಷೀನ್ ಕೋಡ್‌ಗಳಿಗೆ ಪರಿವರ್ತಿಸುತ್ತದೆ

ಅಸ್ಟೇಶಿಯಾ

(ವೈ) ನೆಟ್ಟಗೆ ನಿಲ್ಲಲಾಗದಿರುವಿಕೆ; ನಿಲುವುಭಂಗ

ಅಸ್ಟ್ರಗಲಸ್

(ಸ) ದ್ವಿದಳೀ/ಶಿಂಬೆ ಸಸ್ಯಗಳ ಒಂದು ಜಾತಿ. (ವೈ) ಕಾಲು ಹರಡಿನ ಮೂಳೆ. ಗುಲ್ಫಾಸ್ಥಿ

ಅಸ್ತರಿ

(ತಂ) ೧. ನಾಲೆಗಳಲ್ಲಿ ಪಕ್ಕಗಳಿಂದ ನೀರು ಸೋರಿ ಹೋಗದಂತೆ ಜೇಡಿ ಅಥವಾ ಸಿಮೆಂಟಿನಿಂದ ಬದಿಗಳನ್ನು ನೊರೆಯುವುದು. ೨. ಪುಸ್ತಕದ ರಟ್ಟು ಕಟ್ಟಿದ ಮೇಲೆ ಅದು ಹರಿಯದಂತೆ ಗಟ್ಟಿ ಕಾಗದವನ್ನು ಹಿಂಬದಿಗೆ ಅಂಟಿಸುವ ಕ್ರಿಯೆ

ಅಸ್ತವ್ಯಸ್ತತೆ

(ಭೌ) ಪ್ರಾರಂಭ ಸ್ಥಿತಿಯ ವ್ಯತ್ಯಯಗಳಿಗೆ ಅತ್ಯಂತ ಸಂವೇದನಾಶೀಲವಾಗಿರುವ ವ್ಯವಸ್ಥೆಯೊಂದರಲ್ಲಿ ಆವರ್ತನಶೀಲ ಅಲ್ಲದ ಮತ್ತು ಮುನ್ಸೂಚಿಸಲು ಸಾಧ್ಯವಾಗದ ವರ್ತನೆ. ದ್ರವ-ಅನಿಲಗಳ ಪ್ರಕ್ಷುಬ್ದ ಹರಿವು, ದೀರ್ಘವ್ಯಾಪ್ತಿಯ ಹವಾಮಾನ, ಹೃದಯ ಬಡಿತದ ಕ್ರಮರಹಿತ ಲಯ – ಇವು ಅಸ್ತವ್ಯಸ್ತತೆಯನ್ನು ಪ್ರದರ್ಶಿಸುವ ಕೆಲವು ವಿದ್ಯಮಾನಗಳು. ಈ ಸಿದ್ಧಾಂತವನ್ನು ವಿಜ್ಞಾನದ ಶಾಖೆಗಳಲ್ಲಿನ ಪ್ರಕ್ರಿಯೆಗಳಿಗೂ ಗ್ರಹಗತಿ ವಿಜ್ಞಾನ, ಭೌತವಿಜ್ಞಾನ ದಲ್ಲಿ ವಿದ್ಯುತ್ ಆಂದೋಲನ ಇತ್ಯಾದಿಗಳಿಗೂ ವಿಸ್ತರಿಸಲಾಗಿದೆ

ಅಸ್ತಿತ್ವ ಪ್ರಮೇಯ

(ಗ) ನಿರ್ದಿಷ್ಟ ಬಗೆಯ ಒಂದು ವಸ್ತುವಾದರೂ ಇದೆಯೆಂಬ ವಾದ. ಉದಾ: ೧. ಮಿಶ್ರ ಸಹಾಂಕಗಳಿರುವ ಮತ್ತು ಕನಿಷ್ಠ ೧ ಡಿಗ್ರಿಯದಾದ ಯಾವುದೇ ಬಹುಪದಿ P ಕುರಿತಂತೆ P(z) = 0 ಆಗುವಂತೆ ಕನಿಷ್ಠ ಒಂದು ಮಿಶ್ರಸಂಖ್ಯೆಯಾದರೂ ಅಸ್ತಿತ್ವದಲ್ಲಿದೆ. ೨. n ಅeತಗಳಲ್ಲಿರುವ

ಅಸ್ಥಾನಿಕ

(ವೈ) ಅಂಗವನ್ನು ಕುರಿತು ಬಳಸುವ ಪದ. ಹುಟ್ಟಿನಿಂದ ಅಥವಾ ಬೇರಾವುದೇ ಕಾರಣದಿಂದ ಅಂಗ ತನ್ನ ಸಹಜ ಸ್ಥಾನದಿಂದ ವಿಚಲಿತವಾಗಿರುವುದು

ಅಸ್ಥಾಯಿ

(ಭೌ) ನಿರ್ದಿಷ್ಟ ಸ್ಥಾನ ಅಥವಾ ದಿಶೆ ತಳೆಯುವ ಅಥವಾ ಆಯುವ ಪ್ರವೃತ್ತಿ ಇಲ್ಲದಿರುವುದು

ಅಸ್ಥಾಯಿ

(ರ) ಸುಲಭವಾಗಿ ಬದಲಿಸಲು ಅಥವಾ ಪಲ್ಲಟಿಸಲು ಸಾಧ್ಯವಿರುವ ಪರಮಾಣು ಅಥವಾ ಪರಮಾಣು ಗುಂಪು ಇರುವ ರಾಸಾಯನಿಕ ಸಂಯುಕ್ತ. ಪರಿವರ್ತಿ

ಅಸ್ಥಾಯಿ ಗ್ಯಾಲ್ವನೊಮೀಟರ್

(ಭೌ) ಭೂಕಾಂತಕ್ಷೇತ್ರದ ಪರಿಣಾಮ ರದ್ದುಗೊಳ್ಳುವಂತೆ ಎರಡು ಚಲನಶೀಲ ಕಾಂತ ಇರುವ ಸಂವೇದನಾಶೀಲ ಉಪಕರಣ

ಅಸ್ಥಿ ಅನ್ವೇಷಕ

(ರ) ಕ್ಯಾಲ್ಸಿಯಂ ಸದೃಶ ವಿಕಿರಣಪಟು ಧಾತು: ಸ್ಟ್ರಾನ್ಷಿಯಮ್, ರೇಡಿಯಮ್, ಪ್ಲೂಟೋನಿಯಮ್. ಇದು ಮೂಳೆಯೊಳಹೊಕ್ಕು ಅಲ್ಲಿಂದಲೂ ವಿಕಿರಣ ಬೀರಬಲ್ಲದು

ಅಸ್ಥಿ ವಿಜ್ಞಾನ

(ವೈ) ಮೂಳೆಗಳ ರಚನೆ ಕುರಿತು ಅಧ್ಯಯನ ಮಾಡುವ ವೈದ್ಯ ವಿಜ್ಞಾನ ವಿಭಾಗ

Search Dictionaries

Loading Results

Follow Us :   
  Download Bharatavani App
  Bharatavani Windows App