भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅವ್ಯತ್ಯಸ್ತ

(ಗ) ಬೈಜಿಕ ಸಮೀಕರಣದಲ್ಲಿಯ ಸ್ಥಿರ ಸಹಾಂಕಗಳ ನಡುವಿನ ಒಂದು ವಿಶೇಷ ಗುಣ. ಅಕ್ಷಗಳ ಸರಳ/ಆವರ್ತನ ಚಲನೆಗಳಲ್ಲಿ ಇದು ವ್ಯತ್ಯಯವಾಗುವುದಿಲ್ಲ. ಉದಾ: ax2+bxy+cy2+dx+ey+f=0 ಸಮೀಕರಣ ಕುರಿತಂತೆ a+c ಮತ್ತು b2-4ac ಉಕ್ತಿಗಳ ಬೆಲೆಗಳು. ಎಂದೇ ಇವುಗಳಿಗೆ ಮೇಲಿನ ಸಾರ್ವತ್ರಿಕ ದ್ವಿಘಾತೀಯ ಸಮೀಕರಣದ ಅವ್ಯತ್ಯಸ್ತಗಳೆಂದು ಹೆಸರು. ಅಚರ. ನಿಶ್ಚರ

ಅವ್ಯಾಕೃತ ದ್ರವ್ಯ

(ರ) ರಾಸಾಯನಿಕ ಧಾತುಗಳು ಇದರಿಂದ ಏರ್ಪಟ್ಟಿರುವುವೆಂದು ಊಹಿಸುವ ಆದ್ಯ ವ್ಯತ್ಯಾಸ ರಹಿತ ದ್ರವ್ಯ

ಅಂಶ

(ಗ) ಭಿನ್ನರಾಶಿಯಲ್ಲಿ ವಿಭಾಜಕ ರೇಖೆಯ ಮೇಲಿನ ಸಂಖ್ಯೆ. ಕೆಳಗಿನ ಸಂಖ್ಯೆಯ ಹೆಸರು ಛೇದ. ಛೇದದಿಂದ ಸೂಚಿತವಾದ ಭಾಗಗಳಲ್ಲಿ ಎಷ್ಟು ಭಾಗಗಳನ್ನು ತೆಗೆದುಕೊಂಡಿದೆ ಎಂಬುದನ್ನು ಅಂಶ ಸೂಚಿಸುತ್ತದೆ. ಉದಾ : ¾ ರಲ್ಲಿ ಅಂಶ ೩, ಛೇದ ೪. ನೋಡಿ: ಛೇದ

ಅಂಶೀಕರಣ

(ರ) ನೋಡಿ: ಭಿನ್ನೀಕರಣ

ಅಶುದ್ಧತೆ

(ರ) ಶುದ್ಧ ವಸ್ತುವಿನಲ್ಲಿ ಅನಪೇಕ್ಷಿತ ಪರಕೀಯ ಪದಾರ್ಥ ಸೇರಿರುವುದು. (ಭೌ) ಅಪೇಕ್ಷಿತ ಮಾದರಿಯ ವಾಹಕತೆಯನ್ನು ಪಡೆಯಲು ಅರೆವಾಹಕಕ್ಕೆ (ಸಿಲಿಕಾನ್ ಅಥವಾ ಜರ್ಮೇನಿಯಮ್) ಸಣ್ಣ ಪ್ರಮಾಣಗಳಲ್ಲಿ ಪರಕೀಯ ಪದಾರ್ಥ (ಇಂಡಿಯಮ್, ಆರ್ಸೆನಿಕ್, ಗ್ಯಾಲಿಯಮ್, ಸೀಸ, ಲಿಥಿಯಮ್, ತವರ ಇತ್ಯಾದಿ)ಗಳನ್ನು ವಿಸರಿಸಿರುವುದು. ಇದು ಅರೆವಾಹಕಕ್ಕೆ ಮುಕ್ತ ಎಲೆಕ್ಟ್ರಾನ್‌ಗಳನ್ನು ಒದಗಿಸುತ್ತದೆ ಅಥವಾ ಅದರಿಂದ ಎಲೆಕ್ಟ್ರಾನ್‌ಗಳನ್ನು ಸ್ವೀಕರಿಸುತ್ತದೆ

ಅಶೋಕ ವೃಕ್ಷ

(ಸ) ಫ್ಯಾಬೇಸೀ ಕುಟುಂಬಕ್ಕೆ ಸೇರಿದ ಮರ. ಸರಕ ಅಶೋಕ ವೈಜ್ಞಾನಿಕ ನಾಮ. ಇದರ ತೊಗಟೆಯಲ್ಲಿ ಇರುವ ಗ್ಯಾಲಿಕ್‌ಆಮ್ಲ ಔಷಧಿಗಳಿಗೆ ಉಪಯುಕ್ತ. ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಭಾರತದ ಪ್ರಾಚೀನ ಸಾಹಿತ್ಯದಲ್ಲಿ ಈ ವೃಕ್ಷಕ್ಕೆ ಮುಖ್ಯ ಸ್ಥಾನವಿದೆ

ಅಶ್ಮರಿ

(ವೈ) ಕೆಲವು ವ್ಯಾಧಿಗಳ ಕಾರಣ ದೇಹದಲ್ಲಿ ರೂಪುಗೊಳ್ಳುವ, ಸಾಮಾನ್ಯವಾಗಿ ನಿರವಯವ ಪದಾರ್ಥಗಳ, ಹರಳು ಅಥವಾ ದೊಡ್ಡ ಕಣ. ಉದಾ: ಪಿತ್ತಕೋಶದಲ್ಲಿ ಮೈದಳೆಯುವ ಕಲ್ಲು. ಪಿತ್ತಾಶ್ಮರಿ

ಅಶ್ಮರೀಶಾಸ್ತ್ರ

(ವೈ) ಮೂತ್ರಪಿಂಡ ಹಾಗೂ ಮೂತ್ರಕೋಶ ಗಳಲ್ಲಿ ಹರಳುಗಳು ರೂಪುಗೊಳ್ಳುವ ಬಗೆಯನ್ನು ಅಧ್ಯಯನ ಮಾಡುವ ಶಾಸ್ತ್ರ. ಕಂಕರವಿಜ್ಞಾನ (ಭೂವಿ) ಕಲ್ಲುಬಂಡೆಗಳ ರಚನೆ, ರಾಸಾಯನಿಕ ಸಂಯೋಜನೆ ಮೊದಲಾದವನ್ನು ಕುರಿತ ಅಧ್ಯಯನ. ಶಿಲಾಶಾಸ್ತ್ರ

ಅಶ್ರಗ

(ಗ) ಎರಡು ಸಮಾಂತರ ಸರ್ವಸಮ ಬಹು ಭುಜಗಳು ಆಧಾರತಲಗಳಾಗಿದ್ದು ಎಲ್ಲ ಫಲಕಗಳೂ ಸಮಾಂತರ ಚತುರ್ಭುಜ ಗಳಾಗಿರುವ ಬಹುಫಲಕ. ಆಧಾರತಲಗಳು ತ್ರಿಭುಜ ಗಳಾದರೆ – ತ್ರಿಕೋಣೀಯ ಅಶ್ರಗ. ಪಟ್ಟಕ. (ಭೌ) ವಿಶೇಷವಾಗಿ ದ್ಯುತಿ ವಿಜ್ಞಾನ ದಲ್ಲಿ: ಸಾಧಾರಣವಾಗಿ ತ್ರಿಕೋಣೀಯ ಆಧಾರತಲ ಗಳಿರುವ ಗಾಜಿನ ಇಲ್ಲವೇ ಇತರ ಯಾವುದೇ ಪದಾರ್ಥದಿಂದ ತಯಾರಿಸಿದ ಗಟ್ಟಿ. ಕಿರಣ ಪಥವನ್ನು ವಿಚಲಿಸಲು, ಬಿಳಿ ಬೆಳಕನ್ನು ಪ್ರಸರಿಸಲು ಅಥವಾ ತಲೆಕೆಳಗಾದ (ಪ್ರತೀಪಿತ/ಪ್ರತಿಲೋಮಿತ) ಪ್ರತಿಬಿಂಬ ಸ್ಥಾಪಿಸಲು ಬಳಕೆ. ನೋಡಿ: ನಿಕಲ್ ಅಶ್ರಗ

ಅಶ್ರಗ ದಿಕ್ಸೂಚಿ

(ತಂ) ಮೋಜಣಿಯಲ್ಲಿ , ಒಂದು ವಸ್ತುವಿನ ಕೋನವನ್ನು ನೇರವಾಗಿ ಅಳೆಯುವ ಸಲಕರಣೆ. ಇದರಲ್ಲಿ ವಸ್ತು ದೃಷ್ಟಿಪಥದಲ್ಲಿರುವಾಗಲೇ ಅದರ ಕೋನಾಂತರದ ಅಳತೆಯ ಗುರುತನ್ನು ಓದಲು ಸಾಧ್ಯವಾಗುವಂತೆ ಅಶ್ರಗವನ್ನು ಅಳವಡಿಸಲಾಗಿರುತ್ತದೆ

ಅಶ್ರು

(ಪ್ರಾ) ನೋಡಿ : ಕಂಬನಿ

ಅಶ್ರು ಅನಿಲಗಳು

(ರ) ಕಣ್ಣೀರು ತರಿಸುವ ಅನಿಲಗಳು. ಕಡಿಮೆ ಸಾರತೆಯಲ್ಲೂ ಕಣ್ಣುಗಳಿಗೆ ಉರಿ ಉಂಟುಮಾಡಿ ಗೋಚರತೆಯನ್ನು ದುಸ್ಸಾಧ್ಯವಾಗಿಸುತ್ತವೆ. ಗಲಭೆ-ಗುಂಪು ಚದುರಿಸಲು ಸಾಮಾನ್ಯವಾಗಿ ಬಳಕೆ. ಅಶ್ರುವಾಯು

ಅಶ್ರುನಾಳ

(ವೈ) ಉನ್ನತ ವರ್ಗದ ಪ್ರಾಣಿಗಳಲ್ಲಿ ಕಣ್ಣಿನ ಒಳಕೋನದಿಂದ ಮೂಗಿನ ಒಳಕ್ಕೆ ಹೋಗುವ ಮತ್ತು ಅಶ್ರುಗ್ರಂಥಿ ಉತ್ಪಾದಿಸುವ ದ್ರವವನ್ನು ಬಸಿಯುವ ನಾಳ

ಅಶ್ವ ಅಕ್ಷಾಂಶಗಳು

(ಪವಿ) ಸರಿಸುಮಾರು ೩೦0-೩೫0 ಉತ್ತರ ಹಾಗೂ ದಕ್ಷಿಣ ಸಾಗರಗಳ ಮೇಲಿನ ಅಕ್ಷಾಂಶಗಳ ಪಟ್ಟಿ. ಇಲ್ಲಿ ಮಾರುತ ಪ್ರವಾಹ ಬಲುಮಟ್ಟಿಗೆ ಪ್ರಶಾಂತ ಅಥವಾ ಅತ್ಯಂತ ಲಘು. ಹವೆ ಬಿಸಿ ಹಾಗೂ ಶುಷ್ಕ. ನೋಡಿ : ವಾಣಿಜ್ಯ ಮಾರುತ

ಅಶ್ವ ಸಾಮರ್ಥ್ಯ

(ಭೌ) h.p. ಯಂತ್ರಶಾಸ್ತ್ರದಲ್ಲಿ ಸಾಮರ್ಥ್ಯದ ಬ್ರಿಟಿಷ್ ಏಕಮಾನ. ಸೆಕೆಂಡಿಗೆ ೫೫೦ ಅಡಿ-ಪೌಂಡ್. ೧ h.p.=೭೪೫.೭ ವಾಟ್

ಅಷ್ಟಕ

(ರ) ಜಡಾನಿಲವೊಂದರ ಪರಮಾಣುವಿನ ಬಾಹ್ಯ ಎಲೆಕ್ಟ್ರಾನ್ ಚಿಪ್ಪನ್ನು ರೂಪಿಸುವ ಎಂಟು ಎಲೆಕ್ಟ್ರಾನ್‌ಗಳ ಸ್ಥಿರ ಗುಂಪು. (ಹೀಲಿಯಮ್ ಇದಕ್ಕೆ ಅಪವಾದ. ಇದರ ಏಕೈಕ ಎಲೆಕ್ಟ್ರಾನ್ ಚಿಪ್ಪಿನಲ್ಲಿ ಎರಡು ಎಲೆಕ್ಟ್ರಾನ್‌ಗಳಷ್ಟೆ ಇವೆ). ಧಾತುಗಳ (ಹೈಡ್ರೊಜನ್ ಬಿಟ್ಟು) ಪರಮಾಣುಗಳು ಸಂಯುಕ್ತಗಳನ್ನು ರೂಪಿಸಲು ಜೊತೆಗೂಡಿದಾಗ ತಮ್ಮಲ್ಲಿರುವ ಎಲೆಕ್ಟ್ರಾನ್‌ಗಳನ್ನು ದಾನಮಾಡುವ ಅಥವಾ ಹಂಚಿಕೊಳ್ಳುವ ಮೂಲಕ ಹಾಗೆ ಮಾಡುತ್ತವೆ ಮತ್ತು ಜೊತೆಗೂಡಿದ ಒಂದೊಂದು ಪರಮಾಣುವೂ ತನ್ನ ಬಾಹ್ಯ ಚಿಪ್ಪಿನಲ್ಲಿ ಒಂದು ಪೂರ್ಣಗೊಂಡ ಅಷ್ಟಕದಿಂದ ಕೂಡಿರುವಂತೆ ಜೊತೆಗೂಡುತ್ತದೆ

ಅಷ್ಟಭುಜ

(ಗ) ಸಮನಾದ ಎಂಟು ಕೋನಗಳೂ ಎಂಟು ಭುಜಗಳೂ ಇರುವ ಸಮತಲಾಕೃತಿ

ಅಷ್ಟಮಾನ ಪದ್ಧತಿ

(ಗ) ಸಂಖ್ಯೆ ೮ ಆಧಾರ ಸಂಖ್ಯೆಯಾಗಿರುವ ಗಣನ ಪದ್ಧತಿ. ಇದರಲ್ಲಿ ೦ಯಿಂದ ೭ರವರೆಗಿನ ಎಂಟು ಪ್ರತೀಕಗಳಿರುತ್ತವೆ. ೭ರ ಬಳಿಕ ೧೦, ೧೧,….೧೭, ೨೦, ೨೧…… ಈ ರೀತಿ ಸಾಗುತ್ತದೆ. ಈ ಸಂಖ್ಯೆಗಳನ್ನು ೧-೦, ೧-೧, ೨-೦, ೨-೧ ಇತ್ಯಾದಿಯಾಗಿ ಓದಬೇಕು

ಅಷ್ಟಮುಖಿ

(ಗ) ಪ್ರತಿಯೊಂದು ಮುಖವೂ ಸಮಭುಜ ತ್ರಿಭುಜವಾಗಿದ್ದು ಎಂಟು ಮುಖಗಳುಳ್ಳ ಬಹುಫಲಕ

ಅಷ್ಟಿ

(ಪ್ರಾ) ೧. ಹಕ್ಕಿ ಮೊಟ್ಟೆಯ ಚಿಪ್ಪಿನ ತೆಳು ಒಳಾವರಣ. ೨. ಮೇಲುವರ್ಗದ ಕಶೇರುಕಗಳಲ್ಲಿ ಪ್ರಮಸ್ತಿಷ್ಕದ ಅಂಡಾಕಾರ ಕೇಂದ್ರದ ಪಾರ್ಶ್ವಭಾಗ. (ಸ) ಮಾವಿನ ಹಣ್ಣಿನಲ್ಲಿರುವಂತೆ ಬೀಜದ ಸುತ್ತಲಿನ ಗಡಸು ಆವರಣ, ಓಟೆ

Search Dictionaries

Loading Results

Follow Us :   
  Download Bharatavani App
  Bharatavani Windows App