भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅವನತ ಕೋನ

(ಗ) ವೀಕ್ಷಕ ತನ್ನ ಕ್ಷಿತಿಜೀಯದಿಂದ ಎಷ್ಟು ಕೆಳಕ್ಕೆ ನೋಡಿದರೆ ವೀಕ್ಷಿತ ವಸ್ತು ಕಾಣುತ್ತದೆ ಎಂಬುದರ ಅಳತೆ. ಒಂದು ವಸ್ತುವು P ಎಂಬ ಬಿಂದುವಿನಲ್ಲಿದ್ದು ಅದು OA ಎಂಬ ಕ್ಷಿತಿಜ ರೇಖೆಗಿಂತ ಕೆಳಗಿದ್ದರೆ ಆಗ AôP ಎಂಬ ಕೋನವನ್ನು P ಬಿಂದುವಿನ ಅವನತ ಕೋನ ಎನ್ನುತ್ತೇವೆ. ನೋಡಿ : ಉನ್ನತ ಕೋನ

ಅವನತಿ

(ರ) ರಾಸಾಯನಿಕ ಸಂಯುಕ್ತದ ಸಂಕೀರ್ಣತೆ ಯನ್ನು ಕಡಿಮೆಗೊಳಿಸುವುದು. (ಭೂವಿ) ಶಿಥಿಲೀಕರಣದಿಂದಾಗಿ ಶಿಲೆಗಳ ಸವೆತ. (ಭೌ) ಯಾವುದೇ ಪ್ರಕ್ರಿಯೆಯ ಕಾರಣವಾಗಿ ಲಭ್ಯ ಉಪಯುಕ್ತ ಶಕ್ತಿಯ ಮೊತ್ತ ಕಡಿಮೆಯಾಗುವುದು. ಉದಾ: ಅಂತರ್ದಹನ ಎಂಜಿನ್‌ನಲ್ಲಿ ಉಷ್ಣಹ್ರಾಸದ ಕಾರಣವಾಗಿ ಲಭ್ಯವಾಗುವ ಉಪಯುಕ್ತ ಶಕ್ತಿ ಕಡಿಮೆಯಾಗುವುದು

ಅವನತಿ ದರ

(ಪವಿ) ವಾಯುಮಂಡಲದಲ್ಲಿ ಎತ್ತರಕ್ಕೆ ಹೋದಂತೆ ಉಷ್ಣತೆ ಕಡಿಮೆಯಾಗುವ ದರ. ಲೋಪ ದರ. ಚ್ಯುತಿ ದರ. ಸ್ಖಾಲಿತ್ಯ ದರ

ಅವನಮನಿ

(ಪ್ರಾ) ಶರೀರದ ಒಂದು ಭಾಗ ಅಥವಾ ಅಂಗವನ್ನು ತನ್ನ ಕ್ರಿಯೆಯಿಂದ ಕೆಳಕ್ಕೆಳೆಯುವ ಸ್ನಾಯು.

ಅವನಾದ

(ಭೌ) ಸಂಕೀರ್ಣ ಸ್ವರದಲ್ಲಿ ಮೂಲಸ್ವರದ ಆವೃತ್ತಿಗಿಂತ ನಿಮ್ನ ಆವೃತ್ತಿಯ ಯಾವುದೇ ಸ್ವರ. ನೀಚಸ್ಥಾಯಿ

ಅವಪತನ

(ಪವಿ) ತೇವಾಂಶದಿಂದ ಕೂಡಿರುವ ದಟ್ಟ ಮೋಡಗಳಿಂದ ಭೂಮಿಯ ಮೇಲೆ ಮಳೆ, ಆಲಿಕಲ್ಲು ಅಥವಾ ಇಬ್ಬನಿ ಬೀಳುವುದು

ಅವಪೋಷಣೆ

(ವೈ) ಅಸಮರ್ಪಕ ಪೋಷಣೆಯಿಂದ ತಲೆದೋರುವ ಸ್ಥಿತಿ. ನೋಡಿ: ನ್ಯೂನಪೋಷಣೆ

ಅವಯವ

(ಪ್ರಾ) ಕೈ, ಕಾಲು ಅಥವಾ ರೆಕ್ಕೆ. ಇವು ಕೀಲುಗಳ ಮೂಲಕ ಶರೀರಕ್ಕೆ ಕೂಡಿಕೊಂಡಿರುತ್ತವೆ. ಸಂಪರ್ಕ ಅಥವಾ ಚಲನೆಗೆ ಬಳಕೆ

ಅವಯವ ವಿಜ್ಞಾನ

(ಜೀ) ಪ್ರಾಣಿಗಳ ಅಥವಾ ಸಸ್ಯಗಳ ಅಂಗಗಳ ಬಗೆಗೆ ವಿಶೇಷ ಅಧ್ಯಯನ ಮಾಡುವ ವಿಜ್ಞಾನ ವಿಭಾಗ

ಅವರೋಹಣ ಸಂಪಾತ

(ಖ) ಭೂಮಿಯನ್ನು ಪರಿಭ್ರಮಿಸುತ್ತಿರುವ ಯಾವುದೇ ಉಪಗ್ರಹ ವಿಷುವದ್ ವೃತ್ತವನ್ನು ಉತ್ತರದಿಂದ ದಕ್ಷಿಣಕ್ಕೆ ದಾಟುವ ಬಿಂದು. ನೀಚ ಸಂಪಾತ. ಕೇತು. ನೋಡಿ: ಆರೋಹಣ ಸಂಪಾತ

ಅವರೋಹಿ ಕ್ರಮ

(ಗ) ಇಳಿಕ್ರಮದಲ್ಲಿರುವ ಸಂಖ್ಯಾಶ್ರೇಣಿ. (ವೈ) ಶರೀರದ ಮುಂಭಾಗದಿಂದ ಹಿಂಭಾಗದ ಕಡೆಗೆ ಅಥವಾ ತಲೆಭಾಗದಿಂದ ಬಾಲ ಭಾಗದ ಕಡೆಗೆ ಹಾಯುವ. ಅವರೋಹಣ ಕ್ರಮ

ಅವರ್ಣಕ ಅಶ್ರಗ

(ಭೌ) ಕನಿಷ್ಠ ಪ್ರಸರಣವೂ ಗರಿಷ್ಠ ವಿಚಲನೆಯೂ ಇರುವ ಅಶ್ರಗ. ಬೆಳಕಿನ ಕಿರಣವನ್ನು ರೋಹಿತದ ವರ್ಣಗಳಾಗಿ ವಿಭಜಿಸದೆ ಅದನ್ನು ದಿಕ್ಚ್ಯುತಿ ಗೊಳಿಸುವಂತೆ ವಿವಿಧ ವಕ್ರೀಭವನಾಂಕಗಳ ಗಾಜುಗಳ ಎರಡು ಅಥವಾ ಹೆಚ್ಚು ಅಶ್ರಗಗಳನ್ನು ಒಟ್ಟುಗೂಡಿಸಿ ರಚಿಸಿದ ಅಶ್ರಗ

ಅವರ್ಣಕ ಮಸೂರ

(ಭೌ) ವರ್ಣ ವಿಪಥನ ಕನಿಷ್ಠ ಮಟ್ಟದಲ್ಲಿರುವಂತೆ ವಿಭಿನ್ನ ರೀತಿಯ ಗಾಜುಗಳಿಂದ ತಯಾರಿಸಲಾದ ವಿಭಿನ್ನ ನಾಭಿ ದೂರಗಳ ಎರಡು ಘಟಕ – ಮಸೂರಗಳನ್ನು (ಒಂದು ಅಭಿಸರಣ, ಇನ್ನೊಂದು ಅಪಸರಣ) ಒಟ್ಟುಗೂಡಿಸಿ ರಚಿಸಿದ ಮಸೂರ

ಅವಶಿಷ್ಟ

(ಭೂವಿ) ಭೂಮಿಯ ಮೇಲೆ ಪರಿಸ್ಥಿತಿಗಳು ತುಂಬ ಭಿನ್ನ ವಾಗಿದ್ದಾಗ ಹುಟ್ಟಿ ತಮ್ಮ ಜೊತೆ- ಪ್ರಭೇದಗಳು ಅಸ್ತಿತ್ವ ಕಳೆದು ಕೊಂಡರೂ ತಾವು ಮಾತ್ರ ಇಂದೂ ಜೀವಂತವಾಗಿರುವ ಪ್ರಾಣಿ, ಸಸ್ಯರಾಶಿ

ಅವಶಿಷ್ಟ ಅನಿಲ

(ರ) ಪಂಪ್ ಮಾಡಿದ ಮೇಲೂ ನಿರ್ವಾತ ನಳಿಕೆಯಲ್ಲಿ ಉಳಿದಿರುವ ಸಣ್ಣ ಪ್ರಮಾಣದ ಅನಿಲ

ಅವಶೇಷ

(ಜೀ) ಪೂರ್ವಿಕರಲ್ಲಿ ಅಥವಾ ಹಿಂದಿನ ಸಂತತಿ ಗಳಲ್ಲಿ, ಚೆನ್ನಾಗಿ ಅಭಿವೃದ್ಧಿಯಾಗಿದ್ದು ಈಗ ಅವನತಿ ಹೊಂದಿ ಯಾವ ಉಪಯೋಗವೂ ಇಲ್ಲದ ಅಂಗ, ಭಾಗ, ಕುರುಹು. ಉದಾ: ಕಿವಿಗಳಿಲ್ಲದ ತಳಿಗಳಲ್ಲಿ ಕಿವಿಯ ಕುರುಹು; ಮಾನವ ಅಪೆಂಡಿಕ್ಸ್ (ಅಂತ್ರಪುಚ್ಛ); ಆಸ್ಟ್ರಿಚ್ (ಉಷ್ಟ್ರ) ಪಕ್ಷಿಯ ರೆಕ್ಕೆಗಳು

ಅವಶೇಷ

(ಭೂವಿ) ಕ್ಷಯ ಅಥವಾ ವಿಘಟನೆಯ ತರುವಾಯವೂ ಶಿಥಿಲವಾಗದೆ ಉಳಿದ ಅಥವಾ ತನ್ನ ಬಹುಭಾಗ ಕಣ್ಮರೆಯಾದರೂ ಅಚ್ಚಳಿಯದೆ ಉಳಿದ ಭೂ ರಚನೆ. ಜಲಜಶಿಲೆ ಯಲ್ಲಿ ಜೀವ್ಯವಶೇಷದ ತುಣುಕಿನ ಗುರುತಿನಂಥ ಪಳೆಯುಳಿಕೆ

ಅವಶೋಷಣ ರೇಖೆಗಳು

(ಖ) ನಕ್ಷತ್ರ ರೋಹಿತ ಗಳಲ್ಲಿ ಪ್ರಕಟವಾಗುವ ಕರಿಗೆರೆಗಳು. ನಕ್ಷತ್ರ ಗರ್ಭದಲ್ಲಿ ಉದ್ಭವಿಸಿದ ಬೆಳಕು ನಕ್ಷತ್ರದ ವಿವಿಧ ಸ್ತರಗಳ – ಆದ್ದರಿಂದ ವಿವಿಧ ಸಂಯೋಜನೆ ಗಳ – ಮೂಲಕ ಹಾಯ್ದು ಹೋಗುವಾಗ ವಿಶಿಷ್ಟ ಅಲೆಯುದ್ದಗಳ ಬೆಳಕು ಹೀರಲ್ಪಟ್ಟು ಅದರಲ್ಲಿ ನಿಹಿತವಾಗಿದ್ದ ಶಕ್ತಿಯಲ್ಲಿ ವ್ಯತ್ಯಯ ಗಳುಂಟಾಗುತ್ತವೆ. ತತ್ಪರಿಣಾಮವಾಗಿ ರೋಹಿತದಲ್ಲಿ ಕರಿಗೆರೆಗಳು ಮೈದಳೆಯುತ್ತವೆ. ನಕ್ಷತ್ರದಲ್ಲಿಯ ರಾಸಾಯನಿಕ ಹಾಗೂ ಭೌತಿಕ ಪರಿಸ್ಥಿತಿಗಳ ಬಗ್ಗೆ ಈ ಗೆರೆಗಳಿಂದ ಮಾಹಿತಿ ಪಡೆಯಬಹುದು

ಅವಶ್ಯ ಮತ್ತು ಸಂತೃಪ್ತ ನಿರ್ಬಂಧ

(ಗ) p ಮತ್ತು q ಎರಡು ಉಕ್ತಿಗಳಾಗಿರಲಿ. “pಯು ಆಗಿದ್ದರೆ ಆಗ q”(p®q), ಈ ನಿರ್ಬಂಧಗಳು ಸಾಧುವಾಗಿರಲಿ. ಈ ಸಂದರ್ಭದಲ್ಲಿ “pಯು ಆಗಿದ್ದರೆ ಮತ್ತು ಆಗಿದ್ದರೆ ಮಾತ್ರ q(p«q)”. ಇಂಥ ಸನ್ನಿವೇಶದಲ್ಲಿ “qಯು pಗೆ ಅವಶ್ಯ ಮತ್ತು ಸಂತೃಪ್ತ ನಿರ್ಬಂಧ” ಎನ್ನುತ್ತೇವೆ. ಉದಾ: ಎರಡು ತ್ರಿಭುಜಗಳ ಭುಜಗಳು ಅನುಪಾತೀಯವಾಗಿದ್ದರೆ ಮತ್ತು ಆಗಿದ್ದರೆ ಮಾತ್ರ ಅವು ಸದೃಶ. ತ್ರಿಭುಜಗಳ ಸದೃಶತೆಗೆ ಇದು ಅವಶ್ಯ ಮತ್ತು ಸಂತೃಪ್ತ ನಿರ್ಬಂಧ. ಫಲನದ ಅವಕಲನೀಯತೆಗೆ ಅವಿಚ್ಛಿನ್ನತೆಯು ಅವಶ್ಯ ನಿರ್ಬಂಧ, ಆದರೆ ಸಂತೃಪ್ತವಲ್ಲ. ಅನಂತಶ್ರೇಣಿಯು ಅಭಿಸರಣೀಯವಾಗಿದ್ದರೆ ಆಗ . ಈ ನಿರ್ಬಂಧವು ಅನಂತ ಶ್ರೇಣಿಯ ಅಭಿಸರಣೆಗೆ ಅವಶ್ಯ. ಆದರೆ ಸಂತೃಪ್ತವಲ್ಲ. ಪರಂತು, ಯಾವುದೇ ಅನಂತಶ್ರೇಣಿಯಲ್ಲಿ ಆಗಿದ್ದರೆ ಅದು ಅಭಿಸರಣೀಯವಾಗಿರಬೇಕಾಗಿಲ್ಲ

ಅವಶ್ರವ್ಯ

(ಭೌ) ಕಿವಿಗೆ ಕೇಳಿಸದಷ್ಟು ಕಡಿಮೆ ಆವೃತ್ತಿಯ ಧ್ವನಿ ತರಂಗಗಳ/ಅವಕ್ಕೆ ಸಂಬಂಧಿಸಿದ. ನೋಡಿ: ಅವಸ್ವನ ವಿಜ್ಞಾನ

Search Dictionaries

Loading Results

Follow Us :   
  Download Bharatavani App
  Bharatavani Windows App