भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅಸಮಮಿತಿ

(ಪ್ರಾ) ಪ್ರಾಣಿ ದೇಹವನ್ನು ಅಥವಾ ವಸ್ತುವನ್ನು ಎರಡು ಸದೃಶ ಭಾಗಗಳಾಗಿ ವಿಭಾಗಿಸಬಲ್ಲ ಸಮತಲವಿಲ್ಲದಿರುವುದು; ಆಕಾರದಲ್ಲಿ ಕ್ರಮರಾಹಿತ್ಯ, ಉದಾ : ಬಸವನ ಹುಳು, ಹೋಲಿಸಿ: ಸಮ್ಮಿತಿ; ಸಮ್ಮಿತಿರಾಹಿತ್ಯ

ಅಸಮರ್ಥ

(ವೈ) ೧. ನಿಗದಿತ ಕೆಲಸವನ್ನು ಮಾಡಲಾಗದ ಸ್ಥಿತಿ. ಹೃದಯ ಅಥವಾ ಸಿರೆಗಳ ಕವಾಟಗಳು ಪೂರ್ಣ ಮುಚ್ಚಿಕೊಳ್ಳಲಾಗದ ಸ್ಥಿತಿ. ೨. ಮನೋವೈದ್ಯಕೀಯದಲ್ಲಿ, ಒಬ್ಬ ತನ್ನ ಬದುಕಿಗೆ ಸಂಬಂಧಿಸಿದ ಹಾಗೆ ಸರಿ ತಪ್ಪುಗಳನ್ನು ತಿಳಿದು ತೀರ್ಮಾನವನ್ನು ತೆಗೆದುಕೊಳ್ಳಲಾಗದ ಸ್ಥಿತಿ (ಭೂವಿ) ತಮ್ಮ ಮೇಲೆ ಇರುವ ಸಾಮಗ್ರಿಯ ತೂಕಕ್ಕೆ ಹಾನಿ ಉಂಟುಮಾಡದೆ ಅಥವಾ ತಾವೇ ವ್ಯತ್ಯಯಕ್ಕೊಳಗಾಗದೆ, ಆಸರೆ ನೀಡಲು ಸಾಕಷ್ಟು ಬಲ ಇರದ (ಸ್ತರಗಳು)

ಅಸಮವರ್ತನೆ

(ರ, ಭೂವಿ) ಪದಾರ್ಥದ ಒಂದು ಗುಣವು ಅದರ ಅಳತೆಯ ದಿಶಾವಲಂಬಿಯಾಗಿರುವುದು. ಉದಾ: ಕೆಲವು ಸ್ಫಟಿಕಗಳಿಗೂ ದ್ರವ-ಸ್ಫಟಿಕಗಳಿಗೂ ವಿಭಿನ್ನ ದಿಶೆಗಳಲ್ಲಿ ವಿಭಿನ್ನ ವಕ್ರೀಭವನಾಂಕಗಳಿರುವುದು. ಅಸಮದೈಶಿಕತೆ

ಅಸಮವರ್ತಿ

(ಭೌ,ರ) ವಿಭಿನ್ನ ದಿಶೆಗಳಲ್ಲಿ ವಿಭಿನ್ನ ಭೌತ ಗುಣಗಳಿರುವ (ಸ) ಉದ್ದೀಪನೆಗೆ ಏಕದಿಶಾ ಪ್ರತಿಕ್ರಿಯೆ ಪ್ರದರ್ಶಿಸುವ

ಅಸಮವರ್ತಿ ವಾಹಕತೆ

(ಭೌ) ವಿದ್ಯುತ್/ಉಷ್ಣ ಪ್ರವಾಹ ವಿಭಿನ್ನ ದಿಶೆಗಳಿಗೆ ಹರಿದಂತೆ ಅದಕ್ಕೆ ಅನುಗುಣವಾಗಿ ಕಾಯವು ವಿಭಿನ್ನ ವಾಹಕತೆ ಪ್ರದರ್ಶಿಸುವ ಗುಣ

ಅಸಮವಲಯ

(ಸ) ಪುಷ್ಪ ಭಾಗಗಳ ಪ್ರತಿಯೊಂದು ಸುತ್ತಿನಲ್ಲಿಯೂ ಭಾಗಗಳು ಭಿನ್ನ ಸಂಖ್ಯೆಯವಾಗಿರುವ

ಅಸಮಾಂಗ ವಿತರಣೆಗಳು

(ಸಂ) ದತ್ತಾಂಶದಲ್ಲಿ ಮೌಲ್ಯಗಳ ವಿತರಣೆಯನ್ನು ಆವರ್ತಾಂಕ ವಕ್ರದ ಮೂಲಕ ತೋರ್ಪಡಿಸಿದಾಗ ಅದು ತನ್ನ ಅತ್ಯುನ್ನತ y-ನಿರ್ದೇಶಕವನ್ನು ಕುರಿತಂತೆ ಅಸಮಾಂಗವಾಗಿರುವುದು; ಅಂದರೆ ಎಡಭಾಗ ಬಲಭಾಗದ ಪ್ರತಿಬಿಂಬವಲ್ಲ; ಒಂದು ಪ್ರದೇಶದ ಜನರ ಆದಾಯದ ವಿತರಣೆ ಇದಕ್ಕೊಂದು ನಿದರ್ಶನ

ಅಸಮಾಂಗಿ

(ರ) ನೋಡಿ: ಸಮಾಂಗಿ

ಅಸಮಾಂಗುಲಿ

(ಪ್ರಾ) ಹಕ್ಕಿಯ ೪ ಕಾಲ್ಬೆರಳುಗಳ ಪೈಕಿ ೩ ಮುಂದಕ್ಕಿದ್ದು ೧ ಹಿಂದಕ್ಕಿರುವ (ಕೊಂಬೆ/ಅಡ್ಡಕಂಬಿ ಮೇಲೆ ಇಳಿದಾಗ ವಿಶೇಷವಾಗಿ ಕಂಡುಬರುವಂತೆ). ಉದಾ: ಪಕ್ಷಿ ವರ್ಗದ ಪ್ಯಾಸರಿಫಾರ್ಮೀಸ್ ಗಣದ ಪಕ್ಷಿಗಳು

ಅಸಮಾನುಪಾತನ

(ರ) ಒಂಟಿ ಸಂಯುಕ್ತ ಏಕಕಾಲದಲ್ಲೇ ಉತ್ಕರ್ಷಣೆಗೆ ಹಾಗೂ ಅಪಕರ್ಷಣೆಗೆ ಒಳಗಾಗುವ ರಾಸಾಯನಿಕ ಕ್ರಿಯೆ. ಉದಾ: ಫಾಸ್ಫರಸ್ ಆಮ್ಲವನ್ನು (H3PO3) ಕಾಸಿದಾಗ ಅದು ಫಾಸ್ಫಾರಿಕ್ ಆಮ್ಲವಾಗಿ (H3PO4) ಉತ್ಕರ್ಷಣೆಗೊಂಡು ಫಾಸ್ಫೀನ್ ಆಗಿ ಅಪಕರ್ಷಿತವಾಗುವುದು

ಅಸಹಕಾರತ್ವ

(ವೈ) ನರಮಂಡಲದಲ್ಲಿಯ ವಿಕಾರದ ಕಾರಣವಾಗಿ ಸ್ನಾಯು ಚಲನೆಗಳಲ್ಲಿ ಸಮನ್ವಯ ತಪ್ಪಿ ಹೋಗುವುದು. ಅಸಿನರ್ಜಿಯ

ಅಸಹನೀಯತೆ

(ವೈ) ಒಂದು ಪೋಷಕಾಂಶದ ಅಸಹಜ ಉಪಾಪಚಯ ಅಥವಾ ಅದರ ಉತ್ಪನ್ನಗಳನ್ನು ಪೂರ್ಣವಾಗಿ ವಿಸರ್ಜಿಸಲಾಗದ ಸ್ಥಿತಿ. ಉದಾ: ಜನ್ಮದತ್ತ ಫ್ರಕ್ಟೋಸ್ ಅಸಹನೀಯತೆ. ಫ್ರಕ್ಟೋಸ್-೧-ಆಲ್ಡೋಲೇಸ್ ಎಂಬ ಯಕೃತ್ ಕಿಣ್ವದ ಕೊರತೆಯ ಕಾರಣ ಫ್ರಕ್ಟೋಸ್ ಸಕ್ಕರೆಯನ್ನು ಜೀರ್ಣಿಸಲಾಗದ ಸ್ಥಿತಿ. ಫ್ರಕ್ಟೋಸನ್ನು ದೀರ್ಘಕಾಲ ಸೇವಿಸುವ ಮಕ್ಕಳಲ್ಲಿ ವಾಂತಿ, ರಕ್ತಗ್ಲೂಕೋಸ್ ಇಳಿತ, ಯಕೃತ್ ವೃದ್ಧಿ, ಕಾಮಾಲೆ, ಅಲ್ಬ್ಯುಮಿನ್‌ಯುಕ್ತ ಮೂತ್ರ ಮುಂತಾದ ರೋಗಲಕ್ಷಣ ತಲೆದೋರಿ ಮಗು ಅಸು ನೀಗಬಹುದು

ಅಸಾಂಗತ್ಯ

(ಭೂವಿ) ಪರಸ್ಪರ ಸಂಬಂಧಿತ ಶಿಲಾ ಮಡಿಕೆಗಳಲ್ಲಿ ಗೌಣ ಮಡಿಕೆಯು ಪ್ರಧಾನ ಮಡಿಕೆಯ ಅಕ್ಷ ಹಾಗೂ ಅಕ್ಷೀಯ ತಲಗಳಿಗೆ ಸಮಾಂತರವಲ್ಲದ ಅಕ್ಷ ಹಾಗೂ ಅಕ್ಷೀಯ ತಲಗಳಿಂದ ಕೂಡಿರುವುದು (ಪ್ರಾ) ಕೀಲುಗಳಲ್ಲಿ ಒಂದು ಮೂಳೆ ಇನ್ನೊಂದರೊಂದಿಗೆ ಸಹಜವಾಗಿ ಹೊಂದಿಕೊಂಡು ಹೋಗದಂತೆ ಇರುವುದು. ಅಸಮಂಜಸತೆ, ಅನುಚಿತತೆ

ಅಸಾಂಗತ್ಯ

(ಖ) ಸೂರ್ಯನನ್ನು ಗ್ರಹಕ್ಕೆ ಜೋಡಿಸುವ ರೇಖೆ, ಪುರರವಿಯಿಂದ ಗ್ರಹಚಲನ ದಿಶೆಯಲ್ಲಿ ಅಳೆದಂತೆ, ಕಕ್ಷೆಯ ಪ್ರಧಾನಾಕ್ಷದ ಜೊತೆ ರಚಿಸುವ ಕೋನ. ಪುರಾಂತರ ವೈಪರೀತ್ಯ, ನೀಚಾಂತರ (ಸಾ) ನಿರ್ಧಾರಿತ ಮೌಲ್ಯ ಕುರಿತಂತೆ ಕಂಡುಬರುವ ಚ್ಯುತಿ. ನೋಡಿ: ಉತ್ಕೇಂದ್ರೀಯ ಕೋಣಿಕಾಂತರ

ಅಸಾಂದ್ರೀಕರಣೀಯ

(ಭೌ) ದ್ರವ ಅಥವಾ ಘನ ಸ್ಥಿತಿಗೆ ತರಲಾಗದ. ಸಾಂದ್ರೀಕರಿಸಲಾಗದ

ಅಸಾಧಾರಣ ಕಿರಣ

(ಭೌ) ಅಸಮವರ್ತಿ ಏಕಾಕ್ಷೀಯ ಸ್ಫಟಿಕದ ಮೇಲೆ ಆಪಾತವಾದ ಕಿರಣವು ವಿಭಜನೆ ಗೊಂಡು ಉಂಟಾದ ಎರಡು ಕಿರಣಗಳಲ್ಲೊಂದು. ಸ್ಫಟಿಕದ ಮೇಲ್ಮೈ ಮೇಲೆ ಈ ಕಿರಣದ ವಿಪಥನ ಸ್ಫಟಿಕದ ದಿಗ್ವಿನ್ಯಾಸವನ್ನು ಅವಲಂಬಿಸಿದೆ. ನೋಡಿ: ಸಾಧಾರಣ ಕಿರಣ

ಅಸಿಟಮೈಡ್

(ರ) CH3CONH2; ಸೂಜಿ ಸದೃಶ ಸ್ಫಟಿಕಗಳ ರೂಪದಲ್ಲಿರುವ ಬಿಳಿ ಬಣ್ಣದ ಘನ ಪದಾರ್ಥ; ನೀರು, ಆಲ್ಕಹಾಲ್‌ಗಳಲ್ಲಿ ವಿಲೇಯ; ದ್ರಬಿಂ ೮೨0 ಸೆ; ಕುಬಿಂ ೨೨೨0 ಸೆ. ಕೈಗಾರಿಕೆಗಳಲ್ಲಿ ದ್ರಾವಕವಾಗಿ ಬಳಕೆ

ಅಸಿಟಾಲ್ಡಿಹೈಡ್

(ರ) CH3CHO; ಹಣ್ಣಿನ ಘಾಟು ವಾಸನೆ ಸೂಸುವ ನಿರ್ವರ್ಣ ದ್ರವ; ಕುಬಿಂ ೨೧0 ಸೆ; ದ್ರಬಿಂ-೧೨೧0ಸೆ; ಸಾಸಾಂ ೦.೮; ಆರ್ಗ್ಯಾನಿಕ್ ಸಂಯುಕ್ತಗಳ ಸಂಶ್ಲೇಷಣೆಗೆ ಅವಶ್ಯವಾದ ಮಧ್ಯವರ್ತಿ ಕಚ್ಚಾ ಪದಾರ್ಥ

ಅಸಿಟಿಕ್ ಆಮ್ಲ

(ರ) CH3COOH; ತೀಕ್ಷ್ಣ ವಾಸನೆಯ ಸಂಕ್ಷಾರಕ ದ್ರವ. ಮರದ ವಿನಾಶಕ ಅಸವನದಿಂದ ಪಡೆಯಲಾಗುತ್ತದೆ. ದ್ರಬಿಂ ೧೬.೬0ಸೆ; ಕುಬಿಂ ೧೧೮0 ಸೆ; ಸಾಸಂ (೨೦0 ಸೆ) ೧.೦೪೯೭

ಅಸಿಟಿಲೀನ್

(ರ) HC   Hc; ಕ್ಯಾಲ್ಸಿಯಮ್ ಕಾರ್ಬೈಡ್ ಜೊತೆ ನೀರಿನ ರಾಸಾಯನಿಕ ಕ್ರಿಯೆಯಿಂದ ಲಭಿಸುವ ನಿರ್ವರ್ಣ ಅನಿಲ; ಆಲ್ಕೈನ್ ಶ್ರೇಣಿಯ ಮೊದಲ ಸದಸ್ಯ. ಉಜ್ಜ್ವಲವಾಗಿ ಉರಿ ಯುವುದರಿಂದ ಬೆಳಕಿಗಾಗಿ, ಬೆಸುಗೆಕಾರ್ಯದಲ್ಲಿ ರಾಸಾಯನಿಕ ಕೈಗಾರಿಕೆಯಲ್ಲಿ ಬಳಕೆ. ನೋಡಿ: ಆಕ್ಸಿಅಸಿಟಲೀನ್ ಜ್ವಾಲೆ

Search Dictionaries

Loading Results

Follow Us :   
  Download Bharatavani App
  Bharatavani Windows App