भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅವಕಲ

(ಗ) ಯಾವುದೇ ಫಲನದಲ್ಲಿಯ ಚರವನ್ನು ಕುರಿತಂತೆ ಆ ಫಲನದ ತಾತ್‌ಕ್ಷಣಿಕ ವ್ಯತ್ಯಯ ದರ. x=a ಬಿಂದುವಿನಲ್ಲಿ f (x)ನ ಅವಕಲವನ್ನು f1(a) ಎಂದು ವ್ಯಾಖ್ಯಿಸುತ್ತೇವೆ. ನೋಡಿ: ಅನುಕಲ

ಅವಕಲ ಸಮೀಕರಣ

(ಗ) ಸ್ವತಂತ್ರ ಚರ x, ಅಧೀನ ಚರ y ಮತ್ತು x ಕುರಿತಂತೆ yಯ ಅವಕಲನಾಂಕ – ಇವುಗಳ ನಡುವೆ ಇರುವಂಥ ಸಂಬಂಧ. ಉದಾಹರಣೆಯಾಗಿ ಅವಕಲ ಸಮೀಕರಣದಲ್ಲಿರುವ ಗರಿಷ್ಠ ಅವಕಲನಾಂಕದ ದರ್ಜೆ ಮತ್ತು ಡಿಗ್ರಿ, ಅನುಕ್ರಮವಾಗಿ, ಸಮೀಕರಣದ ದರ್ಜೆ ಮತ್ತು ಡಿಗ್ರಿ. ಮೇಲಿನ ಉದಾಹರಣೆಗಳಲ್ಲಿ ಒಂದನೆಯದರ ದರ್ಜೆ ಮತ್ತು ಡಿಗ್ರಿ ತಲಾ ೧; ಎರಡನೆಯದರವು ೨,೧. ಅವಕಲ ಸಮೀಕರಣದ ಸಾರ್ವತ್ರಿಕ ಪರಿಹಾರ; ಇದು x ಮತ್ತು y ನಡುವಿನ ಒಂದು ಸಂಬಂಧ. ಅವಕಲ ಸಮೀಕರಣದಲ್ಲಿ ಅಧೀನ ಚರ yಗೆ x ಪದಗಳನ್ನು ಆದೇಶಿಸಿದಾಗ ಸರ್ವಸಮತ್ವ ಸಿದ್ಧಿಸುತ್ತದೆ. ಅವಕಲ ಸಮೀಕರಣದ ಪರಿಹಾರದಲ್ಲಿಯ ಸ್ವೇಚ್ಛಾ ನಿಯತಾಂಕಗಳ ಸಂಖ್ಯೆ ಆ ಸಮೀಕರಣದ ದರ್ಜೆಗೆ ಸಮ. ಸ್ವೇಚ್ಛಾ ನಿಯತಾಂಕಗಳಿಗೆ ನಿರ್ದಿಷ್ಟ ಬೆಲೆಗಳನ್ನು ಆದೇಶಿಸಿದಾಗ ನಿರ್ದಿಷ್ಟ ಪರಿಹಾರಗಳು ಲಭಿಸುತ್ತವೆ

ಅವಕಲನ

(ಗ) ಫಲನದ ಅವಕಲವನ್ನು ಪಡೆಯುವ ಪ್ರಕ್ರಿಯೆ. ನೋಡಿ: ಅನುಕಲನ

ಅವಕಲನಾಂಕ

(ಗ) ನೋಡಿ: ಅವಕಲ

ಅವಕಲಿಸು

(ಗ) ನಿಷ್ಪನ್ನಿಸು. ವ್ಯುತ್ಪನ್ನಿಸು

ಅವಕಾಶ

(ಸಾ) ವಸ್ತು ಮತ್ತು ಘಟನೆಗಳು ಅಸ್ತಿತ್ವ ಪಡೆಯುವ, ಅವುಗಳಿಗೆ ಸಾಪೇಕ್ಷ ನೆಲೆ ಮತ್ತು ದಿಶೆಗಳಿರುವ ಮತ್ತು ನಮ್ಮನ್ನು ಸುತ್ತಲೂ ಆವರಿಸಿರುವ ಮೂರು ಆಯಾಮಗಳ ವ್ಯಾಪ್ತಿ. ಆಕಾಶ. ದೇಶ

ಅವಕೆಂಪು

(ಭೌ) ರೋಹಿತದಲ್ಲಿ ಕೆಂಪು ಬಣ್ಣಕ್ಕಿಂತ ಅಧಿಕ ಅಲೆಯುದ್ದವಿರುವ. ಅತಿರಕ್ತ

ಅವಕೆಂಪು ಖಗೋಳವಿಜ್ಞಾನ

(ಖ) ೦.೭೫-೧೦೦೦ ಮೈಕ್ರೋಮೀಟರ್ ವ್ಯಾಪ್ತಿ ಅಲೆಯುದ್ದದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಬರುವ ವಿಕಿರಣದ (ಶಕ್ತಿ ಮೂಲಗಳ) ಅಧ್ಯಯನ. ಅತಿರಕ್ತ ಖಗೋಳವಿಜ್ಞಾನ

ಅವಕ್ರಿಯೆ

(ವೈ) ದೇಹಕ್ರಿಯೆಗಳಲ್ಲಿ ಹದ ತಪ್ಪಿರುವುದು

ಅವಕ್ಷೇಪ

(ರ) ರಾಸಾಯನಿಕ ಅಥವಾ ಭೌತಿಕ ಬದಲಾವಣೆಗಳ ಪರಿಣಾಮವಾಗಿ ದ್ರಾವಣದಿಂದ ಘನ ಕಣಗಳಾಗಿ ಪ್ರತ್ಯೇಕಗೊಳ್ಳುವ ವಸ್ತು. ಒತ್ತರ

ಅವಕ್ಷೇಪಕ

(ರ) ದ್ರಾವಣದಲ್ಲಿ ವಿಲೀನವಾಗಿರುವ ಪದಾರ್ಥ ಒತ್ತರಿಸುವಂತೆ ಮಾಡುವ ರಾಸಾಯನಿಕ ವಸ್ತು

ಅವಕ್ಷೇಪಣ

(ರ) ದ್ರಾವಣದಲ್ಲಿರುವ ಪದಾರ್ಥ ರಾಸಾಯನಿಕ ಕ್ರಿಯೆಯಿಂದ ಅವಿಲೇಯ ಘನ ಪದಾರ್ಥ ವಾಗುವುದು. ರಾಸಾಯನಿಕ ಸಂಸ್ಕರಣ ಮತ್ತು ವಿಶ್ಲೇಷಣೆಗಳಲ್ಲಿ ಪದಾರ್ಥಗಳನ್ನು ವಿಯೋಜಿಸಿ ಗುರುತಿಸಲು ಇದನ್ನು ವ್ಯಾಪಕವಾಗಿ ಉಪಯೋಗಿಸುತ್ತಾರೆ

ಅವಜನಕ

(ವೈ) ಸಂತತಿಯ ಮೇಲೆ ದುಷ್ಪರಿಣಾಮ ಬೀರುವ. ಸತ್ಸಂತಾನವಿಜ್ಞಾನಕ್ಕೆ ವಿರೋಧವಾದುದು. ನೋಡಿ: ಸುಜೀವನವಿಜ್ಞಾನ

ಅವತಾನನ

(ಪ್ರಾ) ಕೆಲವು ಉನ್ನತ ಕಶೇರುಕಗಳಲ್ಲಿ, ಮುಂಗೈಯಲ್ಲಿರುವ ಎರಡು ಉದ್ದೆಲುಬುಗಳು ಬೋರಲಾಗಿ ಅಂಗೈ ತಳಮುಖವಾಗಿರುವಂಥ ಸ್ಥಿತಿ. ಹೋಲಿಸಿ: ಉತ್ತಲನ

ಅವಧಿ

(ಖ) ಗ್ರಹ ತನ್ನ ಅಕ್ಷದ ಮೇಲೆ ಒಂದು ಸುತ್ತು ಸುತ್ತುವುದಕ್ಕೆ ತೆಗೆದುಕೊಳ್ಳುವ ಕಾಲ. (ಭೌ) ಯಾವುದೇ ಕ್ರಿಯೆ ಪುನರಾವರ್ತಿಸಲು ತೆಗೆದುಕೊಳ್ಳುವ ಕಾಲ

ಅವಧಿ

(ಭೌ) ಎರಡು ಘಟನೆಗಳ ನಡುವಿನ ಕಾಲಾವಧಿ ಅಥವಾ ಎರಡು ವಸ್ತುಗಳ ನಡುವಿನ ಅಂತರ. ಸ್ವರ ಮಾಧುರ್ಯ ದಲ್ಲಾಗಲೀ ಸ್ವರಮೇಳದಲ್ಲಾಗಲೀ ಎರಡು ಧ್ವನಿಗಳ ಸ್ಥಾಯಿಯ ಅಂತರ

ಅವಧಿಕ

(ಸಾ) ಸಂಧಿಸ್ಥ, ಕ್ರಾಂತಿ, ಸ್ಥಿತಿ ಬದಲಾವಣೆ ಹಂತ

ಅವಧಿಪೂರ್ವ ಫಲನ

(ಸ) ದ್ವೈವಾರ್ಷಿಕ ಸಸ್ಯವೊಂದು ಅವಧಿಗೆ ಮೊದಲೇ, ಮೊದಲ ವರ್ಷದಲ್ಲೇ, ಹೂ ಬಿಟ್ಟು ಫಲವೀಯುವುದು

ಅವಧಿಯುತ ಚಲನೆ

(ಭೌ) ಯಾವುದೇ ವ್ಯವಸ್ಥೆಗೆ ಸಂಬಂಧಿಸಿದಂತೆ ಸತತವಾಗಿ ಹಾಗೂ ಸದೃಶವಾಗಿ ಪುನರಾವರ್ತಿಸುವ ಚಲನೆ

ಅವಧಿಯುತತೆ

(ಭೌ) ಆವರ್ತನೀಯತೆ, ಆವರ್ತಕತೆ. ನೋಡಿ: ಆವೃತ್ತಿ. (ರ) ಆವರ್ತಕೋಷ್ಟಕದಲ್ಲಿ ಧಾತುವಿನ ಸ್ಥಾನ

Search Dictionaries

Loading Results

Follow Us :   
  Download Bharatavani App
  Bharatavani Windows App