Navakarnataka Vijnana Tantrajnana Padasampada (2011)
Navakarnataka Publications Private Limited
ಅಂಗಾಂಶ
(ಜೀ) ನೋಡಿ : ಊತಕ
ಅಂಗಾಂಶ ಕೃಷಿ
(ಸ) ನೋಡಿ : ಊತಕ ಕೃಷಿ
ಅಂಗೀಕೃತ ಪಟ್ಟಿ
(ಭೌ) ಅಣುವಿನಲ್ಲಿ ಅಥವಾ
ಅಂಗೀಕೃತ ಸಂಕ್ರಮಣ
(ಭೌ) ಶಕ್ತಿ ಮಟ್ಟಗಳ ನಡುವೆ ಎಲೆಕ್ಟ್ರಾನ್ಗಳ ಸಂಕ್ರಮಣ. ಇದು ಯಾವುದೇ ಕ್ವಾಂಟಮ್ ಆಯ್ಕೆ ನಿಯಮದಿಂದ ಪ್ರತಿಬಂಧಿತವಲ್ಲದುದು. ಅನುಮತ ಸಂಕ್ರಮಣ
ಅಂಗುಲ
(ಗ) ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ =೧/೩೬ ಗಜ=೧/೧೨ ಅಡಿ=೦.೦೨೫೪ ಮೀ. ಇಂಚು
ಅಂಗುಲಾಸ್ಥಿ
(ಪ್ರಾ) ಕೈಯ ಅಥವಾ ಕಾಲಿನ ಬೆರಳೆಲುಬು
ಅಂಗುಲಿಗಾಮಿ
(ಪ್ರಾ) ಹಿಮ್ಮಡಿ ಊರದೆ ಬೆರಳುಗಳ ಮೇಲೆಯೇ ನಡೆಯುವ (ಪ್ರಾಣಿ). ಉದಾ: ನಾಯಿ, ಬೆಕ್ಕು, ಸಿಂಹ
ಅಂಗುಲೀಯ
(ಜೀ) ಬಿಡಿಬಿಡಿಯಾದ ಬೆರಳುಗಳಿರುವ, ಬೆರಳುಗಳಂಥ ಕವಲುಗಳಿರುವ
ಅಂಗುಸ್ತಾನ
(ತಂ) ಸೂಜೊತ್ತು. (ದರ್ಜಿಯ) ಬೆರಳ ಕಾಪು. ಅಂಗುಲಿತ್ರಾಣ
ಅಂಗುಳು
(ಜೀ) ಕಶೇರುಕಗಳಲ್ಲಿ ಬಾಯಿಯ, ಕೀಟಗಳಲ್ಲಿ ಗಂಟಲಿನ, ಮೇಲ್ಭಾಗ. ತಾಲು
ಅಗೂಟೀ
(ಪ್ರಾ) ಇದು ರಾಡೆನ್ಷಿಯ ವರ್ಗದ ಕೇವಿಡೀ ಎಂಬ ಮೂಷಿಕ ಕುಟುಂಬಕ್ಕೆ ಸೇರಿದ ಮೊಲ ಗಾತ್ರದ ಸ್ತನಿ. ಟ್ರಿನಿಡಾಡ್ ಮತ್ತು ಗಿನಿ ಪ್ರದೇಶ ವಾಸಿ. ನಿಶಾಚರಿ. ಗಿಡಗಳ ಬೇರು, ಎಲೆ ಕಾಯಿ ಇದರ ಆಹಾರ
ಅಗೇಟ್
(ಭೂವಿ) ಕ್ವಾರ್ಟ್ಸ್ನ ಒಂದು ರೂಪ. ಒಂದು ಅರೆರತ್ನ ಖನಿಜ. ನೋಡಿ : ಓರಿಯಂಟಲ್ ಅಗೇಟ್
ಅಂಗೋರ
(ಸಾ) ಅಂಗೋರ ನಗರದ ಮೊಲ ಅಥವಾ ಮೇಕೆಯ ಕೂದಲು ಅಥವಾ ಇದರಿಂದ ನೇಯ್ದು ತಯಾರಿಸಿದ ಮೆತ್ತನೆ ಹಾರ ಮತ್ತು ವಸ್ತ್ರ
ಅಗ್ನಿಮಾಂದ್ಯ
(ವೈ) ಆಹಾರ ಸರಿಯಾಗಿ ಜೀರ್ಣವಾಗದ ಸ್ಥಿತಿ. ಅಜೀರ್ಣ ವ್ಯಾಧಿ
ಅಗ್ನಿಶಾಮಕಗಳು
(ತಂ) ಬೆಂಕಿಯ ಮೂಲಕ್ಕೆ ಅನುಗುಣವಾಗಿ ಶಾಮಕದ ಬಳಕೆ. ‘ಎ’ ವರ್ಗದ ಬೆಂಕಿಯಾದರೆ (ಕಾಗದ ಮರ ಮುಂತಾದ ಘನ ದಹ್ಯಗಳಿಂದ ಆದುದು) ಒತ್ತಡ ದಲ್ಲಿರುವ ನೀರು, ಸೋಡಿಯಮ್ ಬೈ ಕಾರ್ಬೊನೇಟ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ವರ್ತನೆಯಿಂದ ಉತ್ಪಾದಿಸಿದ ಕಾರ್ಬನ್ ಡೈ ಆಕ್ಸೈಡ್ ಅಥವಾ ಬ್ರೋಮೊ ಫ್ಲೂರೋಕ್ಲೋರೈಡ್ ಮೀಥೇನ್ ನಂಥ (ಬಿ.ಸಿ.ಎಫ್.) ಹ್ಯಾಲೊಜನೀಕೃತ ಹೈಡ್ರೊಕಾರ್ಬನ್ ಗಳನ್ನು ಸಿಂಪಡಿಸುವುದು ವಾಡಿಕೆ. ‘ಬಿ’ ವರ್ಗದ ಬೆಂಕಿಯಾದರೆ (ಪೆಟ್ರೋಲ್ನಂಥ ದಹನಶೀಲ ದ್ರವಗಳಿಂದಾದುದು) ಅದನ್ನು ಆರಿಸಲು ಅಲ್ಯೂಮಿನಿಯಮ್ ಸಲ್ಫೇಟ್ ಮತ್ತು ಸೋಡಿಯಮ್ ಬೈ ಕಾರ್ಬೊನೇಟ್ ದ್ರಾವಣಗಳ ವರ್ತನೆಯಿಂದ ಹುಟ್ಟಿದ ಕಾರ್ಬನ್ ಡೈ ಆಕ್ಸೈಡ್ನ ನೊರೆ ಪ್ರಶಸ್ತ
ಅಗ್ನಿಶಿಲೆ
(ಭೂವಿ) ಮ್ಯಾಗ್ಮದ, ಅಂದರೆ ಘನೀಭವಿಸುವ ಮುನ್ನಿನ ಶಿಲಾದ್ರವದ, ಉಷ್ಣವು ನಷ್ಟವಾದಂತೆ ಅದು ಹೆಪ್ಪುಗಟ್ಟಿ ಅಕ್ಕಪಕ್ಕದ ಸಂಸ್ತರಗಳ ಒತ್ತಡ ದಿಂದ ಮೈದಳೆದ ಶಿಲೆ. ಭೂಮಿಯಲ್ಲಿರುವ ಇತರ ಎರಡು ವಿಧದ ಶಿಲೆಗಳೆಂದರೆ ಜಲಜ ಅಥವಾ ಅವಸಾದನ ಶಿಲೆ, ರೂಪಾಂತರಿತ ಶಿಲೆ. ನೋಡಿ : ರೂಪಾಂತರಿತ ಶಿಲೆ, ಜಲಜ ಅಥವಾ ಅವಸಾದನ ಶಿಲೆ
ಅಂಗ್ಯುಲ
(ಪ್ರಾ) ಬೆರಳಿನ ತುದಿಯಲ್ಲಿರುವ ಉಗುರು, ಗೊರಸು ಅಥವಾ ಮೊನೆಯುಗುರು. ಪಂಜ
ಅಂಗ್ಯುಲೇಟ
(ಪ್ರಾ) ಗೊರಸು ಪ್ರಾಣಿಗಳ ಗಣ. ಖುರಯುಕ್ತ. ಖುರಯುತ ಪ್ರಾಣಿ
ಅಗ್ರ
(ಜೀ) ಸಹಪತ್ರದ ಮುಂದಿನ ಪುಷ್ಪ ಪಾರ್ಶ್ವ. ಚರಜೀವಿ ಚಲಿಸುವಾಗ ಅದರ ದೇಹದ ಮೊದಲ ಭಾಗ. ಕಪಾಲೀಕರಣವಾಗುವ ಪ್ರಾಣಿಗಳಲ್ಲಿ ಮುಂಭಾಗದ ಹತ್ತಿರವಿರುವ ಅಥವಾ ಅನುದೀರ್ಘಾಕ್ಷದ ಕಪಾಲ ಕೊನೆಯಲ್ಲಿರುವ ಭಾಗ. ಮಾನವನಲ್ಲಿ ಉದರ ಪಾರ್ಶ್ವ
ಅಗ್ರ ಉರೋಸ್ಥಿ