भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅವಸಾದನ

(ಭೂವಿ) ಶಿಲೆ ಶಿಥಿಲಗೊಂಡ ಬಳಿಕ ಗಾಳಿ, ನೀರು ಅಥವಾ ಹಿಮದಿಂದ ಒಯ್ಯಲ್ಪಟ್ಟು ಸಂಚಯಿಸಿದ ಹುಡಿ ಪದಾರ್ಥ. ಉದಾ: ಮರಳು, ಜೇಡಿ, ನುರುಜುಗಲ್ಲು , ಒತ್ತರ, ನೋಡಿ: ಜಲಜ /ಅವಸಾದನ ಶಿಲೆ

ಅವಸ್ವನ ವಿಜ್ಞಾನ

(ಭೌ) ಗಾಳಿಯಲ್ಲಿ ಶಬ್ದ ವೇಗಕ್ಕಿಂತ (ಮ್ಯಾಕ್ ಸಂಖ್ಯೆ ೧) ಕಡಿಮೆ ವೇಗದಲ್ಲಿ ಚಲಿಸುವ ವಸ್ತು ಅಥವಾ ಪ್ರವಾಹದ ಅಧ್ಯಯನ. ಸಬ್‌ಸಾನಿಕ್ಸ್

ಅವಳಿಗಳು

(ಸ) ಒಂದೇ ನಿಷೇಚಿತ ಅಂಡ ಇಬ್ಭಾಗವಾಗಿ ಒಂದೊಂದರಿಂದಲೂ ಪ್ರತ್ಯೇಕವಾಗಿ ಬೆಳೆದ ಸದೃಶರೂಪದ ಜೀವಿ ಗಳು. ಸ್ತನಿಗಳಲ್ಲಿ ಏಕ ಕಾಲದಲ್ಲಿ ನಿಷೇಚಿತ ಗೊಂಡ ಎರಡು ಅಥವಾ ಹೆಚ್ಚು ಅಂಡಗಳಿಂದಲೂ ಜೀವಿಗಳು ಜನ್ಮ ತಾಳಬಹುದು. ಇವು ಸದೃಶವಾಗಿರಬೇಕು ಎಂದೇನೂ ಇಲ್ಲ. ಯಮಳ

ಅವಾಂಛಿತ

(ತಂ) ಯಾವುದೇ ವಿದ್ಯುತ್ ಅಥವಾ ಕಾಂತೀಯ ಸಾಧನಗಳಲ್ಲಿ ನಿರೀಕ್ಷಿತ ಪರಿಣಾಮಗಳ ಜೊತೆಗೆ ಉಂಟಾಗುವ ಅನಪೇಕ್ಷಿತ ಪರಿಣಾಮಗಳು

ಅವಾಂಛಿತ ಎಲೆಕ್ಟ್ರಾನ್

(ರ) ಪರಮಾಣುವಿನ/ಅಣುವಿನ ಆಕರ್ಷಣೆಯಿಂದ ಹೊರಬರದ ಎಲೆಕ್ಟ್ರಾನು

ಅವಾಯವಿಕ

(ವೈ) ಆಕ್ಸಿಜನ್ ಇಲ್ಲದೆಯೂ ಬದುಕಬಲ್ಲ. ಅಂಥ ಸೂಕ್ಷ್ಮಜೀವಿಗೆ ಸಂಬಂಧಿಸಿದ

ಅವಾಯವಿಕ ಉಸಿರಾಟ

(ಜೀ) ಕೋಶ ಮಟ್ಟದಲ್ಲಿ ಜರುಗುವ ಎರಡು ಪ್ರಧಾನ ಉಸಿರಾಟಗಳ ಪೈಕಿ ಒಂದು. ಇದರಲ್ಲಿ ಆಕ್ಸಿಜನ್ ಇರಬೇಕಾಗಿಲ್ಲ. ಕೆಲವು ಯೀಸ್ಟ್, ಬ್ಯಾಕ್ಟೀರಿಯಾ ಮತ್ತು ಸ್ನಾಯುಊತಕಗಳಲ್ಲಿ ಅವಾಯವಿಕ ಉಸಿರಾಟ ಕಂಡುಬರುತ್ತದೆ. ಇನ್ನೊಂದು (ನೋಡಿ) ವಾಯವಿಕ ಉಸಿರಾಟ

ಅವಾಯುಜೀವಿ

(ಜೀ) ಆಕ್ಸಿಜನ್ ಇಲ್ಲದಲ್ಲೂ ಅಥವಾ ಅದರ ತೀವ್ರ ಕೊರತೆಯಲ್ಲೂ ಬೆಳೆಯಬಲ್ಲ ಸೂಕ್ಷ್ಮಜೀವಿ

ಅವಿಚ್ಛಿನ್ನ ಚರ

(ಸಂ) ಎತ್ತರ ಯಾ ತಗಲುವ ಸಮಯಗಳಂಥ ಚರಗಳು ನಿರ್ದಿಷ್ಟ ವರ್ಗಾಂತರದಲ್ಲಿ ಯಾವುದೇ ಮೌಲ್ಯವನ್ನು ತೆಗೆದುಕೊಳ್ಳಬಹುದು. ಉದಾ: ಒಬ್ಬ ವ್ಯಕ್ತಿಯ ಎತ್ತರ ೧೪೫.೩ ಸೆಮೀ, ೧೪೫.೩೬ ಸೆಮೀ, ೧೪೫.೩೬೨ ಸೆಮೀ ಇತ್ಯಾದಿ ಯಾಗಿ ಯಾವುದೇ ಮೌಲ್ಯವನ್ನು ತೆಗೆದುಕೊಳ್ಳಬಹುದು. ಇದು ಒಂದು ಅವಿಚ್ಛಿನ್ನ ಚರ. ಅಳೆಯುವ ಸಾಧನದ ಇತಿಮಿತಿಯಿಂದಾಗಿ ಅವಿಚ್ಛಿನ್ನ ಚರಗಳನ್ನು ವಿಚ್ಛಿನ್ನವಾಗಿ ಗುರುತಿಸಿಕೊಳ್ಳುವುದು ರೂಢಿ

ಅವಿಚ್ಛಿನ್ನ ಫಲನ

(ಗ) ಸ್ವಪ್ರಾಂತದ ಪ್ರತಿಯೊಂದು ಬಿಂದುವಿನಲ್ಲಿಯೂ ಅವಿಚ್ಛಿನ್ನವಾಗಿರುವ ಫಲನ. ಆಗಿದ್ದರೆ, ಆಗ x = aಯಲ್ಲಿ ಈ ಫಲನ ಅವಿಚ್ಛಿನ್ನ. ಜ್ಯಾಮಿತೀಯವಾಗಿ, ಫಲನದ ಆಲೇಖಕ್ಕೆ ಈ ಬಿಂದು ವಿನಲ್ಲಿ ಮುರಿತ/ಜಿಗಿತ ಇರುವುದಿಲ್ಲ. ನೋಡಿ: ವಿಚ್ಛಿನ್ನ ಫಲನ

ಅವಿಚ್ಛಿನ್ನ ರೋಹಿತ

(ಭೌ) ಎಲ್ಲ ಅಲೆಯುದ್ದಗಳಿದ್ದು, ಅಲೆಯುದ್ದ ಬದಲಾದಂತೆ ತೀವ್ರತೆಯಲ್ಲಿ ಅವಿಚ್ಛಿನ್ನ / ಅವಿರತ ವ್ಯತ್ಯಾಸಗಳನ್ನು ಪ್ರದರ್ಶಿಸುವ ರೋಹಿತ

ಅವಿಚ್ಛಿನ್ನತೆ

(ಸಾ) ತುಂಡಾಗದಿರುವಿಕೆ. ಅಖಂಡತೆ. ಸಂತತತೆ, ಸಾತತ್ಯ

ಅವಿಡಿಟಿ

(ವೈ) ಪ್ರತಿಜನಕ ಮತ್ತು ಪ್ರತಿಕಾಯಗಳ ನಡುವೆ ಇರುವ ಸೆಳೆಬಲದ ಅಂದಾಜು ಅಳೆತ. ಪ್ರತಿಜನಕ-ಪ್ರತಿ ಕಾಯಗಳ ಸಂಕೀರ್ಣ ರೂಪುಗೊಳ್ಳುವ ವೇಗವನ್ನು ಆಧರಿಸಿ, ಅವುಗಳ ನಡುವೆ ಇರುವ ಪರಸ್ಪರ ಆಕರ್ಷಕ ಬಲವನ್ನು ಅಳೆಯಲಾಗುತ್ತದೆ. ಬಂಧಕತ್ರಾಣ (ರ) ವಿಯೋಜನೆಯ ಪ್ರಮಾಣ ಅವಲಂಬಿಸಿದಂತೆ ಆಮ್ಲದ ಅಥವಾ ಪ್ರತ್ಯಾಮ್ಲದ ರಾಸಾಯನಿಕ ಶಕ್ತಿ

ಅವಿಪಥೀ

(ಭೌ) ಗೋಳೀಯ ವಿಪಥನರಹಿತ ಪ್ರತಿಬಿಂಬ ಕೊಡುವ ದೃಕ್ ವ್ಯವಸ್ಥೆ ಕುರಿತ. ಗೋಳಾಪಸರಣ ರಹಿತವಾದ

ಅವಿಪರ್ಯಯಶೀಲ

(ಭೌ) (ಒಂದು ದಿಶೆಯಲ್ಲಿ) ಒಂದು ಸ್ಥಿತಿಯಿಂದ ಮತ್ತೊಂದಕ್ಕೆ ಸ್ವಪ್ರೇರಿತವಾಗಿ ಬದಲುವ ಆದರೆ ವಿರುದ್ಧ ದಿಶೆಯಲ್ಲಿ ಬದಲದ ಪ್ರವೃತ್ತಿಯುಳ್ಳ (ಭೌತಿಕ ವ್ಯವಸ್ಥೆಗಳು). ಅಪರಾವರ್ತ

ಅವಿಪರ್ಯಯಶೀಲ ಕ್ರಿಯೆ

(ರ) ಒಂದು ದಿಶೆಯಲ್ಲಿ ಮಾತ್ರ ಸಂಭವಿಸುವ, ಆದ್ದರಿಂದ ಸಮಾಪ್ತಿಯತ್ತ ಸಾಗುವ ರಾಸಾಯನಿಕ ಕ್ರಿಯೆ

ಅವಿಭಜನೀಯ

(ಗ) ಭಾಗಿಸಲು ಸಾಧ್ಯವಾಗದ ಉದಾ: ೧೦ನ್ನು ೩ರಿಂದ ನಿಶ್ಶೇಷವಾಗಿ ಭಾಗಿಸಲಾಗದು. ಆದ್ದರಿಂದ ೩ ಕುರಿತಂತೆ ೧೦ ಅವಿಭಜನೀಯ

ಅವಿಭಾಜ್ಯ ಸಂಖ್ಯೆ

(ಗ) ಸ್ವತಃ ತಾನು ಮತ್ತು ೧ ಮಾತ್ರ ಭಾಜಕ ಆಗಿರುವ ಮತ್ತು ಬೇರಾವ ಸಂಖ್ಯೆಯಿಂದಲೂ ಭಾಗವಾಗದ ಪೂರ್ಣಾಂಕ. ಉದಾ: ೨, ೩, ೫, ೭, ೧೧, ೧೩,….೩೭,….೫೫೨೧

ಅವಿಭೇದನೀಯ

(ಭೌ) ಸೂಕ್ಷ್ಮದರ್ಶಕ ಅಥವಾ ದೂರದರ್ಶಕದ ಮೂಲಕವೂ ವಿವರಗಳನ್ನು ಸ್ಪಷ್ಟವಾಗಿ ಕಾಣುವಂತೆ ಮಾಡಲಾಗದ. ಭಾಗಗಳಾಗಿ ವಿಂಗಡಿಸಲಾಗದ

ಅವಿಲೇಯ

(ರ) ವಿಲೀನವಾಗದೇ ಇರುವುದು. ಬಹುತೇಕ ಅವಿಲೇಯ ಲವಣಗಳು ಸೀಮಿತವಾದರೂ ನಿರ್ದಿಷ್ಟ ವಿಲೇಯತೆಯ ಗುಣದಿಂದ ಕೂಡಿರುತ್ತವೆ

Search Dictionaries

Loading Results

Follow Us :   
  Download Bharatavani App
  Bharatavani Windows App